Infosys: ಇನ್ಫೋಸಿಸ್ ಷೇರುಬೆಲೆ ಕುಸಿಯುತ್ತಿದೆ, ಏರುವ ಮುನ್ನ ಕೊಳ್ಳಿರಿ ಕೊಳ್ಳಿರಿ..! ಬೆಲೆ ಇಳಿಕೆಗೆ ಏನು ಕಾರಣ?

Share Market: ಜೂನ್ ಅಂತ್ಯದ ಕ್ವಾರ್ಟರ್​ನಲ್ಲಿ ಶೇ. 10.9ರಷ್ಟು ನಿವ್ವಳಲಾಭದಲ್ಲಿ ಹೆಚ್ಚಳ ಕಂಡರೂ ಇನ್ಫೋಸಿಸ್ ಸಂಸ್ಥೆಯ ಷೇರುಬೆಲೆ ದಿಢೀರ್ ಕುಸಿತಕ್ಕೆ ಒಳಗಾಗಿದೆ. ಇದಕ್ಕೆ ಅದರ ವಾರ್ಷಿಕ ಮುನ್ನೋಟದ ವರದಿ ತಂದಿಟ್ಟ ನಿರಾಸೆ.

Infosys: ಇನ್ಫೋಸಿಸ್ ಷೇರುಬೆಲೆ ಕುಸಿಯುತ್ತಿದೆ, ಏರುವ ಮುನ್ನ ಕೊಳ್ಳಿರಿ ಕೊಳ್ಳಿರಿ..! ಬೆಲೆ ಇಳಿಕೆಗೆ ಏನು ಕಾರಣ?
ಇನ್ಫೋಸಿಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 21, 2023 | 1:16 PM

ಮುಂಬೈ, ಜುಲೈ 21: ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆಯ (Infosys Technologies) ಷೇರುಬೆಲೆ ಜುಲೈ 21ರಂದು ಪಲ್ಟಿ ಹೊಡೆಯುತ್ತಿದೆ. ನಿನ್ನೆ (ಜುಲೈ 20) ಇನ್ಫೋಸಿಸ್​ನ ಮೊದಲ ತ್ರೈಮಾಸಿಕ ವರದಿ ಪ್ರಕಟವಾಗಿದ್ದು, ಶೇ. 10.9ರಷ್ಟು ನಿವ್ವಳ ಲಾಭ ಹೆಚ್ಚಳ ತೋರಿಸಿತ್ತು. ಆದರೂ ಕೂಡ ಷೇರುಬೆಲೆ ಗರಗರ ಸುತ್ತಿ ಬೀಳುತ್ತಿದೆ. ಭಾರತದ ಷೇರುಮಾರುಕಟ್ಟೆಗಳಲ್ಲಿ ಮಾತ್ರವಲ್ಲ, ಅದರ ಎಡಿಆರ್​ಗಳೂ ಕೂಡ ಕುಸಿತ ಕಂಡಿವೆ. ಹಿಂದಿನ ಕ್ವಾರ್ಟರ್​ನ ವರದಿ ಪ್ರಕಟವಾದಾಗಲೂ ಇನ್ಫೋಸಿಸ್​ನ ಅಮೆರಿಕನ್ ಡೆಪಾಸಿಟರಿ ರಿಸಿಪ್ಟ್ಸ್ ಬೆಲೆ ಕುಸಿತವಾಗಿತ್ತು. ಎಡಿಆರ್ ಎಂಬುದು ಅಮೆರಿಕದಲ್ಲಿ ವಿದೇಶೀ ಕಂಪನಿಯ ಷೇರುಗಳಿಗೆ ಅಲ್ಲಿನ ಬ್ಯಾಂಕುಗಳು ನೀಡುವ ಸರ್ಟಿಫಿಕೇಟ್.

ಲಾಭ ಹೆಚ್ಚಾದರೂ ಇನ್ಫೋಸಿಸ್ ಷೇರುಗಳು ಕುಸಿಯುತ್ತಿರುವುದು ಯಾಕೆ?

ಇನ್ಫೋಸಿಸ್ ಟೆಕ್ನಾಲಜೀಸ್ ಸಂಸ್ಥೆ 2023ರ ಏಪ್ರಿಲ್​ನಿಂದ ಜೂನ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಶೇ. 10.9ರಷ್ಟು ಹೆಚ್ಚಳದೊಂದಿಗೆ 5,945 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ಆದರೆ, ಇನ್ಫೋಸಿಸ್ ಷೇರುಬೆಲೆ ಶುಕ್ರವಾರ ಬೆಳಗಿನ ವಹಿವಾಟಿನಲ್ಲಿ ಶೇ. 10ರವರೆಗೂ ಕುಸಿತ ಕಂಡಿದೆ. ಈ ವರದಿ ಬರೆಯುವಾಗ ಅದರ ಷೇರುಬೆಲೆಯಲ್ಲಿ 113 ರೂಗಳಷ್ಟು ಇಳಿಕೆಯಾಗಿ 1,335.75 ರೂ ತಲುಪಿದೆ. ಒಂದು ಹಂತದಲ್ಲಿ ಅದರ ಷೇರುಬೆಲೆ 1,305 ರೂಗೆ ಇಳಿದಿತ್ತು.

ಇದನ್ನೂ ಓದಿQ1 Results: ತ್ರೈಮಾಸಿಕ ವರದಿ: ಇನ್ಫೋಸಿಸ್ ಶೇ. 10.9, ಹೆಚ್​ಯುಎಎಲ್ ಶೇ. 6.9ರಷ್ಟು ನಿವ್ವಳ ಲಾಭ ಹೆಚ್ಚಳ

ಇನ್ಫೋಸಿಸ್​ನ ಈ ಪರಿ ಷೇರುಕುಸಿತಕ್ಕೆ ಕಾರಣವಾಗಿದ್ದು ಅದರ ಭವಿಷ್ಯದ ಆದಾಯ ಅಂದಾಜನ್ನು ತಗ್ಗಿಸಲಾಗಿದ್ದು. 2023-24ರ ಹಣಕಾಸು ವರ್ಷದಲ್ಲಿ ಇನ್ಫೋಸಿಸ್​ನ ಆದಾಯ ಶೇ. 1ರಿಂದ ಶೇ. 3.5 ಇರಬಹುದು ಎಂದು ಕಂಪನಿ ತನ್ನ ಫೈಲಿಂಗ್​ನಲ್ಲಿ ತಿಳಿಸಿತ್ತು. ಇದು ಹೂಡಿಕೆದಾರರನ್ನು ನಿರಾಸೆಗೊಳಿಸಿದೆ. ಈ ಹಿಂದೆ ಅದು ಮಾಡಿದ ಅಂದಾಜು ಪ್ರಕಾರ ಈ ಹಣಕಾಸು ವರ್ಷದಲ್ಲಿ ಶೇ. 4ರಿಂದ 7ರಷ್ಟು ಆದಾಯವೃದ್ಧಿ ಅಗಬಹುದು ಎಂದು ನಿರೀಕ್ಷಿಸಲಾಗಿತ್ತು. ಈಗ ಈ ನಿರೀಕ್ಷೆ ಇನ್ನಷ್ಟು ತಗ್ಗಿಸಲಾಗಿದೆ. ಇದೇ ಕಾರಣಕ್ಕೆ ಇನ್ಫೋಸಿಸ್ ಷೇರುಗಳನ್ನು ಮಾರುವ ಭರಾಟೆಗೆ ನಿಂತಿದ್ದಾರೆ ಹೂಡಿಕೆದಾರರು.

ಇದನ್ನೂ ಓದಿInfosys: ಡೆನ್ಮಾರ್ಕ್ ದೇಶದ ಬ್ಯಾಂಕ್​ಗೆ ಐಟಿ ಸೇವೆಯ ಗುತ್ತಿಗೆ ಇನ್ಫೋಸಿಸ್ ಪಾಲು; ಇನ್ಫೋಸಿಸ್ ಸುಪರ್ದಿಗೆ ಬರಲಿದೆ ಬೆಂಗಳೂರಿನ ಡ್ಯಾನ್​ಸ್ಕ್ ಸೆಂಟರ್

ಇನ್ಫೋಸಿಸ್ ಷೇರು ಖರೀದಿಸುವ ಸಂದರ್ಭವಾ ಇದು?

ಇನ್ಫೋಸಿಸ್ ವಿಚಾರದಲ್ಲಿ ಷೇರುಪೇಟೆ ತಜ್ಞರು ಮತ್ತು ಬ್ರೋಕರೇಜ್ ಸಂಸ್ಥೆಗಳು ಎರಡು ವಿಷಯಗಳನ್ನು ಎತ್ತಿತೋರಿಸಿದ್ದಾರೆ. ಒಂದು, ಈಗಿನ ಟ್ರೆಂಡ್ ಗಮನಿಸಿದರೆ ಇನ್ಫೋಸಿಸ್ ಷೇರುಬೆಲೆ ಇನ್ನಷ್ಟು ಕಡಿಮೆ ಆಗಬಹುದು. ಇನ್ನೊಂದು, ಇನ್ಫೋಸಿಸ್​ನ ಟಾರ್ಗೆಟ್ ಪ್ರೈಸ್ 1,600 ರೂ ಇಡಲಾಗಿದೆ. ಅಂದರೆ ಅದರ ಷೇರುಬೆಲೆ ಒಂದು ವರ್ಷದಲ್ಲಿ 1,600 ರೂವರೆಗೂ ಏರಬಹುದು. ಇವೆರಡು ಅಂಶಗಳನ್ನು ಗಮನಿಸಿದರೆ ಇನ್ಫೋಸಿಸ್ ಷೇರುಗಳನ್ನು ಕೊಳ್ಳಲು ಸಕಾಲ ಸಮಯ ಸಮೀಪಿಸಿದೆ. ಈಗಲೇ ಷೇರು ಖರೀದಿಸಿದರೂ ಲಾಭ ತರಬಹುದು ಎನ್ನುತ್ತಾರೆ ತಜ್ಞರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:29 pm, Fri, 21 July 23

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ