Kooನಿಂದ ಸೋಷಿಯಲ್ ಮೀಡಿಯಾ ಮಧ್ಯವರ್ತಿ ನಿಯಮಾವಳಿಗಳ ಮಾರ್ಗದರ್ಶಿ ಸೂತ್ರ ಸಂಪೂರ್ಣ

ಮಹತ್ವದ ಸೋಷಿಯಲ್ ಮೀಡಿಯಾ ಮಧ್ಯವರ್ತಿ ಸಂಸ್ಥೆಗಳಿಗಾಗಿ ಸರ್ಕಾರ ರೂಪಿಸಿರುವ ನಿಯಮಾವಳಿಗಳೊಂದಿಗೆ ಪೂರ್ತಿಯಾಗಿ Koo ಸಿದ್ಧವಾಗಿದೆ. ಇದು ಭಾರತ ಮೂಲದ ಮೊದಲ ಸೋಷಿಯಲ್ ಮೀಡಿಯಾ ಆಗಿದೆ.

Kooನಿಂದ ಸೋಷಿಯಲ್ ಮೀಡಿಯಾ ಮಧ್ಯವರ್ತಿ ನಿಯಮಾವಳಿಗಳ ಮಾರ್ಗದರ್ಶಿ ಸೂತ್ರ ಸಂಪೂರ್ಣ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: May 22, 2021 | 9:28 PM

ನವದೆಹಲಿ: ಮೇ 25ಕ್ಕೆ ನಿಗದಿ ಆಗಿರುವ ದಿನಾಂಕಕ್ಕೆ ಪೂರ್ವಭಾವಿ ಆಗಿಯೇ ದೇಶೀಯ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್ ಆದ Kooನಿಂದ ಮಾಹಿತಿ ತಂತ್ರಜ್ಞಾನ (ಇಂಟರ್ ಮೀಡಿಯರಿ ಗೈಡ್​ಲೈನ್ಸ್ ಅಂಡ್ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಾಮವಳಿ, 2021ರ ಅಗತ್ಯಗಳನ್ನೆಲ್ಲ ಪೂರೈಸಲಾಗಿದೆ ಎಂದು ಕಂಪೆನಿಯು ಶನಿವಾರ ತಿಳಿಸಿದೆ. ಫೆಬ್ರವರಿ 25ರಂದು ಎಲೆಕ್ಟ್ರಾನಿಕ್ಸ್ ಮತ್ತು ಇನ್​ಫರ್ಮೇಷನ್ ಟೆಕ್ನಾಲಜಿ (MeIT)ಯಿಂದ ನಿಯಮಾವಳಿಗಳನ್ನು ಬಿಡುಗಡೆ ಮಾಡಲಾಗಿತ್ತು. ಅದರ ಪ್ರಕಾರವಾಗಿ, ಮಹತ್ವವಾದ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಚೀಫ್ ಕಂಪ್ಲೆಯನ್ಸ್ ಆಫೀಸರ್​, ಕಾನೂನು ಜಾರಿ ಮಾಡುವ ಸಂಸ್ಥೆಗಳ ಜತೆ ವ್ಯವಹರಿಸುವ ನೋಡಲ್ ಸಂಪರ್ಕ ವ್ಯಕ್ತಿ ಮತ್ತು ಸ್ಥಳೀಯ ಕುಂದುಕೊರತೆ ನಿವಾರಣೆ ಅಧಿಕಾರಿಗಳನ್ನು ನೇಮಕ ಮಾಡಲೇಬೇಕು.

ಈ ಮೂವರೂ ಭಾರತೀಯರಾಗಿರಬೇಕು. ಆದರೆ ಮಹತ್ತರ ಸೋಷಿಯಲ್ ಮೀಡಿಯಾ ಮಧ್ಯವರ್ತಿ ಆಗಬೇಕು ಅಂದರೆ ಆ ಪ್ಲಾಟ್​ಫಾರ್ಮ್​ಗೆ ಕನಿಷ್ಠ ಎಷ್ಟು ಬಳಕೆದಾರರು ಇರಬೇಕು ಎಂಬ ಬಗ್ಗೆ ಸಚಿವಾಲಯದಿಂದ ಯಾವುದೇ ನಿರ್ದಿಷ್ಟ ಮಾಹಿತಿ ಇಲ್ಲ. Koo ಹತ್ತಿರಹತ್ತಿರ 60 ಲಕ್ಷ ಡೌನ್​ಲೋಡ್ ಆಗಿದೆ. ಇದು ಮಹತ್ವದ ಸೋಷಿಯಲ್ ಮೀಡಿಯಾ ಮಧ್ಯವರ್ತಿ ಕೆಟಗರಿ ಅಡಿಯಲ್ಲೇ ಬರುತ್ತದೆ. ಮತ್ತು ಮಾರ್ಗದರ್ಶಿ ಸೂತ್ರದಲ್ಲಿ ಹೇಳಲಾದ ಎಲ್ಲ ನಿಯಮಾವಳಿಗಳಿಗೆ ಬದ್ಧವಾಗಿದೆ. ಕಂಪೆನಿ ಹೇಳಿರುವಂತೆ, ಖಾಸಗಿತನದ ನೀತಿ, ಸಮುದಾಯದ ಮಾರ್ಗದರ್ಶಿ ಸೂತ್ರ ಮತ್ತು ಬಳಕೆಯ ನಿಯಮಾವಳಿಗಳು ಇವೆಲ್ಲ ಸೇರಿ ಸೋಷಿಯಲ್ ಮೀಡಿಯಾದ ಮಹತ್ವದ ಮಧ್ಯವರ್ತಿ ಮಾಡಿದೆ. ಇದರ ಜತೆಗೆ Kooನಿಂದ ಕುಂದುಕೊರತೆ ನಿವಾರಣೆಗಾಗಿ ಭಾರತೀಯ ನಿವಾಸಿಗಳನ್ನೇ ಚೀಫ್ ಕಂಪ್ಲೈಯನ್ಸ್ ಅಧಿಕಾರಿ, ನೋಡಲ್ ಅಧಿಕಾರಿ ಮತ್ತು ಕುಂದುಕೊರತೆ ನಿವಾರಣೆ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ಹೊಸದಾಗಿ ಆಯ್ಕೆಯಾದವರ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

Koo ಸಿಇಒ ಮತ್ತು ಸಹ ಸಂಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ ಮಾತನಾಡಿ, ಒಂದು ಕಂಪೆನಿಯಾಗಿಮಿದು ಭಾರತದ ಮೊದಲ ಪ್ರಾಡಕ್ಟ್. ಬಳಕೆದಾರರ ಸುರಕ್ಷತೆ ಮತ್ತು ಅನುಕೂಲ ನಮಗೆ ಅತ್ಯಂತ ಮುಖ್ಯ. ಅದಕ್ಕಾಗಿ ಬಹಳ ಕಾಳಜಿ ಮಾಡ್ತೀವಿ. ಭಾರತದಲ್ಲಿ ಭಾರತೀಯ ಸೋಷಿಯಲ್ ಮೀಡಿಯಾದ ಅಗತ್ಯದ ಬಗ್ಗೆ ಭಾರತ ಸರ್ಕಾರ ಬಿಡುಗಡೆ ಮಾಡಿರುವ ಹೊಸದಾದ ಸೋಷಿಯಲ್ ಮೀಡಿಯಾ ಮಾರ್ಗದರ್ಶಿ ಸೂತ್ರಗಳ ಮೂಲಕ ಗೊತ್ತಾಗುತ್ತದೆ. Koo ಆರಂಭವಾಗಿದ್ದು 2020ರ ಮಾರ್ಚ್​ನಲ್ಲಿ. ಇದು ಮೈಕ್ರೋ ಬ್ಲಾಗಿಂಗ್ ಪ್ಲಾಟ್​ಫಾರ್ಮ್. ಇದು ಹಲವು ಸ್ಥಳೀಯ ಭಾಷೆಗಳಲ್ಲೂ ಲಭ್ಯ ಇದೆ.

ಸರ್ಕಾರದ ಮಾರ್ಗದರ್ಶಿ ಸೂತ್ರದಲ್ಲಿ ಹೇಳಿರುವ ಪ್ರಕಾರ, ಕೋರ್ಟ್ ಆದೇಶವೋ ಅಥವಾ ಸರ್ಕಾರದ ಸಂಬಂಧಪಟ್ಟ ಸಂಸ್ಥೆಯೋ ತಿಳಿಸಿದರೆ ನಿರ್ದಿಷ್ಟ ಅವಧಿಯಲ್ಲಿ ಕಾನೂನಿಗೆ ವಿರುದ್ಧವಾದ ಮಾಹಿತಿಯನ್ನು ತೆಗೆದುಹಾಕುವಷ್ಟು ದೊಡ್ಡ ಸೋಷಿಯಲ್ ಮೀಡಿಯಾ ಕಂಪೆನಿ ಬೇಕು. ಇದರ ಜತೆ ಮಹತ್ವದ ಸೋಷಿಯಲ್ ಮೀಡಿಯಾ ಮಧ್ಯವರ್ತಿಗಳು ಕಿಡಿಗೇಡಿ ಮಾಹಿತಿಗಳ ಮೂಲ ಸೃಷ್ಟಿಕರ್ತರನ್ನು ಗುರುತಿಸುವಂತಿರಬೇಕು ಎಂದಿದೆ. ಇದರಿಂದಾಗಿ ಸರ್ಕಾರದ ಕಣ್ಗಾವಲು ಹೆಚ್ಚಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ.

ಇದನ್ನೂ ಓದಿ: WhatsApp privacy policy: ವಾಟ್ಸಾಪ್ ಖಾಸಗಿತನ ನೀತಿ ಯುರೋಪ್​ನಲ್ಲೊಂದು ಭಾರತದಲ್ಲೊಂದು ಏಕೆ ಎಂದ ಸರ್ಕಾರ

ಇದನ್ನೂ ಓದಿ: Clubhouse app: ಕ್ಲಬ್ ಹೌಸ್ ಆ್ಯಪ್ ಈಗ ಭಾರತದಲ್ಲೂ ಲಭ್ಯ; ಏನಿದರ ವೈಶಿಷ್ಟ್ಯ, ಯಾವುದಕ್ಕೆ ಪ್ರಯೋಜನ ಎಂಬ ಮಾಹಿತಿ ಇಲ್ಲಿದೆ

(India’s first home grown micro blogging site Koo ready with complies of intermediary guidelines for social media platforms)

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ