LIC Jeevan Akshay Policy: ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿ, ತಿಂಗಳಿಗೆ 36,000 ರೂ. ಗಳಿಸಿ!

| Updated By: Ganapathi Sharma

Updated on: Nov 15, 2022 | 12:22 PM

ಎಲ್​ಐಸಿ ಜೀವನ್ ಅಕ್ಷಯ್ ಪಾಲಿಸಿ ಒಂದು ಬಾರಿಯ ಹೂಡಿಕೆ ಯೋಜನೆಯಾಗಿದೆ. ಈ ಪಾಲಿಸಿ ಮಾಡಿಕೊಳ್ಳುವ ಮೂಲಕ ಪ್ರತಿ ತಿಂಗಳು ಅಂದಾಜು 36,000 ರೂ. ಗಳಿಸಬಹುದಾಗಿದೆ.

LIC Jeevan Akshay Policy: ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿ, ತಿಂಗಳಿಗೆ 36,000 ರೂ. ಗಳಿಸಿ!
ಎಲ್​ಐಸಿ
Image Credit source: PTI
Follow us on

ಭಾರತೀಯ ಜೀವ ವಿಮಾ ನಿಗಮ ಅಥವಾ ಎಲ್​ಐಸಿ (LIC) ಜೀವನ್ ಅಕ್ಷಯ್ ಪಾಲಿಸಿ (Jeevan Akshay Policy) ಒಂದು ಬಾರಿಯ ಹೂಡಿಕೆ ಯೋಜನೆಯಾಗಿದೆ. ಈ ಪಾಲಿಸಿ ಮಾಡಿಕೊಳ್ಳುವ ಮೂಲಕ ಪ್ರತಿ ತಿಂಗಳು ಅಂದಾಜು 36,000 ರೂ. ಗಳಿಸಬಹುದಾಗಿದೆ. ಈ ಪಾಲಿಸಿಯ ಮೂಲಕ ಪ್ರತಿ ತಿಂಗಳು ಲಾಭ ಪಡೆಯುವ ಅಕಾಶವನ್ನು ಹೂಡಿಕೆದಾರರಿಗೆ ಎಲ್​ಐಸಿ ಒದಗಿಸಿಕೊಟ್ಟಿದೆ. ಈ ಯೋಜನೆಯಲ್ಲಿ ಒಂದು ಬಾರಿ ಹೂಡಿಕೆ ಮಾಡುವ ಮೂಲಕ ಜೀವನದುದ್ದಕ್ಕೂ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಪಾಲಿಸಿಯ ಪ್ರೀಮಿಯಂ ಹಾಗೂ ಇತರ ವಿವರಗಳು ಇಲ್ಲಿವೆ.

ಜೀವನ್ ಅಕ್ಷಯ್ ಪಾಲಿಸಿ

ಎಲ್​ಐಸಿ ಜೀವನ್ ಅಕ್ಷಯ್ ಪಾಲಿಸಿ ಮೂಲಕ ಪ್ರತಿ ತಿಂಗಳು 36,000 ರೂ. ಪಡೆಯಬೇಕಾದರೆ ಯೂನಿಫಾರ್ಮ್ ರೇಟ್ ಆಯ್ಕೆಯ ಆ್ಯನುಯಿಟಿ ಪೇಯೇಬಲ್ ಫಾರ್ ಲೈಫ್​ಟೈಮ್ ಆಪ್ಷನನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಇದರ ಅಡಿಯಲ್ಲಿ ನೀವು ಪ್ರತಿ ತಿಂಗಳು ದೊಡ್ಡ ಮೊತ್ತದ ಪಿಂಚಣಿ ಪಡೆಯಬಹುದು. ನೀವು 45 ವರ್ಷ ವಯಸ್ಸಿನವರಾಗಿದ್ದು, ಈ ಪಾಲಿಸಿಯ ಪ್ರಯೋಜನ ಪಡೆಯಬೇಕೆಂದಿದ್ದಲ್ಲಿ ಒಂದು ಬಾರಿಗೆ 71,26,000 ರೂ. ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ಬಳಿಕ ಪ್ರತಿ ತಿಂಗಳು 36429 ರೂ. ಪಡೆಯಬಹುದು. ಪಾಲಿಸಿದಾರ ಮೃತಪಟ್ಟರೆ ಈ ಪಿಂಚಣಿ ಸ್ಥಗಿತಗೊಳ್ಳುತ್ತದೆ.

ಇದನ್ನೂ ಓದಿ
ಎಸ್​ಬಿಐ ವೆಬ್​​ಸೈಟ್, ಮೊಬೈಲ್ ಆ್ಯಪ್ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಸುವುದು ಹೇಗೆ? ಇಲ್ಲಿದೆ ಸರಳ ವಿಧಾನ
World Diabetes Day 2022: ಮಧುಮೇಹಿಗಳ ಆರೋಗ್ಯ ವಿಮೆಗಿರುವ ಷರತ್ತುಗಳು, ಪ್ರೀಮಿಯಂ ಬಗ್ಗೆ ಇಲ್ಲಿದೆ ವಿವರ
ಎಚ್​ಡಿಎಫ್​ಸಿ, ಐಸಿಐಸಿಐ, ಎಸ್​ಬಿಐ, ಆ್ಯಕ್ಸಿಸ್; ಎಫ್​ಡಿಗೆ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ ಬಗ್ಗೆ ಇಲ್ಲಿದೆ ವಿವರ
RD Account: ಆರ್​ಡಿ ಉಳಿತಾಯ ಖಾತೆ ತೆರೆಯುವ ಮುನ್ನ ಈ ವಿಷಯಗಳನ್ನು ತಿಳಿದಿರಿ

ಯಾವ ವಯಸ್ಸಿನವರು ಪಾಲಿಸಿ ಪ್ರಯೋಜನ ಪಡೆಯಬಹುದು?

35 ರಿಂದ 85 ವರ್ಷ ವಯಸ್ಸಿನವರೆಗಿನವರು ಈ ಪಾಲಿಸಿಯ ಪ್ರಯೋಜನ ಪಡೆದುಕೊಳ್ಳಬಹುದು. ಅಲ್ಲದೆ, ಅಂಗವಿಕಲರೂ ಈ ಪಾಲಿಸಿಯಲ್ಲಿ ಹೂಡಿಕೆ ಮಾಡಬಹುದು. ಈ ಪಾಲಿಸಿಯಲ್ಲಿ ಪಿಂಚಣಿ ಸ್ವೀಕರಿಸಲು ಅನೇಕ ಆಯ್ಕೆಗಳಿವೆ.

ಪಿಂಚಣಿ ಆಯ್ಕೆಗಳು…

ನೀವು 75 ವರ್ಷ ವಯಸ್ಸಿನವರು ಎಂದಿದ್ದರೆ, ಒಂದು ಬಾರಿಗೆ 6,10,800 ರೂ. ಒಂದು ಬಾರಿಯ ಪ್ರೀಮಿಯಂ ಪಾವತಿಸಬೇಕು. ಬಳಿಕ ವಾರ್ಷಿಕ 76,650 ರೂ. ಪಿಂಚಣಿ ಪಡೆಯಬಹುದು. ಅರ್ಧವಾರ್ಷಿಕವಾದರೆ 35-37 ಸಾವಿರ ರೂ. ಹಾಗೂ ತ್ರೈಮಾಸಿಕ ಅವಧಿಗೆ ಪಿಂಚಣಿ ಪಡೆಯುವುದಾದರೆ 18,225 ರೂ. ನಂತೆ ಪಡೆಯಬಹುದು. ಪ್ರತಿ ತಿಂಗಳಿಗೆ ಆದರೆ 6,000 ರೂ.ನಂತೆ ಪಿಂಚಣಿ ಪಡೆಯಬಹುದು.

ಕಡಿಮೆ ಮೊತ್ತದ ಹೂಡಿಕೆ ಆಯ್ಕೆ

ಕಡಿಮೆ ಮೊತ್ತದ ಪ್ರೀಮಿಯಂ ಆಯ್ಕೆಯೂ ಜೀವನ್ ಅಕ್ಷಯ್ ಪಾಲಿಸಿಯಡಿ ಲಭ್ಯವಿದೆ. 1 ಲಕ್ಷ ರೂ. ಹೂಡಿಕೆ ಮಾಡುವ ಮೂಲಕ 12,000 ರೂ. ವಾರ್ಷಿಕ ಪಿಂಚಣಿಯನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: LIC Shares: ಎಲ್​ಐಸಿ ಷೇರುಮೌಲ್ಯದಲ್ಲಿ ಜಿಗಿತ; ಈಗ ಖರೀದಿ ಸೂಕ್ತವೇ? ತಜ್ಞರ ಅಭಿಪ್ರಾಯ ಇಲ್ಲಿದೆ