Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಷೂರೆನ್ಸ್ ಪ್ರೀಮಿಯಮ್​ಗೆ ತೆರಿಗೆಯೇ ಇಲ್ಲದಿದ್ದರೆ ಏನಾಗುತ್ತೆ? ಊಹಿಸಲೂ ಕಷ್ಟವಾದ ಸೋಜಿಗದ ಸಂಗತಿ

Life Insurance premium and GST: ಇನ್ಷೂರೆನ್ಸ್ ಪ್ರೀಮಿಯಮ್ ಹಣಕ್ಕೆ ಸದ್ಯ ಶೇ. 18ರಷ್ಟು ಜಿಎಸ್​​ಟಿ ಇದೆ. ಇದನ್ನು ತೆಗೆದುಹಾಕಬೇಕು ಎನ್ನುವ ಕೂಗು ಇದೆ. ಆದರೆ, ಜಿಎಸ್​ಟಿಯನ್ನೇ ತೆಗೆದುಹಾಕಿದರೆ ಇನ್ಷೂರೆನ್ಸ್ ಪ್ರೀಮಿಯಮ್ ಹಣ ಕಡಿಮೆ ಆಗುವ ಬದಲು ದುಬಾರಿ ಆಗಬಹುದು ಎನ್ನುವ ಪ್ರತಿವಾದವೂ ಇದಕ್ಕೆ. ಇನ್ಷೂರೆನ್ಸ್ ಕಂಪನಿಗಳು ತಮ್ಮ ವೆಚ್ಚಕ್ಕೆ ಕಟ್ಟುವ ಜಿಎಸ್​ಟಿಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಸಾಧ್ಯವಾಗುವುದಿಲ್ಲ.

ಇನ್ಷೂರೆನ್ಸ್ ಪ್ರೀಮಿಯಮ್​ಗೆ ತೆರಿಗೆಯೇ ಇಲ್ಲದಿದ್ದರೆ ಏನಾಗುತ್ತೆ? ಊಹಿಸಲೂ ಕಷ್ಟವಾದ ಸೋಜಿಗದ ಸಂಗತಿ
ಇನ್ಷೂರೆನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 28, 2025 | 3:26 PM

ನವದೆಹಲಿ, ಜನವರಿ 28: ಲೈಫ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳ ಪ್ರೀಮಿಯಮ್ ಹಣಕ್ಕೆ ಜಿಎಸ್​ಟಿಯಿಂದ ವಿನಾಯಿತಿ ನೀಡಬೇಕು ಎನ್ನುವ ಕೂಗು ಸಾಕಷ್ಟು ಕೇಳಿಬರುತ್ತಿದೆ. ಇವು ಒಬ್ಬ ವ್ಯಕ್ತಿಗೆ ಅತ್ಯಗತ್ಯವಾದ ಸೇವೆಯಾದ್ದರಿಂದ ತೆರಿಗೆ ಹಾಕಬಾರದು ಎನ್ನುವ ವಾದ ಇದೆ. ಸದ್ಯ ಲೈಫ್ ಇನ್ಷೂರೆನ್ಸ್ ಪ್ರೀಮಿಯಮ್​ಗಳಿಗೆ ಶೇ. 18ರಷ್ಟು ಜಿಎಸ್​ಟಿ ಇದೆ. ಇದನ್ನು ಸಂಪೂರ್ಣವಾಗಿ ತೆಗೆದುಹಾಕಬೇಕೆನ್ನುವ ವಾದಕ್ಕೆ ಪ್ರತಿವಾದವೂ ಇದೆ. ಲೈಫ್ ಇನ್ಷೂರೆನ್ಸ್ ಪ್ರೀಮಿಯಮ್ ಅನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಟ್ಟುಬಿಟ್ಟರೆ ಪ್ರೀಮಿಯಮ್ ಹಣ ಕಡಿಮೆ ಆಗೋದಿಲ್ಲ. ಬೆಲೆ ಏರಿಕೆ ಆಗುವ ಸಾಧ್ಯತೆಯೂ ಇರುತ್ತದೆ ಎನ್ನುವುದು ಪ್ರತಿವಾದ. ಕೆಲ ತಜ್ಞರೂ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ತೆರಿಗೆ ಇಲ್ಲದಿದ್ದರೆ ಬೆಲೆ ಕಡಿಮೆ ಆಗಬೇಕಲ್ಲವಾ? ಇಲ್ಲಿದೆ ಐಟಿಸಿ ಅಂಶ…

ತಾರ್ಕಿಕವಾಗಿ ನೋಡಿದಾಗ ಒಂದು ಉತ್ಪನ್ನಕ್ಕೆ ಇರುವ ತೆರಿಗೆಯನ್ನು ಕಡಿಮೆ ಮಾಡಿದರೆ, ಅದರ ಬೆಲೆ ಕಡಿಮೆ ಆಗುತ್ತದೆ. ತೆರಿಗೆಯೇ ಇಲ್ಲದಿದ್ದರೆ ಬೆಲೆ ಮತ್ತಷ್ಟು ಕಡಿಮೆ ಆಗುತ್ತದೆ. ಆದರೆ, ಇನ್ಷೂರೆನ್ಸ್ ಪ್ರೀಮಿಯಮ್ ವಿಚಾರದಲ್ಲಿ ಬೇರೆಯೇ ಇದು ಯಾಕಾಗೋದಿಲ್ಲ? ಇದಕ್ಕೆ ಕಾರಣ, ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಇನ್ನುವ ಸೌಲಭ್ಯ.

ಸರಳವಾಗಿ ವಿವರಿಸುವುದಾದರೆ, ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಎನ್ನುವುದು ಒಂದು ಸಂಸ್ಥೆ ತನ್ನ ಉತ್ಪನ್ನದ ತಯಾರಿಕೆ ವೇಳೆ ಬಳಸಿದ ಬಿಡಿಭಾಗ, ಕಚ್ಚಾ ವಸ್ತುಗಳು, ಹಾಗೂ ಇತರ ಸೇವೆಗಳಿಗೆ ಕಟ್ಟಿದ ಜಿಎಸ್​ಟಿ ಹಣದಲ್ಲಿ ಕೆಲ ಮೊತ್ತವನ್ನು ಸರ್ಕಾರದಿಂದ ವಾಪಸ್ ಪಡೆದುಕೊಳ್ಳುವ ಅವಕಾಶ ನೀಡುತ್ತದೆ.

ಇದನ್ನೂ ಓದಿ: ಮೊಬೈಲ್ ನಂಬರ್ ರೀತಿ ನಿಮ್ಮ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಯನ್ನೂ ಪೋರ್ಟ್ ಮಾಡಬಹುದಾ? ಇಲ್ಲಿದೆ ಡೀಟೇಲ್ಸ್

ಇನ್ಷೂರೆನ್ಸ್ ಸಂಸ್ಥೆಗಳು ತನ್ನ ಏಜೆಂಟ್​ಗಳಿಗೆ ಪೇಮೆಂಟ್, ಸಿಬ್ಬಂದಿವರ್ಗಕ್ಕೆ ಸಂಬಳ, ಪ್ರಚಾರಕ್ಕೆ ವೆಚ್ಚ ಇತ್ಯಾದಿ ವೆಚ್ಚಗಳಿಗೆ ಜಿಎಸ್​ಟಿ ಕಟ್ಟುತ್ತದೆ. ಈ ವೆಚ್ಚಕ್ಕೆ ಕಂಪನಿಗಳು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯದ ಅವಕಾಶ ಹೊಂದಿರುತ್ತವೆ. ಇನ್ಷೂರೆನ್ಸ್ ಪ್ರೀಮಿಯಮ್​ಗಳ ಮಾರಾಟದಿಂದ ಬಂದ ಜಿಎಸ್​ಟಿ ಹಣದಲ್ಲಿ ಐಟಿಸಿ ಅನ್ನು ಕ್ಲೇಮ್ ಮಾಡಬಹುದು.

ಜಿಎಸ್​ಟಿ ವಿನಾಯಿತಿ ಇದ್ದರೆ ಏನಾಗುತ್ತದೆ?

ಒಂದು ವೇಳೆ, ಇನ್ಷೂರೆನ್ಸ್ ಪ್ರೀಮಿಯಮ್ ಅನ್ನು ಜಿಎಸ್​ಟಿ ವ್ಯಾಪ್ತಿಯಿಂದ ತೆಗೆದುಹಾಕಲ್ಪಟ್ಟರೆ ಆಗ ವಿಮಾ ಸಂಸ್ಥೆಗಳಿಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಪಡೆಯುವ ಅವಕಾಶವೇ ಇರುವುದಿಲ್ಲ. ಯಾಕೆಂದರೆ ವಿಮಾ ಪಾಲಿಸಿಗಳೇ ಈ ಕಂಪನಿಗಳ ಏಕೈಕ ಉತ್ಪನ್ನ. ತನ್ನ ವೆಚ್ಚಗಳಿಗೆ ಕಟ್ಟಲಾದ ಜಿಎಸ್​ಟಿ ತೆರಿಗೆಯನ್ನು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಬಳಸಿ ಮರುಪಡೆಯಲು ಸಾಧ್ಯವಾಗುವುದಿಲ್ಲ.

ಇಂತಹ ಸಂದರ್ಭದಲ್ಲಿ ಇನ್ಷೂರೆನ್ಸ್ ಕಂಪನಿಗಳು ತನ್ನ ವೆಚ್ಚದ ಹೊರೆಯನ್ನು ಗ್ರಾಹಕರ ಮೇಲೆಯೇ ಹಾಕುತ್ತವೆ. ಇದರಿಂದ ಇನ್ಷೂರೆನ್ಸ್ ಪ್ರೀಮಿಯಮ್ ದರಗಳನ್ನು ಏರಿಸುವುದು ಅನಿವಾರ್ಯವಾಗುತ್ತದೆ.

ಇದನ್ನೂ ಓದಿ: ಕೆಲಸ ಬದಲಿಸಿದಾಗ ಹಳೆಯ ಇಪಿಎಫ್ ಹಣ ಹೊಸ ಖಾತೆಗೆ ವರ್ಗಾಯಿಸುವ ಕ್ರಮ

ಜಿಎಸ್​ಟಿ ವಿನಾಯಿತಿ ಬೇಡವಾದರೆ, ಇನ್ಷೂರೆನ್ಸ್ ಕಂಪನಿಗಳ ಬೇಡಿಕೆ ಏನು?

ಇನ್ಷೂರೆನ್ಸ್ ಕಂಪನಿಗಳು ಜಿಎಸ್​ಟಿ ದರ ತೆಗೆದುಹಾಕುವ ಬದಲು ಕಡಿಮೆ ಮಾಡಬಹುದು ಎಂದು ಸಲಹೆ ನೀಡಿವೆ. ಸದ್ಯ ಲೈಫ್ ಇನ್ಷೂರೆನ್ಸ್ ಪ್ರೀಮಿಯಮ್​ಗಳಿಗೆ ಶೇ 18ರಷ್ಟು ಜಿಎಸ್​ಟಿ ಇದೆ. ಇದನ್ನು ಶೇ. 12ಕ್ಕೆ ತರುವುದು ಉತ್ತಮ. ಇದರಿಂದ ಇನ್ಷೂರೆನ್ಸ್ ಕಂಪನಿಗಳು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಬಳಸಿ ತಮ್ಮ ವೆಚ್ಚವನ್ನು ಸರಿದೂಗಿಸಿಕೊಳ್ಳಬಹುದು ಎನ್ನುವುದು ಇವುಗಳ ವಾದ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ