ಒಂದು ರಾಷ್ಟ್ರ ಒಂದು ಸಮಯ; ಹೆಚ್ಚು ನಿಖರತೆಯ ಭಾರತೀಯ ಕಾಲಮಾನ ರೂಪಿಸುವ ಯೋಜನೆ; ಏನಿದರ ಮಹತ್ವ?

One Nation One Time: ಮೈಕ್ರೋಸೆಕಂಡ್ ನಿಖರತೆಯ ಐಎಸ್​ಟಿ ಕಾಲಮಾನ ರೂಪಿಸಲು ಸರ್ಕಾರ ಯೋಜನೆ ರೂಪಿಸಿದೆ. ಒಂದು ದೇಶ, ಒಂದು ಸಮಯ ಎನ್ನುವ ಪರಿಕಲ್ಪನೆಯಲ್ಲಿ ಎಲ್ಲಾ ಸೆಕ್ಟರ್​ಗಳೂ ಐಎಸ್​​ಟಿಯನ್ನು ಅಳವಡಿಸಲು ಅನುವಾಗುವಂತೆ ಯೋಜನೆ ಮಾಡಲಾಗುತ್ತಿದೆ. ಇಸ್ರೋ, ಎನ್​ಪಿಎಲ್, ಐಐಟಿ, ವಿವಿಧ ಸರ್ಕಾರಿ ಇಲಾಖೆಗಳ ಪ್ರತಿನಿಧಿಗಳೆಲ್ಲರೂ ಸೇರಿರುವ ಸಮಿತಿಯಿಂದಲೂ ನೆರವು ಪಡೆಯಲಾಗಿದೆ.

ಒಂದು ರಾಷ್ಟ್ರ ಒಂದು ಸಮಯ; ಹೆಚ್ಚು ನಿಖರತೆಯ ಭಾರತೀಯ ಕಾಲಮಾನ ರೂಪಿಸುವ ಯೋಜನೆ; ಏನಿದರ ಮಹತ್ವ?
ಐಎಸ್​ಟಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 27, 2025 | 3:15 PM

ನವದೆಹಲಿ, ಜನವರಿ 27: ಎಲ್ಲದಕ್ಕೂ ಒಂದೇ ಕಾಲಮಾನ ವ್ಯವಸ್ಥೆ ಬಳಕೆಯಾಗುವ ನಿಟ್ಟಿನಲ್ಲಿ ಸರ್ಕಾರ ಹೊಸ ಯೋಜನೆ ಕೈಗೊಂಡಿದೆ. ಭಾರತೀಯ ಕಾಲಮಾನವಾದ ಐಎಸ್​ಟಿಯ ನಿಖರತೆಯನ್ನು ಹೆಚ್ಚಿಸುವ ಈ ಯೋಜನೆಯನ್ನು ಇಸ್ರೋ ಮತ್ತು ಎನ್​ಪಿಎಲ್ (ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿ) ಸಹಯೋಗದೊಂದಿಗೆ ಗ್ರಾಹಕ ವ್ಯವಹಾರಗಳ ಇಲಾಖೆ ಕೈಗೆತ್ತಿಕೊಂಡಿದೆ. ದೇಶಾದ್ಯಂತ ಇರುವ ಐದು ಲೀಗಲ್ ಮೆಟ್ರೋಲಜಿ ಲ್ಯಾಬ್​ಗಳ (Legal Metrology labs) ಮೂಲಕ ಹೆಚ್ಚು ನಿಖರ ಐಎಸ್​ಟಿಯನ್ನು ರೂಪಿಸುವ ಉದ್ದೇಶ ಇದೆ. ಒಂದು ದೇಶ, ಒಂದು ಸಮಯ ಎನ್ನುವ ಪರಿಕಲ್ಪನೆ ಅಡಿಯಲ್ಲಿ ಈ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಐಎಸ್​ಟಿ ನಿಖರತೆಯನ್ನು ಮಿಲ್ಲಿಸೆಕಂಡ್​ನಿಂದ ಮೈಕ್ರೋಸೆಕಂಡ್​ಗೆ ವ್ಯಾಪಿಸುವುದು ಈ ಯೋಜನೆಯ ಗುರಿ. ಮಿಲ್ಲಿಸೆಕಂಡ್ ಎಂದರೆ ಒಂದು ಸೆಕಂಡ್​ನ ಒಂದು ಸಾವಿರನೇ ಭಾಗ. ಅಂದರೆ, ಸಾವಿರ ಮಿಲ್ಲಿ ಸೆಕಂಡ್ ಸೇರಿಸಿದರೆ ಒಂದು ಸೆಕಂಡ್ ಆಗುತ್ತದೆ. ಇನ್ನು, ಹತ್ತು ಲಕ್ಷ ಮೈಕ್ರೋಸೆಕೆಂಡ್ ಸೇರಿದರೆ ಒಂದು ಸೆಕಂಡ್ ಆಗುತ್ತದೆ. ಇಷ್ಟು ಸೂಕ್ಷ್ಮ ಸಮಯ ರೂಪಿಸಲು ಭಾರತ ಮುಂದಾಗಿದೆ. ಇದಾದ ಬಳಿಕ ಎಲ್ಲಾ ಸೆಕ್ಟರ್​ಗಳೂ ಕೂಡ ಐಎಸ್​ಟಿಯನ್ನೇ ಅಳವಡಿಸಬೇಕು ಎನ್ನುವ ಕಾನೂನು ರೂಪಿಸಲು ಸರ್ಕಾರ ಮುಂದಾಗಬಹುದು.

ಇದನ್ನೂ ಓದಿ: India’s exports: ಜಾಗತಿಕ ವ್ಯಾಪಾರ ಕುಂಠಿತವಾದರೂ ಭಾರತದಿಂದ ದಾಖಲೆಯ ರಫ್ತು

ಈ ನಿಖರ ಸಮಯ ಯಾಕೆ ಮುಖ್ಯ?

ವಾಹನ ಚಲನೆ, ದೂರವಾಣಿ, ಪವರ್ ಗ್ರಿಡ್ ಸಿಂಕ್ರೊನೈಸೇಶನ್, ಬ್ಯಾಂಕಿಂಗ್, ಡಿಜಿಟಲ್ ಗವರ್ನೆನ್ಸ್, ಅತ್ಯುಚ್ಚ ವೈಜ್ಞಾನಿಕ ಸಂಶೋಧನೆ ಇತ್ಯಾದಿ ಕಾರ್ಯಗಳಿಗೆ ಸಮಯದ ನಿಖರತೆ ಹೆಚ್ಚು ಇದ್ದಷ್ಟೂ ಉತ್ತಮ. ಎಲ್ಲಾ ನೆಟ್ವರ್ಕ್​ಗಳು ಮತ್ತು ಸಿಸ್ಟಂಗಳನ್ನು ಐಎಸ್​ಟಿಗೆ ಮಿಳಿತಗೊಳಿಸುವುದು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದಲೂ ಸುರಕ್ಷಿತ ಎನಿಸುತ್ತದೆ. ನ್ಯಾವಿಗೇಶನ್ ರೀತಿ ರಿಯಲ್ ಟೈಮ್ ಅಪ್ಲಿಕೇಶನ್​ಗಳಲ್ಲಿ ಇದು ಅವಶ್ಯಕ ಎನಿಸುತ್ತದೆ.

ಐಎಸ್​ಟಿಯನ್ನು ಭಾರತದ ಎಲ್ಲಾ ಸೆಕ್ಟರ್​ಗಳೂ ಬಳಸುವುದು ನಿಯಮ ಪ್ರಕಾರ ಕಡ್ಡಾಯ ಅಲ್ಲವಾದರೂ, ವ್ಯವಸ್ಥೆ ದೃಷ್ಟಿಯಿಂದ ಅವಶ್ಯಕ. ಕಡ್ಡಾಯ ಬಳಕೆ ಎನ್ನುವ ನಿಯಮ ಇಲ್ಲದ್ದರಿಂದ ಟೆಲಿಕಾಂ ಸರ್ವಿಸ್ ನೀಡುಗರು, ಇಂಟರ್ನೆಟ್ ಸರ್ವಿಸ್ ನೀಡುಗರು (ಐಎಸ್​ಪಿ) ಮೊದಲಾದವರು ಐಎಸ್​ಟಿಯನ್ನು ಅಳವಡಿಸದೇ ಜಿಪಿಎಸ್ ಇತ್ಯಾದಿ ಹೊರ ದೇಶಗಳ ಕಾಲಮಾನ ವ್ಯವಸ್ಥೆಯನ್ನು ಬಳಸುತ್ತಿರುವುದುಂಟು.

ಇದನ್ನೂ ಓದಿ: ಸೆಬಿ ಮುಖ್ಯಸ್ಥೆ ಮಾಧವಿ ಬುಚ್ ಅವಧಿ ಫೆ. 28ಕ್ಕೆ ಅಂತ್ಯ; ಮುಂದುವರಿಯುವ ಸಾಧ್ಯತೆ ಇಲ್ಲ; ಸರ್ಕಾರದಿಂದ ಬೇರೆ ಅಭ್ಯರ್ಥಿಗಳಿಗೆ ಹುಡುಕಾಟ

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿ, ಐಎಸ್​ಟಿಯನ್ನು ಅಳವಡಿಸಲು ಅನುವಾಗುವ ರೀತಿಯಲ್ಲಿ ನೀತಿ, ನಿಯಮಾವಳಿ, ಶಾಸನಗಳನ್ನು ರೂಪಿಸಲು ನೆರವಾಗುವಂತೆ ತಿಳಿಸಲಾಯಿತು. ನ್ಯಾಷನಲ್ ಫಿಸಿಕಲ್ ಲ್ಯಾಬ್, ಇಸ್ರೋ, ಐಐಟಿ ಕಾನಪುರ್, ಎನ್​ಐಸಿ, ಸೆಬಿ, ಸರ್ಟ್-ಇನ್ ಇತ್ಯಾದಿ ಸಂಸ್ಥೆಗಳಿಂದ ಪ್ರತಿನಿಧಿಗಳು ಈ ಸಮಿತಿಯಲ್ಲಿದ್ದರು. ಹಾಗೆಯೇ, ರೈಲ್ವೇಸ್, ಟೆಲಿಕಾಂ, ಫೈನಾನ್ಷಿಯಲ್ ಸರ್ವಿಸಸ್ ಇತ್ಯಾದಿ ವಿವಿಧ ಪ್ರಮುಖ ಸರ್ಕಾರಿ ಇಲಾಖೆಗಳಿಂದಲೂ ಪ್ರತಿನಿಧಿಗಳು ಈ ಸಮಿತಿಯಲ್ಲಿದ್ದರು.

ಹಲವ ಸಭೆಗಳ ಬಳಿಕ ಈ ಸಮಿತಿ ಒಂದಷ್ಟು ಶಿಫಾರಸುಗಳನ್ನು ಮಾಡಿತು. ಅದರ ಆಧಾರದ ಮೇಲೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಅಡಿಗೆ ಬರುವ ಲೀಗಲ್ ಮೆಟ್ರೋಲಜಿ ಡಿವಿಶನ್​ನಿಂದ 2025ರ ಐಎಸ್​ಟಿ ನಿಯಮಗಳ – (Legal Metrology -IST- draft rules) ಕರಡು ಪ್ರತಿ ಸಿದ್ಧವಾಗಿದೆ. ಜನವರಿ 15ರಂದು ಗ್ರಾಹಕ ವ್ಯವಹಾರಗಳ ಇಲಾಖೆಯ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಲಾಗಿದೆ. ಅದರ ಲಿಂಕ್ ಈ ಕೆಳಕಂಡಂತಿದೆ.

consumeraffairs.nic.in/sites/default/files/file-uploads/latestnews/Draft%20Rules%20Time%20Dissemination.pdf

ಈ ಕರಡು ಪ್ರತಿಯಲ್ಲಿರುವ ಅಂಶಗಳ ಯಾರಿಗಾದರೂ ಪ್ರತಿಕ್ರಿಯೆ ನೀಡಬೇಕೆನಿಸಿದಲ್ಲಿ ಫೆಬ್ರುವರಿ 14ರವರೆಗೂ ಕಾಲಾವಕಾಶ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರೈಲಿನಡಿ ಸಿಲುಕುತ್ತಿದ್ದ ವೃದ್ಧರನ್ನು ರಕ್ಷಿಸಿದ ಬಂಗಾಳದ ಕಾನ್‌ಸ್ಟೆಬಲ್
ರೈಲಿನಡಿ ಸಿಲುಕುತ್ತಿದ್ದ ವೃದ್ಧರನ್ನು ರಕ್ಷಿಸಿದ ಬಂಗಾಳದ ಕಾನ್‌ಸ್ಟೆಬಲ್
ಬಾಡಿಗೆ ಮನೆಯಲ್ಲಿದ್ದೇನೆ, ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್
ಬಾಡಿಗೆ ಮನೆಯಲ್ಲಿದ್ದೇನೆ, ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್
ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ರೇಗುವುದು ಯಾಕೆ?
ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ರೇಗುವುದು ಯಾಕೆ?
ಬಿಜೆಪಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಪಕ್ಷವಾಗಿ ಬೆಳೆದಿದೆ: ಸಂಸದ
ಬಿಜೆಪಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಪಕ್ಷವಾಗಿ ಬೆಳೆದಿದೆ: ಸಂಸದ
ಹನುಮಂತುಗೆ ಹೊಡೆದರೂ ಭವ್ಯಾನ ಹೊರಗೆ ಹಾಕಲಿಲ್ಲ ಯಾಕೆ? ಮಂಜು ಹೇಳಿದ್ದೇನು?
ಹನುಮಂತುಗೆ ಹೊಡೆದರೂ ಭವ್ಯಾನ ಹೊರಗೆ ಹಾಕಲಿಲ್ಲ ಯಾಕೆ? ಮಂಜು ಹೇಳಿದ್ದೇನು?
ಜಲಮಂಡಳಿ ನಿರ್ವಹಣೆಗೆ ಹಣ ಹೊಂದಿಸಲಾಗುತ್ತಿಲ್ಲ, ದರಯೇರಿಕೆ ಅನಿವಾರ್ಯ: ಸಚಿವ
ಜಲಮಂಡಳಿ ನಿರ್ವಹಣೆಗೆ ಹಣ ಹೊಂದಿಸಲಾಗುತ್ತಿಲ್ಲ, ದರಯೇರಿಕೆ ಅನಿವಾರ್ಯ: ಸಚಿವ
ವಲಸಿಗರ ವಿಚಾರದಲ್ಲಿ ಭಾರತ ಸೂಕ್ತ ಕ್ರಮ ಕೈಗೊಳ್ಳಲಿದೆ; ಟ್ರಂಪ್ ಹೇಳಿಕೆ
ವಲಸಿಗರ ವಿಚಾರದಲ್ಲಿ ಭಾರತ ಸೂಕ್ತ ಕ್ರಮ ಕೈಗೊಳ್ಳಲಿದೆ; ಟ್ರಂಪ್ ಹೇಳಿಕೆ
ಇಕ್ಬಾಲ್ ಹುಸ್ಸೇನ್ ಹೇಳಿಕೆಗೆ ಕೌಂಟರ್ ನೀಡಿದ ಸಚಿವ ರಾಜಣ್ಣ
ಇಕ್ಬಾಲ್ ಹುಸ್ಸೇನ್ ಹೇಳಿಕೆಗೆ ಕೌಂಟರ್ ನೀಡಿದ ಸಚಿವ ರಾಜಣ್ಣ
ಕಾಂಗ್ರೆಸ್ ಪಕ್ಷ ಒಂದು ಸಿಟಿ ಬಸ್​ನಂತೆ, ಯಾರು ಬೇಕಾದರೂ ಹತ್ತಬಹುದು: ಲಾಡ್
ಕಾಂಗ್ರೆಸ್ ಪಕ್ಷ ಒಂದು ಸಿಟಿ ಬಸ್​ನಂತೆ, ಯಾರು ಬೇಕಾದರೂ ಹತ್ತಬಹುದು: ಲಾಡ್
150 ರೂ.ಗೆ ಕೆಲಸ ಮಾಡಿದ್ದ ಉಗ್ರಂ ಮಂಜು; ಬಿಗ್ ಬಾಸ್​ನಿಂದ ದೊಡ್ಡ ಸಂಭಾವನೆ
150 ರೂ.ಗೆ ಕೆಲಸ ಮಾಡಿದ್ದ ಉಗ್ರಂ ಮಂಜು; ಬಿಗ್ ಬಾಸ್​ನಿಂದ ದೊಡ್ಡ ಸಂಭಾವನೆ