PM Vishwakarma: 2 ಲಕ್ಷ ರೂ ಸಾಲದಿಂದ ಹಿಡಿದು ಆಧನಿಕ ಕೌಶಲ ತರಬೇತಿ; ಪಿಎಂ ವಿಶ್ವಕರ್ಮ ಯೋಜನೆಯ ಲಾಭಗಳೇನು, ತಿಳಿದಿರಿ

Central Government Schemes: 2023ರ ಸೆಪ್ಟೆಂಬರ್ 17ರಂದು ಚಾಲನೆಗೊಂಡಿದ್ದ ಪಿಎಂ ವಿಶ್ವಕರ್ಮ ಯೋಜನೆಯಿಂದ ಲಕ್ಷಾಂತರ ಮಂದಿ ಕುಶಲಕರ್ಮಿಗಳಿಗೆ ಬಹಳ ಲಾಭವಾಗುತ್ತಿದೆ. ಈ ಯೋಜನೆಯ ವ್ಯಾಪ್ತಿಗೆ ಕಾರ್ಪೆಂಟರ್, ಧೋಬಿ, ಕ್ಷೌರಿಕ, ಶಿಲ್ಪಿ ಸೇರಿದಂತೆ 18 ವಿವಿಧ ಕುಶಲಕರ್ಮಿ ವರ್ಗದವರು ಬರುತ್ತಾರೆ. ಎರಡು ಲಕ್ಷ ರೂವರೆಗೆ ಸಾಲ, ಆಧುನಿಕ ತರಬೇತಿ, ಮಾರುಕಟ್ಟೆ ವ್ಯವಸ್ಥೆ ಇತ್ಯಾದಿ ಹಲವು ಸೌಲಭ್ಯಗಳನ್ನು ಈ ಸ್ಕೀಮ್​ನ ಫಲಾನುಭವಿಗಳಿಗೆ ನೀಡಲಾಗುತ್ತದೆ.

PM Vishwakarma: 2 ಲಕ್ಷ ರೂ ಸಾಲದಿಂದ ಹಿಡಿದು ಆಧನಿಕ ಕೌಶಲ ತರಬೇತಿ; ಪಿಎಂ ವಿಶ್ವಕರ್ಮ ಯೋಜನೆಯ ಲಾಭಗಳೇನು, ತಿಳಿದಿರಿ
ಪಿಎಂ ವಿಶ್ವಕರ್ಮ ಯೋಜನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 18, 2024 | 10:45 AM

ಐದು ತಿಂಗಳ ಹಿಂದ ಪ್ರಾರಂಭಿಸಲಾದ ಪಿಎಂ ವಿಶ್ವಕರ್ಮ ಯೋಜನೆ ದೇಶದ ಕುಶಲಕರ್ಮಿಗಳಿಗೆ (artisans and craftsmen) ವರದಾನವಾಗಿ ಪರಿಣಮಿಸಿದೆ. ಕೇಂದ್ರ ಎಂಎಸ್​ಎಂಇ ಸಚಿವಾಲಯದ ವತಿಯಿಂದ ನಡೆಸಲಾಗುವ 13,000 ಕೋಟಿ ರೂ ಮೊತ್ತದ ಈ ಸ್ಕೀಮ್​ನಲ್ಲಿ ಅಡಮಾನ ರಹಿತ ಸಾಲದ ಜೊತೆಗೆ ಕುಶಲಕರ್ಮಿಗಳ ಕೌಶಲ್ಯವೃದ್ಧಿ, ಆಧುನಿಕ ಪರಿಕರ, ಮಾರ್ಕೆಟಿಂಗ್ ಟೆಕ್ನಿಕ್ ಇತ್ಯಾದಿ ವಿವಿಧ ಸ್ತರಗಳಲ್ಲಿ ಸರ್ಕಾರ ಸಹಾಯ ಒದಗಿಸುತ್ತದೆ. ಸಣ್ಣ ಮತ್ತು ಮಧ್ಯಮ ಗಾತ್ರ ಉದ್ದಿಮೆಗಳ ವಲಯದಲ್ಲಿ ಕರಕುಶಲಕರ್ಮಿಗಳ ಪಾತ್ರ ಹೆಚ್ಚಿದೆ. ಇವರನ್ನು ಆಧುನಿಕ ತಂತ್ರಜ್ಞಾನಕ್ಕೆ ತೆರೆಯುವಂತೆ ಮಾಡುವುದು ಈ ಯೋಜನೆಯ ಗುರಿ. ಗಾರೆ ಕೆಲಸದವರಿಂದ ಹಿಡಿದು ಕಾರ್ಪೆಂಟರ್, ಮೀನು ಬಲೆ ತಯಾರಕರವರೆಗೆ 18 ವಿವಿಧ ಕುಶಲಕರ್ಮಿ ವರ್ಗದವರು ಈ ಯೋಜನೆಯ (PM Vishwakarma Yojana) ವ್ಯಾಪ್ತಿಗೆ ಬರುತ್ತಾರೆ.

ಯಾವ್ಯಾವ ಕುಶಲಕರ್ಮಿಗಳು ಪಿಎಂ ವಿಶ್ವಕರ್ಮ ಯೋಜನೆ ವ್ಯಾಪ್ತಿಗೆ ಬರುತ್ತಾರೆ?

  1. ಮರಗೆಲಸದವರು (ಕಾರ್ಪೆಂಟರ್)
  2. ದೋಣಿ ತಯಾರಕರು (ಬೋಟ್ ಮೇಕರ್)
  3. ಶಸ್ತ್ರಕಾರರು (ಶಸ್ತ್ರಾಸ್ತ್ರ ತಯಾರಕರು, ದುರಸ್ತಿಕಾರರು)
  4. ಕಮ್ಮಾರರು (ಕಬ್ಬಿಣ ಕೆಲಸದವರು)
  5. ಕೊಡಲಿ, ಟೂಲ್​ಕಿಟ್ ತಯಾರಕರು
  6. ಬೀಗ ತಯಾರಕರು
  7. ಅಕ್ಕಸಾಲಿಗರು (ಚಿನ್ನದ ಕಸೂತಿ)
  8. ಕುಂಬಾರರು (ಮಡಿಕೆ ತಯಾರಕರು)
  9. ಶಿಲ್ಪಿಗಳು
  10. ಕಲ್ಲು ಒಡೆಯುವವರು
  11. ಚಮ್ಮಾರರು
  12. ಮೇಸ್ತ್ರಿಗಳು ಅಥವಾ ಗಾರೆ ಕೆಲಸದವರು
  13. ಬುಟ್ಟಿ, ಚಾಪೆ, ಕಸಬರಿಕೆ ತಯಾರಕರು
  14. ಗೊಂಬೆ, ಆಟಿಕೆ ತಯಾರಕರು
  15. ಕ್ಷೌರಿಕರು
  16. ಹೂವಿನ ಹಾರ ತಯರಕರು
  17. ಧೋಬಿಗಳು (ಬಟ್ಟೆ ಒಗೆಯುವವರು)
  18. ದರ್ಜಿಗಳು (ಟೈಲರ್)
  19. ಮೀನುಗಾರಿಕೆ ಬಲೆ ತಯಾರಕರು
  20. ಈ ಮೇಲಿನ ವರ್ಗದ ಕುಶಲಕರ್ಮಿಗಳನ್ನು ಪಿಎಂ ವಿಶ್ವಕರ್ಮ ಯೋಜನೆಯ ವ್ಯಾಪ್ತಿಗೆ ತರಲಾಗಿದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್​ನ ಬೇರೆ ಬೇರೆ ಸ್ಕೀಮ್​ಗಳಲ್ಲಿ ಬಡ್ಡಿ ಎಷ್ಟು ಸಿಗುತ್ತೆ? ಇಲ್ಲಿದೆ ಡೀಟೇಲ್ಸ್

ಪಿಎಂ ವಿಶ್ವಕರ್ಮ ಯೋಜನೆಯಿಂದ ಸಿಗುವ ವಿವಿಧ ಲಾಭಗಳು

ಈ ಯೋಜನೆಯ ಎಲ್ಲಾ ಫಲಾನುಭವಿಗಳಿಗೂ ಅವರವರ ಕ್ಷೇತ್ರದಲ್ಲಿನ ಪರಿಣಿತಿ ಗುರುತಿಸಿ ಪಿಎಂ ವಿಶ್ವಕರ್ಮ ಸರ್ಟಿಫಿಕೇಟ್ ಮತ್ತು ಐಡಿ ಕಾರ್ಡ್ ನೀಡಲಾಗುತ್ತದೆ.

ಕುಶಲಕರ್ಮಿಯ ಕೌಶಲ್ಯ ಮಟ್ಟವನ್ನು ಪರಿಶೀಲಿಸಿ ಅವರಿಗೆ ಅನುಕೂಲವಾಗುವಂತೆ 15,000 ರೂಗಳ ಟೂಲ್​ಕಿಟ್ ಒದಗಿಸಲಾಗುತ್ತದೆ.

ಯೋಜನೆಯ ಫಲಾನುಭವಿಗಳು ಐದರಿಂದ ಏಳು ದಿನಗಳವರೆಗೆ ಮೂಲಭೂತ ಕೌಶಲ ತರಬೇತಿ ಪಡೆಯಲಿದ್ದಾರೆ. ಈ ತರಬೇತಿ ಅವಧಿಯಲ್ಲಿ ಅವರಿಗೆ ದಿನಕ್ಕೆ 500 ರೂ ಸ್ಟೈಪೆಂಡ್ ಕೂಡ ಸಿಗುತ್ತದೆ. ಆ ವೃತ್ತಿಯಲ್ಲಿ ಬಳಸಲಾಗುವ ಆಧನಿಕ ಪರಿಕರಗಳು, ಬ್ರ್ಯಾಂಡಿಂಗ್ ವಿಧಾನಗಳು, ಹಣಕಾಸು ಕಲೆ, ಉದ್ಯಮಶೀಲತೆ, ಸಾಲ ಸೌಲಭ್ಯ, ಮಾರ್ಕೆಟಿಂಗ್ ತಂತ್ರಗಾರಿಕೆ ಇವೆಲ್ಲದರ ತರಬೇತಿ ಮತ್ತು ಪರಿಚಯ ನೀಡಲಾಗುತ್ತದೆ.

ಮೂಲಭೂತ ತರಬೇತಿ ಬಳಿಕ 15 ದಿನಗಳ ಉನ್ನತ ತರಬೇತಿ ಅವಕಾಶ ಕೂಡ ಇರುತ್ತದೆ. ಈ ಹಂತದಲ್ಲೂ ದಿನಕ್ಕೆ 500 ರೂ ಸಹಾಯ ಧನ ನೀಡಲಾಗುತ್ತದೆ. ವೃತ್ತಿಯಲ್ಲಿ ಹೆಚ್ಚು ಪರಿಣಿತಿ ಸಾಧಿಸಲು ಈ ಉನ್ನತ ತರಬೇತಿ ಮುಖ್ಯವಾಗುತ್ತದೆ.

ಬೇಸಿಕ್ ಸ್ಕಿಲ್ ಟ್ರೈನಿಂಗ್ ಅಥವಾ ಮೂಲಭೂತ ಕೌಶಲ ತರಬೇತಿ ಪಡೆದ ಕುಶಲಕರ್ಮಿಗಳಿಗೆ ಒಂದು ಲಕ್ಷ ರೂವರೆಗೆ ಸಾಲ ಸೌಲಭ್ಯ ಕೊಡಲಾಗುತ್ತದೆ. ಇದಕ್ಕೆ ಬಡ್ಡಿದರ ಬಹಳ ಕಡಿಮೆ ಇರುತ್ತದೆ.

ಉನ್ನತ ಮಟ್ಟದ ತರಬೇತಿ ಪಡೆದವರಿಗೆ ಹಾಗೂ ಡಿಜಿಟಲ್ ವಹಿವಾಟು ಬಳಸುತ್ತಿರುವವರಿಗೆ, ಮತ್ತು ಹಿಂದೆ ಪಡೆದುಕೊಂಡ ಸಾಲದ ಮರುಪಾವತಿ ಮಾಡಿದವರಿಗೆ ಸಾಲದ ಮೊತ್ತವನ್ನು 2 ಲಕ್ಷ ರೂಗೆ ಹೆಚ್ಚಿಸಲಾಗುತ್ತದೆ.

ಕುಶಲಕರ್ಮಿಗಳ ಉತ್ಪನ್ನಗಳು ಮಾರುಕಟ್ಟೆ ತಲುಪುವುದು ಸುಲಭವಾಗುವಂತೆ ಮಾರ್ಕೆಟಿಂಗ್ ಸಪೋರ್ಟ್ ಒದಗಿಸಲಾಗುತ್ತದೆ. ಇಕಾಮರ್ಸ್, ಜಿಇಎಂ ಪ್ಲಾಟ್​ಫಾರ್ಮ್​ಗಳಲ್ಲಿ ಬ್ರ್ಯಾಂಡಿಂಗ್ ಪ್ರಚುರಪಡಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು