Koo ಆ್ಯಪ್​ನಿಂದ 3 ಕೋಟಿ ಡಾಲರ್ ಬಂಡವಾಳ ಸಂಗ್ರಹ, ಕಂಪೆನಿ ಮೌಲ್ಯಮಾಪನ ಈಗ 100 ಮಿಲಿಯನ್ ಯುಎಸ್​ಡಿಗೂ ಹೆಚ್ಚು

Koo app: ಭಾರತದ ದೇಶೀ ಮೈಕ್ರೋಬ್ಲಾಗಿಂಗ್ ವೆಬ್​ಸೈಟ್ Koo ಅಪ್ಲಿಕೇಷನ್ 3 ಕೋಟಿ ಯುಎಸ್​ಡಿ ಬಂಡವಾಳ ಸಂಗ್ರಹಿಸಿದೆ. ಈ ಮೂಲಕ ಕಂಪೆನಿಯ ಮೌಲ್ಯಮಾಪನ 10 ಕೋಟಿ ಯುಎಸ್​ಡಿ ದಾಟಿದೆ.

Koo ಆ್ಯಪ್​ನಿಂದ 3 ಕೋಟಿ ಡಾಲರ್ ಬಂಡವಾಳ ಸಂಗ್ರಹ, ಕಂಪೆನಿ ಮೌಲ್ಯಮಾಪನ ಈಗ 100 ಮಿಲಿಯನ್ ಯುಎಸ್​ಡಿಗೂ ಹೆಚ್ಚು
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on:May 26, 2021 | 8:13 PM

ಬೆಂಗಳೂರು: ದೇಶೀಯ ಮೈಕ್ರೋಬ್ಲಾಗಿಂಗ್ ಪ್ಲಾಟ್​ಫಾರ್ಮ್ Koo ಭಾರತದಲ್ಲಿ ಟ್ವಿಟ್ಟರ್​ಗೆ ಪರ್ಯಾಯವಾಗಿ ಇರುವಂಥದ್ದು. ಇದು ಹೊಸ ಹೂಡಿಕೆದಾರರಿಂದ 3 ಕೋಟಿ ಅಮೆರಿಕನ್ ಡಾಲರ್ ಸಂಗ್ರಹಿಸಿದ್ದು, 3 ತಿಂಗಳ ಮುಂಚೆ ಇದ್ದ ಕಂಪೆನಿ ಮೌಲ್ಯಮಾಪನಕ್ಕಿಂತ ಈಗ 5 ಪಟ್ಟು ಹೆಚ್ಚಾಗಿದೆ. ಇದೀಗ Koo ಆ್ಯಪ್ ಒಟ್ಟು ಮೌಲ್ಯಮಾಪನ 10 ಕೋಟಿ ಅಮೆರಿಕನ್ ಡಾಲರ್ ದಾಟಿದೆ. ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ 7270 ಕೋಟಿ ರೂಪಾಯಿಗೂ ಹೆಚ್ಚಾಗಿದೆ. ಭಾರತದ ಹೊಸ ಐ.ಟಿ. ನಿಯಮಾವಳಿಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು, ಅಮೆರಿಕ ಮೂಲದ ಟ್ವಿಟ್ಟರ್ ಸೇರಿದಂತೆ ಇತರ ಸೋಷಿಯಲ್ ಮೀಡಿಯಾಗಳು ಇಲ್ಲಿನ ಹೊಸ ಕಾನೂನಿಗೆ ಬದ್ಧವಾಗಿಯೇ ಎಂಬ ಪ್ರಶ್ನೆ ಎದ್ದಿದೆ. ಇಂಥ ಸನ್ನಿವೇಶದಲ್ಲಿ Kooನಿಂದ ಭಾರತದ ಹೊಸ ಕಾನೂನು ಅನುಸರಿಸಲಾಗಿದೆ.

ನ್ಯೂಯಾರ್ಕ್ ಮೂಲದ ಸಂಸ್ಥೆ ಟೈಗರ್ ಗ್ಲೋಬಲ್​ನಿಂದ ಹೊಸದಾಗಿ Koo ಆ್ಯಪ್​ನಲ್ಲಿ ಪ್ರಮುಖವಾಗಿ ಹೂಡಿಕೆ ಮಾಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಎರಡು ಹೂಡಿಕೆದಾರ ಸಂಸ್ಥೆಗಳಿವೆ. ಐಐಎಫ್​ಎಲ್ ವೆಂಚರ್ ಕ್ಯಾಪಿಟಲ್ ಫಂಡ್ ಮತ್ತು ದಕ್ಷಿಣ ಕೊರಿಯಾದ ಮಿರೆ ಅಸೆಟ್ ಮ್ಯಾನೇಜ್​ಮೆಂಟ್ ಎಂದು Koo ಸಹಸಂಸ್ಥಾಪಕ​ ಅಪ್ರಮೇಯ ರಾಧಾಕೃಷ್ಣ ಈ ಬಗ್ಗೆ ಎಕನಾಮಿಕ್​ ಟೈಮ್ಸ್ ಜತೆ ಮಾತನಾಡಿದ್ದಾರೆ. 3one4 ಕ್ಯಾಪಿಟಲ್, ಆಕ್ಸೆಲ್ ಮತ್ತು ಬ್ಲ್ಯೂಮ್ ವೆಂಚರ್ಸ್ ಈಗಾಗಲೇ Koonಲ್ಲಿ ಹೂಡಿಕೆ ಮಾಡಿದ್ದು, ಹೊಸ ಸುತ್ತಿನ ಹೂಡಿಕೆಯಲ್ಲಿ ಭಾಗವಹಿಸಲಿವೆ.

Koo ಆ್ಯಪ್ ಇಂಗ್ಲಿಷ್ ಮತ್ತು ಇತರ ಪ್ರಾದೇಶಿಕ ಭಾಷೆಯಲ್ಲಿ ಲಭ್ಯವಾಗಲಿದೆ. ಇದರ ಜತೆಗೆ ಸಲಹಾ ಸಮಿತಿಯನ್ನು ಸಹ ಸ್ಥಾಪಿಸಿದೆ. ಹೇಗೆ ಫೇಸ್​ಬುಕ್ ಮೇಲುಸ್ತುವಾರಿ ಮಂಡಳಿ ಇದೆಯೋ ಅದೇ ರೀತಿ ಇದು ಸಹ ಇರಲಿದೆ. ಆ ಮಂಡಳಿಯು ಈಚೆಗಷ್ಟೇ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ನಿರ್ಬಂಧವನ್ನು ಎತ್ತಿಹಿಡಿದಿತ್ತು.

“ಹಣಕಾಸಿನ ಸಂಪನ್ಮೂಲದ ವಿಚಾರದಲ್ಲಿ ಈಗಿನ ಹೂಡಿಕೆಯಿಂ ದೊಡ್ಡ ಉತ್ತೇಜನ ಸಿಕ್ಕುತ್ತದೆ. ನಾವು ಪ್ರತಿಭಾವಂತರನ್ನು ನೇಮಿಸಿಕೊಳ್ಳಬಹುದು, ತಂತ್ರಜ್ಞಾನದಲ್ಲಿ ಹೆಚ್ಚು ಹೂಡಿಕೆ ಮಾಡಬಹುದು, ನಮ್ಮ ಉತ್ಪನ್ನಗಳ ಮೇಲೆ ಹೆಚ್ಚು ಕೆಲಸ ಮಾಡಬಹುದು ಮತ್ತು ಸಿಸ್ಟಮ್ ಹ್ಯಾಕ್ ಆಗಿಲ್ಲ ಎಂಬುದನ್ನು ಖಾತ್ರಿ ಪಡಿಸಬಹುದು. ನಾವಿದನ್ನು ಮುಂದಿನ ನಮ್ಮ ಬಳಕೆದಾರರಿಗಾಗಿ ಮಾಡುತ್ತಿದ್ದೇವೆ,” ಎಂದು ರಾಧಾಕೃಷ್ಣ ಹೇಳಿದ್ದಾರೆ. ಮಾತನಾಡುವುದನ್ನು ಟೈಪ್ ಮಾಡುವ ಫೀಚರ್ ಈಚೆಗೆ Kooನಿಂದ ಬಳಕೆದಾರರಿಗೆ ಪರಿಚಯಿಸಲಾಗಿದೆ. ಸದ್ಯಕ್ಕೆ ಹಿಂದಿ ಮತ್ತು ಇಂಗ್ಲಿಷ್ ಅತಿ ಹೆಚ್ಚು ಬಳಸುತ್ತಿರುವ ಎರಡು ಭಾಷೆ. ಆನಂತರದ ಸ್ಥಾನದಲ್ಲಿ ತಮಿಳು, ಕನ್ನಡ ಮತ್ತು ಮರಾಠಿ ಇದೆ. Koo ಆ್ಯಪ್ 60 ಲಕ್ಷ ಡೌನ್​ಲೋಡ್ ಸಂಖ್ಯೆ ಮುಟ್ಟಿದೆ. ಕಳೆದ ಫೆಬ್ರವರಿಯಲ್ಲಿ 30ರಿಂದ 40 ಲಕ್ಷ ಇತ್ತು.

ಇದನ್ನೂ ಓದಿ: Kooನಿಂದ ಸೋಷಿಯಲ್ ಮೀಡಿಯಾ ಮಧ್ಯವರ್ತಿ ನಿಯಮಾವಳಿಗಳ ಮಾರ್ಗದರ್ಶಿ ಸೂತ್ರ ಸಂಪೂರ್ಣ 

(Home grown microblogging site Koo app rises 5 times in 3 months and now crossed 100 million USD market valuation)

Published On - 8:10 pm, Wed, 26 May 21

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ