Kohli Son: ಲಂಡನ್​ನಲ್ಲಿ ಜನಿಸಿದ ಕೊಹ್ಲಿ ಮಗ ಅಕಾಯ್​ಗೆ ಬ್ರಿಟನ್ ಪೌರತ್ವ ಸಿಗುತ್ತಾ? ನಿಯಮಗಳೇನು ನೋಡಿ

|

Updated on: Feb 21, 2024 | 2:53 PM

UK citizenship rules: ಲಂಡನ್​ನಲ್ಲಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿರಾಟ್ ಕೊಹ್ಲಿ ಎರಡು ಮಕ್ಕಳ ಅಪ್ಪ ಎನಿಸಿದ್ದಾರೆ. ಲಂಡನ್​ನಲ್ಲಿ ಹುಟ್ಟಿದ ಮಗು ಅಕಾಯ್​ಗೆ ಬ್ರಿಟನ್ ಪೌರತ್ವ ಡೀಫಾಲ್ಟ್ ಆಗಿ ಸಿಗುತ್ತದಾ ಎಂಬ ಪ್ರಶ್ನೆ ಸೋಷಿಯಲ್ ಮೀಡಿಯಾದಲ್ಲಿ ಕೇಳಲಾಗುತ್ತಿದೆ. ಪೌರತ್ವ ನೀಡುವ ನಿಯಮಗಳು ಒಂದೊಂದು ದೇಶದಲ್ಲೂ ವ್ಯತ್ಯಾಸವಾಗಬಹುದು. ಬ್ರಿಟನ್​ನಲ್ಲಿ ನಿಯಮ ಏನಿದೆ ಎಂಬ ಮಾಹಿತಿ ಇಲ್ಲಿದೆ.

Kohli Son: ಲಂಡನ್​ನಲ್ಲಿ ಜನಿಸಿದ ಕೊಹ್ಲಿ ಮಗ ಅಕಾಯ್​ಗೆ ಬ್ರಿಟನ್ ಪೌರತ್ವ ಸಿಗುತ್ತಾ? ನಿಯಮಗಳೇನು ನೋಡಿ
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಮಗು ಅಕಾಯ್ ಜೊತೆ.
Follow us on

ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಂಪತಿಗೆ ಎರಡನೇ ಮಗುವಾಗಿದೆ. ಲಂಡನ್​ನಲ್ಲಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹಿರಿಯ ಮಗಳು ವಾಮಿಕಾಗೆ (Vaamika) ಈಗ ಸರಿಯಾಗಿ 3 ವರ್ಷ. ಗಂಡು ಮಗುವಿಗೆ ಅಕಾಯ್ (Akaay) ಎಂದು ಹೆಸರಿಟ್ಟಿದ್ದಾರೆ. ಅಕಾಯ್ ಎಂದರೆ ಯಾವುದೋ ಜಪಾನೀ ಶಬ್ದದಂತೆ ಭಾಸವಾಗುತ್ತದೆ. ಆದರೆ, ಅದಕ್ಕೆ ನಿರಾಕಾರ ಎಂದರ್ಥ. ಅಕಾಯ ಅಥವಾ ಆಕಾರ ಇಲ್ಲದ್ದು. ಈ ಅಕಾಯ್ ಹುಟ್ಟಿನ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಕೊಹ್ಲಿ ದಂಪತಿಗೆ ಅಭಿನಂದನೆಯ ಮಹಾಪೂರವೇ ಹರಿಯುತ್ತಿದೆ. ಹಾಗೆಯೇ, ಅಕಾಯ್ ಲಂಡನ್​ನಲ್ಲಿ ಜನಿಸಿರುವುದರಿಂದ ಬ್ರಿಟನ್ ದೇಶದ ಪೌರತ್ವ (UK citizenship) ಸಿಗಬಹುದಾ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಒಂದು ದೇಶದಲ್ಲಿ ಜನಿಸಿದ ಮಾತ್ರಕ್ಕೆ ಆ ದೇಶದ ನಾಗರಿಕತ್ವ ಸಿಗುತ್ತದೆಯೇ? ಪೌರತ್ವ ಪಡೆಯಲು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ನಿಯಮಗಳು ಇವೆ.

ಕೊಹ್ಲಿ ಪುತ್ರನಿಗೆ ಬ್ರಿಟನ್ ಪೌರತ್ವ ಸಿಗುತ್ತದಾ?

ಒಂದು ಮಗು ಒಂದು ದೇಶದಲ್ಲಿ ಹುಟ್ಟಿದಾಕ್ಷಣ ನಾಗರಿಕನೆಂದು ಪರಿಗಣಿಸಲು ಆಗುವುದಿಲ್ಲ. ಪೋಷಕರಲ್ಲಿ ಒಬ್ಬರಾದರೂ ಆ ದೇಶದ ಪೌರತ್ವ ಹೊಂದಿರಬೇಕು. ಆದರೆ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಕೂಡ ಬ್ರಿಟನ್ ಪ್ರಜೆಗಳಲ್ಲ. ವೈದ್ಯಕೀಯ ಕಾರಣಕ್ಕೆ ಲಂಡನ್​ಗೆ ಹೋಗಿ ಅನುಷ್ಕಾಗೆ ಡೆಲಿವರಿ ಆಗಿದೆ. ಹೀಗಾಗಿ, ಅಕಾಯ್​ಗೆ ಯುಕೆ ಪೌರತ್ವ ತನ್ನಂತಾನೇ ಪ್ರಾಪ್ತವಾಗುವುದಿಲ್ಲ. ಒಂದು ವೇಳೆ ಬ್ರಿಟನ್ ಪೌರತ್ವ ಬೇಕೆಂದರೆ ಅಲ್ಲಿನ ಪೌರತ್ವ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

ಯುಕೆ ಪೌರತ್ವ ಪಡೆಯಲು ನಿಯಮಗಳು ಏನು?

ಬ್ರಿಟನ್​ಗೆ ಕೆಲಸಕ್ಕೋ ಅಥವಾ ಓದಲೋ ಹೋಗುವ ಒಬ್ಬ ವ್ಯಕ್ತಿ, ಅದೇ ದೇಶದಲ್ಲಿ ಖಾಯಂ ಆಗಿ ನೆಲಸಲು ಇಚ್ಛಿಸಿ, ಅದಕ್ಕಾಗಿ ಪೌರತ್ವ ಪಡೆಯಲು ಕ್ರಮಗಳೇನು? ಅಲ್ಲಿನ ನಿಯಮಗಳ ಪ್ರಕಾರ, ವೀಸಾ ಪಡೆದು ಬ್ರಿಟನ್​ಗೆ ಹೋಗುವ ವ್ಯಕ್ತಿ ಐದು ವರ್ಷ ವಾಸ ಇದ್ದರೆ ಪೌರತ್ವಕ್ಕೆ ಅರ್ಜಿ ಸಲ್ಲಿಸುವ ಅವಕಾಶ ಹೊಂದಿರುತ್ತಾರೆ. ಅದಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: ಗಂಡು ಮಗುವಿಗೆ ಜನ್ಮವಿತ್ತ ಅನುಷ್ಕಾ, ಖುಷಿ ಹಂಚಿಕೊಂಡ ವಿರಾಟ್: ಮಗುವಿನ ಹೆಸರೇನು?

ಆಂಗ್ಲ ಭಾಷೆ ವ್ಯಾವಹಾರಿಕ ಭಾಷೆಯಾಗಿರುವುದರಿಂದ ಪೌರತ್ವ ಪಡೆಯಲು ಇಂಗ್ಲೀಷ್ ಪರೀಕ್ಷೆ ಬರೆಯಬೇಕು. ಸಾಮಾನ್ಯ ಜ್ಞಾನದ ಪರೀಕ್ಷೆ ಕೂಡ ಬರೆದು ತೇರ್ಗಡೆಯಾಗಬೇಕು ಎಂಬ ನಿಯಮ ಇತ್ತು. ನಂತರದಲ್ಲಿ ಈ ನಿಯಮವನ್ನು ಬದಲಾಯಿಸಲಾಯಿತು. ಮಾನ್ಯ ಇರುವ ವೀಸಾದಲ್ಲಿ ಐದು ವರ್ಷ ಉಳಿದುಕೊಂಡರೆ ತಾತ್ಕಾಲಿಕವಾಗಿ ಪೌರತ್ವ ಪಡೆಯಬಹುದು.

ಶಾಶ್ವತ ಪೌರತ್ವ ಪಡೆಯಲು, ಅಂತಹ ಜನರು ಪಾಯಿಂಟ್ ಸಿಸ್ಟಮ್ ಮೂಲಕ ಹೋಗಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತಾತ್ಕಾಲಿಕ ಪೌರತ್ವವನ್ನು ಶಾಶ್ವತ ಪೌರತ್ವವಾಗಿ ಪರಿವರ್ತಿಸಲು ಒಂದರಿಂದ ಐದು ವರ್ಷಗಳವರೆಗೆ ತೆಗೆದುಕೊಳ್ಳಬಹುದು.

ಪಾಯಿಂಟ್ ಸಿಸ್ಟಮ್ ಎಂದರೇನು?

ಪಾಯಿಂಟ್ ವ್ಯವಸ್ಥೆಯಲ್ಲಿ, ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ವಿವಿಧ ವಿಷಯಗಳ ಮೇಲೆ ಅಂಕಗಳನ್ನು ನೀಡಲಾಗುತ್ತದೆ. ಯಾವುದೇ ನಿಯಮವನ್ನು ಅನುಸರಿಸಲು ವಿಫಲವಾದರೆ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ನಿರ್ದಿಷ್ಟ ಮಟ್ಟದ ಅಂಕಗಳನ್ನು ಗಳಿಸಿದ ನಂತರವೇ ತಾತ್ಕಾಲಿಕ ಪೌರತ್ವವು ಶಾಶ್ವತವಾಗುತ್ತದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿಯ 2ನೇ ಮಗುವಿನ ಹೆಸರಿನ ಅರ್ಥವೇನು ಗೊತ್ತಾ?

ಹಾಗೆಯೇ ಒಬ್ಬ ವ್ಯಕ್ತಿಯು ಬ್ರಿಟಿಷ್ ಪ್ರಜೆಯನ್ನು ಮದುವೆಯಾದರೆ, ಅವರು ಸುಲಭವಾಗಿ ಪೌರತ್ವ ಪಡೆಯಬಹುದು. ಅದರ ನಿಯಮಗಳು ತುಸು ಬೇರೆ ರೀತಿಯದಿವೆ.

ಅಮೆರಿಕದ ಪೌರತ್ವಕ್ಕೆ ನಿಯಮಗಳೇನಿವೆ?

ಅಮೇರಿಕದ ಪೌರತ್ವ ಪಡೆಯಲು, ಒಬ್ಬರು ಸಾಮಾನ್ಯವಾಗಿ ಕನಿಷ್ಠ ಐದು ವರ್ಷಗಳ ಕಾಲ ಅಮೆರಿಕದ ಕಾನೂನುಬದ್ಧ ಶಾಶ್ವತ ನಿವಾಸಿಯಾಗಿರಬೇಕು. ಇದಲ್ಲದೆ, ಕೆಲವು ವಿಶೇಷ ನಿಬಂಧನೆಗಳು ಸಹ ಇವೆ. ಇದರಿಂದಾಗಿ ಜನರು ಸುಲಭವಾಗಿ ಪೌರತ್ವವನ್ನು ಪಡೆಯಬಹುದು.

ಉದಾಹರಣೆಗೆ, ಒಬ್ಬ ವ್ಯಕ್ತಿಯು ಅಮೆರಿಕನ್ನರನ್ನು ಮದುವೆಯಾದರೆ, ಅಂದರೆ, ದಂಪತಿಯಲ್ಲಿ ಒಬ್ಬರು ಈಗಾಗಲೇ ಅಮೇರಿಕನ್ ಪ್ರಜೆ ಆಗಿದ್ದರೆ, ಇನ್ನೊಬ್ಬರು ಪೌರತ್ವವನ್ನು ಪಡೆಯುವುದು ಸುಲಭವಾಗಿದೆ. ಒಬ್ಬ ವ್ಯಕ್ತಿಯು ಮಿಲಿಟರಿ ಸೇವೆಯಲ್ಲಿದ್ದರೆ, ಅವರು ಪೌರತ್ವದ ನಿಯಮಗಳಲ್ಲಿ ಕೆಲವು ವಿಯಾಯಿತಿಗಳನ್ನು ಸಹ ಪಡೆಯುತ್ತಾನೆ.

ಇದನ್ನೂ ಓದಿ: ಕೆಲಸಗಾರರಿಗೆ ಮಾಲೀಕತ್ವ ಕೊಟ್ಟು ಮೃತರಾದ ಶ್ರೀಮಂತ; ಕಂಪನಿಯ ಎಲ್ಲಾ 700 ಉದ್ಯೋಗಿಗಳೂ ಈಗ ಮಾಲೀಕರು

ನೀವು ಕೆನಡಾದ ನಾಗರಿಕರಾಗಲು ಬಯಸಿದರೆ, ನೀವು ಈ ಷರತ್ತುಗಳನ್ನು ಪೂರೈಸಬೇಕು

ಕೆನಡಾದ ಪೌರತ್ವ ಪಡೆಯಬಯಸುವವರು ಈ ಒಂದು ಷರತ್ತನ್ನು ಮೊದಲು ಪೂರೈಸಬೇಕು. ಕೆನಡಾಗೆ ಹೋಗುವ ವ್ಯಕ್ತಿ ಐದು ವರ್ಷಗಳಲ್ಲಿ ಕನಿಷ್ಠ 1,095 ದಿನಗಳನ್ನು ಅಲ್ಲಿ ಕಳೆಯಬೇಕಾಗುತ್ತದೆ. ಈ 1095 ದಿನಗಳನ್ನು ಸಹ ವಿಶೇಷ ರೀತಿಯಲ್ಲಿ ಎಣಿಸಲಾಗುತ್ತದೆ. ನೀವು ಕೆನಡಾದಲ್ಲಿ ಭೌತಿಕವಾಗಿ ಇರುವ ದಿನಗಳ ಸಂಖ್ಯೆಯನ್ನು ಪೌರತ್ವಕ್ಕಾಗಿ ಎಣಿಸಲಾಗುತ್ತದೆ. ನಂತರ ದೈಹಿಕ ಉಪಸ್ಥಿತಿಯನ್ನು ನೋಂದಾಯಿಸಲು, ಒಬ್ಬರು ಕನಿಷ್ಠ ಎರಡು ವರ್ಷಗಳ ಕಾಲ ಶಾಶ್ವತವಾಗಿ ಇರಬೇಕಾಗುತ್ತದೆ.

ಕೆನಡಾದಲ್ಲಿ ವಾಸಸ್ಥಳದ ಹಕ್ಕು ಪಡೆಯುವ ಐದು ವರ್ಷಗಳಲ್ಲಿ, ಮೂರು ವರ್ಷಗಳವರೆಗೆ ಅಲ್ಲಿ ತೆರಿಗೆಯನ್ನು ಪಾವತಿಸುವುದು ಅಗತ್ಯವಾಗಿರುತ್ತದೆ. ಯಾವುದೇ ಕ್ರಿಮಿನಲ್ ಮೊಕದ್ದಮೆ ಇರಬಾರದು. ಅಲ್ಲಿನ ನಾಗರಿಕ ಕರ್ತವ್ಯಗಳ ಜ್ಞಾನ, ಭೌಗೋಳಿಕತೆ, ಇತಿಹಾಸ ಮತ್ತು ರಾಜಕೀಯ ರಚನೆಯ ತಿಳುವಳಿಕೆಯನ್ನು ಹೊಂದಿರಬೇಕು. ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ವ್ಯಕ್ತಿಯ ವಯಸ್ಸು 18 ರಿಂದ 54 ವರ್ಷಗಳ ನಡುವೆ ಇದ್ದರೆ, ಅವರು ಇಂಗ್ಲಿಷ್ ಅಥವಾ ಫ್ರೆಂಚ್ ಭಾಷೆಯ ಜ್ಞಾನದ ಪುರಾವೆಯನ್ನು ಸಹ ಒದಗಿಸಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ