‘ಬಾಹುಬಲಿ’ ರೀ-ರಿಲೀಸ್; ಒಂದೇ ಪಾರ್ಟ್ನಲ್ಲಿ ಎರಡು ಭಾಗ
ಬಾಹುಬಲಿ ಚಿತ್ರದ 10ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಎರಡೂ ಭಾಗಗಳನ್ನು ಒಂದುಗೂಡಿಸಿ ಸಿನಿಮಾನ ಅಕ್ಟೋಬರ್‌ನಲ್ಲಿ ಮರುಬಿಡುಗಡೆ ಮಾಡಲಾಗುತ್ತಿದೆ. ಪ್ರಭಾಸ್ ಅವರ ಜನ್ಮದಿನದಂದು ರಿಲೀಸ್ ಆಗುವ ಈ ಚಿತ್ರದಲ್ಲಿ ಕೆಲವು ದೃಶ್ಯಗಳನ್ನು ಕಡಿಮೆ ಮಾಡಿ, ಹೊಸ ಮೆರಗು ನೀಡಲಾಗುತ್ತಿದೆ. ಒಂದೇ ಭಾಗದಲ್ಲಿ ಎರಡೂ ಚಿತ್ರಗಳನ್ನು ಪ್ರದರ್ಶಿಸುವುದು ಅಭಿಮಾನಿಗಳಿಗೆ ಹೊಸ ಅನುಭವ ನೀಡುವ ನಿರೀಕ್ಷೆಯಿದೆ.

‘ಬಾಹುಬಲಿ’ ಚಿತ್ರವು (Bahubali Movie) ರಿಲೀಸ್ ಆಗಿ 10 ವರ್ಷಗಳು ಕಳೆಯುತ್ತಾ ಬಂದಿದೆ. ಈ ಚಿತ್ರವು 2015ರ ಜುಲೈ 10ರಂದು ವಿಶ್ವಾದ್ಯಂತ ಬಿಡುಗಡೆ ಕಂಡಿತು. ಆ ಬಳಿಕ ಸಿನಿಮಾ ಸೂಪರ್ ಹಿಟ್ ಆಯಿತು. ರಾಜಮೌಳಿಯು ಈ ಚಿತ್ರವನ್ನು ನಿರ್ದೇಶನ ಮಾಡಿದರು. ಈ ಚಿತ್ರಕ್ಕೆ ಪ್ರಭಾಸ್, ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ತಮನ್ನಾ, ಸತ್ಯರಾಜ್ ಮೊದಲಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದರು. ಈ ಸಿನಿಮಾಬಾಕ್ಸ್ ಆಫೀಸ್ನಲ್ಲಿ ಹಿಟ್ ಆಯಿತು. ಈಗ ಈ ಚಿತ್ರ ರೀ-ರಿಲೀಸ್ ಆಗುತ್ತಿದೆ.
ಸಾಮಾನ್ಯವಾಗಿ ಹಿಟ್ ಆದ ಚಿತ್ರಗಳನ್ನು ರೀ-ರಿಲೀಸ್ ಮಾಡಲಾಗುತ್ತದೆ. ಆದರೆ, ‘ಬಾಹುಬಲಿ’ ಚಿತ್ರವು ಈ ವರೆಗೆ ರೀ-ರಿಲೀಸ್ ಆಗಿಲ್ಲ. ಈಗ ಸಿನಿಮಾಗೆ ದಶಕದ ಸಂಭ್ರಮ. ಜುಲೈ ತಿಂಗಳಿಗೆ ಸಿನಿಮಾ ರಿಲೀಸ್ ಆಗಿ 10 ವರ್ಷ ಕಳೆಯಲಿದೆ. ಸಿನಿಮಾದ ನಿರ್ಮಾಪಕ ಶೋಭು ಯರ್ಲಗಡ್ಡ ಅವರು ಅಧಿಕೃತವಾಗಿ ಸಿನಿಮಾ ರೀ-ರೀಲೀಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ಅಕ್ಟೋಬರ್‌ನಲ್ಲಿ ಚಿತ್ರ ತೆರೆಗೆ ಬರಲಿದೆ.
ಅಕ್ಟೋಬರ್ 23ರಂದು ಪ್ರಭಾಸ್ ಜನ್ಮದಿನ. ಆ ಸಂದರ್ಭದಲ್ಲಿ ಚಿತ್ರವನ್ನು ರೀ-ರಿಲೀಸ್ ಮಾಡಲು ಸಿದ್ಧತೆ ನಡೆದಿದೆ. ಈ ಚಿತ್ರದಲ್ಲಿ ಒಂದು ಟ್ವಿಸ್ಟ್ ಇದೆ. ಎರಡೂ ಭಾಗವನ್ನು ಸೇರ್ಪಡೆ ಮಾಡಿ ರಿಲೀಸ್ ಮಾಡಲು ಉದ್ದೇಶಿಸಲಾಗಿದೆ. ಅಂದರೆ ಎರಡೂ ಭಾಗದಲ್ಲಿ ಒಂದಷ್ಟು ವರ್ಷನ್ಗಳನ್ನು ಟ್ರಿಮ್ ಮಾಡಲು ಆಲೋಚನೆ ನಡೆದಿದೆ. ಅಂದರೆ ಚಿತ್ರಕ್ಕೆ ಹೊಸ ಮೆರಗು ಸಿಗೋದು ಪಕ್ಕಾ.
‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಗಮನ ಸೆಳೆದವು. ರಾಜಮೌಳಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ ರೀತಿ ಗಮನ ಸೆಳೆಯಿತು. ಚಿತ್ರದಲ್ಲಿ ವಿಎಫ್ಎಕ್ಸ್ ಹೈಲೈಟ್ ಆಗಿತ್ತು. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲೂ ಗಮನ ಸೆಳೆಯಿತು. ಈಗ ಸಿನಿಮಾ ಒಂದೇ ಭಾಗದಲ್ಲಿ ರಿಲೀಸ್ ಆಗುತ್ತಿರುವುದು ವಿಶೇಷ. ಜನರು ಇದನ್ನು ಇಷ್ಟ ಪಡೋ ಸಾಧ್ಯತೆ ಇದೆ.
ಇದನ್ನೂ ಓದಿ: ‘ಬಾಹುಬಲಿ 2’ ದಾಖಲೆ ಮುರಿಯಲು ರೆಡಿ ಆದ ‘ಪುಷ್ಪ 2’ ಸಿನಿಮಾ
ಎರಡು ಭಾಗದಲ್ಲಿ ಈ ಚಿತ್ರವನ್ನು ರಿಲೀಸ್ ಮಾಡಿದರೆ ನೋಡುವರ ಸಂಖ್ಯೆ ಕಡಿಮೆ ಆಗಬಹುದು. ಒಂದೇ ಭಾಗದಲ್ಲಿ ಎರಡೂ ಚಿತ್ರವನ್ನು ತೋರಿಸುತ್ತೇನೆ ಎಂಬುದು ಒಂದೊಳ್ಳೆಯ ತಂತ್ರ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:20 am, Fri, 6 June 25