Bank Customers Alert: ಬ್ಯಾಂಕ್ ಗ್ರಾಹಕರೇ ಜಾಗ್ರತೆ! ಈ ಬ್ಯಾಂಕ್​ನಲ್ಲಿ ವಾರ್ಷಿಕ ಶುಲ್ಕಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳ

|

Updated on: Apr 28, 2023 | 4:03 PM

ಕಾರ್ಡ್ ಕಳುವಾದರೆ ಅಥವಾ ಕಳೆದು ಹೋದರೆ ಡೆಬಿಟ್ ಕಾರ್ಡ್ ಶುಲ್ಕ 200 ರೂ. ಹೆಚ್ಚಳವಾಗಲಿದೆ. ದೇಶೀಯ ಎಟಿಎಂ ಯಂತ್ರದಲ್ಲಿ ಕಡಿಮೆ ಬ್ಯಾಲೆನ್ಸ್ ಇರುವುದರಿಂದ ವಹಿವಾಟು ತಿರಸ್ಕರಿಸಿದರೆ 25 ರೂ. ಶುಲ್ಕ ಹಾಕಲಾಗುವುದು.

Bank Customers Alert: ಬ್ಯಾಂಕ್ ಗ್ರಾಹಕರೇ ಜಾಗ್ರತೆ! ಈ ಬ್ಯಾಂಕ್​ನಲ್ಲಿ ವಾರ್ಷಿಕ ಶುಲ್ಕಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳ
ಈ ಬ್ಯಾಂಕ್​ನಲ್ಲಿ ವಾರ್ಷಿಕ ಶುಲ್ಕಗಳು ಭಾರೀ ಹೆಚ್ಚಳ
Follow us on

ದೇಶದ ಖಾಸಗಿ ವಲಯದ ಒಂದು ಬ್ಯಾಂಕ್ ತನ್ ಗ್ರಾಹಕರಿಗೆ ಒದಗಿಸುವ ಡೆಬಿಟ್ ಕಾರ್ಡ್ (debit card) ಸೌಲಭ್ಯಕ್ಕೆ ವಾರ್ಷಿಕ ಶುಲ್ಕವನ್ನು ಹೆಚ್ಚಿಸಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್‌ನ (Kotak Mahindra Bank) ಈ ಹೆಚ್ಚಳವು 22 ಮೇ 2023 ರಿಂದ ಜಾರಿಗೆ ಬರಲಿದೆ. ಈ ನಿಟ್ಟಿನಲ್ಲಿ ತನ್ನ ಗ್ರಾಹಕರಿಗೆ (Bank Customer) ಮೇಲ್ ಮಾಡಿ ತಿಳಿಸಿದೆ. ಹೆಚ್ಚಿಸಿದ ಶುಲ್ಕಗಳು ಮೇ 22 ರಿಂದ ಜಾರಿಗೆ ಬರಲಿದೆ ಎಂದು ಮಾಹಿತಿ ನೀಡಿದೆ. ಡೆಬಿಟ್ ಕಾರ್ಡ್ ಶುಲ್ಕವನ್ನು ಶೇಕಡಾ 30 ರಷ್ಟು ಹೆಚ್ಚಿಸಲಾಗುವುದು ಎಂದು ಗ್ರಾಹಕರಿಗೆ ತಿಳಿಸಲಾಗಿದೆ.

ವಾರ್ಷಿಕ ಡೆಬಿಟ್ ಕಾರ್ಡ್ ಶುಲ್ಕ ರೂ. 60ರಷ್ಟು ಏರಿಕೆಯಾಗಿದೆ. ಅಷ್ಟೇ ಅಲ್ಲ, ಬ್ಯಾಂಕ್ ನೀಡಿರುವ ಮಾಹಿತಿಯ ಪ್ರಕಾರ ಈ ಶುಲ್ಕವನ್ನು ಪ್ರಸ್ತುತ GST ಜೊತೆಗೆ ವರ್ಷಕ್ಕೆ ರೂ. 199 ವಿಧಿಸಲಾಗುತ್ತಿದೆ. ಈ ಶುಲ್ಕವು ಎಲ್ಲಾ ರೀತಿಯ ಖಾತೆಗಳಿಗೆ ಅನ್ವಯಿಸುತ್ತದೆ. ಅಲ್ಲದೆ, ಈ ಬ್ಯಾಂಕ್ ಮಹೀಂದ್ರಾ ಬ್ಯಾಂಕ್ ಉಳಿತಾಯ ಮತ್ತು ಸಂಬಳ ಖಾತೆಗಳ ಮೇಲೆ ವಿಧಿಸುವ ಶುಲ್ಕಗಳು (annual charges) ಈ ಕೆಳಗಿನಂತೆ ಹೆಚ್ಚಳವಾಗಿವೆ. ಇವೂ ಜೂನ್ 1, 2022 ರಿಂದ ಅನ್ವಯವಾಗುತ್ತವೆ.

ಕನಿಷ್ಠ ಬ್ಯಾಲೆನ್ಸ್‌ಗೆ ಶುಲ್ಕಗಳು

ಕೋಟಕ್ ಮಹೀಂದ್ರಾ ಉಳಿತಾಯ ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದರೆ ಶುಲ್ಕ ವಿಧಿಸಲಾಗುತ್ತದೆ. ಶೇಕಡಾ 6 ಅಥವಾ ಬ್ಯಾಂಕ್ ನ ವಿವಿಧ ಉತ್ಪನ್ನಗಳಿಗೆ ತಕ್ಕಂತೆ ಅದರ ಮೇಲೆ ರೂ. 500/ 600 ವರೆಗೆ ಶುಲ್ಕ ವಿಧಿಸಲಿದೆ. ಚೆಕ್ ವಿತರಣೆ ಮತ್ತು ಹಣಕಾಸಿನೇತರ ಕಾರಣಗಳಿಗಾಗಿ ವಾಪಸಾಗುವ ರಿಟರ್ನ್‌ಗಳ ಪ್ರತಿ ವಹಿವಾಟಿಗೆ ರೂ. 50 ಶುಲ್ಕವನ್ನು ವಿಧಿಸಲಾಗುತ್ತದೆ. ನಿರ್ದಿಷ್ಟ ಸ್ಟ್ಯಾಂಡಿಂಗ್ ಆರ್ಡರ್​​​ ವಿಫಲವಾದರೆ 200 ರೂ. ಶುಲ್ಕ ಹೊರಿಸಲಾಗುತ್ತದೆ. ಚೆಕ್ ಠೇವಣಿ ಮತ್ತು ರಿಟರ್ನ್ ವಹಿವಾಟಿನ ಮೇಲೆ ರೂ. 200 ಶುಲ್ಕವೂ ಇದೆ. ಜೊತೆಗೆ ಚೆಕ್​ ಬುಕ್​ ಗಾಗಿ ರೂ. 25 ರ ಚೆಕ್ ಶುಲ್ಕವನ್ನು ಸಹ ವಿಧಿಸಲಾಗುತ್ತದೆ.

Also Read:

Bank Holidays in April 2023: ಈ ತಿಂಗಳೇ ನಿಮ್ಮ ಬ್ಯಾಂಕ್ ವ್ಯವಹಾರ ಮುಗಿಸಿಕೊಳ್ಳಿ, ಏಪ್ರಿಲ್​​ನಲ್ಲಿ ಸಾಲು ಸಾಲು ರಜೆ

ಕಾರ್ಡ್ ಕಳುವಾದರೆ ಅಥವಾ ಕಳೆದು ಹೋದರೆ ಡೆಬಿಟ್ ಕಾರ್ಡ್ ಶುಲ್ಕ 200 ರೂ. ಹೆಚ್ಚಳವಾಗಲಿದೆ. ದೇಶೀಯ ಎಟಿಎಂ ಯಂತ್ರದಲ್ಲಿ ಕಡಿಮೆ ಬ್ಯಾಲೆನ್ಸ್ ಇರುವುದರಿಂದ ವಹಿವಾಟು ತಿರಸ್ಕರಿಸಿದರೆ 25 ರೂ. ಶುಲ್ಕ ಹಾಕಲಾಗುವುದು. ಇನ್ನು ಕಾರ್ಡ್‌ ನಗದು ವಹಿವಾಟಿನಲ್ಲಿ ಒಂದು ತಿಂಗಳಲ್ಲಿ ಒಂದು ಹಿಂಪಡೆಯುವಿಕೆ ಉಚಿತವಾಗಿದೆ. ಉಳಿದವುಗಳಿಗೆ ರೂ. 10 ಶುಲ್ಕವನ್ನು ವಿಧಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Fri, 28 April 23