AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UPSC EPFO Recruitment 2023: UPSC EPFO ​​ನೇಮಕಾತಿ ನೋಂದಣಿಗೆ ಇಂದೇ ಕೊನೆ ದಿನ; 577 ಹುದ್ದೆಗಳಿಗೆ ಅರ್ಜಿ ಆಹ್ವಾನ

UPSC EPFO ​​ನೇಮಕಾತಿ 2023: ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು upsc.gov.in ಅಥವಾ upsconline.nic.in ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

UPSC EPFO Recruitment 2023: UPSC EPFO ​​ನೇಮಕಾತಿ ನೋಂದಣಿಗೆ ಇಂದೇ ಕೊನೆ ದಿನ; 577 ಹುದ್ದೆಗಳಿಗೆ ಅರ್ಜಿ ಆಹ್ವಾನ
UPSC EPFO Recruitment 2023
TV9 Web
| Updated By: ನಯನಾ ಎಸ್​ಪಿ|

Updated on: Mar 17, 2023 | 11:25 AM

Share

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಇಂದು (ಮಾರ್ಚ್ 17) ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ನೇಮಕಾತಿ 2023 ಗಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಮುಚ್ಚಲಿದೆ. ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಇನ್ನೂ ಅರ್ಜಿ ಸಲ್ಲಿಸದೆ ಇರುವವರು upsc.gov.in ಅಥವಾ upsconline.nic ನಲ್ಲಿ ತಮ್ಮ ಫಾರ್ಮ್‌ಗಳನ್ನು ಸಲ್ಲಿಸಬಹುದು. ಈ UPSC EPFO ​​ನೇಮಕಾತಿ ಡ್ರೈವ್ 577 ಸಹಾಯಕ ಪಿಎಫ್ ಆಯುಕ್ತರು ಮತ್ತು ಖಾತೆಗಳ ಅಧಿಕಾರಿ ಹುದ್ದೆಗಳನ್ನು ತುಂಬುವ ಗುರಿಯನ್ನು ಹೊಂದಿದೆ.

ಆಯೋಗವು ಆಸಕ್ತ ಅಭ್ಯರ್ಥಿಗಳಿಗೆ ಕೊನೆಯ ಕ್ಷಣದ ಗಡಿಬಿಡಿಯನ್ನು ತಪ್ಪಿಸಲು ಗಡುವಿನವರೆಗೆ ಕಾಯದೆ ಮುಂಚಿತವಾಗಿ ಫಾರ್ಮ್‌ಗಳನ್ನು ಸಲ್ಲಿಸುವಂತೆ ಕೇಳಿಕೊಂಡಿತ್ತು.

ಘೋಷಿಸಲಾದ ಒಟ್ಟು ಖಾಲಿ ಹುದ್ದೆಗಳಲ್ಲಿ, 418 ಖಾತೆ ಅಧಿಕಾರಿ ಹುದ್ದೆಗಳು ಮತ್ತು ಇತರ 159 ಹುದ್ದೆಗಳು ಸಹಾಯಕ ಪಿಎಫ್ ಆಯುಕ್ತರ ಹುದ್ದೆಗಳು .

ಇದನ್ನು ಓದಿ: KKRTC Recruitment 2023 – 249 ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಅಹ್ವಾನ

ಅಭ್ಯರ್ಥಿಗಳ ಆಯ್ಕೆಯನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನಗಳ ಮೂಲಕ ಮಾಡಲಾಗುತ್ತದೆ. ಎರಡೂ ಹುದ್ದೆಗಳಿಗೆ, UPSC ಪ್ರತ್ಯೇಕ ಪರೀಕ್ಷೆಗಳನ್ನು ನಡೆಸುತ್ತದೆ ಮತ್ತು ಅಧಿಕೃತ ವೆಬ್‌ಸೈಟ್‌ನಲ್ಲಿ ದಿನಾಂಕಗಳನ್ನು ಪ್ರಕಟಿಸಲಾಗುವುದು. ಪರೀಕ್ಷಾ ಅಧಿಸೂಚನೆಯಲ್ಲಿ ಪಠ್ಯಕ್ರಮ ಮತ್ತು ಪರೀಕ್ಷೆಯ ಯೋಜನೆಯನ್ನು ನಮೂದಿಸಲಾಗಿದೆ.

ಅರ್ಹತೆ, ವಯಸ್ಸಿನ ಮಿತಿ ಮತ್ತು ಇತರ ಸಂಬಂಧಿತ ವಿವರಗಳನ್ನು ಪರಿಶೀಲಿಸಲು, ಅಭ್ಯರ್ಥಿಗಳು UPSC ವೆಬ್‌ಸೈಟ್‌ನಲ್ಲಿ ವಿವರವಾದ ಸೂಚನೆಯನ್ನು ಪರಿಶೀಲಿಸಬಹುದು.