AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಝೀ-ಸೋನಿ ಒಪ್ಪಂದ ಮುರಿದುಬೀಳುವ ಭೀತಿ; ಷೇರುಪೇಟೆಯಲ್ಲಿ ಝೀ ಅಧೋಗತಿ; ಒಪ್ಪಂದ ಅಪಾಯಕ್ಕೆ ಸಿಲುಕಲು ಏನು ಕಾರಣ?

Zee-Sony Merger saga: ಸೋನಿಯ ಭಾರತೀಯ ವ್ಯವಹಾರಗಳು ಝೀ ಎಂಟರ್ಟೈನ್ಮೆಂಟ್ ಜೊತೆ ವಿಲೀನಗೊಳ್ಳಲು ಮಾಡಿಕೊಂಡಿದ್ದ ಒಪ್ಪಂದ ರದ್ದಾಗಲಿದೆ. 10 ಬಿಲಿಯನ್ ಡಾಲರ್ ಒಪ್ಪಂದದಿಂದ ಹಿಂದಕ್ಕೆ ಸರಿಯಲು ಸೋನಿ ಯೋಜಿಸುತ್ತಿದ್ದು ಜನವರಿ 22ಕ್ಕೆ ನೋಟೀಸ್ ಕೊಡಬಹುದು ಎನ್ನಲಾಗಿದೆ. ಝೀ ಎಂಟರ್ಟೈನ್ಮೆಂಟ್​ನ ಎಂಡಿ ಪುನೀತ್ ಗೋಯಂಕಾ ಅವರು ವಿಲೀನದ ನಂತರದ ಸಂಸ್ಥೆಗೆ ಸಿಇಒ ಆಗುವುದಕ್ಕೆ ಸೋನಿ ಆಕ್ಷೇಪಣೆ ಇದೆ.

ಝೀ-ಸೋನಿ ಒಪ್ಪಂದ ಮುರಿದುಬೀಳುವ ಭೀತಿ; ಷೇರುಪೇಟೆಯಲ್ಲಿ ಝೀ ಅಧೋಗತಿ; ಒಪ್ಪಂದ ಅಪಾಯಕ್ಕೆ ಸಿಲುಕಲು ಏನು ಕಾರಣ?
ಝೀ-ಸೋನಿ ಒಪ್ಪಂದ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 09, 2024 | 12:33 PM

Share

ನವದೆಹಲಿ, ಜನವರಿ 9: ಝೀ ಎಂಟರ್ಟೈನ್ಮೆಂಟ್ ಜೊತೆ ಸೋನಿ ತನ್ನ ಭಾರತೀಯ ವ್ಯವಹಾರಗಳನ್ನು (Sony India Operations) ವಿಲೀನಗೊಳಿಸಲು ಮಾಡಿಕೊಂಡಿದ್ದ ಒಪ್ಪಂದದಿಂದ ಹಿಂದಕ್ಕೆ ಸರಿಯಲು ಯೋಜಿಸುತ್ತಿರುವ ಸುದ್ದಿ ನಿನ್ನೆ ಸೋಮವಾರದಿಂದ ಹರಿದಾಡುತ್ತಿದೆ. ಅದರ ಪರಿಣಾಮವಾಗಿ ಇಂದು ಮಂಗಳವಾರ ಷೇರುಪೇಟೆಯಲ್ಲಿ ಝೀ ಎಂಟರ್ಟೈನ್ಮೆಂಟ್​ನ (Zee Entertainment Ltd) ಷೇರುಗಳು ತರಗೆಲೆಯಂತೆ ಹಾರುತ್ತಿವೆ. ಬೆಳಗಿನ ವಹಿವಾಟಿನಲ್ಲಿ ಬರೋಬ್ಬರಿ 10 ಪ್ರತಿಶತದಷ್ಟು ಷೇರು ಕುಸಿತ ಕಂಡಿದೆ. ನಿನ್ನೆ ದಿನಾಂತ್ಯದಲ್ಲಿ 278 ರೂ ಇದ್ದ ಝೀ ಷೇರುಬೆಲೆ ಇಂದು ಬೆಳಗ್ಗೆ 27 ರೂಗಳಷ್ಟು ಕುಸಿತ ಕಂಡಿದೆ.

ಝೀ ಜೊತೆಗಿನ ಒಪ್ಪಂದದಿಂದ ಸೋನಿ ಯಾಕೆ ಹೊರಬೀಳುತ್ತಿದೆ?

ಜಪಾನ್ ಮೂಲದ ಸೋನಿ ಸಂಸ್ಥೆ ತನ್ನ ಭಾರತೀಯ ವ್ಯವಹಾರಗಳನ್ನು ಝೀ ಎಂಟರ್ಟೈನ್ಮೆಂಟ್ ಜೊತೆ ವಿಲೀನಗೊಳಿಸಲು ಮುಂದಾಗಿತ್ತು. ಈ ನಿಟ್ಟಿನಲ್ಲಿ 10 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದವಾಗಿತ್ತು. ಇದು ನೆರವೇರಿದಲ್ಲಿ ಭಾರತದ ಅತಿದೊಡ್ಡ ಬ್ರಾಡ್​ಕ್ಯಾಸ್ಟರ್ ರೂಪುಗೊಳ್ಳುತ್ತಿತ್ತು.

ಇದನ್ನೂ ಓದಿ: Narendra Modi: ಗುಜರಾತ್ ಗ್ಲೋಬಲ್ ಟ್ರೇಡ್ ಶೋಗೆ ಮೋದಿ ಚಾಲನೆ; ಇದು ಭಾರತದ ಅತಿದೊಡ್ಡ ವ್ಯಾಪಾರ ಪ್ರದರ್ಶನ

ಈ ಒಪ್ಪಂದದಲ್ಲಿ ಹಲವು ಷರತ್ತುಗಳನ್ನು ಸೋನಿ ಮುಂದಿಟ್ಟಿತ್ತು. ಇವುಗಳನ್ನು ಈಡೇರಿಸಲಾಗಿಲ್ಲ ಎಂಬುದು ಸೋನಿ ಎತ್ತಿರುವ ಆಕ್ಷೇಪವಾಗಿದೆ. ಬ್ಲೂಮ್​ಬರ್ಗ್ ವರದಿಯ ಪ್ರಕಾರ, ವಿಲೀನಗೊಂಡ ಸಂಸ್ಥೆಗೆ ಪುನೀತ್ ಗೋಯಂಕಾ ಸಿಇಒ ಆಗಬಾರದು ಎಂಬುದು ಸೋನಿ ಹಾಕಿದ್ದ ಒಂದು ಷರತ್ತು.

ಝೀ ಎಂಟರ್ಟೈನ್ಮೆಂಟ್​ನಲ್ಲಿ ಅವ್ಯವಹಾರ ನಡೆಸಿದ ಆರೋಪಗಳ ಕಳಂಕ ಪುನೀತ್ ಗೋಯಂಕಾ ಮತ್ತು ಸುಭಾಷ್ ಚಂದ್ರ ಅವರಲ್ಲಿ ಇದೆ. ಅವರ ವಿರುದ್ಧ ನಡೆಯುತ್ತಿರುವ ತನಿಖೆ ಮುಗಿಯುವವರೆಗೂ ಅವರಿಬ್ಬರು ಯಾವುದೇ ಮುಖ್ಯ ಹುದ್ದೆ ಹೊಂದುವಂತಿಲ್ಲ ಎಂದು ಸೆಬಿ 2023ರ ಆಗಸ್ಟ್​ನಲ್ಲಿ ನಿರ್ಬಂಧ ಹಾಕಿತ್ತು. ಅದಾದ ಬಳಿಕ ಎಸ್​ಎಟಿ ನ್ಯಾಯಮಂಡಳಿ ಸೆಬಿ ನಿಷೇಧ ಕ್ರಮವನ್ನು ರದ್ದುಗೊಳಿಸಿತು. ಪುನೀತ್ ಗೋಯಂಕಾ ಅವರು ಅಕ್ಟೋಬರ್ 30ರಂದು ಝೀ ಎಂಟರ್ಟೈನ್ಮೆಂಟ್​ನ ಎಂಡಿ ಮತ್ತು ಸಿಇಒ ಆಗಿ ಮರಳಿದ್ದರು.

ಇದನ್ನೂ ಓದಿ: MSMEs: ಭಾರತದ ಜಿಡಿಪಿಗೆ ಎಂಎಸ್​ಎಂಇಗಳ ಕೊಡುಗೆ ಶೇ. 30; ಕರ್ನಾಟಕದಲ್ಲಿ ಎಷ್ಟಿವೆ ಸಣ್ಣ ಉದ್ದಿಮೆಗಳು?

ಆದರೆ, ಪುನೀತ್ ಗೋಯಂಕಾ ಅವರನ್ನು ನೂತನ ಸಂಸ್ಥೆಗೆ ಸಿಇಒ ಆಗಿ ಒಪ್ಪಿಕೊಳ್ಳಲು ಸೋನಿ ಸುತಾರಾಂ ತಯಾರಿಲ್ಲ ಎನ್ನಲಾಗಿದೆ. ಒಪ್ಪಂದ ರದ್ದುಗೊಳಿಸುವ ನೋಟೀಸ್ ಅನ್ನು ಕೊಡಲು ಸೋನಿ ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಜನವರಿ 22ಕ್ಕೆ ನೋಟೀಸ್ ನೀಡುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ