AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಶಕದ ಸಂಭ್ರಮದಲ್ಲಿ ‘ರಂಗಿತರಂಗ’ ಸಿನಿಮಾ ರೀ-ರಿಲೀಸ್; ಅಪ್​ಡೇಟ್ ಕೊಟ್ಟ ಅನೂಪ್ ಭಂಡಾರಿ

10 Years of Rangi Taranga: ಅನೂಪ್ ಭಂಡಾರಿ ನಿರ್ದೇಶನದ ರಂಗಿತರಂಗ ಚಿತ್ರವು ತನ್ನ 10ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. 2015ರಲ್ಲಿ ಬಿಡುಗಡೆಯಾದ ಈ ಚಿತ್ರವು ದೊಡ್ಡ ಯಶಸ್ಸು ಕಂಡಿತ್ತು. ಈಗ ಸಿನಿಮಾ ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರವು ಕರಾವಳಿ ಪ್ರದೇಶದ ಸಂಸ್ಕೃತಿ ಮತ್ತು ದೈವಾರಾಧನೆಯನ್ನು ಚಿತ್ರಿಸುತ್ತದೆ.

ದಶಕದ ಸಂಭ್ರಮದಲ್ಲಿ ‘ರಂಗಿತರಂಗ’ ಸಿನಿಮಾ ರೀ-ರಿಲೀಸ್; ಅಪ್​ಡೇಟ್ ಕೊಟ್ಟ ಅನೂಪ್ ಭಂಡಾರಿ
ರಂಗಿತರಂಗ
ರಾಜೇಶ್ ದುಗ್ಗುಮನೆ
|

Updated on: Jun 25, 2025 | 10:36 AM

Share

ಅನೂಪ್ ಭಂಡಾರಿ ಅವರು ‘ರಂಗಿತರಂಗ’ ಸಿನಿಮಾ (Rangitaranga) ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದರು. ಮೊದಲ ಚಿತ್ರದಲ್ಲೇ ಅವರಿಗೆ ದೊಡ್ಡ ಗೆಲುವು ಸಿಕ್ಕಿತು. ಈ ಚಿತ್ರ ರಿಲೀಸ್ ಆಗಿದ್ದು 2015ರ ಜುಲೈ 3ರಂದು. ಈ ಸಿನಿಮಾ ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರಕ್ಕೆ ಸ್ಪರ್ಧೆ ಒಡ್ಡಿತ್ತು. ಈ ಸಿನಿಮಾಗೆ ಈಗ ದಶಕದ ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿ ಅನೂಪ್ ಭಂಡಾರಿ ಅವರು ಈ ಚಿತ್ರವನ್ನು ರೀ-ರಿಲೀಸ್ ಮಾಡಲು ನಿರ್ಧರಿಸಿದ್ದಾರೆ.

ಪ್ರತಿ ಚಿತ್ರವನ್ನು ವಿಶೇಷ ದಿನದಂದು ರೀ-ರಿಲೀಸ್ ಮಾಡುವ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈಗ ‘ರಂಗಿತರಂಗ’ ಕೂಡ ಇದೇ ಪ್ಯಾಟರ್ನ್​ ಫಾಲೋ ಮಾಡುತ್ತಿದೆ. ಸಿನಿಮಾಗೆ ದಶಕ ತುಂಬಿದ ಖುಷಿಯಲ್ಲಿ ಜುಲೈ 4ರಂದು ಸಿನಿಮಾ ಮತ್ತೆ ದೊಡ್ಡ ಪರದೆಮೇಲೆ ಬರಲಿದೆ. ಈ ವೇಳೆ ಚಿತ್ರ ಜನರಿಂದ ಮೆಚ್ಚುಗೆ ಪಡೆಯೋ ಸಾಧ್ಯತೆ ಇದೆ.

ಇದನ್ನೂ ಓದಿ
Image
‘ಆರ್ಯನ್ ಯಾವಾಗಲೂ ನಾನು ಮುಸ್ಲಿಂ ಎಂದೇ ಹೇಳುತ್ತಾನೆ’; ಗೌರಿ ಖಾನ್
Image
‘ಆನಂದ್’ ಸಿನಿಮಾದ ಸಾಂಗ್ ಶೂಟಿಂಗ್ ವೇಳೆ ನಡೆದಿತ್ತು ಫನ್ನಿ ಘಟನೆ
Image
‘ಅದು ನಡೆದಿಲ್ಲ’; ಹಾರ್ದಿಕ್ ಜೊತೆಗಿನ ಲವ್ವಿ-ಡವ್ವಿ ಬಗ್ಗೆ ಇಶಾ ಮಾತು
Image
ಕನ್ನಡದ ಪ್ರಶಾಂತ್ ನೀಲ್ ಜೊತೆ ಕೈ ಜೋಡಿಸಿದ ಅಲ್ಲು ಅರ್ಜುನ್? ಖಡಕ್ ಟೈಟಲ್

‘10 ವರ್ಷ ತುಂಬಿದ ಖುಷಿಯಲ್ಲಿ ರಂಗಿತರಂಗ ಸಿನಿಮಾ ಜುಲೈ 10ರಂದು ಮತ್ತೆ ರಿಲೀಸ್ ಆಗುತ್ತಿದೆ.  ಯಾರು ಈ ಚಿತ್ರವನ್ನು ಇನ್ನೂ ವೀಕ್ಷಿಸಿಲ್ಲವೋ ಅಥವಾ ಮತ್ತೊಮ್ಮೆ ಈ ಚಿತ್ರವನ್ನು ನೋಡಬೇಕು ಎಂದು ಯಾರು ಬಯಸಿದ್ದೀರೋ ಅವರು ವೀಕ್ಷಿಸಬಹುದು. ನಮ್ಮ ಚಿತ್ರಕ್ಕೆ ಐತಿಹಾಸಿಕ ಗೆಲುವನ್ನು ತಂದುಕೊಟ್ಟ ಪ್ರತಿಯೊಬ್ಬರಿಗೂ ಮತ್ತೊಮ್ಮೆ ಧನ್ಯವಾದಗಳು. ಥಿಯೇಟರ್​ನಲ್ಲಿ ಸಿಗೋಣ’ ಎಂದು ಅನೂಪ್ ಭಂಡಾರಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಬಾಹುಬಲಿ’ ರೀ-ರಿಲೀಸ್; ಒಂದೇ ಪಾರ್ಟ್​ನಲ್ಲಿ ಎರಡು ಭಾಗ

‘ರಂಗಿತರಂಗ’ ಸಿನಿಮಾದ ಕಥೆ ಕರಾವಳಿಯಲ್ಲಿ ಸಾಗುತ್ತದೆ. ಅಲ್ಲಿನ ಮಂದಿ ಆರಾಧಿಸುವ ದೈವದ ವಿಚಾರವನ್ನು ಇದರಲ್ಲಿ ಹೇಳಲಾಗಿದೆ. ಈ ಸಿನಿಮಾದಲ್ಲಿ ನಿರೂಫ್ ಭಂಡಾರಿ, ರಾಧಿಕಾ ಚೇತನ್, ಅವಂತಿಕಾ ಶೆಟ್ಟಿ, ಸಾಯಿಕುಮಾರ್ ನಟಿಸಿದ್ದಾರೆ. ಅನೂಪ್ ಭಂಡಾರಿ ಸಂಗೀತ ಸಂಯೋಜನೆ ಮಾಡಿದರೆ, ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಒಂದೂವರೆ ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಚಿತ್ರ 43 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಚಿತ್ರ ‘ಗುಡ್ಡದ ಭೂತ’ ಧಾರಾವಾಹಿಯನ್ನಾಧರಿಸಿದೆ. ಸದ್ಯ ಅನೂಪ್ ಭಂಡಾರಿ ಅವರು ಸುದೀಪ್ ಜೊತೆ ‘ಬಿಲ್ಲ ರಂಗ ಭಾಷ’ ಚಿತ್ರವನ್ನು ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!