AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಫ್ರಿಡ್ಜ್, ವಾಷಿಂಗ್ ಮೆಷೀನ್ ಬ್ಯುಸಿನೆಸ್ ತೊರೆದ ಪ್ಯಾನಸನಿಕ್; ಏನು ಕಾರಣ? ಈಗಿರುವ ಫ್ರಿಡ್ಜ್​​ಗಳಿಗೆ ಸರ್ವಿಸ್ ನಿಲ್ಲುತ್ತಾ?

Panasonic stops Refrigerator and washing machine business in India: ಜಪಾನ್ ಮೂಲದ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಕಂಪನಿ ಪ್ಯಾನಸನಿಕ್ ಭಾರತದಲ್ಲಿ ತನ್ನ ಫ್ರಿಡ್ಜ್ ಮತ್ತು ವಾಷಿಂಗ್ ಮೆಷಿನ್ ಮಾರಾಟ ನಿಲ್ಲಿಸಿದೆ. ಟಿವಿ, ಎಸಿ ಹಾಗು ಅದರ ಇತರ ಉತ್ಪನ್ನಗಳ ಮಾರಾಟ ಮುಂದುವರಿಯಲಿದೆ. ಹರ್ಯಾಣದಲ್ಲಿರುವ ಅದರ ಘಟಕದಲ್ಲಿ ಬೇರೆ ಕಂಪನಿಗಳಿಗೆ ಫ್ರಿಡ್ಜ್ ಮತ್ತು ವಾಷಿಂಗ್ ಮೆಷೀನ್​​ಗಳನ್ನು ಗುತ್ತಿಗೆ ಆಧಾರದಲ್ಲಿ ತಯಾರಿಸಿಕೊಡಲಿದೆ.

ಭಾರತದಲ್ಲಿ ಫ್ರಿಡ್ಜ್, ವಾಷಿಂಗ್ ಮೆಷೀನ್ ಬ್ಯುಸಿನೆಸ್ ತೊರೆದ ಪ್ಯಾನಸನಿಕ್; ಏನು ಕಾರಣ? ಈಗಿರುವ ಫ್ರಿಡ್ಜ್​​ಗಳಿಗೆ ಸರ್ವಿಸ್ ನಿಲ್ಲುತ್ತಾ?
ಪ್ಯಾನಸನಿಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 27, 2025 | 6:03 PM

Share

ನವದೆಹಲಿ, ಜೂನ್ 27: ಕನ್ಸೂಮರ್ ಎಲೆಕ್ಟ್ರಾನಿಕ್ಸ್ ವಲಯದ ಜಪಾನೀ ಕಂಪನಿ ಪ್ಯಾನಸನಿಕ್ ಭಾರತದಲ್ಲಿ ಕೆಲ ಬ್ಯುಸಿನೆಸ್​​ಗಳನ್ನು ನಿಲ್ಲಿಸಲು ನಿರ್ಧರಿಸಿದೆ. ವರದಿ ಪ್ರಕಾರ, ಭಾರತದಲ್ಲಿ ರೆಫ್ರಿಜರೇಟರ್ ಮತ್ತು ವಾಷಿಂಗ್ ಮೆಷಿನ್ ವ್ಯವಹಾರಗಳಿಂದ ಪ್ಯಾನಸನಿಕ್ ಹೊರಬಿದ್ದಿದೆ. ಪ್ಯಾನಸನಿಕ್​ನ ಹೊಸ ಫ್ರಿಡ್ಜ್ ಮತ್ತು ವಾಷಿಂಗ್ ಮೆಷೀನ್​​ಗಳು ಇನ್ಮುಂದೆ ಭಾರತದಲ್ಲಿ ಬಿಡುಗಡೆ ಆಗುವುದಿಲ್ಲ. ಆದರೆ, ಕಂಪನಿಯ ಇತರ ಉತ್ಪನ್ನಗಳು ಮುಂದುವರಿಯಲಿವೆ.

ಪ್ಯಾನಸನಿಕ್​​ನ ಈ ನಿರ್ಧಾರ ಭಾರತಕ್ಕೆ ಮಾತ್ರವೇ ಸದ್ಯ ಸೀಮಿತವಾಗಿದೆ. ಜಪಾನ್ ದೇಶದ ಈ ದೈತ್ಯ ಕಂಪನಿಯ ಇತರ ಉತ್ಪನ್ನಗಳಾದ ಏರ್ ಕಂಡೀಷನರ್ಸ್, ಟಿವಿ ಯಥಾಪ್ರಕಾರ ಲಭ್ಯ ಇರಲಿದೆ. ಪರ್ಸನಲ್ ಕೇರ್ ವಸ್ತುಗಳು, ಎನರ್ಜಿ ಸಲ್ಯೂಶನ್ಸ್, ಬಿ2ಬಿ ಸರ್ವಿಸ್ ಮೊದಲಾದವು ಮುಂದುವರಿಯಲಿವೆ.

ಇದನ್ನೂ ಓದಿ: ಅದಾನಿ-ಅಂಬಾನಿ ಡೀಲ್; ಗ್ಯಾಸ್ ಸ್ಟೇಷನ್​​ನಲ್ಲಿ ಪೆಟ್ರೋಲ್ ಸಿಗುತ್ತೆ, ಪೆಟ್ರೋಲ್ ಸ್ಟೇಷನ್​ನಲ್ಲಿ ಗ್ಯಾಸ್ ಸಿಗುತ್ತೆ

ಪ್ಯಾನಸನಿಕ್ ಕಂಪನಿಯು ಹರ್ಯಾಣದ ಝಾಜ್ಜರ್​ನಲ್ಲಿ ಫ್ರಿಡ್ಜ್ ಮತ್ತು ವಾಷಿಂಗ್ ಮೆಷೀನ್​​ಗಳ ತಯಾರಿಕೆಗೆ ಒಂದು ಘಟಕ ಹೊಂದಿದೆ. ಇದನ್ನು ಕಂಪನಿ ಮುಚ್ಚುತ್ತಿದೆ ಎನ್ನುವಂತಹ ಸುದ್ದಿ ಇತ್ತು. ಬಹುತೇಕ ಅದು ನಿಜ ಆಗಿದೆ. ಆದರೆ, ಈ ಘಟಕವನ್ನು ಪ್ಯಾನಸನಿಕ್ ಬೇರೆ ರೀತಿಯಲ್ಲಿ ಬಳಸಿಕೊಳ್ಳಬಹುದು. ಇತರ ಕಂಪನಿಗಳಿಗೆ ಗುತ್ತಿಗೆ ಆಧಾರದಲ್ಲಿ ವಾಷಿಂಗ್ ಮೆಷೀನ್ ಮತ್ತು ಫ್ರಿಡ್ಜ್ ಉತ್ಪನ್ನಗಳನ್ನು ಈ ಘಟಕದಲ್ಲಿ ತಯಾರಿಸುವ ಸಾಧ್ಯತೆ ಇದೆ.

ಈಗಿರುವ ಉತ್ಪನ್ನಗಳ ಕಥೆ?

ಈಗಾಗಲೇ ಮಾರಾಟವಾಗಿರುವ ಪ್ಯಾನಸನಿಕ್​​ನ ಫ್ರಿಡ್ಜ್ ಮತ್ತು ವಾಷಿಂಗ್ ಮೆಷೀನ್​​ಗಳಿಗೆ ಸರ್ವಿಸ್ ಮುಂದುವರಿಯಲಿದೆ. ಹೊಸ ಉತ್ಪನ್ನಗಳು ಮಾತ್ರ ಬಿಡುಗಡೆ ಆಗುವುದಿಲ್ಲ.

ಉತ್ಪನ್ನಗಳ ಆದ್ಯತೆ ಬದಲಿಸುತ್ತಿರುವ ಪ್ಯಾನಸನಿಕ್

ಪ್ಯಾನಸನಿಕ್ ಸಂಸ್ಥೆಯು ಭವಿಷ್ಯದಲ್ಲಿ ಬೆಳೆಯಬಹುದಾದ ಉತ್ಪನ್ನಗಳತ್ತ ಗಮನ ಕೇಂದ್ರೀಕರಿಸುತ್ತಿದೆ. ಹೋಮ್ ಆಟೊಮೇಶನ್, ಹೀಟಿಂಗ್ ವೆಂಟಿಲೇಶನ್, ಎಸಿ, ಬಿ2ಬಿ ಸಲ್ಯೂಶನ್ಸ್, ಎಲೆಕ್ಟ್ರಿಕಲ್ ಸಲ್ಯೂಶನ್ಸ್, ಎನರ್ಜಿ ಸಲ್ಯೂಶನ್ಸ್ ಇತ್ಯಾದಿ ಸೆಕ್ಟರ್​​ಗಳನ್ನು ಅದು ಟಾರ್ಗೆಟ್ ಮಾಡಿದೆ.

ಇದನ್ನೂ ಓದಿ: ಭಾರತ ಮತ್ತು ಅಮೆರಿಕ ಮಧ್ಯೆ ದೊಡ್ಡ ವ್ಯಾಪಾರ ಒಪ್ಪಂದ? ಸುಳಿವು ನೀಡಿದ ಡೊನಾಲ್ಡ್ ಟ್ರಂಪ್

ಜಾಗತಿಕವಾಗಿಯೂ ಪ್ಯಾನಸನಿಕ್ ಇದೇ ಬದಲಾವಣೆ ಮಾಡುವಂತಿದೆ. ಅಧಿಕ ಲಾಭದ ಮಾರ್ಜಿನ್ ಇರುವ ಇವಿ ಬ್ಯಾಟರಿ, ಹೋಮ್ ಆಟೊಮೇಶನ್ ಇತ್ಯಾದಿ ಕ್ಷೇತ್ರಗಳಲ್ಲಿ ಗಮನ ಹರಿಸುತ್ತಿದೆ. ಕಳೆದ ತಿಂಗಳಲ್ಲಿ (2025ರ ಮೇ) ಈ ಕಂಪನಿ ಜಾಗತಿಕವಾಗಿ 10,000 ಮಂದಿಯ ಲೇ ಆಫ್ ಮಾಡಿತ್ತು.

2021ರಲ್ಲಿ ಪ್ಯಾನಸನಿಕ್ ಸಿಂಗಾಪುರದಲ್ಲಿದ್ದ ತನ್ನ ಕಂಪ್ರೆಸರ್ ಘಟಕವನ್ನು ಮುಚ್ಚಿ, ಮಲೇಷ್ಯಾ ಮತ್ತು ಚೀನಾದಲ್ಲಿ ಅದನ್ನು ಸ್ಥಾಪಿಸಿದೆ. ಅದೇ ವರ್ಷ ಥಾಯ್ಲೆಂಡ್​ನಲ್ಲಿದ್ದ ಫ್ಯಾಕ್ಟರಿಯೊಂದನ್ನು ವಿಯೆಟ್ನಾಂಗೆ ವರ್ಗಾಯಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್