ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್ ಸಿನಿಮಾ
ಸೂಪರ್ ಹಿಟ್ ‘ರಂಗಿತರಂಗ’ ಸಿನಿಮಾ ಈಗ ಮರುಬಿಡುಗಡೆ ಆಗಲಿದೆ. ಈ ಕುರಿತು ಚಿತ್ರತಂಡ ನಡೆಸಿದ ಸುದ್ದಿಗೋಷ್ಠಿಯಲ್ಲಿ ನಟ ಸಾಯಿ ಕುಮಾರ್ ಅವರು ಮಾತನಾಡಿದರು. ಸಾಯಿ ಕುಮಾರ್ ಅವರು ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ. ಇಷ್ಟು ವರ್ಷಗಳ ಜರ್ನಿಯಲ್ಲಿ ‘ರಂಗಿತರಂಗ’ ತಮ್ಮ ವಿಶೇಷ ಸಿನಿಮಾ ಎಂದು ಹೇಳಿದ್ದಾರೆ.
2015ರಲ್ಲಿ ಸೂಪರ್ ಹಿಟ್ ಆದ ‘ರಂಗಿತರಂಗ’ (Rangi Taranga) ಸಿನಿಮಾ ಮರುಬಿಡುಗಡೆ ಆಗಲಿದೆ. ಈ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ನಟ ಸಾಯಿ ಕುಮಾರ್ ಮಾತನಾಡಿದರು. ಚಿತ್ರರಂಗದಲ್ಲಿ ಸಾಯಿ ಕುಮಾರ್ ಅವರು 50 ವರ್ಷಗಳನ್ನು ಪೂರೈಸಿದರು. ಇಷ್ಟು ವರ್ಷಗಳ ಜರ್ನಿಯಲ್ಲಿ ‘ರಂಗಿತರಂಗ’ ತಮ್ಮ ಸ್ಪೆಷಲ್ ಸಿನಿಮಾ ಎಂದು ಅವರು ಹೇಳಿದ್ದಾರೆ. ‘ಈ ಸಿನಿಮಾ ಇಷ್ಟು ದೊಡ್ಡ ಹಿಟ್ ಆಗುತ್ತದೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಬಾಹುಬಲಿ ರೀತಿಯ ದೊಡ್ಡ ಸಿನಿಮಾ ಎದುರು ರಿಲೀಸ್ ಆದ ಚಿತ್ರ ಇದು. ಆಮೇಲೆ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತು. ಅನಸೂಯಾ ಎಂಬ ಡೈಲಾಗ್ ಹೇಳಿದಾಗ ಎಂಥಾ ರಿಯಾಕ್ಷನ್’ ಎಂದು ಆ ದಿನಗಳ ನೆನಪನ್ನು ಸಾಯಿ ಕುಮಾರ್ (Sai Kumar) ಅವರು ಮೆಲುಕು ಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jun 27, 2025 09:12 PM