Axis Bank: ಆ್ಯಕ್ಸಿಸ್​ಗೆ ಮುಳುವಾದ ಸಿಟಿ ಡೀಲ್; ದಾಖಲೆ ಲಾಭ ಕಾಣಬೇಕಿದ್ದ ಬ್ಯಾಂಕ್​ಗೆ ಬರೋಬ್ಬರಿ 5,728.4 ಕೋಟಿ ರೂ ನಷ್ಟ

Citibank India Deal Affects Axis Bank: ಸಿಟಿಬ್ಯಾಂಕ್ ಇಂಡಿಯಾವನ್ನು ಖರೀದಿಸಿದ ಕಾರಣ ಆ್ಯಕ್ಸಿಸ್ ಬ್ಯಾಂಕ್​ಗೆ ಆದ ನಷ್ಟ 12,490 ಕೋಟಿ ರೂ. ಇದೇ ಕಾರಣಕ್ಕೆ 2023 ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ ವರದಿಯಲ್ಲಿ ಅ್ಯಕ್ಸಿಸ್ ಬ್ಯಾಂಕ್ 5,728.4 ಕೋಟಿ ರೂ ನಿವ್ವಳ ನಷ್ಟ ತೋರಿಸಿದೆ. ಇದರ ಪರಿಣಾಮ ಆ್ಯಕ್ಸಿಸ್ ಬ್ಯಾಂಕ್​ನ ಷೇರು ಬೆಲೆಯೂ ಕುಸಿಯುತ್ತಿದೆ.

Axis Bank: ಆ್ಯಕ್ಸಿಸ್​ಗೆ ಮುಳುವಾದ ಸಿಟಿ ಡೀಲ್; ದಾಖಲೆ ಲಾಭ ಕಾಣಬೇಕಿದ್ದ ಬ್ಯಾಂಕ್​ಗೆ ಬರೋಬ್ಬರಿ 5,728.4 ಕೋಟಿ ರೂ ನಷ್ಟ
ಆ್ಯಕ್ಸಿಸ್ ಬ್ಯಾಂಕ್
Follow us
|

Updated on: Apr 28, 2023 | 1:09 PM

ಮುಂಬೈ: ಭಾರತದ ಅತಿದೊಡ್ಡ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಆ್ಯಕ್ಸಿಸ್ ಬ್ಯಾಂಕ್ (Axis Bank) ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ 5,728.4 ಕೋಟಿ ರೂನಷ್ಟು ನಿವ್ವಳ ನಷ್ಟ (Net Loss) ತೋರಿಸಿದೆ. ಈ ಪರಿ ಹಿನ್ನಡೆ ಕಾಣಲು ಕಾರಣವಾಗಿದ್ದು ಆ್ಯಕ್ಸಿಸ್ ಬ್ಯಾಂಕ್ ಮತ್ತು ಸಿಟಿಬ್ಯಾಂಕ್ ಇಂಡಿಯಾ ಒಪ್ಪಂದ. ಸಿಟಿಬ್ಯಾಂಕ್ ಇಂಡಿಯಾವನ್ನು ವಿಲೀನ ಮಾಡುವ ಈ ಡೀಲ್​ನಿಂದ ಆ್ಯಕ್ಸಿಸ್ ಬ್ಯಾಂಕ್​ಗೆ ಬರೋಬ್ಬರಿ 12,490 ಕೋಟಿ ರೂ ನಷ್ಟ ಆಗಿರುವುದು ವರದಿಯಾಗಿದೆ. ಒಂದು ವೇಳೆ ಈ ಒಪ್ಪಂದ ಆಗಿಲ್ಲದೇ ಹೋಗಿದ್ದರೆ ಆ್ಯಕ್ಸಿಸ್ ಬ್ಯಾಂಕ್ ಮಾರ್ಚ್ ಅಂತ್ಯದ ಕ್ವಾರ್ಟರ್​ನಲ್ಲಿ ಭರ್ಜರಿ ಲಾಭ ಕಾಣಬಹುದಾಗಿತ್ತು.

ಸಿಟಿಬ್ಯಾಂಕ್ ಡೀಲ್​ನಿಂದಾದ ನಷ್ಟವನ್ನು ತೆಗೆದಿಟ್ಟು ನೋಡಿದರೆ ಈ ವರ್ಷ ಮೊದಲ ಮೂರು ತಿಂಗಳ ಅವಧಿಯಲ್ಲಿ ಆ್ಯಕ್ಸಿಸ್ ಬ್ಯಾಂಕ್ 6,625 ಕೋಟಿ ರೂ ಲಾಭ ಕಾಣುತ್ತಿತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ ಆ್ಯಕ್ಸಿಸ್ ಬ್ಯಾಂಕ್ 4,118 ಕೋಟಿ ರೂ ನಿವ್ವಳ ಲಾಭ ತೋರಿಸಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಅದರ ನಿವ್ವಳ ಲಾಭ ಶೇ. 61ರಷ್ಟು ಹೆಚ್ಚಾಗುತ್ತಿತ್ತು. ಬ್ಲೂಮ್​ಬರ್ಗ್ ನಡೆಸಿದ ತಜ್ಞರ ಸಮೀಕ್ಷೆಯಲ್ಲಿ ಆ್ಯಕ್ಸಿಸ್ ಬ್ಯಾಂಕ್ ಈ ಕ್ವಾರ್ಟರ್​ನಲ್ಲಿ 2,531.6 ಕೋಟಿ ಲಾಭ ಮಾಡಬಹುದು ಎಂದು ಅಂದಾಜು ಮಾಡಲಾಗಿತ್ತು. ಈ ನಿರೀಕ್ಷೆಮೀರಿದಷ್ಟು ಲಾಭವನ್ನು ಆ್ಯಕ್ಸಿಸ್ ಕಂಡಿದೆ. ಅದರ ದುರದೃಷ್ಟಕ್ಕೆ ಸಿಟಿಬ್ಯಾಂಕ್ ಇಂಡಿಯಾದ ಒಪ್ಪಂದದಿಂದ ಆದ ನಷ್ಟವು ಅದರ ಭರ್ಜರಿ ಲಾಭವನ್ನು ಪೂರ್ಣವಾಗಿ ಮಸುಕಾಗಿಸಿದೆ.

ಇದನ್ನೂ ಓದಿDeepak Parekh: ಷೇರು ಬೇಡ, ಸಂಬಳ ಸಾಕು ಎನ್ನುವ ಮಾಲೀಕ; 5 ಲಕ್ಷ ಕೋಟಿ ಮೌಲ್ಯದ ಕಂಪನಿ ಛೇರ್ಮನ್​ನ ಸರಳತೆ ಎಲ್ಲರಿಗೂ ಮಾದರಿ

ಆ್ಯಕ್ಸಿಸ್ ಬ್ಯಾಂಕ್​ಗೆ ಬಡ್ಡಿಯಿಂದ ಬಂದ ಆದಾಯ ಎಷ್ಟು?

ಬ್ಯಾಂಕುಗಳಿಗೆ ಮೂಲ ಆದಾಯ ಅದು ನೀಡುವ ಸಾಲಕ್ಕೆ ವಿಧಿಸುವ ಬಡ್ಡಿಯಿಂದ ಸಿಗುತ್ತದೆ. ಈ ರೀತಿ ಬಡ್ಡಿಯಿಂದ ಬಂದ ಆದಾಯ 2023 ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಆ್ಯಕ್ಸಿಸ್ ಬ್ಯಾಂಕ್ ಶೇ. 33ರಷ್ಟು ಹೆಚ್ಚಳ ಕಂಡಿದೆ. ಈ ಅವಧಿಯಲ್ಲಿ ಇದರ ನಿವ್ವಳ ಬಡ್ಡಿ ಆದಾಯ 11,742 ಕೋಟಿ ರೂ ದಾಖಲಾಗಿದೆ. ಇತರ ಮೂಲಗಳಿಂದ ಆ್ಯಕ್ಸಿಸ್ ಬ್ಯಾಂಕ್​ಗೆ 4,895 ಕೋಟಿ ರೂ ಆದಾಯ ಬಂದಿದೆ.

ಆ್ಯಕ್ಸಿಸ್ ಬ್ಯಾಂಕ್ ಷೇರು ಕುಸಿತ; ಗಾಬರಿಬಿದ್ದರಾ ಹೂಡಿಕೆದಾರರು?

ಆ್ಯಕ್ಸಿಸ್ ಬ್ಯಾಂಕ್ ತನ್ನ ತ್ರೈಮಾಸಿಕ ವರದಿಯಲ್ಲಿ ನಷ್ಟ ತೋರಿಸುತ್ತಿದ್ದಂತೆಯೇ ಷೇರುಪೇಟೆಯಲ್ಲಿ ಅದರ ಷೇರು ಬೆಲೆ ಕುಸಿಯತೊಡಗಿದೆ. ಏಪ್ರಿಲ್ 28 ಶುಕ್ರವಾರ ಬೆಳಗ್ಗೆ 890 ರೂ ಇದ್ದ ಆ್ಯಕ್ಸಿಸ್ ಬ್ಯಾಂಕ್ ಷೇರು ಬೆಲೆ ಮಧ್ಯಾಹ್ನ 12:45ಕ್ಕೆ 855 ರುಪಾಯಿಗೆ ಇಳಿದಿತ್ತು. ಅಂದರೆ ಸುಮಾರು 35 ರುಪಾಯಿಗಳಷ್ಟು ಕುಸಿತ ಕಂಡಿದೆ ಆ್ಯಕ್ಸಿಸ್ ಬ್ಯಾಂಕ್ ಷೇರು. ಇದು ಆ್ಯಕ್ಸಿಸ್ ಬ್ಯಾಂಕ್​ನ ಕ್ವಾರ್ಟರ್ ರಿಪೋರ್ಟ್ ವರದಿಯ ಪರಿಣಾಮ.

ಇದನ್ನೂ ಓದಿMaruti Suzuki: ಮಾರುತಿ ಸುಜುಕಿ 1 ಲಕ್ಷ ಕೋಟಿ ರೂ ಆದಾಯ ದಾಟಿದ ಭಾರತದ ಮೊದಲ ಕಾರ್ ಕಂಪನಿ; ಷೇರುಗಳಿಗೆ ಭಾರೀ ಬೇಡಿಕೆ ಸಾಧ್ಯತೆ

ಆ್ಯಕ್ಸಿಸ್ ಬ್ಯಾಂಕ್​ಗೆ ಇದು ದುರದೃಷ್ಟದ ಮುಂದುವರಿಕೆಯೇ ಸರಿ. ಸಿಟಿಬ್ಯಾಂಕ್ ಡೀಲ್​ನಿಂದ ಆದ 12,490 ಕೋಟಿ ರೂ ನಷ್ಟದ ಕಾರಣದಿಂದ ಆ್ಯಕ್ಸಿಸ್ ಬ್ಯಾಂಕ್​ನ ಭರ್ಜರಿ ಲಾಭ ಮುಚ್ಚಿಹೋಗಿ 5,361 ಕೋಟಿ ರೂ ನಷ್ಟ ತೋರಿಸಬೇಕಾಯಿತು. ನಷ್ಟಕ್ಕೆ ಕಾರಣ ಏನೆಂದು ಅವಲೋಕಿಸದ ಕಾರಣಕ್ಕೋ, ಅಥವಾ ಬ್ಯಾಂಕ್​ನ ಹಣಕಾಸು ಸ್ಥಿತಿ ಇನ್ನೂ ಕೆಟ್ಟದಾಗಬಹುದು ಎಂಬ ಭಯಕ್ಕೋ ಷೇರುದಾರರು ಗಾಬರಿ ಬಿದ್ದು ಕಡಿಮೆ ಬೆಲೆಗೆ ಬಿಕರಿ ಮಾಡುತ್ತಿರುವಂತಿದೆ ಷೇರುಪೇಟೆಯಲ್ಲಿನ ಚಟುವಟಿಕೆ.

ಆದರೆ, ಅನೇಕ ಬ್ರೋಕರೇಜ್ ಕಂಪನಿಗಳು ಆ್ಯಕ್ಸಿಸ್ ಷೇರಿಗೆ ಸಕಾರಾತ್ಮಕ ಅಭಿಪ್ರಾಯ ನೀಡಿದ್ದಾರೆ. ಈಗ ಆ್ಯಕ್ಸಿಸ್ ಬ್ಯಾಂಕ್​ನ ಷೇರು ಹಿನ್ನಡೆ ಕಾಣುತ್ತಿದೆಯಾದರೂ ಅದು ತಾತ್ಕಾಲಿಕ ಮಾತ್ರ. ಅದು ಮಾರ್ಚ್ ಅಂತ್ಯದ ಕ್ವಾರ್ಟರ್​ನಲ್ಲಿ ತೋರಿರುವ ಸರ್ವೋನ್ನತಿಯನ್ನು ಗಮನಿಸಿದಾಗ ಅದರ ಷೇರಿಗೆ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ