ಪೇಟಿಎಂ ಷೇರಿನ ಟಾರ್ಗೆಟ್ ಪ್ರೈಸ್ 325 ರೂನಿಂದ 730 ರೂಗೆ ಹೆಚ್ಚಿಸಿದ ಮೆಕಾರೀ; ಸವಾಲುಗಳ ಮಧ್ಯೆಯೂ ಕಂಪನಿಯಿಂದ ಉತ್ತಮ ಸಾಧನೆ ಎಂದು ಪ್ರಶಂಸೆ

Macquarie on Paytm: ಪೇಟಿಎಂ ತನ್ನ ಕಟು ವಿಮರ್ಶಕರ ಅನಿಸಿಕೆಗಳನ್ನು ಬುಡಮೇಲು ಮಾಡುತ್ತಿದೆ. ಇನ್ವೆಸ್ಟ್​ಮೆಂಟ್ ರಿಸರ್ಚ್ ಸಂಸ್ಥೆಯಾದ ಮೆಕ್ಯಾರೀ ಪೇಟಿಎಂ ಷೇರಿಗೆ 325 ರೂ ಎಂದು ನೀಡಿದ್ದ ಟಾರ್ಗೆಟ್ ಪ್ರೈಸ್ ಅನ್ನು 730ಕ್ಕೆ ಬದಲಿಸಿದೆ. ಮೆಕ್ಯಾರೀ ಮಾಡಿದ್ದ ಅಂದಾಜಿಗಿಂತಲೂ ಹೆಚ್ಚಿನ ಆದಾಯವನ್ನು ಪೇಟಿಎಂ ಗಳಿಸಿದೆ.

ಪೇಟಿಎಂ ಷೇರಿನ ಟಾರ್ಗೆಟ್ ಪ್ರೈಸ್ 325 ರೂನಿಂದ 730 ರೂಗೆ ಹೆಚ್ಚಿಸಿದ ಮೆಕಾರೀ; ಸವಾಲುಗಳ ಮಧ್ಯೆಯೂ ಕಂಪನಿಯಿಂದ ಉತ್ತಮ ಸಾಧನೆ ಎಂದು ಪ್ರಶಂಸೆ
ಪೇಟಿಎಂ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 27, 2025 | 1:01 PM

ನವದೆಹಲಿ, ಜನವರಿ 27: ಪೇಟಿಎಂನ ಮೂರನೇ ಕ್ವಾರ್ಟರ್ನ್​ನ ಹಣಕಾಸು ವರದಿ ಹಲವರಿಗೆ ಅಚ್ಚರಿ ಮೂಡಿಸಿದೆ. ನಿರೀಕ್ಷೆಮೀರಿದ ಆದಾಯವನ್ನು ಪೇಟಿಎಂ ತೋರಿಸಿದೆ. ಷೇರು ಮಾರುಕಟ್ಟೆಯಲ್ಲಿ ಪೇಟಿಎಂ ಕುಸಿತ ಆಗುತ್ತದೆ ಎಂದವರು ಈಗ ಅಭಿಪ್ರಾಯ ಬದಲಿಸುತ್ತಿದ್ದಾರೆ. ಇನ್ವೆಸ್ಟ್​​ಮೆಂಟ್ ರಿಸರ್ಚ್ ಸಂಸ್ಥೆಯಾದ ಮೆಕಾರೀ (Macquarie) ಹೀಗೆ ಅಭಿಪ್ರಾಯಬದಲಿಸಿದ ಸಂಸ್ಥೆಗಳಲ್ಲಿ ಒಂದು. ಆರಂಭದಿಂದಲೂ ಪೇಟಿಎಂ ಷೇರು ಬಗ್ಗೆ ನಕಾರಾತ್ಮಕವಾಗಿಯೇ ಮುನ್ನೋಟ ನೀಡುತ್ತಾ ಬಂದಿರುವ ಮೆಕ್ಯಾರೀ ಸಂಸ್ಥೆ ಕಳೆದ ವರ್ಷದಂದು ಪೇಟಿಎಂ ಷೇರು 325 ರೂಗೆ ಕುಸಿಯಬಹುದು ಎಂದು ಹೇಳಿತ್ತು. ಈಗ ತನ್ನ ನಿಲುವನ್ನು ಬದಲಿಸಿ, ಪೇಟಿಎಂ ಷೇರಿನ ಟಾರ್ಗೆಟ್ ಪ್ರೈಸ್ ಅನ್ನು 739 ರೂಗೆ ಏರಿಸಿದೆ.

ಪೇಟಿಎಂನ ಟಾರ್ಗೆಟ್ ಪ್ರೈಸ್ 730 ರೂ ಆದರೂ ಅದು ಈಗಿರುವ 774 ರೂ ಷೇರುಬೆಲೆಗಿಂತಲೂ ಕಡಿಮೆ. ಮೆಕ್ಯಾರೀ ತನ್ನ ಹಿಂದಿನ ಅಂದಾಜನ್ನು ಪರಿಷ್ಕರಿಸಿದೆ. ಪೇಟಿಎಂಗೆ ನೀಡಿದ್ದ ಅಂಡರ್​ಪರ್ಫಾರ್ಮ್ ರೇಟಿಂಗ್ ಅನ್ನೇ ಮೆಕ್ಯಾರೀ ಮುಂದುವರಿಸಿದೆ. ಈ ನಡುವೆಯೂ ಅದು ಪೇಟಿಎಂನ ಮೂರನೇ ತ್ರೈಮಾಸಿಕ ವರದಿಯಲ್ಲಿನ ದತ್ತಾಂಶವನ್ನು ಅದು ಪ್ರಶಂಸಿಸಿದೆ.

ಇದನ್ನೂ ಓದಿ: ಸೆಬಿ ಮುಖ್ಯಸ್ಥೆ ಮಾಧವಿ ಬುಚ್ ಅವಧಿ ಫೆ. 28ಕ್ಕೆ ಅಂತ್ಯ; ಮುಂದುವರಿಯುವ ಸಾಧ್ಯತೆ ಇಲ್ಲ; ಸರ್ಕಾರದಿಂದ ಬೇರೆ ಅಭ್ಯರ್ಥಿಗಳಿಗೆ ಹುಡುಕಾಟ

2024-25ರ ಮೂರನೇ ಕ್ವಾರ್ಟರ್ ಆದ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಪೇಟಿಎಂನ ಆಪರೇಟಿಂಗ್ ರೆವಿನ್ಯೂ 1,828 ಕೋಟಿ ರೂ ಇದೆ. ಇದು ಹಿಂದಿನ ತ್ರೈಮಾಸಿಕಕ್ಕಿಂತ ಶೇ. 10ರಷ್ಟು ಆದಾಯ ಹೆಚ್ಚಳವಾಗಿದೆ. ತೆರಿಗೆ ನಂತರದ ಲಾಭ 208 ಕೋಟಿ ರೂ ಬಂದಿದೆ.

ಪೇಟಿಎಂ ವಿಚಾರದಲ್ಲಿ ಮೆಕ್ಯಾರೀ ಮಾಡಿರುವ ಕೆಲ ಅಂದಾಜು ಸರಿಯಾಗಿದೆ. ಕೆಲವು ತಪ್ಪಾಗಿವೆ. ಷೇರುಬೆಲೆ ಕುಸಿಯುತ್ತದೆ ಎಂದು ಮಾಡಿದ್ದ ಅಂದಾಜು ನಿಜವಾಗಿದೆ. ಆದರೆ, ಪೇಮೆಂಟ್ ರೆವೆನ್ಯೂ ವಿಚಾರದಲ್ಲಿ ಮೆಕ್ಯಾರೀ ಪ್ರೆಡಿಕ್ಷನ್ ಸಾಕಷ್ಟು ಹಿಂದೆಬಿದ್ದಿದೆ.

2021ರಿಂದ 2026ರವರೆಗೆ ಪೇಟಿಎಂನ ಪಾವತಿ ಆದಾಯ ಶೇ. 4ರ ಸಿಎಜಿಅರ್​ಗಿಂತ ಹೆಚ್ಚಿನ ವೇಗದಲ್ಲಿ ಏರುವುದಿಲ್ಲ. 2023-24ರಲ್ಲಿ ಅದರ ಪಾವತಿ ಆದಾಯ 2,200 ಕೋಟಿ ರೂ ಆಗಬಹುದು ಎಂದು ಮೆಕ್ಯಾರೀ ಅಂದಾಜು ಮಾಡಿತ್ತು.

ಆದರೆ, ವಾಸ್ತವದಲ್ಲಿ, 2021-24ರವರೆಗೆ ಪೇಟಿಎಂನ ಪೇಮೆಂಟ್ ರೆವಿನ್ಯೂ ಶೇ. 33ರ ಸಿಎಜಿಆರ್​ನಲ್ಲಿ ಬೆಳೆದಿದೆ. 2023-24ರಲ್ಲಿ ಅದರ ಪೇಮೆಂಟ್ ರೆವಿನ್ಯೂ 6,200 ಕೋಟಿ ರೂ ಇದೆ.

ಇದನ್ನೂ ಓದಿ: ಐಫೋನ್ ಬಿಡಿಭಾಗಗಳ ತಯಾರಿಕೆ; ಭಾರತ್ ಫೋರ್ಜ್​ನೊಂದಿಗೆ ಆ್ಯಪಲ್ ಮಾತುಕತೆ

2024ರ ಫೆಬ್ರುವರಿಯಲ್ಲಿ ಮೆಕ್ಯಾರಿ ಬರೆದಿದ್ದ ವರದಿಯಲ್ಲಿ ‘ಅಳಿವು ಉಳಿವಿಗಾಗಿ ಪೇಟಿಎಂ ಹೋರಾಡುತ್ತಿದೆ’ ಎಂದು ಕಟುವಾಗಿ ಟೀಕಿಸಿತ್ತು. ಆದರೆ, ಪೇಟಿಎಂ ಎಲ್ಲಾ ನಿರೀಕ್ಷೆಗಳನ್ನು ತಲೆಕೆಳಗು ಮಾಡಿ ಉತ್ತಮ ಆದಾಯ ತೋರಿಸಿದೆ.

ಇನ್ನು, ಈ ಹಣಕಾಸು ವರ್ಷದ ಮೂರನೇ ಕ್ವಾರ್ಟರ್​ನಲ್ಲಿ ಪೇಟಿಎಂ 4,990 ಕೋಟಿ ರೂ ಆದಾಯ ಮಾಡಿದೆ. ಇದು ಮೆಕ್ಯಾರೀ ಮಾಡಿದ್ದ ಅಂದಾಜಿಗಿಂತ ಬಹಳ ಹೆಚ್ಚಿನ ಮಟ್ಟದಲ್ಲಿದೆ. 2024-25ರ ಇಡೀ ಹಣಕಾಸು ವರ್ಷದಲ್ಲಿ ಪೇಟಿಎಂ ಗಳಿಸಬಹುದು ಎಂದು ಮೆಕ್ಯಾರೀ ಮಾಡಿದ್ದ ಅಂದಾಜಿಗಿಂತ ಹೆಚ್ಚಿನ ಆದಾಯವನ್ನು ಒಂದೇ ಕ್ವಾರ್ಟರ್​ನಲ್ಲಿ ಪೇಟಿಎಂ ಪಡೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್: ಸಿಎಂ ಘೋಷಣೆ
ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್: ಸಿಎಂ ಘೋಷಣೆ
ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು
ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು
‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ
‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್