Kotak Mahindra Bank FD Rates: ಕೊಟಕ್ ಮಹೀಂದ್ರಾ ಬ್ಯಾಂಕ್ ಎಫ್​ಡಿ ಬಡ್ಡಿ ದರದ ಪರಿಷ್ಕರಣೆ; ಇಲ್ಲಿದೆ ಸಂಪೂರ್ಣ ವಿವರ

| Updated By: Srinivas Mata

Updated on: Apr 14, 2022 | 2:09 PM

ಖಾಸಗಿ ಬ್ಯಾಂಕ್ ಆದ ಕೊಟಕ್ ಮಹೀಂದ್ರಾ ಬ್ಯಾಂಕ್​ನಿಂದ ಏಪ್ರಿಲ್ 12ನೇ ತಾರೀಕಿನಿಂದ ಅನ್ವಯ ಆಗುವಂತೆ ವಿವಿಧ ಅವಧಿಯ ಎಫ್​ಡಿ ಬಡ್ಡಿ ದರದ ಪರಿಷ್ಕರಣೆ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Kotak Mahindra Bank FD Rates: ಕೊಟಕ್ ಮಹೀಂದ್ರಾ ಬ್ಯಾಂಕ್ ಎಫ್​ಡಿ ಬಡ್ಡಿ ದರದ ಪರಿಷ್ಕರಣೆ; ಇಲ್ಲಿದೆ ಸಂಪೂರ್ಣ ವಿವರ
ಸಾಂದರ್ಭಿಕ ಚಿತ್ರ
Follow us on

ವಿವಿಧ ಅವಧಿಯ ಫಿಕ್ಸೆಡ್ ಡೆಪಾಸಿಟ್​ಗಳ ಬಡ್ಡಿ ದರವನ್ನು ಖಾಸಗಿ ಬ್ಯಾಂಕ್ ಆದ ಕೊಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank) ಹೆಚ್ಚಳ ಮಾಡಿದೆ. ಎರಡು ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ನಿಶ್ಚಿತ ಠೇವಣಿಗಳ ಬಡ್ಡಿ ದರವನ್ನು ಮಾತ್ರ ಹೆಚ್ಚಿಸಲಾಗಿದೆ ಎಂದು ಕೊಟಲ್ ಮಹೀಂದ್ರಾ ಬ್ಯಾಂಕ್​ನ ವೆಬ್​ಸೈಟ್​ನಲ್ಲಿ ತಿಳಿಸಲಾಗಿದೆ. ಹೊಸ ಬಡ್ಡಿ ದರವು ದೇಶೀ/ಎನ್​ಆರ್​ಒ/ಎನ್ಆರ್​ಇ ಫಿಕ್ಸೆಡ್ ಡೆಪಾಸಿಟ್​ ಖಾತೆಗಳಿಗೆ ಅನ್ವಯ ಆಗುತ್ತದೆ. ಆದರ ಹಿರಿಯ ನಾಗರಿಕರ ದರವು ಎನ್​ಆರ್​ಒ/ಎನ್​ಆರ್​ಇ ಠೇವಣಿಗಳಿಗೆ ಅನ್ವಯ ಆಗುವುದಿಲ್ಲ ಎಂದು ಬ್ಯಾಂಕ್ ಹೇಳಿದೆ. ಏಪ್ರಿಲ್ 12ರ ಗುರುವಾರದಿಂದ ಈ ಹೊಸ ದರವು ಅನ್ವಯ ಆಗುತ್ತದೆ. ಬ್ಯಾಂಕ್ ತನ್ನ ಘೋಷಣೆಯಲ್ಲಿ ತಿಳಿಸಿರುವಂತೆ 121 ದಿನದಿಂದ 179 ದಿನಕ್ಕೆ ಮತ್ತು 364 ದಿನಕ್ಕೆ 25 ಬೇಸಿಸ್ ಪಾಯಿಂಟ್ಸ್ ಬಡ್ಡಿ ಹೆಚ್ಚಳವಾಗಿದೆ. ಈ ಎಫ್​ಡಿಗಳಿಗೆ ಬಡ್ಡಿ ದರ ಶೇ 4.50 ಹಾಗೂ ಶೇ 4.75 ದೊರೆಯುತ್ತದೆ. ಇದೀಗ 4 ವರ್ಷದೊಳಗೆ ಅಥವಾ ಅದಕ್ಕಿಂತ ಹೆಚ್ಚಿನ ಸಮಯವಾಗಿದ್ದು, ಐದು ವರ್ಷಕ್ಕಿಂತ ಕಡಿಮೆ ಅವಧಿಯೊಳಗೆ ಪರಿಪಕ್ವ ಆಗುವ ಠೇವಣಿಗೆ ಶೇ 5.50ರಷ್ಟು ಬಡ್ಡಿ ಸಿಗುತ್ತದೆ.

2 ಕೋಟಿ ರೂಪಾಯಿಯೊಳಗಿನ ಮೊತ್ತಕ್ಕೆ ಕೊಟಕ್ ಮಹೀಂದ್ರಾ ಬ್ಯಾಂಕ್​ನ ಪರಿಷ್ಕೃತ ಬಡ್ಡಿ ದರ (ವಾರ್ಷಿಕ)
7ರಿಂದ 14 ದಿನ: ಸಾಮಾನ್ಯರಿಗೆ ಶೇ 2.5; ಹಿರಿಯ ನಾಗರಿಕರಿಗೆ ಶೇ 3

15ರಿಂದ 30 ದಿನ: ಸಾಮಾನ್ಯರಿಗೆ ಶೇ 2.5; ಹಿರಿಯ ನಾಗರಿಕರಿಗೆ ಶೇ 3

31ರಿಂದ 45 ದಿನ: ಸಾಮಾನ್ಯರಿಗೆ ಶೇ 2.75; ಹಿರಿಯ ನಾಗರಿಕರಿಗೆ ಶೇ 3.25

46ರಿಂದ 90 ದಿನ: ಸಾಮಾನ್ಯರಿಗೆ ಶೇ 2.75; ಹಿರಿಯ ನಾಗರಿಕರಿಗೆ ಶೇ 3.25

91ರಿಂದ 120 ದಿನ: ಸಾಮಾನ್ಯರಿಗೆ ಶೇ 3; ಹಿರಿಯ ನಾಗರಿಕರಿಗೆ ಶೇ 3.50

121ರಿಂದ 179 ದಿನ: ಸಾಮಾನ್ಯರಿಗೆ ಶೇ 3.5; ಹಿರಿಯ ನಾಗರಿಕರಿಗೆ ಶೇ 4

180 ದಿನ: ಸಾಮಾನ್ಯರಿಗೆ ಶೇ 4.5; ಹಿರಿಯ ನಾಗರಿಕರಿಗೆ ಶೇ 5

181ರಿಂದ 269 ದಿನ: ಸಾಮಾನ್ಯರಿಗೆ ಶೇ 4.5; ಹಿರಿಯ ನಾಗರಿಕರಿಗೆ ಶೇ 5

270 ದಿನ: ಸಾಮಾನ್ಯರಿಗೆ ಶೇ 4.5; ಹಿರಿಯ ನಾಗರಿಕರಿಗೆ ಶೇ 5

271ರಿಂದ 363 ದಿನ: ಸಾಮಾನ್ಯರಿಗೆ ಶೇ 4.5; ಹಿರಿಯ ನಾಗರಿಕರಿಗೆ ಶೇ 5

364 ದಿನ: ಸಾಮಾನ್ಯರಿಗೆ ಶೇ 4.75; ಹಿರಿಯ ನಾಗರಿಕರಿಗೆ ಶೇ 5.25

365ರಿಂದ 389 ದಿನ: ಸಾಮಾನ್ಯರಿಗೆ ಶೇ 5.10; ಹಿರಿಯ ನಾಗರಿಕರಿಗೆ ಶೇ 5.60

390 ದಿನ (12 ತಿಂಗಳು 25 ದಿನ): ಸಾಮಾನ್ಯರಿಗೆ ಶೇ 5.20; ಹಿರಿಯ ನಾಗರಿಕರಿಗೆ ಶೇ 5.70

391 ದಿನದಿಂದ 23 ತಿಂಗಳಿಗಿಂತ ಕಡಿಮೆ: ಸಾಮಾನ್ಯರಿಗೆ ಶೇ 5.20; ಹಿರಿಯ ನಾಗರಿಕರಿಗೆ ಶೇ 5.70

23 ತಿಂಗಳು 1 ದಿನದಿಂದ 2 ವರ್ಷಕ್ಕಿಂತ ಕಡಿಮೆ: ಸಾಮಾನ್ಯರಿಗೆ ಶೇ 5.25; ಹಿರಿಯ ನಾಗರಿಕರಿಗೆ ಶೇ 5.75

2 ವರ್ಷದಿಂದ ಮೂರು ವರ್ಷಕ್ಕಿಂತ ಕಡಿಮೆ: ಸಾಮಾನ್ಯರಿಗೆ ಶೇ 5.30; ಹಿರಿಯ ನಾಗರಿಕರಿಗೆ ಶೇ 5.80

3 ವರ್ಷ ಮತ್ತು ಮೇಲ್ಪಟ್ಟು ಹಾಗೂ 4 ವರ್ಷಕ್ಕಿಂತ ಕಡಿಮೆ: ಸಾಮಾನ್ಯರಿಗೆ ಶೇ 5.45; ಹಿರಿಯ ನಾಗರಿಕರಿಗೆ ಶೇ 5.95

4 ವರ್ಷ ಮತ್ತು ಮೇಲ್ಪಟ್ಟು ಹಾಗೂ 5 ವರ್ಷಕ್ಕಿಂತ ಕಡಿಮೆ: ಸಾಮಾನ್ಯರಿಗೆ ಶೇ 5.50; ಹಿರಿಯ ನಾಗರಿಕರಿಗೆ ಶೇ 6

5 ವರ್ಷ ಮತ್ತು ಮೇಲ್ಪಟ್ಟು ಹಾಗೂ 10 ವರ್ಷದೊಳಗೆ: ಸಾಮಾನ್ಯರಿಗೆ ಶೇ 5.60; ಹಿರಿಯ ನಾಗರಿಕರಿಗೆ ಶೇ 6.10

ಇದನ್ನೂ ಓದಿ: Tata Vehicles finance: ಕೊಟಕ್ ಮಹೀಂದ್ರಾ ಪ್ರೈಮ್​ನಿಂದ ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನದ ಮೇಲೆ ಸಾಲ ಸೌಲಭ್ಯ