ಗುಜರಾತ್ ರಾಜ್ಯ ರಸ್ತೆ ನಿಗಮದಿಂದ ಹೆಚ್ಚುವರಿ 50 ಎಲೆಕ್ಟ್ರಿಕ್ ಬಸ್ ಆರ್ಡರ್ ಪಡೆದ ಒಲೆಕ್ಟ್ರಾ ಗ್ರೀನ್ ಟೆಕ್
ಹೈದರಾಬಾದ್, ಆಗಸ್ಟ್ 16: 9 ಮೀಟರ್ ಉದ್ದದ 50 ಎಲೆಕ್ಟ್ರಿಕ್ ಬಸ್‌ಗಳಿಗೆ ಒಲೆಕ್ಟ್ರಾ ಗ್ರೀನ್ ಟೆಕ್ ಸಂಸ್ಥೆಯು ಗುಜರಾತ್ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ (ಜಿಎಸ್‌ಆರ್‌ಟಿಸಿ) ಪ್ರಶಸ್ತಿ ಪತ್ರವನ್ನು ಪಡೆದಿದೆ. ಹತ್ತು ವರ್ಷಗಳ ಅವಧಿಗೆ ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (GCC)/OPEX ಮಾದರಿ ಆಧಾರದ ಮೇಲೆ ಹೆಚ್ಚುವರಿ 50 ಎಲೆಕ್ಟ್ರಿಕ್ ಬಸ್‌ಗಳ ಪೂರೈಕೆಗೆ ಆರ್ಡರ್ ಕೂಡ ಪಡೆದಿದೆ. ಈ 50 ಎಲೆಕ್ಟ್ರಿಕ್ ಬಸ್ಸುಗಳನ್ನು 12 ತಿಂಗಳ ಅವಧಿಯಲ್ಲಿ ವಿತರಿಸಲಾಗುತ್ತದೆ. ಒಪ್ಪಂದದ ಅವಧಿಯಲ್ಲಿ ಕಂಪೆನಿಯು ಈ ಬಸ್‌ಗಳ ನಿರ್ವಹಣೆಯನ್ನು ಸಹ […]
ಹೈದರಾಬಾದ್, ಆಗಸ್ಟ್ 16: 9 ಮೀಟರ್ ಉದ್ದದ 50 ಎಲೆಕ್ಟ್ರಿಕ್ ಬಸ್‌ಗಳಿಗೆ ಒಲೆಕ್ಟ್ರಾ ಗ್ರೀನ್ ಟೆಕ್ ಸಂಸ್ಥೆಯು ಗುಜರಾತ್ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ (ಜಿಎಸ್‌ಆರ್‌ಟಿಸಿ) ಪ್ರಶಸ್ತಿ ಪತ್ರವನ್ನು ಪಡೆದಿದೆ. ಹತ್ತು ವರ್ಷಗಳ ಅವಧಿಗೆ ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (GCC)/OPEX ಮಾದರಿ ಆಧಾರದ ಮೇಲೆ ಹೆಚ್ಚುವರಿ 50 ಎಲೆಕ್ಟ್ರಿಕ್ ಬಸ್‌ಗಳ ಪೂರೈಕೆಗೆ ಆರ್ಡರ್ ಕೂಡ ಪಡೆದಿದೆ. ಈ 50 ಎಲೆಕ್ಟ್ರಿಕ್ ಬಸ್ಸುಗಳನ್ನು 12 ತಿಂಗಳ ಅವಧಿಯಲ್ಲಿ ವಿತರಿಸಲಾಗುತ್ತದೆ. ಒಪ್ಪಂದದ ಅವಧಿಯಲ್ಲಿ ಕಂಪೆನಿಯು ಈ ಬಸ್‌ಗಳ ನಿರ್ವಹಣೆಯನ್ನು ಸಹ ಕೈಗೊಳ್ಳಲಿದೆ. ಈ ಹೊಸ ಆರ್ಡರ್ನೊಂದಿಗೆ ಮೇಲಿನ ಮತ್ತು ಹಿಂದಿನ ಆರ್ಡರ್‌ಗಳು ಎಲ್ಲವೂ ಸೇರಿ ಒಲೆಕ್ಟ್ರಾ ಪಡೆದ ಒಟ್ಟು ಆರ್ಡರ್ ಬುಕ್ ಸಂಖ್ಯೆ ಸುಮಾರು 1350 ಎಲೆಕ್ಟ್ರಿಕ್ ಬಸ್‌ಗಳಾಗುತ್ತವೆ. ಈ 50 ಬಸ್ ಆರ್ಡರ್‌ಗಳು 353 ಬಸ್‌ಗಳಿಗಾಗಿ ಇತ್ತೀಚೆಗೆ ಘೋಷಿಸಲಾದ ಎಲ್ -1 ಬಿಡ್ಡರ್‌ನ ಭಾಗವಾಗಿದೆ (16 ಡಿಸೆಂಬರ್ 2020 ರಂದು ಬಹಿರಂಗಪಡಿಸಲಾಗಿದೆ).
“ನಾವು ಗುಜರಾತ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ 50 ಎಲೆಕ್ಟ್ರಿಕ್ ಬಸ್ ಆರ್ಡರ್ ಅನ್ನು ಪಡೆದುಕೊಂಡಿದ್ದೇವೆ ಎಂದು ಘೋಷಿಸಲು ಸಂತೋಷವಾಗಿದೆ. ಈ ಹೊಸ ಆರ್ಡರ್ನೊಂದಿಗೆ ನಮ್ಮ ಆರ್ಡರ್ ಬುಕ್ ಗಾತ್ರವು ಸುಮಾರು 1350 ಬಸ್‌ಗಳಿಗೆ ಬೆಳೆದಿದೆ. ನಾವು ಈಗಾಗಲೇ ಸೂರತ್‌ನಲ್ಲಿ ಬಸ್‌ಗಳ ನಿರ್ವಹಣೆ ಮಾಡುತ್ತಿದ್ದೇವೆ. ಈ ಹೊಸ ಆರ್ಡರ್ನೊಂದಿಗೆ ಗುಜರಾತ್ ರಾಜ್ಯದಲ್ಲಿ ಫ್ಲೀಟ್ ಗಾತ್ರವು 250 ಎಲೆಕ್ಟ್ರಿಕ್ ಬಸ್ಸುಗಳಾಗುತ್ತವೆ. ಇದು ಒಜಿಎಲ್ ತಂಡಕ್ಕೆ ಹೆಮ್ಮೆಯ ಕ್ಷಣವಾಗಿದೆ,” ಎಂದು ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಕೆ.ವಿ. ಪ್ರದೀಪ್ ಹೇಳಿದ್ದಾರೆ.
9 ಮೀಟರ್ ಉದ್ದದ ಈ ಹವಾನಿಯಂತ್ರಿತ ಬಸ್ಸುಗಳು ಆರಾಮದಾಯಕವಾದ ಪ್ರಯಾಣದ ಅನುಭವವನ್ನು ಒದಗಿಸುತ್ತವೆ. ಎಲೆಕ್ಟ್ರಿಕಲಿ ನಿಯಂತ್ರಿತ ಏರ್ ಸಸ್ಪೆನ್ಷನ್ ಹೊಂದಿರುವ ಇದರಲ್ಲಿ 33 ಪ್ರಯಾಣಿಕರು ಹಾಗೂ ಜತೆಗೆ ಚಾಲಕ ಆಸನ ಸಾಮರ್ಥ್ಯ ಇದೆ. ಪ್ರಯಾಣಿಕರ ಸುರಕ್ಷತೆ, ತುರ್ತು ಬಟನ್, ಯುಎಸ್‌ಬಿ ಸಾಕೆಟ್‌ಗಳು, ಜತೆಗೆ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬಸ್ಸಿನಲ್ಲಿರುವ ಲಿಥಿಯಂ-ಐಯಾನ್ (Li-ion) ಬ್ಯಾಟರಿಯು ಟ್ರಾಫಿಕ್ ಮತ್ತು ಪ್ರಯಾಣಿಕರ ಸಂಖ್ಯೆಯ ಆಧಾರದ ಮೇಲೆ 180ರಿಂದ 200 ಕಿಲೋಮೀಟರ್ಗಳಷ್ಟು ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ತಾಂತ್ರಿಕವಾಗಿ ಮುಂದುವರಿದ ಎಲೆಕ್ಟ್ರಿಕ್ ಬಸ್ ರೀಜನರೇಟಿವ್ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಇದು ಬ್ರೇಕ್ನಿಂದ ಕಳೆಯುವ ಚಲನ ಶಕ್ತಿಯ ಭಾಗವನ್ನು ಮರಳಿ ಪಡೆಯುವುದಕ್ಕೆ ಬಸ್ಗೆ ಅನುವು ಮಾಡಿಕೊಡುತ್ತದೆ. ಹೈ-ಪವರ್ ಏಸಿ ಚಾರ್ಜಿಂಗ್ ವ್ಯವಸ್ಥೆಯು 3-4 ಗಂಟೆಗಳ ಅವಧಿಯಲ್ಲಿ ಬ್ಯಾಟರಿಯನ್ನು ಸಂಪೂರ್ಣವಾಗಿ ರೀಚಾರ್ಜ್ ಮಾಡಲು ಸಾಧ್ಯವಾಗಿಸುತ್ತದೆ.
ಓಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ (MEIL ಸಮೂಹ ಕಂಪೆನಿ) ಬಗ್ಗೆ 2000nE ಇಸವಿಯಲ್ಲಿ ಸ್ಥಾಪನೆಯಾದ ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ (ಪಬ್ಲಿಕ್ ಲಿಸ್ಟೆಡ್ ಕಂಪನಿ) – MEIL ಸಮೂಹದ ಭಾಗವಾಗಿದೆ. ಈ ಸಂಸ್ಥೆಯು 2015ರಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ಪರಿಚಯಿಸಿತು. ಇದು ವಿದ್ಯುತ್ ಪ್ರಸರಣ ಮತ್ತು ವಿತರಣಾ ಜಾಲಗಳಿಗಾಗಿ ಸಿಲಿಕೋನ್ ರಬ್ಬರ್/ಕಾಂಪೋಸಿಟ್ ಇನ್ಸುಲೇಟರ್‌ಗಳಿಗಾಗಿ ಭಾರತದ ಅತಿದೊಡ್ಡ ಉತ್ಪಾದಕ ಎನಿಸಿಕೊಂಡಿದೆ.
ಇದನ್ನೂ ಓದಿ: Tata Power- HPCL Partnership: ಟಾಟಾ ಪವರ್ ಹಾಗೂ ಎಚ್ಪಿಸಿಎಲ್ ಸಹಯೋಗದಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್
(Olectra Wins 50 Electric Vehicle Bus Order From Gujarat State Road Transportation Corporation)