AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದಾನಿ-ಅಂಬಾನಿ ಡೀಲ್; ಗ್ಯಾಸ್ ಸ್ಟೇಷನ್​​ನಲ್ಲಿ ಪೆಟ್ರೋಲ್ ಸಿಗುತ್ತೆ, ಪೆಟ್ರೋಲ್ ಸ್ಟೇಷನ್​ನಲ್ಲಿ ಗ್ಯಾಸ್ ಸಿಗುತ್ತೆ

Adani Total Gas and Jio BP partnership: ಅಂಬಾನಿ ಕಂಪನಿಯ ಜಿಯೋ ಬಿಪಿ ಮತ್ತು ಅದಾನಿ ಗ್ರೂಪ್​​ನ ಅದಾನಿ ಟೋಟಲ್ ಗ್ಯಾಸ್ ಸಂಸ್ಥೆಗಳ ಮಧ್ಯೆ ಸಹಭಾಗಿತ್ವ ಒಪ್ಪಂದ ಏರ್ಪಟ್ಟಿದೆ. ಒಪ್ಪಂದದ ಪ್ರಕಾರ ಕೆಲ ಆಯ್ದ ಜಿಯೋ ಬಿಪಿ ಔಟ್​ಲೆಟ್​​ಗಳಲ್ಲಿ ಅದಾನಿಯ ಸಿಎನ್​​ಜಿ ಲಭ್ಯ ಇರಲಿದೆ. ಹಾಗೆಯೇ, ಆಯ್ದ ಟೋಟಲ್ ಗ್ಯಾಸ್ ಔಟ್​​ಲೆಟ್​​ಗಳಲ್ಲಿ ಜಿಯೋ ಬಿಪಿಯ ಪೆಟ್ರೋಲ್, ಡೀಸಲ್ ಸಿಗಲಿದೆ.

ಅದಾನಿ-ಅಂಬಾನಿ ಡೀಲ್; ಗ್ಯಾಸ್ ಸ್ಟೇಷನ್​​ನಲ್ಲಿ ಪೆಟ್ರೋಲ್ ಸಿಗುತ್ತೆ, ಪೆಟ್ರೋಲ್ ಸ್ಟೇಷನ್​ನಲ್ಲಿ ಗ್ಯಾಸ್ ಸಿಗುತ್ತೆ
ಅದಾನಿ ಅಂಬಾನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 27, 2025 | 12:42 PM

Share

ಮುಂಬೈ, ಜೂನ್ 27: ಭಾರತದ ಇಬ್ಬರು ಅತಿದೊಡ್ಡ ಉದ್ಯಮಿಗಳೆನಿಸಿದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಒಬ್ಬರಿಗೊಬ್ಬರು ನೆರವಾಗುವ ರೀತಿಯ ಡೀಲ್​ವೊಂದನ್ನು ಕುದುರಿಸಿದ್ದಾರೆ. ರಿಲಾಯನ್ಸ್ ಇಂಡಸ್ಟ್ರೀಸ್​​ಗೆ ಸೇರಿದ ಜಿಯೋ ಬಿಪಿ (Jio BP) ಹಾಗೂ ಅದಾನಿ ಟೋಟಲ್ ಗ್ಯಾಸ್ (ATGL- Adani Total Gas Ltd) ನಡುವೆ ಸಹಭಾಗಿತ್ವ ಸಾಧಿಸುವ ಒಪ್ಪಂದ ಏರ್ಪಟ್ಟಿದೆ. ಎರಡೂ ಕಂಪನಿಗಳು ಪರಸ್ಪರ ಘರ್ಷಣೆಯಾಗದ ರೀತಿಯಲ್ಲಿ ಸೇವೆ ವಿಸ್ತರಣೆ ಮಾಡಿವೆ.

ಒಪ್ಪಂದದ ಪ್ರಕಾರ, ಅದಾನಿ ಕಂಪನಿಯ ಸಿಎನ್​​ಜಿ ಬಂಕ್​​ಗಳಲ್ಲಿ ಜಿಯೋ ಬಿಪಿಯಿಂದ ಪೆಟ್ರೋಲ್ ಹಾಗೂ ಡೀಸಲ್ ಮಾರಾಟ ಆಗಲಿದೆ. ಅದೇ ರೀತಿ, ಜಿಯೋ ಬಿಪಿಯ ಬಂಕ್​​ಗಳಲ್ಲಿ ಎಟಿಜಿಎಲ್​​ನ ಸಿಎನ್​​ಜಿ ಮಾರಾಟ ನಡೆಯಲಿದೆ.

ದೇಶದ ಕೆಲ ಆಯ್ದ ಎಟಿಜಿಎಲ್ ಮತ್ತು ಜಿಯೊ ಬಿಪಿ ಯೂನಿಟ್​​ಗಳಲ್ಲಿ ಈ ಸಹಭಾಗಿತ್ವ ಇರಲಿದೆ. ಈ ಆಯ್ದ ಬಂಕ್​ಗಳಲ್ಲಿ ಪೆಟ್ರೋಲ್, ಡೀಸಲ್, ಸಿಎನ್​​ಜಿ ಗ್ಯಾಸ್ ಈ ಮೂರೂ ಕೂಡ ಸಿಗುತ್ತದೆ.

ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಅದಾನಿ ಗ್ರೂಪ್​​ನಿಂದ 40 ಲಕ್ಷ ಮಂದಿಗೆ ಅನ್ನದಾನ ಸೇರಿ ವಿವಿಧ ಸೇವೆ

ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಹತ್ತಾರು ಬ್ಯುಸಿನೆಸ್​​ಗಳನ್ನು ಹೊಂದಿದೆ. ಹೆಚ್ಚಿನವು ರೀಟೇಲ್, ಟೆಲಿಕಾಂನಂತಹ ಗ್ರಾಹಕ ಕೇಂದ್ರಿತ ಸೆಕ್ಟರ್​​ಗಳಲ್ಲಿವೆ.

ಇನ್ನು, ಗೌತಮ್ ಅದಾನಿ ಅವರ ಅದಾನಿ ಗ್ರೂಪ್ ಕೂಡ ಬಹಳ ದೊಡ್ಡ ಉದ್ದಿಮೆಗಳನ್ನು ನಿಭಾಯಿಸುತ್ತದೆ. ಅದರ ಪ್ರಮುಖ ಬ್ಯುಸಿನೆಸ್ ಇನ್​ಫ್ರಾಸ್ಟ್ರಕ್ಚರ್​​ನದ್ದು. ಸಮುದ್ರದ ಬಂದರು, ವಿಮಾನ ನಿಲ್ದಾಣ, ಮೈನಿಂಗ್ ಇತ್ಯಾದಿ ಬ್ಯುಸಿನೆಸ್ ನಡೆಸುತ್ತದೆ.

ಇದನ್ನೂ ಓದಿ: Adani Foundation: ಶ್ರೇಷ್ಠ ಹಾಗೂ ಅಗ್ಗದ ವೈದ್ಯಕೀಯ ಶಿಕ್ಷಣದ ಗುರಿಯೊಂದಿಗೆ DMIHER ಜೊತೆ ಕೈಜೋಡಿಸಿದ ಅದಾನಿ

ಸೋಲಾರ್ ಇತ್ಯಾದಿ ನವೀಕರಣ ಇಂಧನ ಉತ್ಪಾದನಾ ಕ್ಷೇತ್ರದಲ್ಲಿ ಮಾತ್ರ ಎರಡೂ ಕಂಪನಿಗಳು ಪೈಪೋಟಿಯಲ್ಲಿವೆ. ಆದರೆ, ಈ ಕ್ಷೇತ್ರ ಇನ್ನೂ ಆರಂಭಿಕ ಹಂತದಲ್ಲಿದ್ದು, ಪರಸ್ಪರ ಪೈಪೋಟಿ ಏರ್ಪಡದ ರೀತಿಯಲ್ಲಿ ಬೇರೆ ಬೇರೆ ಕಡೆ ಪ್ರಾಜೆಕ್ಟ್​​ಗಳನ್ನು ನಡೆಸಲಾಗುತ್ತಿರುವುದು ವಿಶೇಷ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ