LIC policy: ಮಗಳ ಹೆಸರಿನಲ್ಲಿ ಪ್ರತಿದಿನ 130 ರೂ. ಕಟ್ಟಿ, 27 ಲಕ್ಷ ರೂ. ಪಡೆಯಿರಿ

| Updated By: ಝಾಹಿರ್ ಯೂಸುಫ್

Updated on: Aug 16, 2021 | 6:07 PM

LIC Kanyadaan policy: ಪ್ರತಿನಿತ್ಯ ಕೇವಲ 130 ರೂ. ಜಮಾ ಮಾಡಿದರೆ ಸಾಕು. ಹಾಗಿದ್ರೆ ಕನ್ಯಾಧಾನ್ ಪಾಲಿಸಿ ಬಗ್ಗೆ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

LIC policy: ಮಗಳ ಹೆಸರಿನಲ್ಲಿ ಪ್ರತಿದಿನ 130 ರೂ. ಕಟ್ಟಿ, 27 ಲಕ್ಷ ರೂ. ಪಡೆಯಿರಿ
ಪ್ರಾತಿನಿಧಿಕ ಚಿತ್ರ
Follow us on

ಹೆಣ್ಣು ಮಕ್ಕಳು ಹುಟ್ಟಿದ ತಕ್ಷಣ, ಪೋಷಕರು ಆಕೆಯ ಉತ್ತಮ ಭವಿಷ್ಯದ ಬಗ್ಗೆ ಹೆಚ್ಚು ಚಿಂತಿತರಾಗುತ್ತಾರೆ. ಇಂತಹ ಚಿಂತೆಯನ್ನು ದೂರ ಮಾಡಲು ಜೀವ ವಿಮಾ ನಿಗಮ (LIC) ಕನ್ಯಧಾನ್ ಯೋಜನೆ (LIC Kanyadaan policy) ಎಂಬ ವಿಶೇಷ ಪಾಲಿಸಿಯನ್ನು ಪರಿಚಯಿಸಿದೆ. ಎಲ್‌ಐಸಿ ಕನ್ಯಾಧಾನ್ ಪಾಲಿಸಿ ಮೂಲಕ ಕಡಿಮೆ ಆದಾಯ ಹೊಂದಿರುವ ಪೋಷಕರುವ ತಮ್ಮ ಹೆಣ್ಣು ಮಕ್ಕಳ ಮದುವೆಗೆ ಬೇಕಾದ ಹಣವನ್ನು ಸಂಗ್ರಹಿಸಿಡಬಹುದು. ಇದಕ್ಕಾಗಿ ಪ್ರತಿನಿತ್ಯ ಕೇವಲ 130 ರೂ. ಜಮಾ ಮಾಡಿದರೆ ಸಾಕು. ಹಾಗಿದ್ರೆ ಕನ್ಯಾಧಾನ್ ಪಾಲಿಸಿ ಬಗ್ಗೆ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಕನ್ಯಧಾನ್ ಪಾಲಿಸಿಯ ನಿಯಮಗಳೇನು? (LIC Kanyadaan policy)
– ಎಲ್​ಐಸಿಯ ಈ ವಿಶೇಷ ವಿಮಾ ಯೋಜನೆಯಲ್ಲಿ ನೀವು ದಿನವೊಂದಕ್ಕೆ 130 ರೂ. ಪಾವತಿಸಬೇಕು. ಅಂದರೆ ವರ್ಷಕ್ಕೆ ವರ್ಷಕ್ಕೆ 47,450 ರೂ.

– ಪಾಲಿಸಿ ಅವಧಿಯ 3 ವರ್ಷಕ್ಕಿಂತ ಕಡಿಮೆ ಅವಧಿಗೆ ಪ್ರೀಮಿಯಂ ಪಾವತಿಸಲಾಗುತ್ತದೆ. 25 ವರ್ಷಗಳ ನಂತರ, ಎಲ್ಐಸಿ ಆತನಿಗೆ ಸುಮಾರು 27 ಲಕ್ಷ ರೂ. ಮರುಪಾವತಿ ಮಾಡುತ್ತದೆ.

– ಈ ಪಾಲಿಸಿ ಪಡೆಯಲು ಮಗಳಿಗೆ ಕನಿಷ್ಠ 1 ವರ್ಷ ಆಗಿರಬೇಕು. ಹಾಗೆಯೇ ಎಲ್‌ಐಸಿ ಕನ್ಯಾಧಾನ್ ಪಾಲಿಸಿಗೆ ನೋಂದಾಯಿಸಲು ಹೂಡಿಕೆದಾರನಿಗೆ ಕನಿಷ್ಠ ವಯಸ್ಸು 30 ವರ್ಷವಾಗಿರಬೇಕು.

ಕನ್ಯಾಧಾನ್ ಪಾಲಿಸಿ ಕಿರು ನೋಟ:
ಈ ಪಾಲಿಸಿಯ ಕನಿಷ್ಠ ಮುಕ್ತಾಯದ ಅವಧಿ 13 ವರ್ಷಗಳು. ವಿಮೆ ಮಾಡಿದ ವ್ಯಕ್ತಿಯು ಯಾವುದೇ ಕಾರಣದಿಂದ ಸಾವನ್ನಪ್ಪಿದರೆ, ಆ ವ್ಯಕ್ತಿಗೆ LIC ಪರವಾಗಿ ಹೆಚ್ಚುವರಿಯಾಗಿ 5 ಲಕ್ಷ ರೂ. ನೀಡಲಾಗುತ್ತದೆ.

ಒಬ್ಬ ವ್ಯಕ್ತಿಯು 5 ಲಕ್ಷ ವಿಮಾ ಮೊತ್ತದ ಪಾಲಿಸಿಯನ್ನು ತೆಗೆದುಕೊಂಡರೆ, 22 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಮಾಸಿಕ ಪ್ರೀಮಿಯಂ 1951 ರೂ. ಆಗಿರಲಿದೆ. ಮುಕ್ತಾಯದ ನಂತರ, ಎಲ್‌ಐಸಿ ಸುಮಾರು 13.37 ಲಕ್ಷ ಮೊತ್ತವನ್ನು ಪಾಲಿಸಿದಾರರಿಗೆ ಪಾವತಿಸುತ್ತದೆ.

ಅದೇ ರೀತಿ, ಒಬ್ಬ ವ್ಯಕ್ತಿಯು 10 ಲಕ್ಷ ಪಾಲಿಸಿಯನ್ನು ತೆಗೆದುಕೊಂಡರೆ, 25 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಮಾಸಿಕ ಪ್ರೀಮಿಯಂ 3,901 ರೂ. ಅಥವಾ ಪ್ರತಿದಿನ 130 ರೂ. ಪಾವತಿ ಮಾಡಬೇಕಾಗುತ್ತದೆ. ಕನ್ಯಾಧಾನ್ ಪಾಲಿಸಿಯ ಮುಕ್ತಾಯದ ನಂತರ, ಎಲ್ಐಸಿ 26.75 ಲಕ್ಷ ರೂ. ಪಾಲಿಸಿದಾರನಿಗೆ ನೀಡುತ್ತದೆ.

ತೆರಿಗೆ ಲಾಭ:
ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 80 ಸಿ ಅಡಿಯಲ್ಲಿ, ಹೂಡಿಕೆದಾರರು ಪಾವತಿಸಿದ ಪ್ರೀಮಿಯಂ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು. ತೆರಿಗೆ ವಿನಾಯಿತಿ ಗರಿಷ್ಠ 1.50 ಲಕ್ಷ ರೂ. ಈ ಯೋಜನೆಗೆ ಅರ್ಜಿ ಸಲ್ಲಿಸಲು, ಆಧಾರ್ ಕಾರ್ಡ್, ಆದಾಯ ಪ್ರಮಾಣಪತ್ರ, ಗುರುತಿನ ಚೀಟಿ, ಜನನ ಪ್ರಮಾಣಪತ್ರದಂತಹ ಪ್ರಮುಖ ದಾಖಲೆಗಳ ಅಗತ್ಯವಿದೆ.

ಇದನ್ನೂ ಓದಿ: India vs England 2nd Test: ಅಂದು ದಾದಾ, ಇಂದು ಕೊಹ್ಲಿ: ಲಾರ್ಡ್ಸ್​ ಬಾಲ್ಕನಿಯಲ್ಲಿ ಕ್ಯಾಪ್ಟನ್ ಡ್ಯಾನ್ಸ್​

ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ

ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ

ಇದನ್ನೂ ಓದಿ: Kl Rahul: ಪೂಜಾರ, ರಹಾನೆ ಕಳಪೆ ಫಾರ್ಮ್​ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?

(LIC Kanyadaan policy: Raise Rs 27 lakh with an investment of Rs 130 daily)