ನವದೆಹಲಿ, ಸೆಪ್ಟೆಂಬರ್ 19: ರೈತರಿಗೆ ಸಬ್ಸಿಡಿ ದರದಲ್ಲಿ ಸಾಲ ಕೊಡಲು ಅನುಕೂಲ ಮಾಡುವ ಕಿಸಾನ್ ರಿನ್ ಪೋರ್ಟಲ್ (Kisan Rin Portal) ಅನ್ನು ಆರಂಭಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಇಂದು ಸೆಪ್ಟೆಂಬರ್ 19ರಂದು ಈ ಹೊಸ ಪೋರ್ಟಲ್ಗೆ ಚಾಲನೆ ನೀಡಿದ್ದಾರೆ. ಹಾಗೆಯೇ, ಮನೆ ಮನೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ತಲುಪಿಸುವ ಘರ್ ಘರ್ ಕೆಸಿಸಿ ಅಭಿಯಾನವನ್ನೂ (Ghar Ghar KCC Campaign) ಇಂದು ಶುರು ಮಾಡಲಾಗಿದೆ. ಹಾಗೆಯೇ, ಹವಾಮಾನ ಮಾಹಿತಿ ಜಾಲ ದತ್ತಾಂಶ ವ್ಯವಸ್ಥೆ (WINDS- Weather Information Network Data System) ಪೋರ್ಟಲ್ನ ಕೈಪಿಡಿಯನ್ನೂ ಅನಾವಣಗೊಳಿಸಲಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಸ್ಕೀಮ್ ಅಡಿಯಲ್ಲಿ ಸರ್ಕಾರ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಅದಕ್ಕೆ ಸಹಾಯವಾಗುವಂತೆ ಕಿಸಾನ್ ರಿನ್ ಪೋರ್ಟಲ್ ಅನ್ನು ರೂಪಿಸಲಾಗಿದೆ. ಈ ಪ್ಲಾಟ್ಫಾರ್ಮ್ನಲ್ಲಿ ರೈತರ ಡಾಟಾ, ಸಾಲ ವಿತರಣೆ ವಿವರ, ಬಡ್ಡಿದರ ಕಡಿತ ಇತ್ಯಾದಿ ಮಾಹಿತಿಯನ್ನು ಕಾಣಬಹುದು. ಅದರ ವಿಳಾಸ ಇಲ್ಲಿದೆ: fasalrin.gov.in
ಇದನ್ನೂ ಓದಿ: Jio Airfiber Plans: ಬೆಂಗಳೂರು ಸೇರಿ 8 ನಗರಗಳಲ್ಲಿ ಜಿಯೋ ಏರ್ಫೈಬರ್ ಚಾಲನೆ; ಇಲ್ಲಿದೆ ಅದರ ವಿವಿಧ ಪ್ಲಾನ್ಗಳ ಬೆಲೆ
ಇದು ರೈತರಿಗೆ ಹಣಕಾಸು ನೆರವು ಒದಗಿಸಲೆಂದು ಆರಂಭಿಸಲಾಗಿರುವ ಯೋಜನೆಯಾಗಿದೆ. ಕೃಷಿ ಹಾಗು ಸಂಬಂಧಿತ ಕಾರ್ಯಗಳಿಗೆ ರೈತರು ಅಗತ್ಯ ಹಣಕಾಸು ಸಹಾಯ ಪಡೆಯಬಹುದು. 3 ಲಕ್ಷ ರೂವರೆಗೂ ಸಾಲ ಸಿಗುತ್ತದೆ. ವರ್ಷಕ್ಕೆ ಶೇ. 2ರಿಂದ 4ರವರೆಗೆ ಮಾತ್ರವೇ ಬಡ್ಡಿದರ ಇರುತ್ತದೆ.
ಕೆಸಿಸಿ ಸ್ಕೀಮ್ ಹೊಂದಿರುವವರಿಗೆ ಇನ್ಷೂರೆನ್ಸ್ ಕವರೇಜ್ ಕೂಡ ಇರುತ್ತದೆ. ಅರ್ಹ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಜೊತೆಗೆ ಸೇವಿಂಗ್ಸ್ ಅಕೌಂಟ್, ಸ್ಮಾರ್ಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಕೂಡ ಸಿಗುತ್ತದೆ. ಈ ಸ್ಕೀಮ್ನಲ್ಲಿ ಇನ್ನೂ ಹಲವು ವಿಶೇಷತೆಗಳಿವೆ.
ಸರ್ಕಾರ ಇತ್ತೀಚೆಗೆ ಬಹಿರಂಗಪಡಿಸಿದ ಮಾಹಿತಿ ಪ್ರಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಸ್ಕೀಮ್ ಅನ್ನು 7.35 ಕೋಟಿ ರೈತರು ಪಡೆದಿದ್ದಾರೆ. 2023ರ ಏಪ್ರಿಲ್ನಿಂದ ಆಗಸ್ಟ್ವರೆಗಿನ ಅವಧಿಯಲ್ಲಿ ಈ ರೈತರಿಗೆ ಕಡಿಮೆ ಬಡ್ಡಿದರದಲ್ಲಿ 6,573.50 ಕೋಟಿ ರೂ ಸಾಲ ವಿತರಿಸಲಾಗಿದೆ.
ಇದನ್ನೂ ಓದಿ: ಹಣ್ಣಿನ ಜ್ಯೂಸ್ನಲ್ಲಿ ಹಣ್ಣಿಲ್ಲ; ಇದು ಗ್ರಾಹಕರಿಗೆ ಮಾಡುವ ವಂಚನೆ; ಅಮೆರಿಕದಲ್ಲಿ ಸ್ಟಾರ್ಬಕ್ಸ್ ವಿರುದ್ಧ ಕೇಸ್
97 ವಾಣಿಜ್ಯ ಬ್ಯಾಂಕ್ ಸೇರಿದಂತೆ ಒಟ್ಟು 667 ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕುಗಳು ಕಿಸಾನ್ ಕ್ರೆಡಿಟ್ ಕಾರ್ಡ್ ಸ್ಕೀಮ್ಗೆ ಲಭ್ಯ ಇವೆ.
ಇನ್ನು, ಇವತ್ತು ವಿಂಡ್ಸ್ ಪೋರ್ಟಲ್ನ ಕೈಪಿಡಿಯೂ ಬಿಡುಗಡೆ ಆಗಿದೆ. ಈ ವಿಂಡ್ಸ್ನ ಪೋರ್ಟಲ್ ಅನ್ನು ಜುಲೈನಲ್ಲೇ ಬಿಡುಗಡೆ ಮಾಡಲಾಗಿತ್ತು. ಈಗ ಆ ಪೋರ್ಟಲ್ನ ಮ್ಯಾನುಯಲ್ ರಿಲೀಸ್ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ