AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದ ಡೀಪ್​ಸೀಕ್ ಎಐ ಮಾಡಲ್​ನಿಂದ ಅಮೆರಿಕಕ್ಕೆ ಶಾಕ್​ವೇವ್; ಚಿಪ್ ಕಂಪನಿಯ ಷೇರೂ ಕುಸಿಯುತ್ತಿರುವುದು ಯಾವ ಲಾಜಿಕ್ಕು?

DeepSeek AI and NVidia: ಕಡಿಮೆ ಬಜೆಟ್​ನಲ್ಲಿ ಚಂದ್ರಯಾನ ಸಾಧ್ಯ ಇಲ್ಲ ಎಂದು ಮೂಗು ಮುರಿದಿದ್ದ ಅಮೆರಿಕನ್ನರಿಗೆ ಇಸ್ರೋ ಸರಿಯಾದ ಉತ್ತರ ಕೊಟ್ಟಿತ್ತು. ಕಡಿಮೆ ಬಂಡವಾಳದಲ್ಲಿ ದೊಡ್ಡ ಎಐ ಮಾಡಲ್ ಸೃಷ್ಟಿಸಲು ಆಗಲ್ಲ ಎಂದು ಹೇಳುವ ಅಮೆರಿಕನ್ನರಿಗೆ ಚೀನಾದ ಡೀಪ್​ಸೀಕ್ ಉತ್ತರ ಕೊಟ್ಟಿದೆ. ಬಹಳ ಕಡಿಮೆ ಬೆಲೆಯಲ್ಲಿ ಡೀಪ್​ಸೀಪ್ ಪ್ರಬಲ ಎಐ ಮಾಡಲ್ ಸೇವೆ ನೀಡಿದೆ.

ಚೀನಾದ ಡೀಪ್​ಸೀಕ್ ಎಐ ಮಾಡಲ್​ನಿಂದ ಅಮೆರಿಕಕ್ಕೆ ಶಾಕ್​ವೇವ್; ಚಿಪ್ ಕಂಪನಿಯ ಷೇರೂ ಕುಸಿಯುತ್ತಿರುವುದು ಯಾವ ಲಾಜಿಕ್ಕು?
ಡೀಪ್​ಸೀಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 28, 2025 | 5:34 PM

Share

ನವದೆಹಲಿ, ಜನವರಿ 28: ತಂತ್ರಜ್ಞಾನದಲ್ಲಿ ಅಮೆರಿಕ ಹೊಸ ಹೆಜ್ಜೆ ಹಾಕಿದಾಗೆಲ್ಲಾ ಚೀನಾ ಕೂಡ ತಾನೇನು ಸುಮ್ಮನ್ನಿಲ್ಲ ಎಂದು ಸರಿಸಮಾನವಾಗಿ ಹೆಜ್ಜೆ ಹಾಕುತ್ತಾ ಹೋಗುತ್ತಿದೆ. ಕೆಲವೊಮ್ಮೆ ಅಮೆರಿಕವನ್ನೇ ಹಿಂದಿಕ್ಕುವುದುಂಟು. ನಿನ್ನೆಯಿಂದ ಚೀನಾದ ಡೀಪ್​ಸೀಕ್ (DeepSeek AI) ಎನ್ನುವ ಹೊಸ ಎಐ ಮಾಡಲ್ ಸದ್ದು ಮಾಡುತ್ತಿದೆ. ಅಮೆರಿಕದಂಥ ಅಮೆರಿಕ ದೇಶದ ಎಐ ಟೆಕ್ಕಿ ಉದ್ಯಮಿಗಳು ಆವಾಕ್ಕಾಗಿ ನೋಡುತ್ತಿದ್ದಾರೆ. ಓಪನ್​ಎಐ, ಗೂಗಲ್, ಮೈಕ್ರೋಸಾಫ್ಟ್ ಮೊದಲಾದ ಸಂಸ್ಥೆಗಳು ಹೊಸ ಸ್ಪರ್ಧೆಯ ವೇಗಕ್ಕೆ ಸಜ್ಜಾಗಬೇಕಾಗಿದೆ. ಪ್ರಬಲ ಎಐ ಮಾಡಲ್ ಸೃಷ್ಟಿಸುವುದು ಹೇಗೆಂದು ಸೋಜಿಗಪಡುತ್ತಿದ್ದ ಭಾರತದಂತಹ ದೇಶಗಳಿಗೆ ಡೀಪ್​ಸೀಪ್ ಹೊಸ ಭರವಸೆ ಕೊಟ್ಟಿದೆ.

ಡೀಪ್​ಸೀಕ್ ಎನ್ನುವುದು ಚ್ಯಾಟ್​ಜಿಪಿಟಿ ರೀತಿಯ ಒಂದು ಲಾರ್ಜ್ ಲ್ಯಾಂಗ್ವೇಜ್ ಮಾಡಲ್ ಆಗಿದೆ. ಅದು ಹತ್ತರಲ್ಲಿ ಒಂದು ಎಂಬುದು ಹೌದಾದರೂ ಅಮೆರಿಕದ ತಂತ್ರಜ್ಞಾನ ಕಂಪನಿಗಳು ತಲೆಕೆಡಿಸಿಕೊಂಡಿರುವುದು ಮತ್ತೊಂದು ಒಳ ಸಂಗತಿಗೆ. ಕಡಿಮೆ ಹಣದಲ್ಲಿ ಡೀಪ್​ಸೀಕ್ ಸೃಷ್ಟಿಯಾಗಿದೆ. ಒಂದು ಅಥವಾ ಎರಡು ವರ್ಷದ ಹಿಂದಷ್ಟೇ ಆರಂಭವಾದ ಡೀಪ್​ಸೀಪ್ ಕಂಪನಿ ಇಷ್ಟು ಕಡಿಮೆ ಅವಧಿಯಲ್ಲಿ ಬೃಹತ್ ಎಐ ಮಾಡಲ್ ಸೃಷ್ಟಿಸಿದ್ದು ಸಾಧಾರಣ ಸಂಗತಿಯಲ್ಲ.

ಗಮನಾರ್ಹ ಸಂಗತಿ ಎಂದರೆ, ಓಪನ್​ಎಐನ ಒ1 ಎನ್ನುವ ಎಲ್​ಎಲ್​ಎಂ ಪ್ರತೀ ಮಿಲಿಯನ್ ಇನ್​ಪುಟ್ ಟೋಕನ್​ಗೆ 15 ಡಾಲರ್ ವಿಧಿಸುತ್ತದೆ. ಪ್ರತೀ ಮಿಲಿಯನ್ ಔಟ್​ಪುಟ್ ಟೋಕನ್​ಗೆ 60 ಮಿಲಿಯನ್ ಡಾಲರ್ ದರ ವಿಧಿಸುತ್ತದೆ. ಆದರೆ, ಡೀಪ್​ಸೀಕ್​ನ ಆರ್​1 ಮಾಡಲ್ ಶೇ. 4ಕ್ಕಿಂತಲೂ ಕಡಿಮೆ ಬೆಲೆಗೆ ಈ ಸರ್ವಿಸ್ ನೀಡುತ್ತದೆ. ಒಂದು ಮಿಲಿಯನ್ ಇನ್ಪುಟ್ ಟೋಕನ್​ಗೆ 0.55 ಡಾಲರ್; ಒಂದು ಮಿಲಿಯನ್ ಔಟ್​ಪುಟ್ ಟೋಕನ್​ಗೆ 2.19 ಡಾಲರ್ ಬೆಲೆ ನಿಗದಿ ಮಾಡಿದೆ.

ಇದನ್ನೂ ಓದಿ: ಟ್ರಂಪ್ ಒಂದೇ ಕಲ್ಲಿಗೆ ಎರಡು ಹಕ್ಕಿ; ಅಮೆರಿಕ ಅಧ್ಯಕ್ಷರ ಮುಂದಿನ ನಡೆಯಿಂದ ಭಾರತ, ಚೀನಾಗೆ ಆತಂಕ

ಎಐನಲ್ಲಿ ಟೋಕನ್ ಎಂದರೇನು?

ಇಲ್ಲಿ ಇನ್​ಪುಟ್ ಟೋಕನ್ ಎಂದರೆ ನೀವು ಎಐ ಮಾಡಲ್ ಬಳಿ ಕೇಳಲು ಸಲ್ಲಿಸುವ ಒಂದು ವಾಕ್ಯದಲ್ಲಿನ ಒಂದು ಪದವಾಗಿರುತ್ತದೆ. ಉದಾಹರಣೆಗೆ, ನೀವು ಬಜೆಟ್ ಬಗ್ಗೆ ಏನಾದರೂ ಪ್ರಶ್ನೆ ಇದ್ದರೆ ಹತ್ತು ಪದಗಳ ಒಂದು ವಾಕ್ಯದಲ್ಲಿ ಕೇಳುತ್ತೀರಿ. ಆಗ ಇನ್ಪುಟ್ ಟೋಕನ್ ಸಂಖ್ಯೆ 10 ಆಗುತ್ತದೆ. ಇಲ್ಲಿ ಔಟ್​ಪುಟ್ ಟೋಕನ್ ಬೆಲೆ ಹೆಚ್ಚು ಇರುವುದು ಯಾಕೆಂದರೆ, ನಿಮ್ಮ ಕ್ವೀರಿಯನ್ನು ಸಂಸ್ಕರಿಸಲು ಹೆಚ್ಚು ಕಂಪ್ಯೂಟಿಂಗ್ ಬಳಕೆ ಅವಶ್ಯಕತೆ ಇರುತ್ತದೆ. ಹೀಗಾಗಿ, ಔಟ್​ಪುಟ್ ಟೋಕನ್​ಗೆ ಹೆಚ್ಚಿನ ದರ ಇರುತ್ತದೆ.

ನಿವಿಡಿಯಾದಂತಹ ಚಿಪ್ ತಯಾರಕ ಕಂಪನಿಯ ಷೇರು ಕುಸಿಯುತ್ತಿರುವುದು ಯಾಕೆ?

ಕುತೂಹಲದ ಸಂಗತಿ ಎಂದರೆ, ಚೀನಾದ ಡೀಪ್​ಸೀಕ್ ಎಐ ಮಾಡಲ್ ತಯಾರಿಸಲು ಟ್ರೈನಿಂಗ್​ಗಾಗಿ ನಿವಿಡಿಯಾದ ಚಿಪ್​ಗಳನ್ನೇ ಬಳಸಲಾಗಿದೆ. ಆದರೂ ಕೂಡ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ನಿವಿಡಿಯಾದ ಷೇರುಬೆಲೆ ಸತತವಾಗಿ ಕುಸಿಯುತ್ತಿದೆ. ಅದೇ ಕಂಪನಿಯ ಚಿಪ್ ಅನ್ನು ಡೀಪ್​ಸೀಕ್​ಗೆ ಬಳಸಲಾಗಿದ್ದರೂ ಷೇರು ಮಾತ್ರ ಯಾಕೆ ಇಳಿಕೆ ಆಗುತ್ತಿದೆ ಎಂದು ಹಲವರಿಗೆ ಅಚ್ಚರಿ ಆಗಿರಬಹುದು. ಅದಕ್ಕೆ ಕಾರಣ ಇದೆ.

ಚ್ಯಾಟ್​ಜಿಪಿಟಿ, ಒ1, ಜೆಮಿನಿ ಇತ್ಯಾದಿ ಎಲ್​ಎಲ್​ಎಂಗಳ ತಯಾರಿಕೆ ವೇಳೆ ಟ್ರೈನ್ ಮಾಡಲು ಉನ್ನತ ಶ್ರೇಣಿಯ ಜಿಪಿಯುಗಳ ಅವಶ್ಯಕತೆ ಇದೆ. ಬಹುತೇಕ ಇಂಥ ಚಿಪ್​ಗಳನ್ನು ನಿವಿಡಿಯಾ ತಯಾರಿಸುತ್ತದೆ. ನಿವಿಡಿಯಾದ ಎಚ್1000 ಇತ್ಯಾದಿ ಬೇಕಾಗುತ್ತದೆ. ಆದರೆ, ಡೀಪ್​ಸೀಕ್​ನ ಮಾಡಲ್ ಟ್ರೈನಿಂಗ್​ಗೆ ನಿವಿಡಿಯಾದ ಕಡಿಮೆ ಮಟ್ಟದ ಎಚ್​100, ಎಚ್200 ಇತ್ಯಾದಿ ಜಿಪಿಯುಗಳನ್ನು ಬಳಸಲಾಗಿದೆ.

ಇದನ್ನೂ ಓದಿ: ಗಾಡಿಗೆ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲಾಂದ್ರೆ ಪೆಟ್ರೋಲ್ ಸಿಗಲ್ಲ, ಫಾಸ್​ಟ್ಯಾಗ್ ಇಲ್ಲ? ಜಾರಿ ಬರುತ್ತಿವೆ ಹೊಸ ನಿಯಮಗಳು

ಡೀಪ್​​ಸೀಕ್ ಹೊಸ ಪ್ರಯೋಗ…

ಚೀನಾ ಎಐ ಕ್ಷೇತ್ರದಲ್ಲಿ ಹೆಚ್ಚು ಮುಂದುವರಿಯಬಾರದು ಎಂದು ಅಮೆರಿಕವು ಚಿಪ್​ಗಳ ಸರಬರಾಜಿನ ಮೇಲೆ ನಿರ್ಬಂಧಗಳನ್ನು ಹಾಕಿತ್ತು. ಹೀಗಾಗಿ, ಚೀನಾ ಬಹಳ ಕಡಿಮೆ ಸಂಖ್ಯೆಯ ಮತ್ತು ಕಡಿಮೆ ಶ್ರೇಣಿಯ ಜಿಪಿಯುಗಳನ್ನು ಬಳಸಿ ಎಐ ಮಾಡಲ್ ಕಟ್ಟಬೇಕಿತ್ತು. ಡೀಪ್​ಸೀಕ್ ಈ ಕೆಲಸವನ್ನು ಸಮರ್ಕಪವಾಗಿ ಮಾಡಿದೆ.

ಜಿಪಿಯುನಂತಹ ಹಾರ್ಡ್​ವೇರ್ ಮೇಲಿನ ಅವಲಂಬನೆ ಕಡಿಮೆ ಆಗುವ ರೀತಿಯಲ್ಲಿ ವಿನೂತನ ವಿಧಾನಗಳನ್ನು, ಹೊಸ ಅವಿಷ್ಕಾರಗಳನ್ನು ಡೀಪ್​ಸೀಕ್​ನ ತಂತ್ರಜ್ಞರು ಅನುಸರಿಸಿದ್ದಾರೆ. ಹೆಚ್ಚು ಸರಾಗವಾಗಿ ಡಾಟಾ ರವಾನೆ, ಕಡಿಮೆ ಮೆಮೊರಿ ಬಳಕೆ ಇತ್ಯಾದಿ ಸಾಧ್ಯವಾಗುವಂತೆ ಒಂದಷ್ಟು ಬದಲಾವಣೆ ಮಾಡಲಾಯಿತು. ಇದರಿಂದ ಕಡಿಮೆ ಬೆಲೆಗೆ ಒಂದು ಪ್ರಬಲ ಲಾರ್ಜ್ ಲ್ಯಾಂಗ್ವೇಜ್ ಮಾಡಲ್ ಅನ್ನು ಡೀಪ್​ಸೀಕ್ ಸೃಷ್ಟಿಸಲು ಸಾಧ್ಯವಾಯಿತು.

ಇಲ್ಲಿ ಡೀಪ್​ಸೀಕ್ ಕೊಟ್ಟ ಸಂದೇಶ ಏನೆಂದರೆ, ಒಂದು ಪ್ರಬಲ ಎಐ ಮಾಡಲ್ ಸೃಷ್ಟಿಸಲು ದುಬಾರಿಯಾದ ಮತ್ತು ಶಕ್ತಿಶಾಲಿಯಾದ ಚಿಪ್ ಅಥವಾ ಜಿಪಿಯು ಅನಿವಾರ್ಯವಲ್ಲ. ಅಮೆರಿಕದ ಚಿಪ್​ಗಳದ್ದು ಬರೀ ಹೈಪ್ ಅಷ್ಟೇ ಎನ್ನುವುದನ್ನು ಸಾರಿದಂತಿದೆ.

ಎಐ ಪ್ರಪಂಚದಲ್ಲಿ ನಿವಿಡಿಯಾದ ಚಿಪ್​ಗಳು ಅನಿವಾರ್ಯ ಎನ್ನುವಂತಹ ವಾತಾವರಣ ಸೃಷ್ಟಿಯಾಗಿತ್ತು. ಈ ಗುಳ್ಳೆಯನ್ನು ಡೀಪ್​ಸೀಕ್ ಒಡೆದಿದೆ. ಬಹಳಷ್ಟು ಹೂಡಿಕೆದಾರರು ನಿವಿಡಿಯಾ ಮೇಲೆ ಹಣ ಹಾಕಿದ್ದರು. ಈಗ ಅವರಿಗೆ ಅಲ್ಲಿಂದ ನಿರ್ಗಮಿಸುವ ಕಾಲ ಬಂದಿರಬಹುದು ಎಂದನಿಸಿರಬಹುದು. ಹೀಗಾಗಿ, ನಿವಿಡಿಯಾದ ಷೇರುಗಳನ್ನು ಹೊಂದಿರುವವರು ಅದನ್ನು ಮಾರುತ್ತಿರಬಹುದು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ