AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ಯೋಗ ದಿನ: ಮತ್ತೆ ವೈರಲ್ ಆಗುತ್ತಿದೆ ಡಾ. ರಾಜ್​ಕುಮಾರ್ ವಿಡಿಯೋ

ಎಷ್ಟೋ ವಿಚಾರಗಳಲ್ಲಿ ರಾಜ್​ಕುಮಾರ್ ಅವರು ಮಾದರಿ. ಯೋಗ ಕಲಿಯಲು ಕೂಡ ಅವರು ಅನೇಕರಿಗೆ ಸ್ಫೂರ್ತಿ. ಅಣ್ಣಾವ್ರು ಯೋಗ ಮಾಡಿದ ವಿಡಿಯೋಗಳು ವೈರಲ್ ಆಗುತ್ತಿವೆ. ಪ್ರತಿ ವರ್ಷ ವಿಶ್ವ ಯೋಗ ದಿನದ ಪ್ರಯುಕ್ತ ಡಾ. ರಾಜ್​ಕುಮಾರ್ ಅವರನ್ನು ಸ್ಮರಿಸಿಕೊಳ್ಳಲಾಗುತ್ತದೆ. ಈ ಬಾರಿ ಕೂಡ ಅದು ಮರುಕಳಿಸಿದೆ.

ವಿಶ್ವ ಯೋಗ ದಿನ: ಮತ್ತೆ ವೈರಲ್ ಆಗುತ್ತಿದೆ ಡಾ. ರಾಜ್​ಕುಮಾರ್ ವಿಡಿಯೋ
Dr Rajkumar
ಮದನ್​ ಕುಮಾರ್​
|

Updated on: Jun 22, 2025 | 5:09 PM

Share

ಜೂನ್ 21ರಂದು ವಿಶ್ವ ಯೋಗ ದಿನ (International Day of Yoga) ಆಚರಿಸಲಾಯಿತು. ಅನೇಕ ಸೆಲೆಬ್ರಿಟಿಗಳು ತಮ್ಮ ಫಿಟ್ನೆಸ್​ ಸಲುವಾಗಿ ಯೋಗ (Yoga) ಮಾಡುತ್ತಾರೆ. ಕನ್ನಡ ಚಿತ್ರರಂಗದಿಂದ ಬಾಲಿವುಡ್ ತನಕ ಹಲವು ನಟ-ನಟಿಯರಿಗೆ ಯೋಗದಿಂದ ಲಾಭ ಆಗಿದೆ. ವಿಶ್ವ ಯೋಗ ದಿನದ ಪ್ರಯುಕ್ತ ಡಾ. ರಾಜ್​ಕುಮಾರ್ ಅವರನ್ನು ನೆನಪಿಸಿಕೊಳ್ಳಲೇಬೇಕು. ಯಾಕೆಂದರೆ, ಅಣ್ಣಾವ್ರು ಕೂಡ ಅತ್ಯುತ್ತಮ ಯೋಗಪಟು ಆಗಿದ್ದರು. ಹಠಯೋಗದಲ್ಲಿ ಅವರು ಪರಿಣತಿ ಹೊಂದಿದ್ದರು. ‘ಕಾಮನಬಿಲ್ಲು’ ಸಿನಿಮಾದಲ್ಲಿ ಅದನ್ನು ತೋರಿಸಲಾಗಿದೆ. ಅದೇ ರೀತಿ ಡಾ. ರಾಜ್​ಕುಮಾರ್ (Dr Rajkumar) ಅವರ ಹಲವು ವಿಡಿಯೋಗಳು ಮತ್ತೆ ವೈರಲ್ ಆಗಿವೆ.

ಡಾ. ರಾಜ್​ಕುಮಾರ್ ಅವರು ಬಾಲ್ಯದಿಂದಲೇ ಯೋಗ ಕಲಿತವರಲ್ಲ. 50 ವರ್ಷ ವಯಸ್ಸಿನ ಬಳಿಕ ಅವರು ಯೋಗಾಭ್ಯಾಸ ಮಾಡಲು ಆರಂಭಿಸಿದರು. ಅದರಿಂದ ಅವರಿಗೆ ದೈಹಿಕ ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಸಿಕ್ಕಿತು. ಇದರ ಬಗ್ಗೆ ಜನಸಾಮಾನ್ಯರಿಗೂ ಹೆಚ್ಚಾಗಿ ತಿಳಿಯಲಿ ಎಂಬ ಕಾರಣದಿಂದ ಸಿನಿಮಾದಲ್ಲೂ ಯೋಗಾಭ್ಯಾಸದ ದೃಶ್ಯಗಳನ್ನು ತೋರಿಸಿದರು.

ಆಗಿನ ಕಾಲದಲ್ಲಿ ಸೋಶಿಯಲ್ ಮೀಡಿಯಾ ಇರಲಿಲ್ಲ. ಜನರನ್ನು ತಲುಪಲು ಸಿನಿಮಾವೇ ದೊಡ್ಡ ಮಾಧ್ಯಮ ಆಗಿತ್ತು. ‘ಕಾಮನಬಿಲ್ಲು’ ಸಿನಿಮಾದಲ್ಲಿ ಡಾ. ರಾಜ್​ಕುಮಾರ್ ಅವರು ಯೋಗಾಭ್ಯಾಸ ಮಾಡುವುದು ನೋಡಿ ಸ್ಫೂರ್ತಿ ಪಡೆದವರು ಸಾಕಷ್ಟು ಮಂದಿ ಇದ್ದಾರೆ. ಆ ಬಳಿಕವೇ ಯೋಗ ಕಲಿತು, ಅದನ್ನು ಜೀವನದಲ್ಲಿ ಅಳವಡಿಸಿಕೊಂಡ ಅಭಿಮಾನಿಗಳ ಸಂಖ್ಯೆ ಅಪಾರ.

ಇದನ್ನೂ ಓದಿ: 1 ನಿಮಿಷದಲ್ಲಿ 10 ಯೋಗದ ಆಸನ: ವಿಶ್ವ ದಾಖಲೆ ಬರೆದ ಹಾಸನದ ಬಾಲಕಿ

ಸಿನಿಮಾದಲ್ಲಿ ಡಾ. ರಾಜ್​ಕುಮಾರ್ ಅವರು ಮಾಡದೇ ಇರುವ ಪಾತ್ರಗಳೇ ಇಲ್ಲ. ದೇವರಿಂದ ದಾನವರ ತನಕ, ರಾಜನಿಂದ ರೈತನ ತನಕ ಎಲ್ಲ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡರು. ಅಂಥ ಪಾತ್ರಗಳಿಗೆ ಬಹಳ ಸುಲಭವಾಗಿ ಒಪ್ಪಿಕೊಳ್ಳಲು ಅವರಿಗೆ ಯೋಗ ಕೂಡ ಸಹಕಾರಿ ಆಯಿತು. 50ರ ವಯಸ್ಸಿನ ನಂತರವೂ ಆ್ಯಕ್ಷನ್ ಸನ್ನಿವೇಶಗಳಲ್ಲಿ ಸರಾಗವಾಗಿ ನಟಿಸಲು ಅವರಿಗೆ ಸಾಧ್ಯವಾಯ್ತು. ಈ ಮಾತಿಗೆ ವೈರಲ್ ಆಗಿರುವ ವಿಡಿಯೋನೇ ಸಾಕ್ಷಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ