Adani Foundation: ಶ್ರೇಷ್ಠ ಹಾಗೂ ಅಗ್ಗದ ವೈದ್ಯಕೀಯ ಶಿಕ್ಷಣದ ಗುರಿಯೊಂದಿಗೆ DMIHER ಜೊತೆ ಕೈಜೋಡಿಸಿದ ಅದಾನಿ
Adani Foundation Collaborates with DMIHER: ಮಹಾರಾಷ್ಟ್ರದ DMIHER ವಿವಿ ಜೊತೆ ಅದಾನಿ ಫೌಂಡೇಶನ್ ಕೈಜೋಡಿಸಿದ್ದು, ಸೆಂಟರ್ ಆಫ್ ಎಕ್ಸಲೆನ್ಸಿಯನ್ನು ಸ್ಥಾಪಿಸಲಿದೆ. ಉನ್ನತ ಗುಣಮಟ್ಟದ ವೈದ್ಯಕೀಯ ಶಿಕ್ಷಣವು ಎಲ್ಲರ ಕೈಗೆಟುಕುವಂತಿರಬೇಕು ಎನ್ನುವುದು ಅದಾನಿ ಗ್ರೂಪ್ ಸಂಕಲ್ಪ. ಹತ್ತಾರು ಇನ್ಸ್ಟಿಟ್ಯೂಟ್ಗಳನ್ನು ಹೊಂದಿರುವ ಉನ್ನತ ಶಿಕ್ಷಣ ಸಂಸ್ಥೆಯಾದ DMIHER ಅದಾನಿ ಗ್ರೂಪ್ನೊಂದಿಗಿನ ಸಹಯೋಗವನ್ನು ಸ್ವಾಗತಿಸಿದೆ.

ನವದೆಹಲಿ, ಜೂನ್ 26: ಮಹಾರಾಷ್ಟ್ರದ ಡೀಮ್ಡ್ ಯೂನಿವರ್ಸಿಟಿಯಾದ ದತ್ತ ಮೇಘೆ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (DMIHER) ಜೊತೆ ಅದಾನಿ ಗ್ರೂಪ್ ಕೈಜೋಡಿಸಿದೆ. ಜಾಗತಿಕ ಗುಣಮಟ್ಟದೊಂದಿಗೆ ಕಡಿಮೆ ಬೆಲೆಗೆ ವೈದ್ಯಕೀಯ ಶಿಕ್ಷಣವನ್ನು ನೀಡುವ ಗುರಿಯೊಂದಿಗೆ ಅದಾನಿ ಫೌಂಡೇಶನ್ ಈ ಹೆಜ್ಜೆ ಇಟ್ಟಿದೆ. DMIHER ಅನ್ನು ಜಾಗತಿಕ ಶ್ರೇಷ್ಠ ಶಿಕ್ಷಣ ಅನ್ನು ಜಾಗತಿಕ ಮಟ್ಟದ ಶಿಕ್ಷಣ ಸಂಸ್ಥೆಯಾಗಿ ರೂಪಿಸುವುದು ಅದರ ಗುರಿಯಾಗಿದೆ.
ಅದಾನಿ ಗ್ರೂಪ್ನ ಸಾಮಾಜಿಕ ಜವಾಬ್ದಾರಿ ನೀತಿ (ಸಿಎಸ್ಆರ್) ಭಾಗವಾಗಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರ ನಿರ್ಮಾಣಕ್ಕೆ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಮುಖ್ಯ ಎನ್ನುವುದು ಅದಾನಿ ಗ್ರೂಪ್ನ ನಿಲುವು. ಅದರ ಪ್ರಕಾರವಾಗಿ DMIHER ಅನ್ನು ಉನ್ನತೀಕರಿಸುವ ಸಂಕಲ್ಪ ತೊಟ್ಟಿದೆ.
ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಅದಾನಿ ಗ್ರೂಪ್ನಿಂದ 40 ಲಕ್ಷ ಮಂದಿಗೆ ಅನ್ನದಾನ ಸೇರಿ ವಿವಿಧ ಸೇವೆ
ಮಹಾರಾಷ್ಟ್ರ ಮೂಲದ ದತ್ತ ಮೇಘೆ ಉನ್ನತ ಶಿಕ್ಷಣ ಸಂಸ್ಥೆಯು ಸದ್ಯ ವಿವಿಧೆಡೆ 15 ಇನ್ಸ್ಟಿಟ್ಯೂಟ್ ಮತ್ತು 5 ಬೋಧಕ ಆಸ್ಪತ್ರೆಗಳನ್ನು ಹೊಂದಿದೆ. ಪದವಿ, ಸ್ನಾತಕೋತ್ತರ ಪದವಿ, ಸೂಪರ್ ಸ್ಪೆಷಾಲಿಟಿ, ಡಾಕ್ಟೋರಲ್ ಮತ್ತು ಫೆಲೋಶಿಪ್ ಕೋರ್ಸ್ಗಳನ್ನು ಈ ಶಿಕ್ಷಣ ಸಂಸ್ಥೆ ಆಫರ್ ಮಾಡುತ್ತಿದೆ. DMIHER ಮತ್ತು ಅದಾನಿ ಫೌಂಡೇಶನ್ ಸೇರಿ ಈಗ ಸೆಂಟರ್ ಎಫ್ ಎಕ್ಸಲೆನ್ಸ್ ಅನ್ನು ಆರಂಭಿಸಲಿದೆ.
ಅದಾನಿ ಗ್ರೂಪ್ ಜೊತೆಗಿನ ಸಹಯೋಗವನ್ನು DMIHER ಸಂಸ್ಥಾಪಕ ದತ್ತ ಮೇಘೆ ಸ್ವಾಗತಿಸಿದ್ದಾರೆ. ಸ್ವಾವಲಂಬಿಯಾಗಿರುವಂತಹ ಆರೋಗ್ಯ ಮತ್ತು ಶಿಕ್ಷಣ ಇಕೋಸಿಸ್ಟಂ ಅನ್ನು ನಿರ್ಮಿಸುವ ನಮ್ಮ ಕನಸು ಈಗ ಪೂರ್ಣ ನಿಜವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮುಂಬೈ ಏರ್ಪೋರ್ಟ್ ವಿಸ್ತರಣೆ ಯೋಜನೆಗೆ ಜಾಗತಿಕ ಹೂಡಿಕೆದಾರರಿಂದ 1 ಬಿಲಿಯನ್ ಡಾಲರ್ ಬಂಡವಾಳ ಪಡೆದ ಅದಾನಿ ಏರ್ಪೋರ್ಟ್ಸ್
ಅದಾನಿ ಫೌಂಡೇಶನ್ 1996ರಿಂದಲೂ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದೆ. ಅದರ ಶಿಕ್ಷಣ, ಆರೋಗ್ಯ, ಪರಿಸರ, ಸಾಮುದಾಯಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕೈಗೊಂಡಿರುವ ಯೋಜನೆಗಳು 21 ರಾಜ್ಯಗಳಲ್ಲಿನ ಏಳು ಸಾವಿರಕ್ಕೂ ಅಧಿಕ ಹಳ್ಳಿಗಳಲ್ಲಿ 96 ಲಕ್ಷ ಮಂದಿಯ ಬದುಕಿನ ಮೇಲೆ ಪ್ರಭಾವ ಬೀರಿದೆ ಎಂದು ಅದಾನಿ ಫೌಂಡೇಶನ್ ಹೇಳಿಕೊಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




