EPF Interest Rate: ಉದ್ಯೋಗಿಗಳ ಭವಿಷ್ಯ ನಿಧಿಗೆ ಶೇ. 8.15 ಬಡ್ಡಿ ದರ ನಿಗದಿ

ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇಪಿಎಫ್‌ಒನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ 2022-23ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.8.15 ನಿಗದಿಪಡಿಸಿದೆ.

EPF Interest Rate: ಉದ್ಯೋಗಿಗಳ ಭವಿಷ್ಯ ನಿಧಿಗೆ ಶೇ. 8.15 ಬಡ್ಡಿ ದರ ನಿಗದಿ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Mar 28, 2023 | 11:28 AM

ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ (EPFO) ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇಪಿಎಫ್‌ಒನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ 2022-23ರ ಉದ್ಯೋಗಿಗಳ ಭವಿಷ್ಯ ನಿಧಿ (EPFO) ಠೇವಣಿಗಳ ಮೇಲಿನ ಬಡ್ಡಿ ದರವನ್ನು (Interest Rate) ಶೇ.8.15 ನಿಗದಿಪಡಿಸಿದೆ. ಮಾರ್ಚ್ 2022ರಲ್ಲಿ, EPFO ​​ತನ್ನ ಸುಮಾರು ಐದು ಕೋಟಿ ಚಂದಾದಾರರಿಗೆ 2020-21ರಲ್ಲಿ ಶೇಕಡಾ 8.5ರಿಂದ 2021-22ರ EPF ಮೇಲಿನ ಬಡ್ಡಿಯನ್ನು ನಾಲ್ಕು ದಶಕಗಳ ನಂತರ ಶೇ.8.1ಕ್ಕೆ ಇಳಿಸಿತ್ತು. ಇದು ಅತ್ಯಂತ ಕಡಿಮೆ ಬಡ್ಡಿ ದರ ಎಂದು ಹೇಳಲಾಗಿತ್ತು. 1977-78ರ ನಂತರ ಇದೆ ಮೊದಲ ಬಾರಿ ಇಪಿಎಫ್ ಬಡ್ಡಿ ದರ ಶೇ 8ಕ್ಕೆ ಕಡಿಮೆಯಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಅಪೆಕ್ಸ್ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (CBT) ಮಂಗಳವಾರ ನಡೆದ ಸಭೆಯಲ್ಲಿ 2022-23 ಕ್ಕೆ ಇಪಿಎಫ್‌ನಲ್ಲಿ ಶೇಕಡಾ 8.15 ಬಡ್ಡಿದರವನ್ನು ಒದಗಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿದೆ.

2020-21ರ EPF ಠೇವಣಿಗಳ ಮೇಲಿನ 8.5 ಶೇಕಡಾ ಬಡ್ಡಿ ದರವನ್ನು CBT ಮಾರ್ಚ್ 2021ರಲ್ಲಿ ನಿರ್ಧರಿಸಿತ್ತು. CBTಯ ನಿರ್ಧಾರದ ನಂತರ, 2022-23ರ EPF ಠೇವಣಿಗಳ ಮೇಲಿನ ಬಡ್ಡಿ ದರವನ್ನು ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಸರ್ಕಾರದ ಅನುಮೋದನೆಯ ನಂತರ, 2022-23ರ EPF ಮೇಲಿನ ಬಡ್ಡಿ ದರವನ್ನು EPFO​​ನ ಐದು ಕೋಟಿಗೂ ಹೆಚ್ಚು ಚಂದಾದಾರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

ಇದನ್ನೂ ಓದಿ: UPSC EPFO Recruitment 2023: UPSC EPFO ​​ನೇಮಕಾತಿ ನೋಂದಣಿಗೆ ಇಂದೇ ಕೊನೆ ದಿನ; 577 ಹುದ್ದೆಗಳಿಗೆ ಅರ್ಜಿ ಆಹ್ವಾನ

ಹಣಕಾಸು ಸಚಿವಾಲಯದ ಮೂಲಕ ಸರ್ಕಾರವು ಅನುಮೋದಿಸಿದ ನಂತರವೇ EPFO ​​ಬಡ್ಡಿದರವನ್ನು ಒದಗಿಸುತ್ತದೆ. ಮಾರ್ಚ್ 2020 ರಲ್ಲಿ, ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು 2018-19ಕ್ಕೆ ಒದಗಿಸಿದ 8.65 ಪ್ರತಿಶತದಿಂದ 2019-20ಕ್ಕೆ ಏಳು ವರ್ಷಗಳಲ್ಲಿ ಕನಿಷ್ಠ 8.5 ಪ್ರತಿಶತಕ್ಕೆ ಇಳಿಸಿದೆ.

ಇಪಿಎಫ್‌ಒ ತನ್ನ ಚಂದಾದಾರರಿಗೆ 2016-17ರಲ್ಲಿ ಶೇ 8.65 ಮತ್ತು 2017-18ರಲ್ಲಿ ಶೇ 8.55 ಬಡ್ಡಿ ದರವನ್ನು ಒದಗಿಸಿದೆ. 2015-16ರಲ್ಲಿ ಬಡ್ಡಿ ದರವು 8.8 ಶೇಕಡ ಸ್ವಲ್ಪ ಹೆಚ್ಚಿತ್ತು. ನಿವೃತ್ತಿ ನಿಧಿ ಸಂಸ್ಥೆಯು 2013-14 ಮತ್ತು 2014-15 ರಲ್ಲಿ 8.75 ಪರ್ಸೆಂಟ್ ಬಡ್ಡಿದರವನ್ನು ನೀಡಿದೆ, ಇದು 2012-13 ಕ್ಕೆ 8.5 ಶೇಕಡಾಕ್ಕಿಂತ ಹೆಚ್ಚಾಗಿದೆ.

Published On - 11:13 am, Tue, 28 March 23