AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Kisan: ಪಿಎಂ ಕಿಸಾನ್ 14ನೇ ಕಂತಿನ ಹಣ ಬಿಡುಗಡೆ ಶೀಘ್ರದಲ್ಲೇ; ಮೇ ತಿಂಗಳಲ್ಲಿ ಯಾವ ದಿನ ಕೈಸೇರಲಿದೆ ಹಣ? ವಿವರ ಇಲ್ಲಿದೆ

PM Kisan Samman Nidhi Scheme 14th Installment Date: ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ವರ್ಷದಲ್ಲಿ 3 ಬಾರಿ ಕೇಂದ್ರ ಸರ್ಕಾರ ಫಲಾನುಭವಿ ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತದೆ. ಈಗ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳ ಪ್ರಕಾರ 14ನೇ ಕಂತಿನ ಹಣ 2023 ಮೇ ತಿಂಗಳಲ್ಲಿ ಬಿಡಗಡೆ ಆಗಬಹುದು.

PM Kisan: ಪಿಎಂ ಕಿಸಾನ್ 14ನೇ ಕಂತಿನ ಹಣ ಬಿಡುಗಡೆ ಶೀಘ್ರದಲ್ಲೇ; ಮೇ ತಿಂಗಳಲ್ಲಿ ಯಾವ ದಿನ ಕೈಸೇರಲಿದೆ ಹಣ? ವಿವರ ಇಲ್ಲಿದೆ
ರೈತ ಮಹಿಳೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 28, 2023 | 3:40 PM

Share

ಬೆಂಗಳೂರು: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Yojana) ಕೇಂದ್ರ ಸರ್ಕಾರ ಈವರೆಗೆ 2,000 ರೂಗಳ 13ಕಂತುಗಳನ್ನು ಬಿಡುಗಡೆ ಮಾಡಿದೆ. ಮಾರ್ಚ್ 27ರಂದು ಬೆಳಗಾವಿಯ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ 13ನೇ ಕಂತಿನ ಹಣ ಬಿಡುಗಡೆ ಆಗಿರುವುದನ್ನು ಘೋಷಿಸಿದ್ದರು. ಇದೀಗ 14ನೇ ಕಂತಿನ ಹಣ ಬಿಡುಗಡೆಗೆ ದಿನಗಣನೆ ನಡೆದಿದೆ. ವರ್ಷದಲ್ಲಿ 3 ಬಾರಿ ಕೇಂದ್ರ ಸರ್ಕಾರ ಫಲಾನುಭವಿ ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತದೆ. ಈಗ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳ ಪ್ರಕಾರ 14ನೇ ಕಂತಿನ ಹಣ ಮೇ ತಿಂಗಳಲ್ಲಿ ಬಿಡಗಡೆ ಆಗಬಹುದು. ಕರ್ನಾಟಕದಲ್ಲಿ ಮೇ ಎರಡನೇ ವಾರ ಚುನಾವಣೆಗಳು ಇವೆ. ಮೇ 3ನೇ ವಾರದಂದು ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಒಂದು ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ 3 ಬಾರಿ ಪಿಎಂ ಕಿಸಾನ್ ಯೋಜನೆಯ ಹಣ ರಿಲೀಸ್ ಮಾಡುತ್ತದೆ. ಏಪ್ರಿಲ್​ನಿಂದ ಜುಲೈವರೆಗಿನ ಒಂದು ಅವಧಿ, ಆಗಸ್ಟ್​ನಿಂದ ನವೆಂಬರ್​ವರೆಗಿನ ಇನ್ನೊಂದು ಅವಧಿ, ಹಾಗು ಡಿಸೆಂಬರ್​ನಿಂದ ಮಾರ್ಚ್​ವರೆಗಿನ ಮೂರನೇ ಅವಧಿಯಲ್ಲಿ ಪಿಎಂ ಕಿಸಾನ್ ಯೋಜನೆಯ ಕಂತಿನ ಹಣ ಬಿಡುಗಡೆ ಆಗುತ್ತದೆ. ಕೇಂದ್ರ ಸರ್ಕಾರ ಒಟ್ಟು 6 ಸಾವಿರ ರೂಗಳನ್ನು ಒಂದು ವರ್ಷದಲ್ಲಿ ಫಲಾನುಭವಿ ರೈತರಿಗೆ ನೀಡುತ್ತದೆ. ಕರ್ನಾಟಕ ಸರ್ಕಾರ ಇದಕ್ಕೆ ಹೆಚ್ಚುವರಿಯಾಗಿ ಇನ್ನೆರಡು ಕಂತುಗಳನ್ನು ನೀಡುತ್ತದೆ. ಅಂದರೆ ಕರ್ನಾಟಕದಲ್ಲಿ ಫಲಾನುಭವಿ ರೈತರ ಖಾತೆಗಳಿಗೆ ಒಂದು ವರ್ಷದಲ್ಲಿ 10,000 ರೂಗಳಷ್ಟು ಹಣ ಜಮೆ ಆಗುತ್ತದೆ.

ಇದನ್ನೂ ಓದಿ: Investments: ಕೆವಿಪಿ, ಪಿಪಿಎಫ್, ಎಸ್​ಎಸ್​ವೈ ಇತ್ಯಾದಿ ಇತ್ಯಾದಿ… ಯಾವ ಸರ್ಕಾರಿ ಸ್ಕೀಮ್ ನಿಮ್ಮ ಹೂಡಿಕೆಗೆ ಬೆಸ್ಟ್? ಇಲ್ಲಿದೆ ಒಂದು ಹೋಲಿಕೆ

2019 ಫೆಬ್ರುವರಿಯಲ್ಲಿ ಆರಂಭವಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಸಣ್ಣ ರೈತರ ವ್ಯವಸಾಯಕ್ಕೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಒದಗಿಸುವ ಸಹಾಯಧನವಾಗಿದೆ. ಮೊದಲಿಗೆ 5 ಎಕರೆಯೊಳಗಿನ ಜಮೀನು ಹೊಂದಿರುವ ರೈತರಿಗೆ ಮಾತ್ರ ಈ ಯೋಜನೆ ಸೀಮಿತವಾಗಿತ್ತು. ಈಗ ಎಲ್ಲಾ ರೈತರಿಗೂ ವಿಸ್ತರಣೆ ಆಗಿದೆ.

ಪಿಎಂ ಕಿಸಾನ್ ಯೋಜನೆಗೆ ಅರ್ಹ ರೈತರು ಯಾರು?

  • ಕೃಷಿ ಜಮೀನು ಮಾಲೀಕರಾಗಿರಬೇಕು
  • ಸರ್ಕಾರಿ ನೌಕರಿಯಲ್ಲಿರಬಾರದು, ಪಿಂಚಣಿದಾರರಿರಬಾರದು
  • ಶಾಸಕ, ಸಂಸದ, ಮಂತ್ರಿ ಇತ್ಯಾದಿ ಅಧಿಕಾರದಲ್ಲಿರಬಾರದು, ಹಿಂದೆಯೂ ಇದ್ದಿರಬಾರದು
  • ವೈದ್ಯ, ಎಂಜಿನಿಯರ್, ಲಾಯರ್ ಇತ್ಯಾದಿ ವೃತ್ತಿಗಳಲ್ಲಿರಬಾರದು
  • ಆದಾಯ ತೆರಿಗೆ ಪಾವತಿದಾರರಾಗಿರಬಾರದು

ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯಲ್ಲಿ ಕೋಟ್ಯಂತರ ರೈತರು ನೊಂದಾಯಿಸಿಕೊಂಡಿದ್ದಾರೆ. ಕೆವೈಸಿ ಪ್ರಕ್ರಿಯೆ ವೇಳೆ ಕೆಲವರ ಹೆಸರು ಕೈಬಿಟ್ಟಿರಬಹುದು. ಅಂಥವರು ಅಥವಾ ಈವರೆಗೂ ಯೋಜನೆ ಪಡೆಯದ ಅರ್ಹ ರೈತರು ಹೊಸದಾಗಿ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿಕೊಳ್ಳಲು ಅವಕಾಶ ಇದೆ. ಆನ್​ಲೈನ್ ಮೂಲಕವೂ ರಿಜಿಸ್ಟ್ರೇಶನ್ ಸಾಧ್ಯ:

  • ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್​ಸೈಟ್ www.pmkisan.gov.in ಇಲ್ಲಿಗೆ ಹೋಗಿ
  • ಮುಖ್ಯಪುಟದಲ್ಲಿ ಕಾಣುವ ಫಾರ್ಮರ್ಸ್ ಕಾರ್ನರ್ ಅಡಿಯಲ್ಲಿ ಮೊದಲ ಸಾಲಿನಲ್ಲಿರುವ ನ್ಯೂ ಫಾರ್ಮರ್ ರಿಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡಿ
  • ಅಲ್ಲಿ ಆಧಾರ್ ನಂಬರ್, ಮೊಬೈಲ್ ನಂಬರ್ ನಮೂದಿಸಿ. ಬಳಿಕ ರಾಜ್ಯವನ್ನು ಆಯ್ಕೆ ಮಾಡಿ ಓಟಿಪಿ ಪಡೆಯಿರಿ.
  • ನಂತರ ಕೇಳಲಾಗುವ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ಪಿಎಂ ಕಿಸಾನ್ ಅಪ್ಲಿಕೇಶನ್ ಫಾರ್ಮ್ ತುಂಬಿಸಿ ಅದನ್ನು ಸೇವ್ ಮಾಡಿ. ಬೇಕಾದರೆ ಈ ಅರ್ಜಿಯ ಪ್ರಿಂಟೌಟ್ ಪಡೆಯಬಹುದು.

ಇದನ್ನೂ ಓದಿ: Higher Pension: ಅಧಿಕ ಇಪಿಎಫ್ ಪಿಂಚಣಿ; ಗಡುವು, ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ, ಬಡ್ಡಿ ದರ ಇತ್ಯಾದಿ ಮಾಹಿತಿ

ಆನ್​ಲೈನ್ ಮೂಲಕ ಸಾಧ್ಯವಾಗದಿದ್ದರೆ ನಿಮ್ಮ ಗ್ರಾಮದ ಸಮೀಪದ ಪಂಚಾಯಿತಿ ಕೇಂದ್ರಕ್ಕೆ ಹೋಗಿ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಪ್ರತಿ ಹಾಗೂ ಜಮೀನು ಪಹಣಿ ನೀಡಿ ಪಿಎಂ ಕಿಸಾನ್ ಯೋಜನೆಗೆ ಹೆಸರು ನೊಂದಾಯಿಸಬಹುದು.

ಪಿಎಂ ಕಿಸಾನ್ ಯೋಜನೆಯಲ್ಲಿ ಫಲಾನುಭವಿ ಪಟ್ಟಿ ವೀಕ್ಷಿಸಬಹುದು

ಪಿಎಂ ಕಿಸಾನ್ ಯೋಜನೆಯ ಪೋರ್ಟಲ್​ನಲ್ಲಿ ವಿವಿಧ ರೀತಿಯ ಮಾಹಿತಿಯನ್ನು ಪಡೆಯಬಹುದು. ಫಲಾನುಭವಿ ಸ್ಥಿತಿಗತಿ, ಫಲಾನುಭವಿ ಪಟ್ಟಿ ಇತ್ಯಾದಿಯನ್ನು ವೀಕ್ಷಿಸಬಹುದು.

ಇಲ್ಲದಿದ್ದರೆ ಸಹಾಯವಾಣಿ ನಂಬರ್​ಗಳಾದ 155262 ಮತ್ತು 011-24300606 ಗೆ ಕರೆ ಮಾಡಿ ವಿಚಾರಿಸುವ ಅವಕಾಶವನ್ನೂ ನೀಡಲಾಗಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:40 pm, Fri, 28 April 23