ಎಸ್ಬಿಐ ವೆಬ್ಸೈಟ್, ಮೊಬೈಲ್ ಆ್ಯಪ್ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಸುವುದು ಹೇಗೆ? ಇಲ್ಲಿದೆ ಸರಳ ವಿಧಾನ
ಭಾರತೀಯ ಸ್ಟೇಟ್ ಬ್ಯಾಂಕ್ ವೆಬ್ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ವಿಡಿಯೋ ಕರೆ ಮಾಡಿ ಜೀವನ ಪ್ರಮಾಣಪತ್ರ ಸಲ್ಲಿಸುವ ವಿಧಾನದ ಹಂತಗಳನ್ನು ಇಲ್ಲಿ ನೀಡಲಾಗಿದೆ.
ಜೀವನ ಪ್ರಮಾಣಪತ್ರ ಸಲ್ಲಿಕೆಯನ್ನು ಮತ್ತಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (State Bank of India) ಹೊಸ ವಿಡಿಯೋ ಜೀವನ ಪ್ರಮಾಣಪತ್ರ (Video Life Certificate / VLC) ಸೇವೆಯನ್ನು ಆರಂಭಿಸಿದೆ. ಎಸ್ಬಿಐ ಅಧಿಕಾರಿಗೆ ವಿಡಿಯೋ ಕರೆ ಮಾಡುವ ಮೂಲಕ ಪಿಂಚಣಿದಾರರು ಇನ್ನು ಜೀವನ ಪ್ರಮಾಣಪತ್ರ ಸಲ್ಲಿಸಬಹುದು. ಕೇಂದ್ರ ಸರ್ಕಾರದ ಪಿಂಚಣಿ ಪಡೆಯುವವರು ಪಿಂಚಣಿ ವಿತರಣಾ ಸಂಸ್ಥೆಗೆ (PDA) ಪ್ರತಿ ವರ್ಷ ಜೀವನ ಪ್ರಮಾಣಪತ್ರ ಸಲ್ಲಿಸುವುದು ಅಗತ್ಯ. ಎಸ್ಬಿಐನ ಹೊಸ ಸೇವೆಯು ವೆಬ್ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ವಿಡಿಯೋ ಕರೆ ಮಾಡಿ ಜೀವನ ಪ್ರಮಾಣಪತ್ರ ಸಲ್ಲಿಸಲು ಅವಕಾಶ ಕಲ್ಪಿಸುತ್ತದೆ. ಈ ಸೇವೆಯನ್ನು ಒದಗಿಸಲು ಆರಂಭಿಸಿರುವ ಬಗ್ಗೆ ಇತ್ತೀಚೆಗಷ್ಟೇ ಎಸ್ಬಿಐ ಟ್ವೀಟ್ ಮೂಲಕ ಗ್ರಾಹಕರಿಗೆ ಸಂದೇಶ ರವಾನಿಸಿತ್ತು.
Video Life Certificates with an ease. Now even family pensioners can avail the services via the SBI Pension Seva Mobile App or website.Visit https://t.co/Mor15ERNpf to know more.#SBI #AmritMahotsav #PensionSeva #VideoLifeCertificate pic.twitter.com/p0gvlK7GP1
ಇದನ್ನೂ ಓದಿ— State Bank of India (@TheOfficialSBI) November 7, 2022
ವೆಬ್ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ವಿಡಿಯೋ ಕರೆ ಮಾಡಿ ಜೀವನ ಪ್ರಮಾಣಪತ್ರ ಸಲ್ಲಿಸುವ ವಿಧಾನದ ಹಂತಗಳನ್ನು ಇಲ್ಲಿ ನೀಡಲಾಗಿದೆ.
ಹಂತ 1: ಎಸ್ಬಿಐನ ಅಧಿಕೃತ ವೆಬ್ಸೈಟ್ ಓಪನ್ ಮಾಡಿ ಅಥವಾ ಪೆನ್ಶನ್ ಸೇವಾ ಮೊಬೈಲ್ ಅಪ್ಲಿಕೇಷನ್ ಡೌನ್ಲೋಡ್ ಮಾಡಿ
ಹಂತ 2: ವೆಬ್ಸೈಟ್ನಲ್ಲಿ ಮೇಲ್ಭಾಗದಲ್ಲಿರುವ ‘VideoLC’ ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ. ಮೊಬೈಲ್ ಆ್ಯಪ್ನಲ್ಲಿ ‘Video Life Certificate’ ಆಯ್ಕೆಯನ್ನು ಸೆಲೆಕ್ಟ್ ಮಾಡಿ
ಹಂತ 3: ನೀವು ಪಿಂಚಣಿ ಸ್ವೀಕರಿಸುವ ಖಾತೆ ಸಂಖ್ಯೆಯನ್ನು ನಮೂದಿಸಿ. ಕ್ಯಾಪ್ಚಾ ನಮೂದಿಸಿ ನಿಮ್ಮ ಆಧಾರ್ ವಿವರಗಳನ್ನು ದೃಢೀಕರಿಸಲು ಬಾಕ್ಸ್ ಮೇಲೆ ಚೆಕ್ ಮಾಡಿ
ಹಂತ 4: ‘Validate Account’ ಬಟನ್ ಅನ್ನು ಕ್ಲಿಕ್ ಮಾಡಿ. ಬಳಿಕ ಆಧಾರ್ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ
ಹಂತ 5: ಸಂಬಂಧಪಟ್ಟ ಪ್ರಮಾಣಪತ್ರಗಳನ್ನು ಸಲ್ಲಿಸಿ ಮುಂದುವರಿಯಲು ಕ್ಲಿಕ್ ಮಾಡಿ
ಹಂತ 6: ಹೊಸ ಪುಟದಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ವೀಡಿಯೊ ಕರೆಗಾಗಿ ಅಪಾಯಿಂಟ್‌ಮೆಂಟ್ ನಿಗದಿಪಡಿಸಲು ಸೂಚನೆಗಳನ್ನು ಅನುಸರಿಸಿ. ಎಸ್ಎಂಎಸ್ ಹಾಗೂ ಇ-ಮೇಲ್ ಮೂಲಕ ದೃಢೀಕರಣ ಸಂದೇಶ ಬರಲಿದೆ.
ಹಂತ 7: ವಿಡಿಯೊ ಕರೆಗೆ ಜಾಯಿನ್ ಆಗಿ
ಹಂತ 8: ವಿಡಿಯೊ ಕರೆಯಲ್ಲಿ ನೀವು ಬ್ಯಾಂಕ್ ಅಧಿಕಾರಿಯ ಎದುರು ವೆರಿಫಿಕೇಷನ್ ಕೋಡ್ ಅನ್ನು ಓದಬೇಕಾಗುತ್ತದೆ. ಜತೆಗೆ ಪಾನ್ ಕಾರ್ಡ್ ಅನ್ನು ತೋರಿಸಬೇಕಾಗುತ್ತದೆ
ಹಂತ 9: ದೃಢೀಕರಣ ಪ್ರಕ್ರಿಯೆ ಮುಗಿದ ಬಳಿಕ ಕ್ಯಾಮೆರಾವನ್ನು ಸ್ಥಿರವಾಹಿ ಹಿಡಿದುಕೊಳ್ಳಿ. ಬ್ಯಾಂಕ್ ಅಧಿಕಾರಿಯು ನಿಮ್ಮ ಮುಖದ ಚಿತ್ರವನ್ನು ಸೆರೆಹಿಡಿಯುತ್ತಾರೆ
ಹಂತ 10: ವಿಡಿಯೋ ಕರೆ ಅವಧಿ ಮುಕ್ತಾಯಗೊಂಡ ಬಗ್ಗೆ ನಿಮಗೆ ಸಂದೇಶ ಬರುತ್ತದೆ. ವಿಡಿಯೊ ಜೀವನ ಪ್ರಮಾಣಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ತಿಗೊಂಡ ಬಗ್ಗೆ ಪಿಂಚಣಿದಾರರಿಗೆ ಎಸ್ಎಂಎಸ್ ಸಂದೇಶ ಬರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ