PepsiCo Layoffs: ನೂರಾರು ಉದ್ಯೋಗಿಗಳನ್ನು ವಜಾಗೊಳಿಸಲಿದೆ ಪೆಪ್ಸಿಕೊ

ಪೆಪ್ಸಿಕೊ ವಿಶ್ವದಾದ್ಯಂತ 3,09,000 ಮಂದಿ ಉದ್ಯೋಗಿಗಳನ್ನು ಹೊಂದಿದೆ. ಈ ಪೈಕಿ 1.29,000 ಉದ್ಯೋಗಿಗಳು ಅಮೆರಿಕದ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

PepsiCo Layoffs: ನೂರಾರು ಉದ್ಯೋಗಿಗಳನ್ನು ವಜಾಗೊಳಿಸಲಿದೆ ಪೆಪ್ಸಿಕೊ
ಸಾಂದರ್ಭಿಕ ಚಿತ್ರImage Credit source: PTI
Follow us
TV9 Web
| Updated By: Ganapathi Sharma

Updated on: Dec 06, 2022 | 11:14 AM

ನ್ಯೂಯಾರ್ಕ್: ಕಂಪನಿಯ ಗಾತ್ರವನ್ನು ಕಿರಿದುಗೊಳಿಸುವುದಕ್ಕಾಗಿ ನೂರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಾಗಿ (Layoffs) ತಿಂಡಿ ಮತ್ತು ಪಾನೀಯ ತಯಾರಿಕಾ ಕಂಪನಿ ಪೆಪ್ಸಿಕೊ (PepsiCo) ತಿಳಿಸಿದೆ. ಪ್ರಧಾನ ಕಚೇರಿ ಚಿಕಾಗೊ ಮತ್ತು ನ್ಯೂಯಾರ್ಕ್, ಟೆಕ್ಸಾಸ್​ನ ಕಚೇರಿಗಳಿಂದಲೂ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಕಂಪನಿ ತಿಳಿಸಿದೆ.

ಕಂಪನಿಯ ಗಾತ್ರವನ್ನು ಸಣ್ಣ ಮಾಡಿ ದಕ್ಷತೆ ಹೆಚ್ಚಿಸುವ ಸಲುವಾಗಿ ವಜಾಕ್ಕೆ ಮುಂದಾಗಿರುವ ಬಗ್ಗೆ ಪೆಪ್ಸಿಕೊ ತನ್ನ ಉದ್ಯೋಗಿಗಳಿಗೆ ಕಳುಹಿಸಿರುವ ಪತ್ರದ ಪ್ರತಿ ದೊರೆತಿದೆ ಎಂದು ‘ದಿ ವಾಲ್​ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ. ತಿಂಡಿ ತಯಾರಿ ಮತ್ತು ಮಾರಾಟ ಘಟಕಕ್ಕಿಂತಲೂ ಪಾನೀಯ ತತಯಾರಿಕಾ ಘಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಡಿತ ಮಾಡಲಾಗುವುದು. ತಿಂಡಿ ತಯಾರಿ ಮತ್ತು ಮಾರಾಟ ಘಟಕದಲ್ಲಿ ಈಗಾಗಲೇ ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ತರಲಾಗಿದೆ ಎಂದು ಪೆಪ್ಸಿಕೊ ಹೇಳಿರುವುದಾಗಿ ವರದಿ ತಿಳಿಸಿದೆ.

ಪೆಪ್ಸಿಕೊ ವಿಶ್ವದಾದ್ಯಂತ 3,09,000 ಮಂದಿ ಉದ್ಯೋಗಿಗಳನ್ನು ಹೊಂದಿದೆ. ಈ ಪೈಕಿ 1.29,000 ಉದ್ಯೋಗಿಗಳು ಅಮೆರಿಕದ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ತಪ್ಪಾದ ಯುಪಿಐ ಐಡಿಗೆ ಹಣ ಕಳುಹಿಸಿದ್ದರೆ ರಿಫಂಡ್ ಮಾಡಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಕಚ್ಚಾ ವಸ್ತುಗಳ ಬೆಲೆ ಹೆಚ್ಚಳ, ಸಾಗಾಟ ವೆಚ್ಚ, ಕೂಲಿ ಹೆಚ್ಚಳದ ಕಾರಣ ವೆಚ್ಚ ಸರಿದೂಗಿಸುವುದಕ್ಕಾಗಿ ಪೆಪ್ಸಿಕೊ ಮತ್ತು ಇತರ ಕಂಪನಿಗಳು ತಿಂಡಿಗಳು ಮತ್ತು ಪಾನೀಯಗಳ ದರ ಹೆಚ್ಚಳ ಮಾಡುತ್ತಿವೆ. ದರ ಹೆಚ್ಚಳದ ಹೊರತಾಗಿಯೂ ತಿಂಡಿಗಳು ಮತ್ತು ಪಾನೀಯಗಳ ಬೇಡಿಕೆಯಲ್ಲಿ ಕುಸಿತವಾಗಿಲ್ಲ ಎಂದು ವರದಿ ತಿಳಿಸಿದೆ.

ಆದಾಯ ಹೆಚ್ಚಳದ ಭರವಸೆ ವ್ಯಕ್ತಪಡಿಸಿದ್ದ ಪೆಪ್ಸಿಕೊ

ಮೂರನೇ ತ್ರೈಮಾಸಿಕದಲ್ಲಿ ದರ ಹೆಚ್ಚಳದ ಹೊರತಾಗಿಯೂ ಆದಾಯ ಗಳಿಕೆ ಉತ್ತಮವಾಗಿರುವ ನಿರೀಕ್ಷೆ ಇದೆ ಎಂದು ಪೆಪ್ಸಿಕೊ ಸಿಎಫ್​ಒ ಹಗ್ ಜಾನ್​ಸ್ಟನ್ ಹೂಡಿಕೆದಾರರಿಗೆ ಮಾಹಿತಿ ನೀಡಿದ್ದರು. ಆದಾಗ್ಯೂ ಕಂಪನಿಯು ಈಗ ಉದ್ಯೋಗ ಕಡಿತದ ಮೊರೆ ಹೋಗುವುದಾಗಿ ತಿಳಿಸಿದೆ.

ಈ ನಿರ್ಧಾರದೊಂದಿಗೆ ಪೆಪ್ಸಿಕೊ ಸಹ ಅಮೆಜಾನ್, ಮೆಟಾ, ಟ್ವಿಟರ್ ಸಾಲಿಗೆ ಸೇರಿದೆ. ಅಮೆಜಾನ್, ಮೆಟಾ ಹಾಗೂ ಟ್ವಿಟರ್ ಇತ್ತೀಚೆಗಷ್ಟೇ ಸಾವಿರಾರು ಸಂಖ್ಯೆಯ ಉದ್ಯೋಗಿಗಳನ್ನು ವಜಾಗೊಳಿಸಿವೆ. ಅಮೆಜಾನ್ ಭಾರತದಲ್ಲಿಯೂ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ