ಉದ್ಯಮಗಳು ಕುಂಭಮೇಳದಿಂದ ಕಲಿಯಬಹುದಾದ ಪಾಠಗಳು ಹಲವು: ಗೌತಮ್ ಅದಾನಿ

Gautam Adani and Kumbh Mela: ಈ ಬಾರಿಯ ಮಹಾಕುಂಭದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅದಾನಿ ಗ್ರೂಪ್​ನ ಮುಖ್ಯಸ್ಥ ಗೌತಮ್ ಅದಾನಿ ತಮ್ಮ ಲಿಂಕ್ಡ್​ಇನ್ ಪೋಸ್ಟ್​ನಲ್ಲಿ ಅನುಭವ ಹಂಚಿಕೊಂಡಿದ್ದಾರೆ. ಕುಂಭಮೇಳವನ್ನು ಇಷ್ಟು ಅಗಾಧ ಮಟ್ಟದಲ್ಲಿ ಆಯೋಜಿಸಲು, ನ್ಯೂಯಾರ್ಕ್ ನಗರಕ್ಕಿಂತಲೂ ಬೃಹತ್ತಾದ ತಾತ್ಕಾಲಿಕ ನಗರ ಸೃಷ್ಟಿಸಲು ಹೇಗೆ ಸಾಧ್ಯವಾಯಿತು ಎಂಬುದನ್ನು ವಿಮರ್ಶಿಸಿದ್ದಾರೆ. ಕುಂಭ ಮೇಳವು ಜಾಗತಿಕ ಉದ್ಯಮಗಳಿಗೆ ಮಾದರಿಯಾಗುವಂತಹ ಹಲವು ಪಾಠಗಳನ್ನು ಕಲಿಸಿಕೊಡುತ್ತದೆ ಎಂದು ಅದಾನಿ ಹೇಳಿದ್ದಾರೆ.

ಉದ್ಯಮಗಳು ಕುಂಭಮೇಳದಿಂದ ಕಲಿಯಬಹುದಾದ ಪಾಠಗಳು ಹಲವು: ಗೌತಮ್ ಅದಾನಿ
ಕುಂಭಮೇಳ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jan 27, 2025 | 4:46 PM

ನವದೆಹಲಿ, ಜನವರಿ 27: ಭಾರತದಲ್ಲಿ ಪ್ರತೀ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳ ವಿಶ್ವಾದ್ಯಂತ ಸಾಕಷ್ಟು ಜನರ ಕುತೂಹಲ, ಆಸಕ್ತಿಗಳನ್ನು ಕೆರಳಿಸುತ್ತದೆ. ಅದರಲ್ಲೂ ಈ ಬಾರಿಯ ಮಹಾಕುಂಭವಂತೂ ವಿಶ್ವದಲ್ಲೇ ಅತಿದೊಡ್ಡ ಮಾನವ ಸಮೂಹವನ್ನು ಸೇರಿಸಿದೆ. ಭಾರತದ ಎರಡನೇ ಅತಿದೊಡ್ಡ ಶ್ರೀಮಂತ, ಹಾಗೂ ಹಲವು ಉದ್ದಿಮೆಗಳ ಒಡೆಯ ಗೌತಮ್ ಅದಾನಿ ಈ ಕುಂಭಮೇಳ ಕಂಡು ಮೂಕವಿಸ್ಮಿತರಾಗಿದ್ದಾರೆ. ತಮ್ಮ ಲಿಂಕ್ಡ್​ಇನ್ ಅಕೌಂಟ್​ನಲ್ಲಿ ಕುಂಭಮೇಳದ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. ಕುಂಭಮೇಳವನ್ನು ಆದ್ಮಾತ್ಮಿಕ ಮೂಲಸೌಕರ್ಯ (ಸ್ಪಿರಿಚುವಲ್ ಇನ್​ಫ್ರಾಸ್ಟ್ರಕ್ಚರ್) ಎಂದು ಬಣ್ಣಿಸಿದ್ದಾರೆ.

‘ಕುಂಭಮೇಳ ವಿಚಾರದ ಬಗ್ಗೆ ಪ್ರತೀ ಬಾರಿ ನಾನು ಯೋಚಿಸಿದಾಗ, ನಮ್ಮ ಪೂರ್ವಜರ ದೃಷ್ಟಿಕೋನ ನೆನದು ವಿಸ್ಮಿತಗೊಳ್ಳುತ್ತೇನೆ. ಭಾರತದಾದ್ಯಂತ ಬಂದರು, ವಿಮಾನ ನಿಲ್ದಾಣ, ವಿದ್ಯುತ್ ಜಾಲಗಳನ್ನು ನಿರ್ಮಿಸಿರುವಂತಹ ನನಗೆ ಈ ಆದ್ಮಾತ್ಮಿಕ ಮೂಲಸೌಕರ್ಯದ ಭವ್ಯತೆಯಿಂದ ಆವಾಕ್ಕಾಗುತ್ತದೆ’ ಎಂದು ಗೌತಮ್ ಅದಾನಿ ತಮ್ಮ ಬ್ಲಾಗ್​ನಲ್ಲಿ ಬರೆದಿದ್ದಾರೆ.

ವಿಶ್ವದ ಅತಿದೊಡ್ಡ ಮ್ಯಾನೇಜ್ಮೆಂಟ್ ಕೇಸ್ ಸ್ಟಡಿ…

‘ಹಾರ್ವರ್ಡ್ ಬಿಸಿನೆಸ್ ಸ್ಕೂಲ್​ನವರು ಕುಂಭಮೇಳದ ವ್ಯವಸ್ಥೆಯನ್ನು ಅಧ್ಯಯನ ಮಾಡುವಾಗ, ಅದರ ಅಗಾಧತೆ ಕಂಡು ಬೆರಗಾಗಿದ್ದರು. ಭಾರತೀಯನಾಗಿ ನಾನು ಇನ್ನೂ ಆಳಕ್ಕೆ ಹೋಗುತ್ತೇನೆ. ಈ ಸಾರ್ವಕಾಲಿಕ ತತ್ವವನ್ನೇ ಅಪ್ಪಿಕೊಳ್ಳಲು ಅದಾನಿ ಗ್ರೂಪ್ ಬಯಸುತ್ತದೆ’ ಎಂದು ಗೌತಮ್ ಅದಾನಿ ಹೇಳಿದ್ದಾರೆ.

ಇದನ್ನೂ ಓದಿ: ಒಂದು ರಾಷ್ಟ್ರ ಒಂದು ಸಮಯ; ಹೆಚ್ಚು ನಿಖರತೆಯ ಭಾರತೀಯ ಕಾಲಮಾನ ರೂಪಿಸುವ ಯೋಜನೆ; ಏನಿದರ ಮಹತ್ವ?

ಪ್ರತೀ 12 ವರ್ಷಕ್ಕೊಮ್ಮೆ ನ್ಯೂಯಾರ್ಕ್​ಗಿಂತಲೂ ದೊಡ್ಡದಾದ ತಾತ್ಕಾಲಿಕ ನಗರವೊಂದು ಪವಿತ್ರ ನದಿಗಳಲ್ಲಿ ನಿರ್ಮಾಣವಾಗಿಬಿಡುತ್ತೆ. ಯಾವ ಬೋರ್ಡ್ ಮೀಟಿಂಗ್ ಇರಲ್ಲ, ಪವರ್ ಪಾಯಿಂಟ್ ಪ್ರೆಸೆಂಟೇಶನ್ ಇರಲ್ಲ. ವೆಂಚರ್ ಕ್ಯಾಪಿಟಲ್ ಇರಲ್ಲ. ಶತಮಾನಗಳಿಂದ ಹಂಚಿಕೆಯಾಗಿ ಬಂದ ಅನುಭವವೇ ಈ ಅಗಾಧ ವ್ಯವಸ್ಥೆಯನ್ನು ನಿಭಾಯಿಸುವ ಶಕ್ತಿ ನೀಡಿದೆ ಎಂದು ಅದಾನಿ ಗ್ರೂಪ್ ಸಂಸ್ಥಾಪಕರು ಲಿಂಕ್ಡ್ ಇನ್​ನಲ್ಲಿ ಬರೆದಿದ್ದಾರೆ.

ಕುಂಭ ಮೇಳ ಆಯೋಜನೆಯ ಮೂರು ಸ್ತಂಭಗಳು…

ಗೌತಮ್ ಅದಾನಿ ತಮ್ಮ ಬ್ಲಾಗ್​ನಲ್ಲಿ ಕುಂಭಮೇಳ ನಾಯಕತ್ವದ ಮೂರು ಪ್ರಬಲ ಸ್ತಂಭಗಳನ್ನು ಹೆಸರಿಸಿದ್ದಾರೆ. ಒಂದು, ಆತ್ಮಗಳ ಸಮ್ಮಿಳನ, ಎರಡನೆಯದು ಸುಸ್ಥಿರತೆ ಮತ್ತು ಮೂರನೆಯದು ಸೇವಾ ನಾಯಕತ್ವ ಎಂದಿದ್ದಾರೆ.

20 ಕೋಟಿ ಜನರು ಸೇವಾ ಮನೋಭಾವದಲ್ಲಿ ಮತ್ತು ಏಕ ಧ್ಯೇಯದೊಂದಿಗೆ ಒಟ್ಟಿಗೆ ಸೇರಿದರೆ ಅದು ಒಂದು ಬೃಹತ್ ಕಾರ್ಯಕ್ರಮ ಎನಿಸುವುದು ಮಾತ್ರವಲ್ಲ, ಆತ್ಮಗಳ ವಿಶೇಷ ಸಮ್ಮಿಳನ ಎನಿಸುತ್ತದೆ ಎಂಬುದು ಅದಾನಿ ಅನಿಸಿಕೆ.

ನಾಯಕನಾದವನು ಆದೇಶ ಕೊಡಬೇಕೆಂದಿಲ್ಲ…

ಕುಂಭಮೇಳವು ನಾಯಕತ್ವ ಹೇಗಿರಬೇಕು ಎನ್ನುವುದಕ್ಕೆ ಒಂದು ನಿದರ್ಶನವಾಗಿದೆ. ಆದೇಶ ನೀಡುವುದಕ್ಕಿಂತ ಹೆಚ್ಚಾಗಿ ಎಲ್ಲರನ್ನೂ ಜೊತೆಗೆ ಕೊಂಡೊಯ್ಯುವ ಸಾಮರ್ಥ್ಯವೇ ನೈಜ ನಾಯಕತ್ವ ಎನಿಸುತ್ತದೆ. ಸ್ಥಳೀಯ ಆಡಳಿತಗಳು, ವಿವಿಧ ಅಖಾಡಗಳು ಬಹಳ ಸೌಹಾರ್ದಯುತವಾಗಿ ಕೆಲಸ ಮಾಡಿದವು. ನಾಯಕತ್ವಕ್ಕೆ ಸೇವಾ ಗುಣ ಇರಬೇಕು ಎನ್ನುವುದನ್ನು ಕುಂಭಮೇಳ ಕಲಿಸುತ್ತದೆ ಎಂದು ಗೌತಮ್ ಅದಾನಿ ಕಂಡುಕೊಂಡಿದ್ದಾರೆ.

ಜಾಗತಿಕ ಉದ್ಯಮಗಳಿಗೆ ಕುಂಭಮೇಳದ ಪಾಠಗಳಿವು…

ಸಮಗ್ರ ಬೆಳವಣಿಗೆ, ಆದ್ಮಾತ್ಮಿಕ ತಂತ್ರಜ್ಞಾನ ಮತ್ತು ಸಾಂಸ್ಕೃತಿ ವಿಶ್ವಾಸ ಇವು ಕುಂಭ ಮೇಳದಿಂದ ಜಾಗತಿಕ ಬಿಸಿನೆಸ್​ಗಳು ಕಲಿಯಬಹುದಾದ ಪಾಠಗಳು ಎಂದು ಗೌತಮ್ ಅದಾನಿ ವ್ಯಾಖ್ಯಾನಿಸಿದ್ದಾರೆ.

ಇದನ್ನೂ ಓದಿ: ಜಾಗತಿಕ ವ್ಯಾಪಾರ ಕುಂಠಿತವಾದರೂ ಭಾರತದಿಂದ ದಾಖಲೆಯ ರಫ್ತು

ಸಾಧುಗಳಿಂದ ಹಿಡಿದು ಸಿಇಒಗಳವರೆಗೂ, ಹಳ್ಳಿಗರಿಂದ ಹಿಡಿದು ವಿದೇಶೀ ಪ್ರವಾಸಿಗರಿಗೂ ಎಲ್ಲರನ್ನೂ ಕುಂಭಮೇಳ ಸಮಾನವಾಗಿ ಬರಮಾಡಿತು ಎಂದೆನ್ನುವ ಗೌತಮ್ ಅದಾನಿ, ಇದು ಒಳ್ಳೆಯತನದೊಂದಿಗೆ ಪ್ರಗತಿ ಎನ್ನುವ ತಮ್ಮ ಸಂಸ್ಥೆಯ ಧ್ಯೇಯಕ್ಕೆ ಹೋಲಿಸಿದ್ದಾರೆ.

ಭವಿಷ್ಯದ ಹೆಜ್ಜೆಗಳು…

ಭಾರತ ಜಾಗತಿಕ ಸೂಪರ್ ಪವರ್ ದೇಶವಾಗುವತ್ತ ಹೆಜ್ಜೆ ಹಾಕುತ್ತಿದೆ. ಈ ಹೊತ್ತಿನಲ್ಲಿ, ನಾವೇನು ಕಟ್ಟುತ್ತೇವೆ ಎಂಬುದಷ್ಟೇ ಅಲ್ಲ, ನಾವೇನು ಉಳಿಸಿಕೊಂಡು ಹೋಗುತ್ತೇವೆ ಎನ್ನುವುದೇ ನಮ್ಮ ಬಂಡವಾಳವಾಗುತ್ತದೆ. ಕುಂಭವು ಧಾರ್ಮಿಕ ಸಮಾಗಮ ಮಾತ್ರವಲ್ಲ, ಸುಸ್ಥಿರವಾದ ನಾಗರಿಕತೆಗೆ ಒಂದು ಬ್ಲೂಪ್ರಿಂಟ್ ಇದ್ದಂತೆ ಎಂದು ಅದಾನಿ ಗ್ರೂಪ್ ಮುಖ್ಯಸ್ಥರು ತಮ್ಮ ಲಿಂಕ್ಡ್​ಇನ್ ಪೋಸ್ಟ್​ನಲ್ಲಿ ಬರೆದಿದ್ದಾರೆ.

ಗೌತಮ್ ಅದಾನಿ ಅವರ ಮೂಲ ಬ್ಲಾಗ್ ಪೋಸ್ಟ್​ನ ಲಿಂಕ್ ಇಲ್ಲಿದೆ: linkedin.com/pulse/spiritual-infrastructure-how-kumbh-inspires-indias-leadership-adani-z3lvf/

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:45 pm, Mon, 27 January 25

ರೈಲಿನಡಿ ಸಿಲುಕುತ್ತಿದ್ದ ವೃದ್ಧರನ್ನು ರಕ್ಷಿಸಿದ ಬಂಗಾಳದ ಕಾನ್‌ಸ್ಟೆಬಲ್
ರೈಲಿನಡಿ ಸಿಲುಕುತ್ತಿದ್ದ ವೃದ್ಧರನ್ನು ರಕ್ಷಿಸಿದ ಬಂಗಾಳದ ಕಾನ್‌ಸ್ಟೆಬಲ್
ಬಾಡಿಗೆ ಮನೆಯಲ್ಲಿದ್ದೇನೆ, ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್
ಬಾಡಿಗೆ ಮನೆಯಲ್ಲಿದ್ದೇನೆ, ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್
ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ರೇಗುವುದು ಯಾಕೆ?
ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ರೇಗುವುದು ಯಾಕೆ?
ಬಿಜೆಪಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಪಕ್ಷವಾಗಿ ಬೆಳೆದಿದೆ: ಸಂಸದ
ಬಿಜೆಪಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಪಕ್ಷವಾಗಿ ಬೆಳೆದಿದೆ: ಸಂಸದ
ಹನುಮಂತುಗೆ ಹೊಡೆದರೂ ಭವ್ಯಾನ ಹೊರಗೆ ಹಾಕಲಿಲ್ಲ ಯಾಕೆ? ಮಂಜು ಹೇಳಿದ್ದೇನು?
ಹನುಮಂತುಗೆ ಹೊಡೆದರೂ ಭವ್ಯಾನ ಹೊರಗೆ ಹಾಕಲಿಲ್ಲ ಯಾಕೆ? ಮಂಜು ಹೇಳಿದ್ದೇನು?
ಜಲಮಂಡಳಿ ನಿರ್ವಹಣೆಗೆ ಹಣ ಹೊಂದಿಸಲಾಗುತ್ತಿಲ್ಲ, ದರಯೇರಿಕೆ ಅನಿವಾರ್ಯ: ಸಚಿವ
ಜಲಮಂಡಳಿ ನಿರ್ವಹಣೆಗೆ ಹಣ ಹೊಂದಿಸಲಾಗುತ್ತಿಲ್ಲ, ದರಯೇರಿಕೆ ಅನಿವಾರ್ಯ: ಸಚಿವ
ವಲಸಿಗರ ವಿಚಾರದಲ್ಲಿ ಭಾರತ ಸೂಕ್ತ ಕ್ರಮ ಕೈಗೊಳ್ಳಲಿದೆ; ಟ್ರಂಪ್ ಹೇಳಿಕೆ
ವಲಸಿಗರ ವಿಚಾರದಲ್ಲಿ ಭಾರತ ಸೂಕ್ತ ಕ್ರಮ ಕೈಗೊಳ್ಳಲಿದೆ; ಟ್ರಂಪ್ ಹೇಳಿಕೆ
ಇಕ್ಬಾಲ್ ಹುಸ್ಸೇನ್ ಹೇಳಿಕೆಗೆ ಕೌಂಟರ್ ನೀಡಿದ ಸಚಿವ ರಾಜಣ್ಣ
ಇಕ್ಬಾಲ್ ಹುಸ್ಸೇನ್ ಹೇಳಿಕೆಗೆ ಕೌಂಟರ್ ನೀಡಿದ ಸಚಿವ ರಾಜಣ್ಣ
ಕಾಂಗ್ರೆಸ್ ಪಕ್ಷ ಒಂದು ಸಿಟಿ ಬಸ್​ನಂತೆ, ಯಾರು ಬೇಕಾದರೂ ಹತ್ತಬಹುದು: ಲಾಡ್
ಕಾಂಗ್ರೆಸ್ ಪಕ್ಷ ಒಂದು ಸಿಟಿ ಬಸ್​ನಂತೆ, ಯಾರು ಬೇಕಾದರೂ ಹತ್ತಬಹುದು: ಲಾಡ್
150 ರೂ.ಗೆ ಕೆಲಸ ಮಾಡಿದ್ದ ಉಗ್ರಂ ಮಂಜು; ಬಿಗ್ ಬಾಸ್​ನಿಂದ ದೊಡ್ಡ ಸಂಭಾವನೆ
150 ರೂ.ಗೆ ಕೆಲಸ ಮಾಡಿದ್ದ ಉಗ್ರಂ ಮಂಜು; ಬಿಗ್ ಬಾಸ್​ನಿಂದ ದೊಡ್ಡ ಸಂಭಾವನೆ