AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays in April 2023: ಈ ತಿಂಗಳೇ ನಿಮ್ಮ ಬ್ಯಾಂಕ್ ವ್ಯವಹಾರ ಮುಗಿಸಿಕೊಳ್ಳಿ, ಏಪ್ರಿಲ್​​ನಲ್ಲಿ ಸಾಲು ಸಾಲು ರಜೆ

ಏಪ್ರಿಲ್​ನಲ್ಲಿ ಸಾಲು ಸಾಲು ಬ್ಯಾಂಕ್ ರಜೆಗಳು ಇದೆ. ಈ ತಿಂಗಳೇ ನಿಮ್ಮ ಎಲ್ಲ ಬ್ಯಾಂಕ್ ವ್ಯವಹಾರಗಳನ್ನು ಮುಗಿಸಿಕೊಳ್ಳುವುದು ಒಳ್ಳೆಯದು, ಹೌದು ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾ ಪಟ್ಟಿಯ ಪ್ರಕಾರ, ಹದಿನೈದು ದಿನಗಳ ಕಾಲ ಬ್ಯಾಂಕ್ ರಜಾದಿನಗಳು ಇರುತ್ತವೆ .

Bank Holidays in April 2023: ಈ ತಿಂಗಳೇ ನಿಮ್ಮ ಬ್ಯಾಂಕ್ ವ್ಯವಹಾರ ಮುಗಿಸಿಕೊಳ್ಳಿ, ಏಪ್ರಿಲ್​​ನಲ್ಲಿ ಸಾಲು ಸಾಲು ರಜೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Mar 28, 2023 | 3:38 PM

Share

ಮುಖ್ಯಾಂಶಗಳು

  • ಏಪ್ರಿಲ್‌ನಲ್ಲಿ ಬ್ಯಾಂಕ್​ಗೆ ಸಾಲು ಸಾಲು ರಜೆಗಳು (Bank Holidays) ಇದೆ. ಗ್ರಾಹಕರು ಈ ತಿಂಗಳೇ ತಮ್ಮ ಬ್ಯಾಂಕ್ ವ್ಯವಹಾರಗಳನ್ನು ಮುಗಿಸುವುದು ಒಳ್ಳೆಯದು.
  • ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾ ಪಟ್ಟಿಯ ಪ್ರಕಾರ, ಹದಿನೈದು ದಿನಗಳ ಕಾಲ ಬ್ಯಾಂಕ್ ರಜಾದಿನಗಳು ಇರುತ್ತವೆ .
  • ಹಬ್ಬಗಳು, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರದಂದು ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.

ಏಪ್ರಿಲ್‌ನಲ್ಲಿ ಬ್ಯಾಂಕ್​ಗೆ ಸಾಲು ಸಾಲು ರಜೆಗಳು (Bank Holidays) ಇದೆ. ಗ್ರಾಹಕರು ಈ ತಿಂಗಳೇ ತಮ್ಮ ಬ್ಯಾಂಕ್ ವ್ಯವಹಾರಗಳನ್ನು ಮುಗಿಸುವುದು ಒಳ್ಳೆಯದು. ಏಪ್ರಿಲ್ ತಿಂಗಳಲ್ಲಿ ಅರ್ಧ ತಿಂಗಳು ಗ್ರಾಹಕರು ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಮುಂಬರುವ ತಿಂಗಳಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾ ಪಟ್ಟಿಯ ಪ್ರಕಾರ, ಹದಿನೈದು ದಿನಗಳ ಕಾಲ ಬ್ಯಾಂಕ್ ರಜಾದಿನಗಳು ಇರುತ್ತವೆ . ಹಬ್ಬಗಳು, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರದಂದು ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.

RBI ನೀಡಿರುವ ರಜಾದಿನಗಳ ಪಟ್ಟಿಯಲ್ಲಿ ‘ರಾಷ್ಟ್ರೀಯ’ ಮತ್ತು ‘ಪ್ರಾದೇಶಿಕ’ ಎಂದು ವರ್ಗೀಕರಿಸುತ್ತದೆ. ಈ ವರ್ಗೀಕರಣದಂತೆ ಮೊದಲ ವರ್ಗೀಕರಣ ರಾಷ್ಟ್ರೀಯ ಪಟ್ಟಿಯಂತೆ ದೇಶಾದ್ಯಂತ ಬ್ಯಾಂಕುಗಳನ್ನು ಮುಚ್ಚಲಾಗುವುದು, ಮತ್ತೊಂದು ಪ್ರಾದೇಶಿಕ ಪಟ್ಟಿ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಶಾಖೆಗಳು ಕಾರ್ಯನಿರ್ವಹಿಸುವುದಿಲ್ಲ. ಆದರೆ ಆನ್‌ಲೈನ್ ಹಣಕಾಸು ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.

ಇದನ್ನೂ ಓದಿ:Central Bank of India Recruitment 2023: 5000 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಅಹ್ವಾನ

ಏಪ್ರಿಲ್‌ನಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ:

ಏಪ್ರಿಲ್ 1 (ಶನಿ): ಖಾತೆಗಳನ್ನು ಮುಚ್ಚುವುದು

ಏಪ್ರಿಲ್ 2: ಭಾನುವಾರ

ಏಪ್ರಿಲ್ 4 (ಮಂಗಳವಾರ): ಮಹಾವೀರ ಜಯಂತಿ (ಅಹಮದಾಬಾದ್, ಐಜ್ವಾಲ್, ಬೇಲಾಪುರ್, ಬೆಂಗಳೂರು, ಭೋಪಾಲ್, ಚಂಡೀಗಢ, ಚೆನ್ನೈ, ಜೈಪುರ, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ರಾಯ್ಪುರ್ ಮತ್ತು ರಾಂಚಿ)

ಏಪ್ರಿಲ್ 5 (ಬುಧ): ಬಾಬು ಜಗಜೀವನ್ ರಾಮ್ ಅವರ ಜನ್ಮದಿನ (ಹೈದರಾಬಾದ್)

ಏಪ್ರಿಲ್ 7 (ಶುಕ್ರ): ಶುಭ ಶುಕ್ರವಾರ (ಅಗರ್ತಲಾ, ಅಹಮದಾಬಾದ್, ಗುವಾಹಟಿ, ಜೈಪುರ, ಜಮ್ಮು, ಶಿಮ್ಲಾ ಮತ್ತು ಶ್ರೀನಗರ ಹೊರತುಪಡಿಸಿ)

ಏಪ್ರಿಲ್ 8: ಎರಡನೇ ಶನಿವಾರ

ಏಪ್ರಿಲ್ 9: ಭಾನುವಾರ

ಎಪ್ರಿಲ್ 14 (ಶುಕ್ರ): ಅಂಬೇಡ್ಕರ್ ಜಯಂತಿ/ಬೋಹಾಗ್ ಬಿಹು/ಚೀರೋಬಾ/ವೈಶಾಖಿ/ಬೈಸಾಖಿ/ತಮಿಳು ಹೊಸ ವರ್ಷ/ಮಹಾ ಬಿಸುಭಾ ಸಂಕ್ರಾಂತಿ/ಬಿಜು/ಬುಯಿಸು (ಐಜ್ವಾಲ್, ಭೋಪಾಲ್, ನವದೆಹಲಿ, ರಾಯ್‌ಪುರ, ಶಿಲ್ಲಾಂಗ್ ಮತ್ತು ಶಿಮ್ಲಾ ಹೊರತುಪಡಿಸಿ ಎಲ್ಲೆಡೆ)

ಎಪ್ರಿಲ್ 15 (ಶನಿ): ವಿಷು/ಬೋಹಾಗ್ ಬಿಹು/ಹಿಮಾಚಲ ದಿನ/ ಬಂಗಾಳಿ ಹೊಸ ವರ್ಷ (ಅಗರ್ತಲಾ, ಗುವಾಹಟಿ, ಕೊಚ್ಚಿ, ಕೋಲ್ಕತ್ತಾ, ಶಿಮ್ಲಾ ಮತ್ತು ತಿರುವನಂತಪುರಂ)

ಎಪ್ರಿಲ್ 16: ಭಾನುವಾರ

ಎಪ್ರಿಲ್ 18 (ಮಂಗಳವಾರ): ಶಬ್-ಐ-ಖಾದರ್ (ಜಮ್ಮು, ಶ್ರೀನಗರ)

ಎಪ್ರಿಲ್ 21 (ಶುಕ್ರ): ಈದ್-ಉಲ್-ಫಿತರ್/ಗರಿಯಾ ಪೂಜೆ/ಜುಮಾತ್-ಉಲ್-ವಿದಾ (ಅಗರ್ತಲಾ, ಜಮ್ಮು, ಕೊಚ್ಚಿ, ಶ್ರೀನಗರ ಮತ್ತು ತಿರುವನಂತಪುರಂ)

ಎಪ್ರಿಲ್ 22 (ಶನಿ): ರಂಜಾನ್ ಈದ್ (ಅಗರ್ತಲಾ, ಅಹಮದಾಬಾದ್, ಐಜ್ವಾಲ್, ಬೆಂಗಳೂರು, ಭುವನೇಶ್ವರ, ಚಂಡೀಗಢ, ಗ್ಯಾಂಗ್ಟಾಕ್, ಕೊಚ್ಚಿ, ಶಿಮ್ಲಾ ಮತ್ತು ತಿರುವನಂತಪುರಂ ಹೊರತುಪಡಿಸಿ ಎಲ್ಲೆಡೆ)

ಏಪ್ರಿಲ್ 23: ಭಾನುವಾರ

ಏಪ್ರಿಲ್ 30: ಭಾನುವಾರ

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:38 pm, Tue, 28 March 23

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ