‘ಬ್ಯಾಂಗಲ್ ಬಂಗಾರಿ’ ಹಾಡಿಗೂ, ರಾಜ್ಕುಮಾರ್ ಡ್ಯಾನ್ಸ್ಗೂ ಪರ್ಫೆಕ್ಟ್ ಮ್ಯಾಚ್
ಇತ್ತೀಚೆಗೆ ‘ಬ್ಯಾಂಗಲ್ ಬಂಗಾರಿ’ ಹಾಡು ಸಖತ್ ವೈರಲ್ ಆಗಿದೆ. ಈ ಹಾಡಿಗೆ ವರನಟ ರಾಜ್ ಕುಮಾರ್ ಅವರ ಹಳೆಯ ಡ್ಯಾನ್ಸ್ ವಿಡಿಯೋವನ್ನು ಸೇರಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ಪಡೆದಿದೆ. ‘ಎಕ್ಕ’ ಚಿತ್ರದ ಹಾಡು ಮತ್ತು ರಾಜ್ ಕುಮಾರ್ ಅವರ ನೃತ್ಯದ ಅದ್ಭುತ ಸಮ್ಮಿಲನ ಇದು.

ಇತ್ತೀಚೆಗೆ ‘ಬ್ಯಾಂಗಲ್ ಬಂಗಾರಿ’ (Bangale Bangari) ಹಾಡು ಎಲ್ಲ ಕಡೆಗಳಲ್ಲಿ ವೈರಲ್ ಆಗಿದೆ. ಅನೇಕ ಸೆಲೆಬ್ರಿಟಿಗಳು ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ರೀತಿಯ ಹಾಡುಗಳು ವೈರಲ್ ಆದಾಗ ಅಭಿಮಾನಿಗಳು ನಾನಾ ಪ್ರಯೋಗಗಳನ್ನು ಮಾಡುತ್ತಾರೆ. ಈಗ ‘ಬ್ಯಾಂಗಲ್ ಬಂಗಾರಿ..’ ಹಾಡಿಗೂ ಒಂದು ಭಿನ್ನ ಪ್ರಯೋಗ ನಡೆದಿದೆ. ವರನಟ ರಾಜ್ಕುಮಾರ್ ಡ್ಯಾನ್ಸ್ ಮಾಡಿದ್ದ ವಿಡಿಯೋ ಒಂದಕ್ಕೆ ಈ ಹಾಡನ್ನು ಹಾಕಲಾಗಿದ್ದು, ಅದು ಸರಿಯಾಗಿ ಮ್ಯಾಚ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಮಾಡಲಾಗುತ್ತಿದೆ.
‘ಬ್ಯಾಂಗಲ್ ಬಂಗಾರಿ’ ಹಾಡು ‘ಎಕ್ಕ’ ಚಿತ್ರದ್ದು. ಈ ಸಿನಿಮಾಗೆ ಯುವ ರಾಜ್ಕುಮಾರ್ ಹಾಗೂ ಸಂಜನಾ ಆನಂದ್ ನಟಿಸಿದ್ದಾರೆ. ರೋಹಿತ್ ಪದಕಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ಈ ಚಿತ್ರಕ್ಕೆ ಇದೆ. ಈ ಸಿನಿಮಾ ಹಾಡಿನ ಮೂಲಕವೇ ಸದ್ದು ಮಾಡುತ್ತಿದೆ. ಈ ಹಾಡನ್ನು ವಿವಿಧ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ರಾಜ್ಕುಮಾರ್ ಅವರು ಹಾಡೊಂದಕ್ಕೆ ಡ್ಯಾನ್ಸ್ ಮಾಡಿದ್ದರು. ಈ ಹಾಡಿನಲ್ಲಿ ಮಾಧವಿ ಹಾಗೂ ರಾಜ್ಕುಮಾರ್ ಒಟ್ಟಾಗಿ ಹೆಜ್ಜೆ ಹಾಕಿದ್ದರು. ಈ ಹಾಡಿಗೆ ‘ಬ್ಯಾಂಗಲ್ ಬಂಗಾರಿ..’ ಹಾಡನ್ನು ಸೇರಿಸಲಾಗಿದ್ದು, ಸರಿಯಾಗಿ ಹೊಂದಿಕೆ ಆಗಿದೆ. ಅನೇಕರು ಈ ಡ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.
View this post on Instagram
ರಾಜ್ಕುಮಾರ್ ಅವರ ಅನೇಕ ಹಾಡುಗಳಿಗೆ ಹಿಟ್ ಹಾಡುಗಳನ್ನು ಸೇರಿಸಿ ವಿಡಿಯೋ ವೈರಲ್ ಮಾಡಲಾಗಿತ್ತು. ಈ ಮೊದಲು ಹಿಟ್ ಆಗಿದ್ದು, ‘ದ್ವಾಪರ..’ ಹಾಡನ್ನು ಇದೇ ರೀತಿಯಲ್ಲಿ ವೈರಲ್ ಮಾಡಲಾಗಿತ್ತು. ರಾಜ್ಕುಮಾರ್ ಡ್ಯಾನ್ಸ್ ಮಾಡಿದ್ದ ವಿಡಿಯೋಗೆ ‘ದ್ವಾಪರ..’ ಹಾಡನ್ನು ಹಾಕಲಾಗಿತ್ತು.
ಇದನ್ನೂ ಓದಿ: ವಿಶ್ವ ಯೋಗ ದಿನ: ಮತ್ತೆ ವೈರಲ್ ಆಗುತ್ತಿದೆ ಡಾ. ರಾಜ್ಕುಮಾರ್ ವಿಡಿಯೋ
ರಾಜ್ಕುಮಾರ್ ಅವರು ನಟಸಾರ್ವಭೌಮ ಎನಿಸಿಕೊಂಡಿದ್ದರು. ಅವರು ಅದ್ಭುತ ನಟನೆಯ ಜೊತೆಗೆ ಅತ್ಯುತ್ತಮವಾಗಿ ಹಾಡುತ್ತಿದ್ದರು. ಅವರ ಕಂಠಕ್ಕೆ ಮರುಳಾಗದವರೇ ಇಲ್ಲ. ಅಣ್ಣಾವ್ರು ನಿಧನ ಹೊಂದಿ ಹಲವು ವರ್ಷಗಳು ಕಳೆದರೂ ಅವರನ್ನು ಈಗಲೂ ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








