Check Fake Currency: ರೂ 2000 ನೋಟು ಅಸಲಿಯಾ, ನಕಲಿಯಾ? ಪತ್ತೆ ಹಚ್ಚುವ ವಿಧಾನಗಳು
Know How To Identify Original Rs 2000 Note: ಆರ್ಬಿಐ ಬಹಳ ಎಚ್ಚರ ವಹಿಸಿ ನೋಟುಗಳನ್ನು ಮುದ್ರಿಸುತ್ತದೆ. ಪ್ರತಿಯೊಂದು ನೋಟಿನಲ್ಲೂ ವಿಶೇಷತೆಗಳಿರುತ್ತವೆ. 2 ಸಾವಿರ ರೂ ಮುಖಬೆಲೆಯ ನೋಟುಗಳಲ್ಲಿ ಹಲವು ಫೀಚರ್ಗಳಿದ್ದು, ಮೂಲ ನೋಟಿನ ರೀತಿಯಲ್ಲೇ ನಕಲಿ ನೋಟು ಸೃಷ್ಟಿಸುವುದು ಅಸಾಧ್ಯ. ಈ ಫೀಚರ್ಗಳ ಬಗ್ಗೆ ಒಂದು ಪರಿಚಯ.
ನವದೆಹಲಿ: ನಕಲಿ ನೋಟುಗಳು ಯಾವತ್ತಿದ್ದರೂ ಆರ್ಥಿಕತೆಗೆ ಸಂಚಕಾರಿ. ದುರಾಸೆಗೆ ನಕಲಿ ನೋಟುಗಳನ್ನು (Fake Currency) ಮುದ್ರಿಸುತ್ತಾರೆ, ದೇಶದ ಅರ್ಥವ್ಯವಸ್ಥೆ ಕುಗ್ಗಿಸಲು ನಕಲಿ ನೋಟುಗಳ ಮುದ್ರಣ ಆಗುತ್ತದೆ. ಇಂಥ ನೋಟುಗಳಿಂದ ಹಣದುಬ್ಬರ ಹೆಚ್ಚುವುದಲ್ಲದೇ, ರೂಪಾಯಿಯ ಅಪಮೌಲ್ಯ ಇತ್ಯಾದಿ ಹಲವು ದುಷ್ಪರಿಣಾಮಗಳಿವೆ. 2 ಸಾವಿರ ರೂ ನಂತರ ಹೆಚ್ಚು ಮುಖಬೆಲೆಯ ನೋಟುಗಳ ನಕಲಿ ಸೃಷ್ಟಿಸುವ ಸಾಧ್ಯತೆ ಹೆಚ್ಚೇ ಇರುತ್ತದೆ. ಆರ್ಬಿಐ ಬಹಳ ಎಚ್ಚರ ವಹಿಸಿ ನೋಟುಗಳನ್ನು ಮುದ್ರಿಸುತ್ತದೆ. ಹೀಗಾಗಿ, ನಿಖರವಾಗಿ ಮೂಲ ನೋಟುಗಳ ರೀತಿಯಲ್ಲೇ ನಕಲಿ ನೋಟುಗಳನ್ನು ಮುದ್ರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ನಕಲಿ ನೋಟು ಯಾವುದು, ಒರಿಜಿನಲ್ ನೋಟು ಯಾವುದು ಎಂದು ಸುಲಭವಾಗಿ ಗುರುತಿಸಬಹುದು.
ಇಂಥ ಕೆಲ ಫೀಚರ್ಗಳು ಯಾವುವು ಎಂದು ತಿಳಿದುಕೊಂಡರೆ ನಕಲಿ ನೋಟುಗಳನ್ನು ಗುರುತಿಸಿ ವಂಚನೆಯಿಂದ ತಪ್ಪಿಸಿಕೊಳ್ಳಬಹುದು. ಈ ಬಗ್ಗೆ ವಿವರ ಇಲ್ಲಿದೆ:
- 2000 ಎಂದಿರುವ ಸೀ ತ್ರೂ ರಿಜಿಸ್ಟರ್ ಕಾಣಬಹುದು. ಇದು ಹೂವಿನ ಆಕೃತಿಯಂತೆ ಕಾಣುತ್ತದೆ.
- 2000 ನಂಬರ್ ಇರುವ ಲೇಟೆಂಟ್ ಇಮೇಜ್ ಇದು. ಲೇಟೆಂಟ್ ಇಮೇಜ್ ಎಂದರೆ ಉದ್ದುದ್ದವಾಗಿ ಹಿಡಿದು ನೋಡಿದರೆ ಮಾತ್ರ ಈ ಅಂಕಿ ಗೋಚರ ಆಗುತ್ತದೆ.
- ದೇವನಾಗರಿ ಲಿಪಿಯಲ್ಲಿ ಬರೆಯಲಾಗಿರುವ २००० (2000) ನಂಬರ್
- ಮಧ್ಯದಲ್ಲಿ ಮಹಾತ್ಮ ಗಾಂಧಿ ಚಿತ್ರ
- ಚಿಕ್ಕದಾಗಿ ದೇವನಾಗರಿಯಲ್ಲಿ भारत ಮತ್ತು ಇಂಡಿಯಾ ಎಂದು ಬರೆಯಲಾಗಿರುತ್ತದೆ.
- ಇದು ಕಲರ್ ಶಿಫ್ಟ್ ವಿಂಡೋವ್ಡ್ ಸೆಕ್ಯೂರಿಟಿ ಥ್ರೆಡ್. भारत, ಆರ್ಬಿಐ ಮತ್ತು 2000 ಎಂದು ಬರೆಯಲಾಗಿರುತ್ತದೆ. ನೋಟು ತಿರುಗಿಸಿದಂತೆಲ್ಲಾ ಥ್ರೆಡ್ನ ಬಣ್ಣಗಳು ಹಸಿರು ಮತ್ತು ನೀಲಿ ಮಧ್ಯೆ ಬದಲಾಗುತ್ತಿರುತ್ತದೆ.
- ಮಹಾತ್ಮ ಗಾಂಧಿ ಚಿತ್ರದ ಬಲಗಡೆಗೆ ಖಾತ್ರಿ ಹೇಳಿಕೆ, ಆರ್ಬಿಐ ಗವರ್ನರ್ ಸಹಿ ಮತ್ತು ಭರವಸೆ ಹೇಳಿಕೆ ಇರುತ್ತವೆ.
- ಮಹಾತ್ಮ ಗಾಂಧಿ ಚಿತ್ರ ಮತ್ತು ಎಲೆಕ್ಟ್ರೋಟೈಪ್ (2000) ವಾಟರ್ಮಾರ್ಕ್ಗಳಿರುತ್ತವೆ.
- ನೋಟಿನ ಮೇಲಿನ ಎಡಭಾಗದಲ್ಲಿ ಮತ್ತು ಕೆಳಗಿನ ಬಲಭಾಗದಲ್ಲಿ ಅಕ್ಷರಗಾತ್ರ ದೊಡ್ಡದಾಗುವ ರೀತಿಯಲ್ಲಿ ನಂಬರ್ ಪ್ಯಾನಲ್ ಇರುತ್ತದೆ.
- ಕೆಳಗಿನ ಬಲಭಾಗದಲ್ಲಿ ಹಸಿರಿನಿಂದ ನೀಲಿಗೆ ಬಣ್ಣ ಬದಲಿಸುವ ರುಪಾಯಿ ಚಿಹ್ನೆಯಿಂದ ಆರಂಭವಾಗುವ 2000 ನಂಬರ್ (₹2000).
- ಬಲಭಾಗದಲ್ಲಿ ಅಶೋಕ ಪಿಲ್ಲರ್ ಎಂಬ್ಲಮ್ ಇರುತ್ತದೆ
- ಮಂದದೃಷ್ಟಿ ಅಥವಾ ಅಂಧರಿಗೆ ನೋಟು ಗುರುತಿಸಲು ಹಲವು ಫೀಚರ್ಗಳಿವೆ. ಕಡೆದ ರೀತಿಯ ಮಹಾತ್ಮ ಗಾಂಧಿ ಚಿತ್ರ, ಅಶೋಕ ಪಿಲ್ಲರ್ ಎಂಬ್ಲೆಮ್, ಬಲಗಡೆಯಲ್ಲಿ ರೂ 2000 ವಾಟರ್ಮಾರ್ಕ್, ಬಲ ಮತ್ತು ಎಡ ಎರಡೂ ಬದಿಗಳಲ್ಲಿ ಏಳು ಬ್ಲೀಡ್ ಲೈನ್ಗಳಿರುತ್ತವೆ.
- ನೋಟಿನ ಎಡಬದಿಯಲ್ಲಿ ನೋಟು ಮುದ್ರಣದ ವರ್ಷ ಕಾಣಬಹುದು.
- ಸ್ವಚ್ಛ್ ಭಾರತ್ ಲೋಗೋ ಮತ್ತು ಸ್ಲೋಗನ್
- ಭಾಷಾ ಫಲಕ
- ಮಂಗಲಯಾನ ಘೋಷವಾಕ್ಯ
- ದೇವನಾಗರಿಯಲ್ಲಿ २००० ನಂಬರ್
ಇದನ್ನೂ ಓದಿ: DA Hike Likely: ಡಿಎ ಹೆಚ್ಚಿಸಲಿರುವ ಕೇಂದ್ರ; 1 ಕೋಟಿಗೂ ಹೆಚ್ಚು ಮಂದಿಗೆ ಖುಷಿಯ ಸುದ್ದಿ
ಇವುಗಳ ಜೊತೆಗೆ, ಆರ್ಬಿಐ ಮುದ್ರಿಸುವ ನೋಟಿನ ಗುಣಮಟ್ಟವೇ ಬೇರೆ ಇರುತ್ತದೆ. ಮೂಲ ಮತ್ತು ನಕಲಿ ನೋಟುಗಳನ್ನು ಕೈಯಲ್ಲಿ ಹಿಡಿದಾಕ್ಷಣ ಅನುಭವಿಗಳು ತತ್ಕ್ಷಣ ವ್ಯತ್ಯಾಸ ಗುರುತಿಸಿಬಿಡುತ್ತಾರೆ.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:55 am, Wed, 22 February 23