AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಡಿಗೆ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲಾಂದ್ರೆ ಪೆಟ್ರೋಲ್ ಸಿಗಲ್ಲ, ಫಾಸ್​ಟ್ಯಾಗ್ ಇಲ್ಲ? ಜಾರಿ ಬರುತ್ತಿವೆ ಹೊಸ ನಿಯಮಗಳು

Vehicles without third-party insurance: ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲದ ವಾಹನಗಳಿಗೆ ಸಾಕಷ್ಟು ನಿರ್ಬಂಧಗಳನ್ನು ವಿಧಿಸಲು ಸರ್ಕಾರ ಯೋಜಿಸಿದೆ. ಪೆಟ್ರೋಲ್, ಡೀಸಲ್ ಸಿಗುವುದಿಲ್ಲ. ಹೆದ್ದಾರಿಯಲ್ಲಿ ಫಾಸ್​ಟ್ಯಾಗ್ ಲೇನ್​ನಲ್ಲಿ ಹೋಗಲು ಆಗುವುದಿಲ್ಲ. ದೊಡ್ಡ ಮೊತ್ತದ ದಂಡ ಕಟ್ಟಬೇಕಾಗಬಹುದು. ವಾಹನಗಳಿಗೆ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಅಳವಡಿಕೆಗೆ ಉತ್ತೇಜಿಸಲು ಹಲವು ಕ್ರಮಗಳನ್ನು ಸರ್ಕಾರ ಯೋಜಿಸುತ್ತಿದೆ.

ಗಾಡಿಗೆ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲಾಂದ್ರೆ ಪೆಟ್ರೋಲ್ ಸಿಗಲ್ಲ, ಫಾಸ್​ಟ್ಯಾಗ್ ಇಲ್ಲ? ಜಾರಿ ಬರುತ್ತಿವೆ ಹೊಸ ನಿಯಮಗಳು
ಕಾರು ಡ್ರೈವಿಂಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 28, 2025 | 12:14 PM

Share

ನವದೆಹಲಿ, ಜನವರಿ 28: ನಿಮ್ಮ ವಾಹನಗಳಿಗೆ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಮಾಡಿಸದೇ ಇದ್ದರೆ ಪೆಟ್ರೋಲ್ ಬಂಕ್​ನಲ್ಲಿ ನಿಮಗೆ ಪೆಟ್ರೋಲ್ ಅಥವಾ ಡೀಸಲ್ ಸಿಕ್ಕೋದೇ ಹೋಗಬಹುದು. ಹೆದ್ದಾರಿಯಲ್ಲಿ ಟೋಲ್ ಬಳಿ ಫಾಸ್​ಟ್ಯಾಗ್ ಲೇನ್​ನಲ್ಲಿ ಸಾಗಲು ನಿಮ್ಮ ವಾಹನಕ್ಕೆ ಅವಕಾಶ ಸಿಗದೇ ಹೋಗಬಹುದು. ಇನ್ಷೂರೆನ್ಸ್ ಇಲ್ಲದ ವಾಹನ ಮಾಲೀಕರಿಗೆ ಡ್ರೈವಿಂಗ್ ಲೈಸೆನ್ಸ್ ನವೀಕರಣ ಸಾಧ್ಯವಾಗದೇ ಹೋಗಬಹುದು. ಗಾಡಿಗೆ ಇನ್ಷೂರೆನ್ಸ್ ಇಲ್ಲದಿದ್ದರೆ ಇನ್ನೂ ಬೇರೆ ಬೇರೆ ನಿರ್ಬಂಧಗಳು, ದಂಡಗಳನ್ನು ನೀವು ಎದುರಿಸಬೇಕಾಗಬಹುದು. ಕೇಂದ್ರ ಸರ್ಕಾರ ಈ ರೀತಿಯ ಆಲೋಚನೆಯಲ್ಲಿದೆ.

ವಾಹನಗಳಿಗೆ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಕವರೇಜ್ ಅಳವಡಿಕೆಗೆ ಉತ್ತೇಜಿಸಲು ವಿವಿಧ ಕ್ರಮಗಳನ್ನು ಅವಲೋಕಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಹಣಕಾಸು ಸಚಿವಾಲಯ ಮನವಿ ಮಾಡಿದೆ. ಭಾರತದಲ್ಲಿ ಈಗಲೂ ಕೂಡ ಹೆಚ್ಚಿನ ವಾಹನಗಳು ಥರ್ಡ್ ಪಾರ್ಟಿ ಇನ್ಷೂರೆನ್ಸ್ ಹೊಂದಿಲ್ಲ. 1988ರ ಮೋಟಾರು ವಾಹನ ಕಾಯ್ದೆ ಪ್ರಕಾರ ಎಲ್ಲಾ ಮೋಟಾರು ವಾಹನಗಳು ಥರ್ಡ್ ಪಾರ್ಟಿ ಇನ್ಷೂರೆನ್ಸ್ ಪಾಲಿಸಿ ಮಾಡಿಸುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: ಜೋಹೋ ಸಿಇಒ ಸ್ಥಾನ ತ್ಯಜಿಸಿದ ಶ್ರೀಧರ್ ವೆಂಬು; ಹಳ್ಳಿಗಳ ಅಭಿವೃದ್ಧಿಯತ್ತ ಗಮನ ಹರಿಸಲಿದ್ದಾರೆ ಈ ಉದ್ಯಮಿ

ವಾಹನಗಳಿಗೆ ಥರ್ಡ್ ಪಾರ್ಟಿ ವಿಮಾ ಕವರೇಜ್ ಅನ್ನು ಅಳವಡಿಸಲು ಉತ್ತೇಜಿಸಲು ಸಂಸದೀಯ ಸ್ಥಾಯಿ ಸಮಿತಿಯೊಂದು ಸರ್ಕಾರಕ್ಕೆ ಕೆಲ ಶಿಫಾರಸುಗಳನ್ನು ನೀಡಿತ್ತು. ಸರ್ಕಾರ ಈ ವಿಚಾರದಲ್ಲಿ ಗಂಭೀರವಾಗಿದೆ.

ಥರ್ಡ್ ಪಾರ್ಟಿ ಇನ್ಷೂರೆನ್ಸ್ ಯಾಕೆ ಮುಖ್ಯ?

ವಾಹನಗಳ ಇನ್ಷೂರೆನ್ಸ್​ನಲ್ಲಿ ಮೂರು ವಿಧಗಳಿವೆ. ಫಸ್ಟ್ ಪಾರ್ಟಿ ಇನ್ಷೂರೆನ್ಸ್, ಥರ್ಡ್ ಪಾರ್ಟಿ ಇನ್ಷೂರೆನ್ಸ್ ಮತ್ತು ಕಾಂಪ್ರೆಹೆನ್ಸಿವ್ ಇನ್ಷೂರೆನ್ಸ್. ಇದರಲ್ಲಿ ಫಸ್ಟ್ ಪಾರ್ಟಿ ಇನ್ಷೂರೆನ್ಸ್ ಎಂಬುದು ಪಾಲಿಸಿದಾರನಿಗೆ ಮತ್ತು ವಾಹನಕ್ಕೆ ಮಾತ್ರ ಇನ್ಷೂರೆನ್ಸ್ ಕವರೇಜ್ ಸಿಗುತ್ತದೆ.

ಥರ್ಡ್ ಪಾರ್ಟಿ ಇನ್ಷೂರೆನ್ಸ್​ನಲ್ಲಿ, ಥರ್ಡ್ ಪಾರ್ಟಿ ಅಥವಾ ಮೂರನೇ ವ್ಯಕ್ತಿಗೆ ವಿಮಾ ಕವರೇಜ್ ಸಿಗುತ್ತದೆ. ಅಂದರೆ, ಥರ್ಡ್ ಪಾರ್ಟಿ ಇನ್ಷೂರೆನ್ಸ್ ಹೊಂದಿರುವ ವಾಹನದಿಂದ ಯಾವುದಾದರೂ ಅಪಘಾತ ಸಂಭವಿಸಿದರೆ, ಅದರಿಂದ ಬೇರೆ ವ್ಯಕ್ತಿಗಳಿಗೆ ಹಾನಿಯಾದರೆ, ಅದಕ್ಕೆ ವಿಮಾ ಕವರೇಜ್ ಇರುತ್ತದೆ.

ಇದನ್ನೂ ಓದಿ: ಉದ್ಯಮಗಳು ಕುಂಭಮೇಳದಿಂದ ಕಲಿಯಬಹುದಾದ ಪಾಠಗಳು ಹಲವು: ಗೌತಮ್ ಅದಾನಿ

ಕಾಂಪ್ರೆಹೆನ್ಸಿವ್ ಇನ್ಷೂರೆನ್ಸ್ ಪಾಲಿಸಿಯು ಫಸ್ಟ್ ಪಾರ್ಟಿ ಮತ್ತು ಥರ್ಡ್ ಪಾರ್ಟಿ ಎರಡನ್ನೂ ಒಳಗೊಂಡಿರುವ ಪಾಲಿಸಿಯಾಗಿದೆ. ವಾಹನದಿಂದ ಬೇರೆಯವರಿಗೆ ಹಾನಿಯಾದ ಸಂದರ್ಭದಲ್ಲಿ ನಷ್ಟ ಭರಿಸಲು ಥರ್ಡ್ ಪಾರ್ಟಿ ಇನ್ಷೂರೆನ್ಸ್ ಬಹಳ ಅಗತ್ಯ. ಈ ಕಾರಣಕ್ಕೆ ಸರ್ಕಾರವು ಈ ವಿಮೆ ಅಳವಡಿಕೆಗೆ ಒತ್ತು ನೀಡುತ್ತಿದೆ.

ಇನ್ಷೂರೆನ್ಸ್ ಇಲ್ಲದ ಗಾಡಿ ಚಲಾಯಿಸಿದರೆ 2,000 ರೂ ದಂಡ

ಇನ್ಷೂರೆನ್ಸ್ ಪ್ರಾಧಿಕಾರವಾದ ಐಆರ್​ಡಿಎಐ ಪ್ರಕಾರ 2024ರಲ್ಲಿ ರಸ್ತೆಗಳಲ್ಲಿ ಸಂಚರಿಸಿದ 35-40 ಕೋಟಿ ವಾಹನಗಳಲ್ಲಿ ಶೇ. 50ರಷ್ಟು ವಾಹನಗಳು ಮಾತ್ರ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಹೊಂದಿರುವುದು. ಮೋಟಾರು ವಾಹನ ಕಾಯ್ದೆ ಪ್ರಕಾರ, ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲದ ವಾಹನವನ್ನು ಚಲಾಯಿಸಿದರೆ 2,000 ರೂ ದಂಡ ಅಥವಾ ಮೂರು ತಿಂಗಳು ಜೈಲುವಾಸದ ಶಿಕ್ಷೆ ಇದೆ. ಅದೂ ಮೊದಲ ಬಾರಿ ಸಿಕ್ಕಿಬಿದ್ದಾಗ ಈ ಅಲ್ಪಮೊತ್ತದ ದಂಡ ಇರುತ್ತದೆ. ಎರಡನೇ ಬಾರಿ ಸಿಕ್ಕಿದ್ದರೆ ದಂಡದ ಮೊತ್ತ 4,000 ರೂಗೆ ಏರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ