
ಆಧಾರ್ ಕಾರ್ಡ್ ಇವತ್ತು ಬಹಳ ಅಗತ್ಯ ಇರುವ ದಾಖಲೆ ಎನಿಸಿದೆ. ವ್ಯಕ್ತಿ ಗುರುತು ಸಾಕ್ಷ್ಯ (ID proof) ಮತ್ತು ವಿಳಾಸ ಸಾಕ್ಷ್ಯಕ್ಕೆ (Address proof) ಆಧಾರ್ ಬಳಕೆ ಆಗುತ್ತದೆ. ಅಂತೆಯೇ, ಯಾವುದೇ ಯೋಜನೆಯಲ್ಲಿ ಕೆವೈಸಿಗೆ ಆಧಾರ್ ಮೂಲ ದಾಖಲೆಯಾಗಿರುತ್ತದೆ. ಯುಐಡಿಎಐನಿಂದ ನೀಡಲಾಗುವ ಆಧಾರ್ ಕಾರ್ಡ್ನ (Aadhaar card) ಡಾಟಾಬೇಸ್ನಲ್ಲಿ ವ್ಯಕ್ತಿಯ ಬೆರಳಚ್ಚು, ಕಣ್ಪೊರೆ (Iris of eyes) ಇತ್ಯಾದಿ ಬಯೋಮೆಟ್ರಿಕ್ ಮಾಹಿತಿ ಇರುತ್ತದೆ. ಜೊತೆಗೆ, ವ್ಯಕ್ತಿಯ ಹೆಸರು, ವಯಸ್ಸು, ವಿಳಾಸ ಇತ್ಯಾದಿ ಭೌಗೋಳಿಕ ಮಾಹಿತಿ ಇರುತ್ತದೆ. ಬಹಳಷ್ಟು ಕಾರ್ಯಗಳಿಗೆ ಅಗತ್ಯ ಇರುವ ಆಧಾರ್ ಕಾರ್ಡ್ ಅನ್ನು ಕಳೆದುಕೊಂಡರೆ ಆನ್ಲೈನ್ನಲ್ಲಿ ಅದರ ಪ್ರತಿಯನ್ನು ಪಡೆಯಬಹುದಾಗಿದೆ. ಈ ಬಗ್ಗೆ ವಿವರ ಇಲ್ಲಿದೆ..
ಇದನ್ನೂ ಓದಿ: 2 ಲಕ್ಷ ರೂ ಸಾಲದಿಂದ ಹಿಡಿದು ಆಧನಿಕ ಕೌಶಲ ತರಬೇತಿ; ಪಿಎಂ ವಿಶ್ವಕರ್ಮ ಯೋಜನೆಯ ಲಾಭಗಳೇನು, ತಿಳಿದಿರಿ
ಪಿವಿಸಿ ಕಾರ್ಡ್ ಎಂಬುದು ಕ್ರೆಡಿಟ್ ಕಾರ್ಡ್ ರೀತಿಯಲ್ಲಿ ಬರುವ ಒಂದು ಕಾರ್ಡ್. ಇದನ್ನು ಯುಐಡಿಎಐ ವೆಬ್ಸೈಟ್ ಅಥವಾ ಎಂಆಧಾರ್ ಆ್ಯಪ್ನಿಂದ ಆರ್ಡರ್ ಮಾಡಬಹುದು.
ಆಧಾರ್ ನಂಬರ್, ಅಥವಾ ಎನ್ರೋಲ್ಮೆಂಟ್ ಐಡಿ ಅಥವಾ ವರ್ಚುವಲ್ ಐಡಿ ಹಾಕಬೇಕು. ನೊಂದಾಯಿತ ಮೊಬೈಲ್ ನಂಬರ್ ಮೂಲಕ ವೆರಿಫಿಕೇಶನ್ ಮಾಡಬೇಕು.
ಪಿವಿಸಿ ಕಾರ್ಡ್ಗೆ 50 ರೂ ಶುಲ್ಕ ಕಟ್ಟಬೇಕು. ನೀವು ಆರ್ಡರ್ ಮಾಡಿದ ಬಳಿಕ ಏಳು ದಿನದೊಳಗೆ ನಿಮ್ಮ ವಿಳಾಸಕ್ಕೆ ಇದನ್ನು ಕಳುಹಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ