Online Financial Frauds: ಆನ್​ಲೈನ್ ಹಣಕಾಸು ವಂಚನೆಗಳಿಂದ ರಕ್ಷಣೆಗೆ ಈ ವಿಚಾರಗಳನ್ನು ಗಮನಿಸಿ…

ಆನ್​ಲೈನ್ ವಂಚನೆ ತಡೆಯಲು ಮತ್ತು ನಿಮ್ಮ ಹಣವನ್ನು ಸುರಕ್ಷಿತವಾಗಿರಿಸಲು ಹಲವಾರು ಮಾರ್ಗಗಳಿವೆ. ಇದಕ್ಕಾಗಿ ಆನ್​ಲೈನ್ ವಂಚನೆಯ ಕುರಿತ ಕೆಲವು ವಿವರಗಳನ್ನು ಹಾಗೂ ಅದರಿಂದ ರಕ್ಷಣೆ ಪಡೆಯಲು ಇರುವ ವಿಧಾನಗಳನ್ನು ಇಲ್ಲಿ ನೀಡಲಾಗಿದೆ.

Online Financial Frauds: ಆನ್​ಲೈನ್ ಹಣಕಾಸು ವಂಚನೆಗಳಿಂದ ರಕ್ಷಣೆಗೆ ಈ ವಿಚಾರಗಳನ್ನು ಗಮನಿಸಿ...
ಸಾಂದರ್ಭಿಕ ಚಿತ್ರImage Credit source: PTI
Follow us
TV9 Web
| Updated By: Ganapathi Sharma

Updated on:Nov 10, 2022 | 4:25 PM

ದೇಶದಲ್ಲಿ ಪ್ರತಿ ದಿನ ಅಪಾರ ಸಂಖ್ಯೆಯಲ್ಲಿ ಆನ್​ಲೈನ್ ಮೂಲಕ ಹಣಕಾಸು (Online Transaction) ವಹಿವಾಟು ನಡೆಯುತ್ತಿದೆ. ಇದರಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ ನೆರವಾಗುತ್ತಿದೆಯಲ್ಲದೆ, ಗ್ರಾಹಕರಿಗೂ ಕೆಲಸ ಸುಲಭವಾಗುತ್ತಿದೆ. ಆದರೆ, ಅದೇ ರೀತಿಯಲ್ಲಿ ವಂಚಕರೂ ಆನ್​ಲೈನ್ ಮೂಲಕವೇ ಗ್ರಾಹಕರ ಬ್ಯಾಂಕ್ ಖಾತೆಗೆ ಕನ್ನ ಹಾಕುವುದು (Online Financial Frauds), ಹಣ ದೋಚುವುದೂ ನಡೆಯುತ್ತಿದೆ. ವಂಚಕರೂ ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು, ಜನರನ್ನು ವಂಚಿಸುತ್ತಿದ್ದಾರೆ. ಆದರೆ, ವಂಚನೆ ತಡೆಯಲು ಮತ್ತು ನಿಮ್ಮ ಹಣವನ್ನು ಸುರಕ್ಷಿತವಾಗಿರಿಸಲು ಕೂಡ ಹಲವಾರು ಮಾರ್ಗಗಳಿವೆ. ಇದಕ್ಕಾಗಿ ಆನ್​ಲೈನ್ ವಂಚನೆಯ ಕುರಿತ ಕೆಲವು ವಿವರಗಳನ್ನು ಹಾಗೂ ಅದರಿಂದ ರಕ್ಷಣೆ ಪಡೆಯಲು ಇರುವ ವಿಧಾನಗಳನ್ನು ಇಲ್ಲಿ ನೀಡಲಾಗಿದೆ.

ರಾನ್​ಸಮ್​ವೇರ್ ಅಟ್ಯಾಕ್ (Ransomware attack)

ಈ ವಿಧಾನದಲ್ಲಿ ​ವಂಚಕ ಅತ್ಯಾಧುನಿಕ ಎನ್​ಕ್ರಿಪ್ಷನ್ ಬಳಸಿಕೊಂಡು ಗ್ರಾಹಕರ ಕಂಪ್ಯೂಟರ್​ ಅಥವಾ ಫೋನ್ ಅನ್ನು ಟೇಕೋವರ್ ಮಾಡುತ್ತಾನೆ. ನಂತರ ದತ್ತಾಂಶವನ್ನು ಬಿಟ್ಟುಕೊಡಲು ಹಣಕ್ಕಾಗಿ ಬೇಡಿಕೆ ಇಡುತ್ತಾನೆ. ಕೂಪನ್ ಅಥವಾ ಕ್ರಿಪ್ಟೋಕರೆನ್ಸಿ ಮೂಲಕ ವಂಚಕನಿಗೆ ಪಾವತಿ ಮಾಡಬೇಕಾಗುತ್ತದೆ.

ಇದನ್ನೂ ಓದಿ
Image
Gold Price Today: ಚಿನ್ನ, ಬೆಳ್ಳಿ ಬೆಲೆ ಏರಿಕೆ; ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಧಾರಣೆ ಇಲ್ಲಿದೆ
Image
Meta Layoffs: ನನ್ನನ್ನು ಕ್ಷಮಿಸಿ; 11,000 ಉದ್ಯೋಗಿಗಳ ವಜಾಕ್ಕೆ ಮಾರ್ಕ್ ಝುಕರ್​ಬರ್ಗ್ ವಿಷಾದ
Image
2027ಕ್ಕೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಭಾರತ: ವರದಿ
Image
Mutual Funds: ಉತ್ತಮ ರಿಟರ್ನ್ಸ್ ತಂದುಕೊಡುತ್ತಿರುವ ಮಿಡ್​ಕ್ಯಾಪ್ ಮ್ಯೂಚುವಲ್ ಫಂಡ್​ಗಳಿವು

ಇಂಥ ವಂಚನೆಯನ್ನು ತಡೆಯುವುದಕ್ಕಾಗಿ ಅಸುರಕ್ಷಿತ ಲಿಂಕ್​ಗಳನ್ನು ತಪ್ಪಿಯೂ ಕ್ಲಿಕ್ ಮಾಡಬೇಡಿ. ಸ್ಪಾಮ್ ಇ-ಮೇಲ್​ಗಳಲ್ಲಿ, ಅಪರಿಚಿತ ವೆಬ್​ಸೈಟ್​ಗಳಲ್ಲಿ ಬರುವ ಲಿಂಕ್​ಗಳನ್ನು ಕ್ಲಿಕ್ ಮಾಡಬೇಡಿ. ಕೆಲವೊಮ್ಮೆ ವಂಚಕರು ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಗಳ ಹೆಸರಿನಲ್ಲಿ ಕರೆ ಮಾಡಿ ವೈಯಕ್ತಿಕ ಮಾಹಿತಿಗಳನ್ನು ಅಥವಾ ಇತರ ವಿವರಗಳನ್ನು ಕೇಳಬಹುದು. ಲಿಂಕ್​ಗಳನ್ನು ಕ್ಲಿಕ್ ಮಾಡುವಂತೆ ಒತ್ತಾಯಿಸಬಹುದು. ಆದರೆ, ಹೀಗೆ ಮಾಡಲೇಬೇಡಿ.

ಸಿಮ್ ಸ್ವಾಪ್ (SIM swap)

ಬಳಕೆದಾರರ ಅರಿವಿಗೇ ಬಾರದಂತೆ ದೊಡ್ಡ ಮೊತ್ತದ ಹಣವನ್ನು ಎಗರಿಸಲು ವಂಚಕರು ಅನುಸರಿಸುವ ಮತ್ತೊಂದು ವಿಧಾನವಿದು. ಯಾವುದಾದರೂ ನೆಪ ಇಟ್ಟುಕೊಂಡು ಕರೆ ಮಾಡುವ ವಂಚಕರು ಬಳಕೆದಾರರ ಅಥವಾ ಗ್ರಾಹಕರನ್ನು ಪುಸಲಾಯಿಸಿ ವೈಯಕ್ತಿಕ ವಿವರವನ್ನು ಹೇಗಾದರೂ ಮಾಡಿ ಕಲೆ ಹಾಕುತ್ತಾರೆ. ಇವುಗಳನ್ನು ಬಳಸಿಕೊಂಡು ಸಿಮ್​ ಅನ್ನು ಪೋರ್ಟ್ ಮಾಡಿಕೊಂಡು ಮತ್ತೊಂದನ್ನು ಕ್ಲೋಸ್ ಮಾಡುವಂತೆ ಮೊಬೈಲ್ ಆಪರೇಟರ್​ಗಳ ಬಳಿ ಮನವಿ ಮಾಡುತ್ತಾರೆ. ಗ್ರಾಹಕರು ಸಂಪರ್ಕ ಕಡಿದುಕೊಂಡ ಬಳಿಕ ನೆಟ್​ವರ್ಕ್​ ಮತ್ತು ಸ್ಕ್ಯಾಮರ್ ಬಳಸಿಕೊಂಡು ಗ್ರಾಹಕರ ಬ್ಯಾಂಕ್ ಖಾತೆಯ ಒಟಿಪಿ ಪಡೆದು ಹಣ ಕಳವು ಮಾಡುತ್ತಾರೆ.

ನಂಬಿಕೆ ಇಲ್ಲದ ಮೂಲಗಳ ಬಳಿ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಲೇಬಾರದು. ನಮಗೆ ತಿಳಿದಿರದ ಆನ್​ಲೈನ್ ತಾಣಗಳಲ್ಲಿಯೂ ವೈಯಕ್ತಿಕ ವಿವರ ದಾಖಲಿಸಬಾರದು. ಬಹಳ ಕಷ್ಟದ ಸೆಕ್ಯೂರಿಟಿ ಪ್ರಶ್ನೆಗಳು ಒಳಗೊಂಡಂಥ ಕಠಿಣ ಪಾಸ್​ವರ್ಡ್​ಗಳನ್ನು ದಾಖಲಿಸಿ. ಯಾರೇ ಕರೆ ಮಾಡಿ ಕೇಳಿದರೂ ವೈಯಕ್ತಿಕ ವಿವರ ತಿಳಿಸಬೇಡಿ. ಬ್ಯಾಂಕ್ ಸಿಬ್ಬಂದಿ ದೂರವಾಣಿ ಕರೆ ಮಾಡಿ ವೈಯಕ್ತಿಕ ವಿವರ ಕೇಳುವುದಿಲ್ಲ ಎಂಬುದನ್ನು ತಿಳಿದಿರಿ.

ಕ್ಯುಆರ್​ ಕೋಡ್ ಸ್ಕ್ಯಾನ್ ಸ್ಕ್ಯಾಮ್ (QR code scan scam)

ಇಲ್ಲಿ ವಂಚಕರು ಹಣವನ್ನು ಸ್ವೀಕರಿಸಲು ಅಥವಾ ಬ್ಯಾಂಕ್ ಖಾತೆಯಲ್ಲಿ ಜಮೆ ಆಗಿರುವ ಮೊತ್ತವನ್ನು ಸ್ವೀಕರಿಸಲು ಕ್ಯುಆರ್​ ಕೋಡ್ ಸ್ಕ್ಯಾನ್ ಮಾಡುವಂತೆ ಸೂಚಿಸುತ್ತಾರೆ. ಒಮ್ಮೆ ಕ್ಯುಆರ್​ ಕೋಡ್ ಸ್ಕ್ಯಾನ್ ಮಾಡಿದ ಕೂಡಲೇ ಹಣ ಜಮೆ ಆಗುವ ಬದಲು ನಿಮ್ಮ ಖಾತೆಯಿಂದಲೇ ಕಡಿತವಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ವಂಚಕರು ಸುಭಗರಂತೆ ಪೋಸ್ ಕೊಟ್ಟು ಗ್ರಾಹಕರನ್ನು ವಂಚಿಸುತ್ತಾರೆ. ಗ್ರಾಹಕರು ಸ್ಕ್ಯಾನ್ ಮಾಡಿ ಒಟಿಪಿ ನಮೂದಿಸುತ್ತಿದ್ದಂತೆಯೇ ವಂಚಕರು ದೊಡ್ಡ ಮೊತ್ತದ ಹಣವನ್ನು ವಿತ್​ಡ್ರಾ ಮಾಡಿಕೊಳ್ಳುತ್ತಾರೆ.

ಪ್ರಸ್ತುತ ಕಾಲಘಟ್ಟದಲ್ಲಿ ಕ್ಯುಆರ್​ ಕೋಡ್ ಬಳಕೆ ಸಾಮಾನ್ಯವಾಗಿದ್ದು, ಬಳಸದೇ ಇರುವಂತೆಯೂ ಇಲ್ಲ. ಆದರೆ, ನೀವು ಹಣವನ್ನು ಪಾವತಿಸುವುದಾದರೆ ಮಾತ್ರ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಬೇಕೇ ವಿನಃ ಸ್ವೀಕರಿಸಲು ಬೇಡ ಎಂಬುದನ್ನು ತಿಳಿದಿರಿ. ಅಪರಿಚಿತರ ಬಳಿ, ಸಂಶಯಾಸ್ಪದ ವ್ಯಕ್ತಿಗಳ ಬಳಿಕ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡದಿರಿ. ರೆಸ್ಟೋರೆಂಟ್​ಗಳಲ್ಲಿ, ಮಾಲ್​ಗಳಲ್ಲಿ ಹಾಗೂ ನಂಬಿಕೆಗೆ ಅರ್ಹ ಸ್ಥಳಗಳಲ್ಲಿ ಮಾತ್ರ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ. ಯುಪಿಐ ಪಿನ್ ಅನ್ನೂ ಯಾರ ಜತೆಗೂ ಹಂಚಿಕೊಳ್ಳಬೇಡಿ.

ಬ್ಯಾಂಕಿಂಗ್​ ಮತ್ತು ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:15 pm, Thu, 10 November 22

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್