Currency Exchange Rate: ಕುವೈತ್ನ 1 ದಿನಾರ್ ಭಾರತದ 249 ರೂಪಾಯಿಗೆ ಸಮ; ಪ್ರಮುಖ, ನೆರೆಹೊರೆಯ ಕರೆನ್ಸಿ ಮೌಲ್ಯ ಇಲ್ಲಿದೆ
ಪ್ರಮುಖ ದೇಶಗಳ ಕರೆನ್ಸಿ ವಿರುದ್ಧ ಭಾರತದ ರೂಪಾಯಿ ಮೌಲ್ಯ ಎಷ್ಟು ಎಂದು ತಿಳಿಸುವ ಲೇಖನ ಇದು. ಏಪ್ರಿಲ್ 13ನೇ ತಾರೀಕಿಗೆ ಇದ್ದ ಮೌಲ್ಯದ ವಿವರ ಇಲ್ಲಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವ ದೇಶದ ಕರೆನ್ಸಿಗೆ ಮಾನ್ಯತೆ ಇದೆ ಗೊತ್ತಾ? ಅದು ಅಮೆರಿಕದ ಡಾಲರ್. ಆದರೆ ಮೌಲ್ಯ ಅನ್ನೋ ವಿಚಾರಕ್ಕೆ ಬಂದಾಗ ಇತರ ದೇಶ, ವಲಯದ ಕರೆನ್ಸಿಗಳಿಗೆ ಬೆಲೆ ಜಾಸ್ತಿ. ಈಗ ಭಾರತದ ರೂಪಾಯಿಯಲ್ಲೇ ನೋಡುತ್ತಾ ಕೆಲವು ದೇಶಗಳ ಕರೆನ್ಸಿಗೆ ಎಷ್ಟು ನೀಡಬೇಕಾಗುತ್ತದೆ ಎಂಬುದನ್ನು ಗಮನಿಸೋಣ. ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಕೆಲಸ ಮಾಡುತ್ತಿರುವವರು, ಕುತೂಹಲಕ್ಕಾದರೂ ವಿವಿಧ ಕರೆನ್ಸಿಗಳಿಗೆ ಭಾರತದ ರೂಪಾಯಿ ಮೌಲ್ಯ ಎಷ್ಟಿದೆ ಎಂದು ತಿಳಿದುಕೊಳ್ಳುವುದಕ್ಕೆ ಬಯಸುವವರಿಗೆ ಏಪ್ರಿಲ್ 13ನೇ ತಾರೀಕಿನ ಬುಧವಾರದ ವಿನಿಮಯ ದರ (Exchange Rate) ತಿಳಿಸಲಾಗುತ್ತಿದೆ. ಇನ್ನು ಹೆಚ್ಚಿನ ಪೀಠಿಕೆ ಇಲ್ಲದೆ ನೋಡೋಣವಾ? ಮೊದಲ ಸಾಲಿನಲ್ಲಿ ನೀಡುವುದು ವಿವಿಧ ದೇಶಗಳ ಕರೆನ್ಸಿಗಳು ಮತ್ತು ಅದರ ಎದುರಿಗೆ ಭಾರತದ ರೂಪಾಯಿ ಮೌಲ್ಯ ನೀಡಲಾಗುತ್ತಿದೆ.
ಅಮೆರಿಕ ಯುಎಸ್ಡಿ 1ಕ್ಕೆ= 76.07000 ಭಾರತದ ರೂಪಾಯಿ
ಬ್ರಿಟಿಷ್ ಪೌಂಡ್ ಸ್ಟರ್ಲಿಂಗ್ಗೆ= 99.65100 ಭಾರತದ ರೂಪಾಯಿ
ಯುರೋಗೆ= 82.76400 ಭಾರತದ ರೂಪಾಯಿ
ಚೀನಾದ ಯುವಾನ್= 11.93980 ಭಾರತದ ರೂಪಾಯಿ
ಜಪಾನ್ನ ಯೆನ್= 0.60607 (60 ಪೈಸೆ)
ಕುವೈತ್ ದಿನಾರ್= 249.3400 ಭಾರತದ ರೂಪಾಯಿ
ಇರಾನ್ನ ರಿಯಾಲ್= 0.00180 ಪೈಸೆ
ಬಾಂಗ್ಲಾದೇಶ್ ಟಾಕಾ= 0.88655 (88 ಪೈಸೆ)
ಶ್ರೀಲಂಕಾ ರೂಪಾಯಿ= 0.23611 (23 ಪೈಸೆ)
ಪಾಕಿಸ್ತಾನದ ರೂಪಾಯಿ= 0.41895 (41 ಪೈಸೆ)
ನೇಪಾಳದ ರೂಪಾಯಿ= 0.62743 (62 ಪೈಸೆ)
ರಷ್ಯಾದ ರೂಬೆಲ್= 0.94373 (94 ಪೈಸೆ)
ಸಾಮಾನ್ಯವಾಗಿ ಅಂತರರಾಷ್ಟ್ರೀಯ ವಹಿವಾಟುಗಳು, ಅಂದರೆ ತೈಲ ಖರೀದಿ ಸೇರಿದಂತೆ ಮೊದಲಾದವುಗಳಿಗೆ ಅಮೆರಿಕನ್ ಡಾಲರ್ ಬಳಸಲಾಗುತ್ತದೆ. ಆದರೆ ಯುನೈಟೆಡ್ ಕಿಂಗ್ಡಮ್ನ ಪೌಂಡ್ ಸ್ಟರ್ಲಿಂಗ್, ಯುರೋಪ್ನಾದ್ಯಂತ ಮಾನ್ಯತೆ ಪಡೆದ ಯುರೋ, ಕುವೈತ್ ದಿನಾರ್ ಸೇರಿದಂತೆ ಇತರ ಕರೆನ್ಸಿಗಳಿಗೆ ಭಾರತದ ರೂಪಾಯಿ ಲೆಕ್ಕದಲ್ಲಿ ಹೆಚ್ಚು ಮೌಲ್ಯವಿದೆ.
(ಮಾಹಿತಿ ಮೂಲ: goodreturns.in)
ಇದನ್ನೂ ಓದಿ: Japan Currency Yen: ಅಮೆರಿಕ ಡಾಲರ್ ವಿರುದ್ಧ ಜಪಾನ್ ಕರೆನ್ಸಿ ಇಪ್ಪತ್ತು ವರ್ಷಗಳ ಕನಿಷ್ಠ ಮಟ್ಟಕ್ಕೆ