Leena: 703 ಕೋಟಿ ಕೊಟ್ಟು ಡಬಲ್ ಫ್ಲ್ಯಾಟ್ ಖರೀದಿಸಿದ ಮಹಿಳೆ; ಈಕೆ ನೀತಾ ಅಂಬಾನಿ ಅಲ್ಲ… ಲೀನಾ ತಿವಾರಿ; ಯಾರೀಕೆ?

Leena Tewari buys costliest residential properties: ಮುಂಬೈನ ವರ್ಲಿ ಬೀಚ್ ಬಳಿ 40 ಅಂತಸ್ತಿನ ಕಟ್ಟಡದಲ್ಲಿ ಲೀನಾ ತಿವಾರಿ ಅವರು 703 ಕೋಟಿ ರೂಗೆ ಎರಡು ಫ್​ಲ್ಯಾಟ್ ಖರೀದಿಸಿದ್ದಾರೆ. 32ರಿಂದ 35 ಅಂತಸ್ತಿನಲ್ಲಿರುವ ಈ ಎರಡು ಫ್ಲ್ಯಾಟ್​​ಗಳು ಡುಪ್ಲೆಕ್ಸ್ ಆಗಿವೆ. ಒಂದು ಚದರ ಅಡಿಗೆ 2.83 ಲಕ್ಷ ರೂ ಬೆಲೆಯಂತೆ 22,572 ಚದರಡಿ ವಿಸ್ತೀರ್ಣದ ಈ ಎರಡು ಫ್ಲ್ಯಾಟ್​​​ಗಳನ್ನು ಲೀನಾ ಖದೀದಿ ಮಾಡಿದ್ದಾರೆ.

Leena: 703 ಕೋಟಿ ಕೊಟ್ಟು ಡಬಲ್ ಫ್ಲ್ಯಾಟ್ ಖರೀದಿಸಿದ ಮಹಿಳೆ; ಈಕೆ ನೀತಾ ಅಂಬಾನಿ ಅಲ್ಲ... ಲೀನಾ ತಿವಾರಿ; ಯಾರೀಕೆ?
ಲೀನಾ ತಿವಾರಿ

Updated on: May 30, 2025 | 2:41 PM

ಮುಂಬೈ, ಮೇ 30: ಒಂದು ಸಾಧಾರಣ ಫ್ಲ್ಯಾಟ್ 1ರಿಂದ 5 ಕೋಟಿ ರೂ ಇರುವುದನ್ನು ನೋಡಿದ್ದೇವೆ. ದೊಡ್ಡ ದೊಡ್ಡ ಸೆಲಬ್ರಿಟಿಗಳು 50-60 ಕೋಟಿ ರೂ ಕೊಟ್ಟು ಫ್ಲ್ಯಾಟ್​​ಗಳನ್ನು ಖರೀದಿಸುವುದಿದೆ. ಮುಕೇಶ್ ಅಂಬಾನಿಯಂತಹರು ಸಾವಿರಾರು ಕೋಟಿ ರೂ ಕೊಟ್ಟು ಬಂಗಲೆಯನ್ನೇ ಖರೀದಿಸಿರುವುದುಂಟು. ಆದರೆ, ಮಹಿಳಾ ಉದ್ಯಮಿ ಲೀನಾ ತಿವಾರಿ (Leena Tewari) ಬರೋಬ್ಬರಿ 703 ಕೋಟಿ ರೂ ಕೊಟ್ಟು ಎರಡು ಫ್ಲ್ಯಾಟ್ ಖರೀದಿಸಿ ದೊಡ್ಡ ಸುದ್ದಿ ಮಾಡಿದ್ದಾರೆ. ಮುಂಬೈನ ವೋರ್ಲಿ (Worli, Mumbai) ಬಳಿ 40 ಅಂತಸ್ತಿನ ಅಪಾರ್ಟ್ಮೆಂಟ್​ನಲ್ಲಿ ಎರಡು ಡುಪ್ಲೆಕ್ಸ್ ಮನೆಗಳನ್ನು ಲೀನಾ ಖರೀದಿಸಿದ್ದಾರೆ.

ಮುಂಬೈನ ವರ್ಲಿಯಲ್ಲಿ ಕಡಲಿಗೆ ಮುಖ ಮಾಡಿರುವ 40 ಅಂತಸ್ತಿನ ನಮನ್ ಕ್ಸಾನಾ ಕಟ್ಟಡದ 32, 33, 34 ಮತ್ತು 35ನೇ ಅಂತಸ್ತಿನಲ್ಲಿ ಈ ಎರಡು ಡುಪ್ಲೆಕ್ಸ್ ಮನೆಗಳಿವೆ. ಒಟ್ಟು ವಿಸ್ತೀರ್ಣ 22,572 ಚದರಡಿ ಇದೆ. ಈ ಎರಡು ಡುಪ್ಲೆಕ್ಸ್ ಮನೆಗಳಿಗೆ 639 ಕೋಟಿ ರೂ ನೀಡಿದ್ದಾರೆ. ಸ್ಟ್ಯಾಂಪ್ ಡ್ಯೂಟಿ ಮತ್ತು ಜಿಎಸ್​​ಟಿಯೇ 63.9 ಕೋಟಿ ರೂ ಆಗಿದೆ. ಇದನ್ನೂ ಸೇರಿ ಒಟ್ಟಾರೆ 703 ಕೋಟಿ ರೂ ಅನ್ನು ಇವರು ಈ ಎರಡು ಮನೆ ಖರೀದಿಗೆ ವ್ಯಯಿಸಿದ್ದಾರೆ.

ಇದನ್ನೂ ಓದಿ: ಭಾರತದ ಮಿಲಿಟರಿ ಉತ್ಪಾದನೆ ಮತ್ತು ರಫ್ತು ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ

ಇದನ್ನೂ ಓದಿ
ಹೊಸ ದಾಖಲೆ ಬರೆದ ಭಾರತದ ಡಿಫೆನ್ಸ್ ಉತ್ಪಾದನೆ
18 ವರ್ಷ ಬಳಿಕ ಸತತ ಲಾಭ ಕಂಡ ಬಿಎಸ್ಸೆನ್ನೆಲ್
ರಫ್ತಿಗೆ ಸಿದ್ಧವಾಗುತ್ತಿರುವ ಬುದ್ಧ ಅಕ್ಕಿ; ಏನಿದರ ವಿಶೇಷತೆ?
ವಯಸ್ಸಾದವರಿಂದ ದೇಶಕ್ಕೆ ಕೊಡುಗೆ: ರೋಹಿಣಿ ನಿಲೇಕಣಿ ವರದಿ

ಒಂದು ಚದರಡಿಗೆ 2.83 ಲಕ್ಷ ರೂಗಿಂತ ಹೆಚ್ಚು ಬೆಲೆಗೆ ಇವರು ಮನೆ ಖರೀದಿಸಿದಂತಾಗಿದೆ. ಎಷ್ಟು ಬೆಲೆ ಎಂದರೆ, ನೀವು 30×40 ನಿವೇಶನವನ್ನು 34 ಕೋಟಿ ರೂಗೆ ಖರೀದಿಸಿದಕ್ಕೆ ಸಮ.

ಯಾರು ಈ ಲೀನಾ ತಿವಾರಿ?

ಲೀನಾ ತಿವಾರಿ ಭಾರತದ ಅತಿ ಶ್ರೀಮಂತ ಮಹಿಳೆಯರಲ್ಲಿ ಒಬ್ಬರು. ಮುಂಬೈನ ಯುಎಸ್​​ವಿ ಫಾರ್ಮಾಸ್ಯೂಟಿಕಲ್ಸ್ (USV Pharmaceuticals) ಎನ್ನುವ ಕಂಪನಿಯ ಮುಖ್ಯಸ್ಥೆ. ನೀತಾ ಅಂಬಾನಿ ಅವರ ಆಪ್ತ ಗೆಳತಿಯಾದರೂ ಲೀನಾ ಅವರು ಮಾಧ್ಯಮಗಳಿಂದ ದೂರ ಇರುತ್ತಾರೆ. ಸುಮಾರು 4 ಬಿಲಿಯನ್ ಡಾಲರ್ ಆಸುಪಾಸು ಮೌಲ್ಯದ ಆಸ್ತಿವಂತೆಯಾದ ಇವರು ಹಾಗೂ ಇವರ ಪತಿ ಪ್ರಶಾಂತ್ ತಿವಾರಿ ಇಬ್ಬರೂ ಕೂಡ ಪ್ರಚಾರ ಪ್ರಿಯರಲ್ಲ.

ಇದನ್ನೂ ಓದಿ: ವಯಸ್ಸಾದವರು ನಿರುಪಯುಕ್ತರಲ್ಲ; ದೇಶದ ಸಂಪತ್ತಿಗೆ ಕೊಡುಗೆ ನೀಡಬಲ್ಲರು: ರೋಹಿಣಿ ನಿಲೇಕಣಿ ಫಿಲಾಂಟ್ರೋಪೀಸ್

ಇಕೋಸ್ಪ್ರಿನ್, ಗ್ಲೈಕೋಮೆಟ್ ಇತ್ಯಾದಿ ಪ್ರಮುಖ ಔಷಧಗಳನ್ನು ತಯಾರಿಸುತ್ತದೆ ಇವರ ಕಂಪನಿ

ಡಯಾಬಿಟಿಸ್ ರೋಗಿಗಳಿಗೆ ಗ್ಲೈಕೋಮೆಟ್ (glycomet) ಮಾತ್ರೆಗಳ ಹೆಸರು ಗೊತ್ತಿರಬಹುದು. ಡಯಾಬಿಟಿಸ್ ರೋಗಿಗಳಿಗೆ ಬಳಕೆಯಾಗುತ್ತಿರುವ ಎರಡನೇ ಅತಿದೊಡ್ಡ ಔಷಧ ಇದು. ಇದನ್ನು ಯುಎಸ್​​ವಿ ಫಾರ್ಮಾ ಕಂಪನಿ ತಯಾರಿಸುತ್ತದೆ. ಇಕೋಸ್ಪಿರಿನ್ (Ecosprin) ಎನ್ನುವ ಮತ್ತೊಂದು ದೊಡ್ಡ ಬ್ರ್ಯಾಂಡ್ ಕೂಡ ಲೀನಾ ತಿವಾರಿಯವರ ಕಂಪನಿಯದ್ದೇ. ರೊಸ್​​ಡೇ ಇತ್ಯಾದಿ ಇನ್ನೂ ಕೆಲ ಪ್ರಮುಖ ಔಷಧ ಬ್ರ್ಯಾಂಡ್​​ಗಳು ಯುಎಸ್​​ವಿಯಲ್ಲಿವೆ. 2023-24ರಲ್ಲಿ ಇವರ ಕಂಪನಿಯ ವಾರ್ಷಿಕ ಆದಾಯ 4,840 ಕೋಟಿ ರೂ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ