Lakshadweep Resorts: ಲಕ್ಷದ್ವೀಪದಲ್ಲಿ ನಿರ್ಮಾಣವಾಗಲಿವೆ ಎರಡು ವಿಶ್ವದರ್ಜೆ ರೆಸಾರ್ಟ್​ಗಳು; ತಾಜ್ ಗ್ರೂಪ್​ನ ಯೋಜನೆ

|

Updated on: Jan 09, 2024 | 11:14 AM

World Class Taj Hotels in Lakshadweep: ಲಕ್ಷದ್ವೀಪದ ಎರಡು ದ್ವೀಪಗಳಲ್ಲಿ ತಾಜ್ ಹೋಟೆಲ್ ಮತ್ತು ರೆಸಾರ್ಟ್​ಗಳು ನಿರ್ಮಿತವಾಗುತ್ತಿವೆ. 2026ಕ್ಕೆ ಇವು ಅನಾವರಣಗೊಳ್ಳುತ್ತವೆ. 2023ರ ಜನವರಿ ತಿಂಗಳಲ್ಲೇ ಟಾಟಾ ಗ್ರೂಪ್ ಸಂಸ್ಥೆ ಎರಡು ವಿಶ್ವದರ್ಜೆ ಹೋಟೆಲ್​ಗಳನ್ನು ಲಕ್ಷದ್ವೀಪದಲ್ಲಿ ನಿರ್ಮಿಸುವುದಾಗಿ ಘೋಷಣೆ ಮಾಡಿತ್ತು. ಸುಹೇಲಿ ಮತ್ತು ಕಡಮತ್ ದ್ವೀಪಗಳಲ್ಲಿ ನಿರ್ಮಾಣವಾಗುತ್ತಿರುವ ತಾಜ್ ಹೋಟೆಲ್​ಗಳು ತಲಾ 110 ಲಕ್ಷುರಿ ವಿಲ್ಲಾಗಳನ್ನು ಹೊಂದಿರುತ್ತವೆ.

Lakshadweep Resorts: ಲಕ್ಷದ್ವೀಪದಲ್ಲಿ ನಿರ್ಮಾಣವಾಗಲಿವೆ ಎರಡು ವಿಶ್ವದರ್ಜೆ ರೆಸಾರ್ಟ್​ಗಳು; ತಾಜ್ ಗ್ರೂಪ್​ನ ಯೋಜನೆ
ಲಕ್ಷದ್ವೀಪ
Follow us on

ನವದೆಹಲಿ, ಜನವರಿ 9: ಮಾಲ್ಡೀವ್ಸ್ ವಿವಾದದ ಮಧ್ಯೆ ಲಕ್ಷದ್ವೀಪದ (lakshadweep) ಬಗ್ಗೆ ಅಂತಾರಾಷ್ಟ್ರೀಯ ಗಮನ ನೆಟ್ಟಿದ್ದು, ಜೊತೆ ಜೊತೆಗೆ ಅಲ್ಲಿನ ಇನ್​ಫ್ರಾಸ್ಟ್ರಕ್ಚರ್ ಬಗ್ಗೆ ನಕಾರಾತ್ಮಕ ಧ್ವನಿಗಳೂ ಸೇರಿವೆ. ಇದಕ್ಕೆ ಉತ್ತರವೋ ಎಂಬಂತೆ ಲಕ್ಷದ್ವೀಪದಲ್ಲಿ ವಿಶ್ವದರ್ಜೆಯ ಹೋಟೆಲ್, ರೆಸಾರ್ಟ್​ಗಳು ನಿರ್ಮಾಣವಾಗುತ್ತಿರುವ ಸುದ್ದಿ ಬಂದಿದೆ. ಟಾಟಾ ಗ್ರೂಪ್ ಸಂಸ್ಥೆ ಲಕ್ಷದ್ವೀಪದ ಸುಹೇಲಿ (suheli island) ಮತ್ತು ಕಡಮತ್ (Kadmat island) ದ್ವೀಪಗಳಲ್ಲಿ ಎರಡು ರೆಸಾರ್ಟ್ ನಿರ್ಮಿಸುತ್ತಿದೆ. ಇವು 2026ಕ್ಕೆ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಲಕ್ಷದ್ವೀಪದಲ್ಲಿ ಟಾಟಾ ಸಂಸ್ಥೆಯಿಂದ ರೆಸಾರ್ಟ್​ಗಳ ನಿರ್ಮಾಣ ಮಾಡುವ ನಿರ್ಧಾರ ದಿಢೀರ್ ಕೈಗೊಂಡಿದ್ದಲ್ಲ. 2023ರ ಜನವರಿ ತಿಂಗಳಲ್ಲೇ ಟಾಟಾ ಗ್ರೂಪ್ ಸಂಸ್ಥೆ ಲಕ್ಷದ್ವೀಪದಲ್ಲಿ ಗ್ರೀನ್​ಫೀಲ್ಡ್ ಪ್ರಾಜೆಕ್ಟ್ ಆರಂಭಿಸುವುದಾಗಿ ಘೋಷಿಸಿತ್ತು. ಟಾಟಾ ಸನ್ಸ್​ಗೆ ಸೇರಿದ ಐಎಚ್​ಸಿಎಲ್ ಸಂಸ್ಥೆ ಗ್ರೀನ್​ಫೀಲ್ಡ್ ಪ್ರಾಜೆಕ್ಟ್ ಅಡಿಯಲ್ಲಿ ತಾಜ್ ಬ್ರ್ಯಾಂಡ್​ನ ಎರಡು ರೆಸಾರ್ಟ್​​ಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಇದನ್ನೂ ಓದಿ: EaseMyTrip: ವೈಯಕ್ತಿಕ ಲಾಭಕ್ಕಿಂತ ರಾಷ್ಟ್ರ ಹಿತಾಸಕ್ತಿ ಮುಖ್ಯ; ಮಾಲ್ಡೀವ್ಸ್ ಅಲ್ಲ, ಲಕ್ಷದ್ವೀಪ, ಅಯೋಧ್ಯೆ ಪ್ಯಾಕೇಜ್ ಕೊಡ್ತೀವಿ: ಈಸ್ ಮೈ ಟ್ರಿಪ್

ಈಗ ಲಕ್ಷದ್ವೀಪದ ಇನ್​ಫ್ರಾಸ್ಟ್ರಕ್ಚರ್ ಬಗ್ಗೆ ಪ್ರಶ್ನೆಗಳು ಉದ್ಭವವಾದ ಹಿನ್ನೆಲೆಯಲ್ಲಿ ಟಾಟಾದ ತಾಜ್ ಬ್ರ್ಯಾಂಡ್ ಹೋಟೆಲ್​ಗಳ ಸಂಗತಿ ಮುನ್ನೆಲೆಗೆ ಬಂದಿದೆ.

‘ಲಕ್ಷದ್ವೀಪದಲ್ಲಿ ಬಹಳ ರಮ್ಯವೆನಿಸುವ ಬೀಚ್​ಗಳು ಮತ್ತು ಹವಳ ಬಂಡೆಗಳು (coral reef) ಕಣ್ಮನ ಸೆಳೆಯುತ್ತವೆ. ಎರಡು ವಿಶ್ವದರ್ಜೆ ತಾಜ್ ರೆಸಾರ್ಟ್​ಗಳು ದೇಶೀಯ ಮತ್ತು ವಿದೇಶೀ ಪ್ರವಾಸಿಗರನ್ನು ಸೆಳೆಯುತ್ತವೆ’ ಎಂದು ಯೋಜನೆ ಘೋಷಿಸುವ ವೇಳೆಯೆ ಐಎಚ್​ಸಿಎಲ್ ಎಂಡಿ ಮತ್ತು ಸಿಇಒ ಪುನೀತ್ ಛಾತವಾಲ್ ಹೇಳಿದ್ದರು.

ಸುಹೇಲಿಯಲ್ಲಿರುವ ತಾಜ್ ರೆಸಾರ್ಟ್ ಬೀಚ್ ಬಳಿಯೇ ಇರುತ್ತದೆ. ಇದರಲ್ಲಿ 60 ವಿಲ್ಲಾ ಮತ್ತು 50 ವಾಟರ್ ವಿಲ್ಲಾ ಸೇರಿದಂತೆ 110 ಲಕ್ಷುರಿ ರೂಮುಗಳು ಇರುತ್ತವೆ.

ಇದನ್ನೂ ಓದಿ: Maldives: ಭಾರತದಲ್ಲಿ ಟ್ರೆಂಡ್ ಆಗುತ್ತಿದೆ #UninstallMakeMyTrip; ಯಾಕೆ ಮೇಕ್ ಮೈ ಟ್ರಿಪ್ ಮೇಲೆ ಆಕ್ರೋಶ?

ಇನ್ನು, ದೊಡ್ಡ ಸರೋವರವೊಂದನ್ನು ಒಳಗೊಂಡಿರುವ ಕಡಮತ್ ದ್ವೀಪದಲ್ಲಿ ನಿರ್ಮಿತವಾಗುತ್ತಿರುವ ತಾಜ್ ಹೋಟೆಲ್​ನಲ್ಲಿ 75 ಬೀಚ್ ವಿಲ್ಲಾ ಮತ್ತು 35 ವಾಟರ್ ವಿಲ್ಲಾಗಳು ಇರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ