SBI: ಎಸ್​ಬಿಐನಿಂದ 6,000 ಕೋಟಿ ರೂ ಮೊತ್ತದ ಬಾಂಡ್​ಗಳ ವಿತರಣೆ; ಯಾವಾಗ, ಎಲ್ಲಿ? ವಿವರ ನೋಡಿ

750 Million USD SBI Bonds: ಸುಮಾರು 6,000 ಕೋಟಿ ರೂ ಬಂಡವಾಳ ಸಂಗ್ರಹಿಸುವ ಸಲುವಾಗಿ ಎಸ್​ಬಿಐ ಬಾಂಡ್​ಗಳನ್ನು ವಿತರಿಸುತ್ತಿದೆ. ಮೇ 5ರಂದು ಸಿಂಗಾಪುರ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಇವು ಲಿಸ್ಟ್ ಆಗಲಿವೆ. ಇದೇ ವೇಳೆ ಎಸ್​ಬಿಐನ ಷೇರು ಬೆಲೆ ಮುಂದಿನ ದಿನಗಳಲ್ಲಿ ಭರ್ಜರಿ ಲಾಭ ತಂದುಕೊಡಬಲ್ಲುವಾಗಿವೆ.

SBI: ಎಸ್​ಬಿಐನಿಂದ 6,000 ಕೋಟಿ ರೂ ಮೊತ್ತದ ಬಾಂಡ್​ಗಳ ವಿತರಣೆ; ಯಾವಾಗ, ಎಲ್ಲಿ? ವಿವರ ನೋಡಿ
ಎಸ್​ಬಿಐ
Follow us
|

Updated on: Apr 28, 2023 | 2:36 PM

ಮುಂಬೈ: ಭಾರತದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇದೀಗ ಬಾಂಡ್​ಗಳ ಮೂಲಕ ಸಾವಿರಾರು ಕೋಟಿ ರೂ ಬಂಡವಾಳ ಸಂಗ್ರಹಿಸಲು ಮುಂದಾಗಿದೆ. ಎಸ್​ಬಿಐ ಸುಮಾರು 750 ಮಿಲಿಯನ್ ಡಾಲರ್ ಮೊತ್ತದ ಬಾಂಡ್​ಗಳನ್ನು (SBI Bonds) ವಿತರಿಸುತ್ತಿದೆ. ಅಂದರೆ ಈ ಬಾಂಡ್​ಗಳ ಮಾರಾಟದಿಂದ ಎಸ್​ಬಿಐಗೆ 6,000 ಕೋಟಿ ರೂ ಬಂಡವಾಳ ಹರಿದುಬರಲಿದೆ. ಈ ಐದು ವರ್ಷ ಅವಧಿಯ ಬಾಂಡ್​ಗಳ ಕೂಪನ್ ರೇಟ್ ಶೇ. 4.875ಕ್ಕೆ ನಿಗದಿ ಮಾಡಲಾಗಿದೆ. ಅಂದರೆ, ಎಸ್​ಬಿಐನ ಈ ಬಾಂಡ್​ಗಳನ್ನು ಖರೀದಿಸುವ ಹೂಡಿಕೆದಾರರಿಗೆ ಒಂದು ವರ್ಷಕ್ಕೆ ಬಡ್ಡಿ ಶೇ 4.875 ಸಿಗಬಹುದು ಎಂದು ನಿರೀಕ್ಷಿಸಬಹುದು. ವರದಿಗಳ ಪ್ರಕಾರ ಎಸ್​ಬಿಐನ ಈ ಬಾಂಡ್​ಗಳಿಗೆ ಒಳ್ಳೆಯ ಬೇಡಿಕೆ ಕುದುರಿದೆಯಂತೆ. ಈ ಬಾಂಡ್​ಗಳಿಗೆ ಬೇಡಿಕೆ ಹೆಚ್ಚಿದಷ್ಟೂ ಅದರ ಯೀಲ್ಡ್ ಅಥವಾ ರಿಟರ್ನ್ ಕಡಿಮೆ ಆಗುತ್ತಾ ಹೋಗುತ್ತದೆ.

2023 ಮೇ 5ರಂದು ನಮ್ಮ ಲಂಡನ್ ಶಾಖಾ ಕಚೇರಿಯಿಂದ ಬಾಂಡ್​ಗಳನ್ನು ನೀಡಲಾಗುವುದು. ಇವು ಸಿಂಗಾಪುರ್ ಸ್ಟಾಕ್ ಎಕ್ಸ್​ಚೇಂಜ್ ಹಾಗೂ ಇಂಡಿಯಾ ಇಂಟರ್​ನ್ಯಾಷನಲ್ ಎಕ್ಸ್​ಚೇಂಜ್​ನಲ್ಲಿ ಲಿಸ್ಟ್ ಆಗಲಿವೆ’ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಏಪ್ರಿಲ್ 27ರಂದು ಸಲ್ಲಿಸಿದ ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ತಿಳಿಸಿದೆ.

ಎಸ್​ಬಿಐ ಬಾಂಡ್​ಗಳ ಮಾರಾಟ ಮತ್ತು ನಿರ್ವಹಣೆಗೆ ಎಚ್​ಎಸ್​ಬಿಸಿ, ಸಿಟಿಗ್ರೂಪ್, ಜೆಪಿ ಮಾರ್ಗನ್, ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಎಂಯುಎಫ್​ಜಿ, ಎಮಿರೇಟ್ಸ್ ಎನ್​ಬಿಡಿ ಸಂಸ್ಥೆಗಳನ್ನು ಗ್ಲೋಬಲ್ ಕೋ ಆರ್ಡಿನೇಟರ್​ಗಳಾಗಿ ವಹಿಸಲಾಗಿದೆ.

ಇದನ್ನೂ ಓದಿAxis Bank: ಆ್ಯಕ್ಸಿಸ್​ಗೆ ಮುಳುವಾದ ಸಿಟಿ ಡೀಲ್; ದಾಖಲೆ ಲಾಭ ಕಾಣಬೇಕಿದ್ದ ಬ್ಯಾಂಕ್​ಗೆ ಬರೋಬ್ಬರಿ 5,728.4 ಕೋಟಿ ರೂ ನಷ್ಟ

ವಿದೇಶೀ ಮಾರುಕಟ್ಟೆಯಲ್ಲಿ ಎಸ್​ಬಿಐಗೆ ಒಳ್ಳೆಯ ಬೆಲೆ ಇದೆ. ಬಹಳಷ್ಟು ಹೂಡಿಕೆದಾರರು ಎಸ್​ಬಿಐ ಬಗ್ಗೆ ಒಲವು ಹೊಂದಿರುವವರೇ ಹೆಚ್ಚು. ಇವತ್ತಿನ ಅನಿಶ್ಚಿತ ಸ್ಥಿತಿಯಲ್ಲಿ ಎಸ್​ಬಿಐಗೆ ಬಂಡವಾಳ ಸಂಗ್ರಹಿಸುವ ಗುರಿ ಈಡೇರಬಹುದು. ವಿಶ್ವದ ಪ್ರಮುಖ ನಿಶ್ಚಿತ ಆದಾಯ ಹೂಡಿಕೆದಾರರು ಎಸ್​ಬಿಐ ಪರ ನಿಲ್ಲಬಹುದು ಎಂದು ಎಸ್​ಬಿಐ ಛೇರ್ಮನ್ ದಿನೇಶ್ ಖರ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಸ್​ಬಿಐನ ನಿರ್ದೇಶಕರ ಮಂಡಳಿ ಕೆಲ ವಾರಗಳ ಹಿಂದಷ್ಟೇ ಈ ಹಣಕಾಸು ವರ್ಷದಲ್ಲಿ 2 ಬಿಲಿಯನ್ ಡಾಲರ್​ವರೆಗೂ (ಸುಮಾರು 16,000 ಕೋಟಿ ರೂ) ಬಂಡವಾಳ ಸಂಗ್ರಹಿಸುವ ದೀರ್ಘಾವಧಿ ಯೋಜನೆಗೆ ಅನುಮೋದನೆ ನೀಡಿತ್ತು. ಇದೀಗ ಬಾಂಡ್​ಗಳನ್ನು ವಿತರಿಸಿರುವ ಮಾರ್ಗದಿಂದಲೇ ಅಗತ್ಯ ಬಿದ್ದರೆ ಈ ಹೂಡಿಕೆ ಪಡೆಯಬಹುದು.

ಎಸ್​ಬಿಐ ಷೇರುಗಳಿಗೆ ಹೆಚ್ಚಲಿದೆಯಾ ಬೇಡಿಕೆ?

ಸ್ಟೇಟ್ ಬ್ಯಾಂಕ್ ಇಂಡಿಯಾ ಸಂಸ್ಥೆಯ ಆರ್ಥಿಕ ಸ್ಥಿತಿ ಚೆನ್ನಾಗಿದೆ. ಅದರ ಕೆಟ್ಟ ಸಾಲಗಳ ಅಥವಾ ಎನ್​ಪಿಎ ಪ್ರಮಾಣ ಬಹಳ ಕಡಿಮೆ ಇದೆ. ಅದರ ಬಡ್ಡಿ ಆದಾಯ, ಬಡ್ಡಿಯ ಲಾಭ ಅಂತರ ಇವೆಲ್ಲವೂ ಉತ್ತಮ ಎನ್ನಬಹುದಾದ ಪ್ರಮಾಣದಲ್ಲಿವೆ. ಹೀಗಾಗಿ, ಎಸ್​ಬಿಐ ಷೇರುಗಳ ಮೇಲೆ ಬಹಳ ಮಂದಿ ಕಣ್ಣು ಬಿದ್ದಿದೆ.

ಇದನ್ನೂ ಓದಿHigher Pension: ಅಧಿಕ ಇಪಿಎಫ್ ಪಿಂಚಣಿ; ಗಡುವು, ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ, ಬಡ್ಡಿ ದರ ಇತ್ಯಾದಿ ಮಾಹಿತಿ

ಷೇರು ಮಾರುಕಟ್ಟೆಯಲ್ಲಿ ಎಸ್​ಬಿಐನ ಷೇರು ಸಂಪತ್ತು 5 ಲಕ್ಷ ಕೋಟಿ ರೂಗಿಂತ ಹೆಚ್ಚಿದೆ. ಸದ್ಯ ಇದರ ಷೇರು ಬೆಲೆ 570 ರೂ ಇದೆ. ಬ್ರೋಕರೇಜ್ ಕಂಪನಿಗಳ ಅಂದಾಜಿನ ಪ್ರಕಾರ ಎಸ್​ಬಿಐ ಷೇರು ಬೆಲೆ 700ರೂಗೂ ಹೆಚ್ಚು ಮೊತ್ತಕ್ಕೆ ಏರಬಹುದು. ಈ ನಿರೀಕ್ಷೆಗೂ ಒಂದಿಷ್ಟು ಕಾರಣಗಳಿವೆ. ಅವೇನು ಎಂದು ನೋಡುವುದಾದರೆ

  1. ಎಸ್​ಬಿಐ ಮುಂದಿನ ದಿನಗಳಲ್ಲಿ ಸಾರ್ವಜನಿಕವಾಗಿ ಹಾಗೂ ಖಾಸಗಿಯಾಗಿ ಬಂಡವಾಳ ಸಂಗ್ರಹಿಸುವ ಸಾಧ್ಯತೆ ಕಡಿಮೆ ಇರುತ್ತದೆ. ಅದರ ಬೆಳವಣಿಗೆಗೆ ಬೇಕಾದ ಬಂಡವಾಳವನ್ನು ಅದರ ಆದಾಯಗಳ ಮೂಲಕವೇ ಪಡೆದುಕೊಳ್ಳುವ ಸಾಮರ್ಥ್ಯ ಎಸ್​ಬಿಐಗೆ ಇದೆ ಎಂಬುದು ಮೋತಿಲಾಲ್ ಓಸ್ವಾಲ್ ಎಂಬ ಬ್ರೋಕರೇಜ್ ಕಂಪನಿ ಕೊಟ್ಟಿರುವ ಒಂದು ಪ್ರಬಲ ಕಾರಣ.
  2. ಎಸ್​ಬಿಐ ಷೇರು ವೃದ್ಧಿ ಸಾಧ್ಯತೆಗೆ ಇನ್ನೊಂದು ಪ್ರಮುಖ ಕಾರಣವೆಂದರೆ ಅದರ ಸಾಲದ ಪ್ರಮಾಣ ಹೆಚ್ಚುತ್ತಿರುವುದು. ಅಧಿಕ ಬಡ್ಡಿದರ ಇದ್ದರೂ ಎಸ್​ಬಿಐನಲ್ಲಿ ಸಾಲ ಪಡೆಯಲು ಜನರು ಮುಗಿಬೀಳುತ್ತಿದ್ದಾರೆ. ಇವು ಕೆಟ್ಟ ಸಾಲಗಳಾಗದಂತೆ ಎಚ್ಚರ ವಹಿಸಿದರೆ ಎಸ್​ಬಿಐಗೆ ಮುಂಬರುವ ದಿನಗಳು ಇನ್ನೂ ಭರ್ಜರಿ ಲಾಭ ತರಬಹುದು.
  3. ಹಾಗೆಯೇ, ರೀಟೇಲ್ ಸೆಗ್ಮೆಂಟ್​ನಲ್ಲಿ ಎಸ್​ಬಿಐನ ಎನ್​ಪಿಎ ಅಥವಾ ಕೆಟ್ಟ ಸಾಲಗಳ ಅನುಪಾತ ಕೇವಲ 0.67 ಮಾತ್ರ ಇದೆ. ಅಂದರೆ ಒಟ್ಟಾರೆ ಸಾಲಗಳ ಪೈಕಿ ಎನ್​ಪಿಎ ಪ್ರಮಾಣ 1 ಪ್ರತಿಶತಕ್ಕಿಂತ ಕಡಿಮೆಯೇ ಇದೆ. ಇದೂ ಕೂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆರೋಗ್ಯದ ಸಂಕೇತಗಳಾಗಿವೆ. ಇವುಗಳ ಪರಿಣಾಮವಾಗಿ ಷೇರುಪೇಟೆಯಲ್ಲೂ ಅದರ ಷೇರಿಗೆ ಬೇಡಿಕೆ ಸಿಗುವುದು ನಿಶ್ಚಿತ ಎನ್ನಲಾಗುತ್ತಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ