ಸಂಗಾತಿಯ ಜೊತೆಗಿನ ಮನಸ್ತಾಪವು ಉದ್ಯೋಗದ ಸ್ಥಳದಲ್ಲಿ ಪ್ರತಿಫಲಿಸುವುದು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಆಷಾಢ ಮಾಸ ಶುಕ್ಲ ಪಕ್ಷದ ತೃತೀಯಾ ತಿಥಿ ಶನಿವಾರ ಅನಿರೀಕ್ಷಿತ ಬೇಸರ, ಕಾರ್ಯದ ಬದಲಾವಣೆ, ಸಣ್ಣ ಉತ್ಪಾದನೆಗೆ ಬೆಂಬಲ, ಸಂಗಾತಿಯ ಮನಸ್ತಾಪ ಇದು ಇಂದಿನ ಭವಿಷ್ಯ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪುಷ್ಯ, ಯೋಗ: ಅತಿಗಂಡ, ಕರಣ: ತೈತಿಲ, ಸೂರ್ಯೋದಯ – 06 : 07 am, ಸೂರ್ಯಾಸ್ತ – 07 : 04 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 09:22 – 10:59, ಯಮಘಂಡ ಕಾಲ 14:13 – 15:50, ಗುಳಿಕ ಕಾಲ 06:08 – 07:45
ಮೇಷ ರಾಶಿ: ಕೃತಜ್ಞತೆಯನ್ನು ಉಳಿಸಿಕೊಳ್ಳುವುದು ಮುಖ್ಯ. ವಿವಾಹಕ್ಕೆ ಸಂಬಂಧಿಸಿದ ವ್ಯವಸ್ಥೆಯನ್ನು ನೀವೇ ಮಾಡಿಕೊಳ್ಳುವಿರಿ. ಬೇಡದ ವಿಚಾರಕ್ಕೆ ಮೂಗು ತೂರಿಸುವುದು ಬೇಡ. ನೀವು ಮಾಡುವ ಕೆಲಸದ ಬಗ್ಗೆ ನಿಮಗೆ ಸರಿಯಾದ ಚಿತ್ರಣವಿರಲಿ. ಇಲ್ಲವಾದರೆ ನೀವು ಮಾಡಲು ಹೊರಟ ಕೆಲಸವು ಅಪೂರ್ಣವಾಗುವುದು ಅಥವಾ ಆಗದೇಯೂ ಹೋಗಬಹುದು. ಗೌಪ್ಯವಾದ ಮಾತುಗಳು ಗೊತ್ತಿಲ್ಲದಂತೆ ಪ್ರಕಟವಾಗಲಿದೆ. ತಂತ್ರಜ್ಞಾನವು ನಿಮ್ಮ ಉಪಯೋಗಕ್ಕೆ ಬರಲಿದೆ. ನಿಮ್ಮ ಕರ್ತವ್ಯಗಳನ್ನು ಮಾಡಲು ಹಿಂಜರಿಯಬೇಡಿ. ನಿಮ್ಮ ಕಾರ್ಯ ವಿಧಾನ ಶ್ಲಾಘನೀಯ. ಸಂಗಾತಿಯ ಜೊತೆಗಿನ ಮನಸ್ತಾಪವು ಉದ್ಯೋಗದ ಸ್ಥಳದಲ್ಲಿ ಪ್ರತಿಫಲಿಸುವುದು. ಅವಾಕಶಗಳನ್ನು ಬಳಸಿಕೊಳ್ಳಲು ಹಿಂದೆಟುಹಾಕುವ ಅವಶ್ಯಕತೆ ಇಲ್ಲ. ಬೇಕಾದಷ್ಟು ಸಮಯವು ನಿಮ್ಮ ಪಾಲಿಗೆ ಇರಲಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಭಾವ ನಿಮ್ಮಲ್ಲಿರಲಿ. ಹೊಸ ವಸ್ತುಗಳನ್ನು ಖರೀದಸಲು ಹೋಗಿ ಸಮಯ ವ್ಯರ್ಥವಾಗುವುದು. ಯಾರನ್ನೂ ಅಶಕ್ತರು ಎಂದು ಭಾವಿಸುವುದು ಬೇಡ.
ವೃಷಭ ರಾಶಿ: ಎಲ್ಲ ವಿಚಾರಕ್ಕೂ ಮುಂದಾಳುತ್ವ ವಹಿಸಲಾಗದು. ಇಂದು ಎಲ್ಲದಕ್ಕೂ ವಿರೋಧ ಮಾಡುವುದು ನಿಮಗೇ ಇದು ಸರಿ ಕಾಣದು. ಹೊಂದಾಣಿಕೆಯಿಂದ ಹೋಗುವುದು ಉತ್ತಮ. ಮಾತನ್ನು ನಿಯಂತ್ರಿಸುವುದು ನಿಮಗೆ ಕಷ್ಟವಾಗುವುದು. ನೀವು ಇಂದು ಶತ್ರುಗಳನ್ನು ಹೆಡೆಮುರಿ ಕಟ್ಟುತ್ತೇನೆ ಎಂಬ ಮನಃಸ್ಥಿತಿಯನ್ನು ಬಿಟ್ಟು ಶಾಂತರಾಗಿ. ನಿಮಗೆ ಕಾಲವು ಬರಲಿದೆ. ಆತುರದಿಂದ ಏನನ್ನಾದರೂ ಮಾಡಲು ಹೋದೀರಿ. ಕಬ್ಬಿಣದ ಕಡಲೆಯನ್ನೂ ನುಂಗಲೂ ಉಗುಳಲೂ ಆಗದು. ಅದು ನಿಮಗೆ ಬಳಕೆ ಬರಲಿದೆ. ಬೇಸರಗೊಳ್ಳುವ ಅವಶ್ಯಕತೆ ಇಲ್ಲ. ವಿದ್ಯಾಭ್ಯಾಸವೂ ಕುಂಠಿತವಾಗುವುದು. ಸತತ ಪ್ರಯತ್ನವು ಬೇಕಾಗಿದೆ. ಯಾರದೋ ಕೆಲಸವನ್ನು ನೀವು ಮಾಡಬೇಕಾಗಿಬರಬಹುದು. ಅವರೂ ನಿಮ್ಮ ಯಶಸ್ಸಿನ ಪಾಲುದಾರರು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ನಿಮ್ಮ ರಹಸ್ಯವನ್ನು ಬಿಟ್ಟುಕೊಡಲಾರಿರಿ. ಇಂದು ನೀವು ಧನಾಗಮನಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು. ಸೌಂದರ್ಯ ಪ್ರಜ್ಞೆಯ ಕಡೆಗೆ ಹೆಚ್ಚು ಆಸಕ್ತಿ ಬರುವುದು.
ಮಿಥುನ ರಾಶಿ: ಮೃದುವರ್ತನೆಯಿಂದ ನೀವು ನಗಣ್ಯವಾಗಬಹುಸು. ಇಂದು ಕುಟುಂಬದ ಜೊತೆ ಸಂತೋಷದಿಂದ ಕಾಲ ಕಳೆಯುವಿರಿ. ಆಪ್ತರ ಜೊತೆ ವಿವಾದ ಆಗಲಿದೆ. ನಾನು ಮಾಡಿದ್ದೇ ಸರಿ ಎಂಬ ಹುಂಬುತನ ಇರಲಿದೆ. ಮುಖವನ್ನೇ ನೋಡದ ವ್ಯಕ್ತಿಯೋರ್ವ ನಿಮಗೆ ಹೂಡಿಕೆಯನ್ನು ಮಾಡಲು ಹೇಳಿ ಅದರ ವಿಧಾನವನ್ನು ತಿಳಿಸಿ ಹಣವನ್ನು ಪಡೆಯಬಹುದು. ಕೆಲವು ವಿಚಾರದಲ್ಲಿ ನಿಮಗೆ ಸೋಲಾಗಬಹುದು. ಛಲದಿಂದ ಸಾಧಿಸುವ ಬಗ್ಗೆ ಗಮನವಿರಲಿ. ಉನ್ನತಸ್ಥಾನಕ್ಕೆ ಹೋಗಲು ಅವಕಾಶವನ್ನು ಹುಡುಕುತ್ತೀದ್ದೀರಿ. ತಾಳ್ಮೆ ಇರಲಿ. ಆತುರದಿಂದ ಏನನ್ನಾದರೂ ಮಾಡಲು ಹೋಗಬೇಡಿ. ಭೂಮಿಯ ವಿಚಾರವನ್ನು ಸದ್ಯ ಕೈಬಿಡುವುದು ಒಳ್ಳೆಯದು. ನಿಮ್ಮ ಮಾತು ಕಿರಿಕಿರಿ ಆಗಬಹುದು. ಹಿರಿಯರ ಎದುರು ವಿನಯದಿಂದ ಮಾತನಾಡಿ. ಸಾಧ್ಯವಾದರೆ ಅವರ ಸೇವೆ ಮಾಡಿ. ಮಾತಿಗೆ ತಪ್ಪಿ ನಡೆಯುವಿರಿ ಎಂಬ ಮಾತು ಕೇಳಬಹುದು. ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಮಕ್ಕಳನ್ನು ಹಿಡೆತಕ್ಕೆ ತರಲು ಪ್ರಯತ್ನಿಸುವಿರಿ.
ಕರ್ಕಾಟಕ ರಾಶಿ: ಸಾಕಷ್ಟು ಪೂರ್ವ ತಯಾರಿಯಿಂದ ನಿಮ್ಮ ಗುರಿ ಸಾಧ್ಯವಾಗಲಿದೆ. ಇಂದು ನಿಮ್ಮ ಅಧ್ಯಾತ್ಮದ ಆಸಕ್ತಿಗೆ ಯೋಗ್ಯವಾದ ಜನ ಹಾಗೂ ವಿಷಯ ಸಿಗಲಿದೆ. ಒಂದೇ ರೀತಯ ಕೆಲಸದಿಂದ ನೀವು ಬೇಸರಗೊಂಡು ಬೇರೆ ರೀತಿಯಲ್ಲಿ ಬೇರೆ ಕೆಲಸವನ್ನು ಮಾಡಲು ಆಲೋಚಿಸುವಿರಿ. ಆಕಸ್ಮಿಕ ಲಾಭದಿಂದ ಸಂತೋಷ. ಹೊಸತನ್ನು ಕಲಿಯುವ ಉತ್ಸುಕತೆಯೂ ನಿಮ್ಮಲ್ಲಿ ಇರಲಿದೆ. ದುರಭ್ಯಾಸದಿಂದ ಅಪಕೀರ್ತಿ ಬರಲಿದೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನೀವಿಂದು ಮನೆಯನ್ನು ಬಿಡಬೇಕಾಗಿಬರಬಹುದು. ಕಳೆದು ಕೊಂಡ ವಸ್ತು ಬಹಳ ದಿನಗಳ ಅನಂತರ ಸಿಗಲಿದೆ. ಹಂಚಿಕೆಯ ವ್ಯವಹಾರ ನಿಮಗೆ ಹಿಡಿಸಿದ್ದಲ್ಲ. ಸುಮ್ಮನೇ ಕಲಹಕ್ಕೆ ಕಾರಣವಾಗುವುದು. ಜನರು ಹತ್ತಿರವಾದಷ್ಟು ನಿಮ್ಮ ಬಗ್ಗೆ ಸಲ್ಲದ್ದನ್ನು ಹೇಳಬಹುದು. ಅಕಸ್ಮಾತ್ ದೂರ ಪ್ರಯಾಣವು ಅನಿವಾರ್ಯವಾದೀತು. ಸರಿಯಾದ ಸಿದ್ಧತೆಯ ಜೊತೆ ಹೋಗಿ. ಅದನ್ನು ಕೂಡಲೇ ಪ್ರಕಟಿಸದೇ ನಿಯಂತ್ರಿಸಲು ಪ್ರಯತ್ನಿಸಿ. ವೈವಾಹಿಕ ಜೀವನದಲ್ಲಿ ವಿಶ್ವಾಸವು ಹೆಚ್ಚಾಗುವುದು. ಏಕಾಂತದಲ್ಲಿ ಇರಲು ಇಷ್ಟವಾಗುವುದು.
ಸಿಂಹ ರಾಶಿ: ನಿಮಗೆ ವಹಿಸಿದ ಕೆಲಸಕ್ಕೆ ಬದಲಿ ವ್ಯವಸ್ಥೆ ಮಾಡುವಿರಿ. ಇಂದು ನಿಮಗೆ ಯಾವುದೋ ನಿಶ್ಚಿತ ಮೂಲದಿಂದ ಹಣ ಬರುವ ಖಾತ್ರಿ ಸಿಕ್ಕು, ಹೆಚ್ಚಿನ ಖರ್ಚು ಮಾಡಲು ಮುಂದಾಗುವಿರಿ. ನಿಮ್ಮ ಹಿತೈಷಿಗಳ ಸಹಕಾರದಿಂದ ನಿಮ್ಮ ಉದ್ಯಮವು ಅಭಿವೃದ್ಧಿ ಹೊಂದಲು ಸಾಧ್ಯ. ಯಾವುದನ್ನೂ ತಾಳ್ಮೆಯಿಂದ ಕೇಳುವ ಸ್ಥಿತಿ ಇರದೇ ಉದ್ವೇಗದ ಮಾತುಗಳನ್ನಾಡುವಿರಿ. ಒಂದಿಲ್ಲೊಂದು ಆರೋಪದಿಂದ ನೀವು ಬೇಸತ್ತು ಹೋಗಬಹುದು. ಮನಸ್ಸಿಗೆ ಒದು ಬಹಳ ಕಿರಿಕಿರಿಯ ವಿಚಾತವಾಗಿ ಪರಿಣಮಿಸುವುದು. ನಿಮಗೆ ಇಂದು ಸುಮ್ಮನೇ ಕುಳಿತಿರಲು ಸಾಧ್ಯವಾಗದು. ಇಂದು ನೀವು ನಿದ್ರೆಯನ್ನು ಹೆಚ್ಚು ಇಷ್ಟಪಡುವರು. ವಿವಾಹವು ಕೂಡಿಬರುವ ಸಾಧ್ಯತೆ ಇದೆ. ಮೃಷ್ಟಾನ್ನ ಭೋಜನದಿಂದ ಸಂತೃಪ್ತಿ. ಸಾಲಬಾಧೆಯಿಂದ ಮುಕ್ತರಾಗುವ ತಂತ್ರವನ್ನು ಮಾಡುವಿರಿ. ಆಪ್ತರೇ ನಿಮ್ಮನ್ನು ಕೆಡಗಲು ಸಂಚನ್ನು ರೂಪಿಸಬಹುದು. ಒಂಟಿತನದ ಆಲೋಚನೆಯು ಪೂರ್ಣವಾಗದು. ಅನಾರೋಗ್ಯದ ಕಾರಣದಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಆಗುವುದು.
ಕನ್ಯಾ ರಾಶಿ: ನಿಮ್ಮ ಸಣ್ಣ ಉತ್ಪಾದನೆಯೂ ಲಾಭದಾಯಕವಾಗುವುದು. ಇಂದು ನಿಮ್ಮ ಆಸೆಗಳಿಗೆ ಪೂರಕವಾದ ಸನ್ನಿವೇಶಗಳು ತಾನಾಗಿಯೇ ತೆರೆದುಕೊಳ್ಳುತ್ತವೆ. ಯಾವುದೋ ಆತಂಕ ಇಡೀ ದಿನ ನಿಮ್ಮನ್ನು ಕಾಡಲಿದೆ. ಕೈ ಮೀರಿದ ಸ್ಥಿತಿಯನ್ನು ನಿಮ್ಮ ನಿಯಂತ್ರಣಕ್ಕೆ ತರಲಾಗದು. ಕುಟುಂಬದ ಹಿರಿಯರ ಸಲಹೆ ಪಡೆದು, ಮುಖ್ಯ ಕೆಲಸಗಳಲ್ಲಿ ಮುಂದುವರಿಯಿರಿ. ಸರಿಯಾದ ಅಭ್ಯಾಸವಿಲ್ಲದೇ ಮಕ್ಕಳು ಪರೀಕ್ಷೆಯಲ್ಲಿ ಸೋಲವ ಸಾಧ್ಯತೆ ಇದೆ. ಸ್ಥಳದಲ್ಲಿಯೇ ಸಿಕ್ಕ ಕೆಲಸವನ್ನು ಚೆನ್ನಾಗಿ ಮಾಡಿ. ಶತ್ರುಗಳಿಂದಲೂ ಗೌರವ ಸಿಗುವುದು. ನಿಮ್ಮ ಕಾಪಾಡುವ ಶಕ್ತಿ ಇನ್ನೊಂದಿದೆ ಎಂದು ಧೈರ್ಯವಾಗಿ ಸತ್ಕಾರ್ಯದಲ್ಲಿ ಮುನ್ನುಗ್ಗುವಿರಿ. ಹಠವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿ ಧನಾತ್ಮವಾದ ಪರಿಣಾಮವನ್ನು ಪಡೆಯಿರಿ. ದಾಂಪತ್ಯದಲ್ಲಿ ಸುಖವು ಇರಲಿದೆ. ಮನಸ್ತಾಪಗಳು ದೂರವಾಗಿ ಕುಟುಂಬದಲ್ಲಿ ಅನ್ಯೋನ್ಯತೆ ಎದ್ದು ತೋರುವುದು. ಮಕ್ಕಳ ವಿಚಾರದಲ್ಲಿ ದುಂದು ವೆಚ್ಚ ಮಾಡಬೇಕಾದೀತು. ಹೂಡಿಕೆಯಲ್ಲಿ ಅತಿಯಾದ ನಿರೀಕ್ಷೆ ಬೇಡ.




