ಇಂದಿನಿಂದ ಯುದ್ಧ ಆರಂಭ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೊಡೆ ತಟ್ಟಿದ ಕುಮಾರಣ್ಣ
ಕೇಂದ್ರ ಸಚಿವ ಕುಮಾರಸ್ವಾಮಿಯವರು ಒತ್ತುವರಿ ಮಾಡಿಕೊಂಡಿದ್ದಾರೆನ್ನಲಾಗುತ್ತಿರುವ ಬಿಡದಿಗೆ ಹತ್ತಿರದ ಕೇತಗಾಹಳ್ಳಿಯಲ್ಲಿರುವ ಸರ್ವೆ ನಂಬರ್ 7, 8, 9, 10, 16, 17 ಮತ್ತು 79ರಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಈ ಸಂಬಂಧ ತಹಶೀಲ್ದಾರ್ ನೋಟಿಸ್ ವಿರುದ್ಧ ಕುಮಾರಸ್ವಾಮಿ ಕೋರ್ಟ್ ಮೊರೆ ಹೋಗಿದ್ದಾರೆ. ಇನ್ನು ಈ ವಿಚಾರದಲ್ಲಿ ಇಷ್ಟು ದಿನ ಸೈಲೆಂಟ್ ಆಗಿದ್ದ ಕುಮಾರಸ್ವಾಮಿ ಇದೀಗ ಏಕಾಏಕಿ ವೈಲೆಂಟ್ ಆಗಿದ್ದು, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಯುದ್ಧ ಘೋಷಣೆ ಮಾಡಿದ್ದಾರೆ.

ಬೆಂಗಳೂರು, (ಏಪ್ರಿಲ್ 05): ಕೇತಗಾಹಳ್ಳಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಆರೋಪದಲ್ಲಿ ( kethanahalli land Case Row) ಸೈಲೆಂಟ್ ಆಗಿದ್ದ ಮಾಜಿ ಸಿಎಂ, ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ (HD Kumaraswamy), ಇದೀಗ ಏಕಾಏಕಿ ಸಿಡಿದೆದ್ದಿದ್ದಾರೆ. ಈ ಸಂಬಂಧ ಇಂದು (ಏಪ್ರಿಲ್ 05) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ನನಗೆ ನೊಟೀಸ್ ಕೊಡುವುದು ಇರಲಿ. ಕೆಳಹಂತದ ಅಧಿಕಾರಿಗಳನ್ನ ನಾನು ಪ್ರಶ್ನೆ ಮಾಡಲ್ಲ. ಎಸ್ ಐಟಿ ತಂಡ ರಚಿಸಿ ತನಿಖೆ ಮಾಡಿಸಿದ್ದಾರೆ. ಇದು ಇತಿಹಾಸದಲ್ಲೇ ಪ್ರಥಮ . ಈ ಸರ್ಕಾರಕ್ಕೆ ನಾನು ಸವಾಲು ಹಾಕುವುದಕ್ಕೆ ಬಂದಿದ್ದೇನೆ. ಇಂದಿನಿಂದ ರಾಜ್ಯ ಸರ್ಕಾರದ ವಿರುದ್ಧ ನನ್ನ ಯುದ್ದ ಆರಂಭ ಮಾಡುತ್ತಿದ್ದೇನೆ ಎಂದು ಘೋಷಣೆ ಮಾಡಿದರು. ಈ ಮೂಲಕ ಕುಮಾರಸ್ವಾಮಿ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಸರ್ಕಾರದ ವಿರುದ್ಧ ನನ್ನ ಯುದ್ದ ಆರಂಭ
ರಾಜ್ಯದಲ್ಲಿ ನಡೆಯುತ್ತಿರುವ ಈ ಸರ್ಕಾರದ ಅಕ್ರಮಗಳು,ದರೋಡೆ ಕೆಲಸ ನಡೆಯುತ್ತಿದೆ. ಗಜನಿ ಮಹಮ್ಮದ್ ಸೇರಿ ಹಿಂದೆ ಮೂರು ಜನ ಪ್ರಮುಖರು ಇದ್ರು. ಅಂತ ವ್ಯಕ್ತಿಗಳು ಈ ಸರ್ಕಾರದಲ್ಲಿ ಇದ್ದಾರೆ. ಈ ಸರ್ಕಾರ ಬಗ್ಗೆ ಮಾತಾಡಿದ್ರೆ ನಿರಾಸೆ ಆಗಬಹುದು. ಹನಿಟ್ರ್ಯಾಪ್, ಸುಪಾರಿ ಕೊಲೆ ಬಗ್ಗೆ ಚರ್ಚೆ ಆಗುತ್ತಿದೆ. ಎಂತಹ ಪರಿಸ್ಥಿತಿಗೆ ಬಂದಿದ್ದಾರೆ. ನಾನು ಹೇಳುವ ವಿಷಯಗಳನ್ನ ಜನರ ಮುಂದೆ ಇಡಬಹುದು. ಈ ಸರ್ಕಾರಕ್ಕೆ ನಾನು ಸವಾಲು ಹಾಕಲು ಬಂದಿದ್ದೇನೆ. ಸರ್ಕಾರದ ವಿರುದ್ಧ ನನ್ನ ಯುದ್ದ ಆರಂಭ ಮಾಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು.
ಇದನ್ನೂ ಓದಿ: ಎಚ್ಡಿಕೆಗೆ ಸುಪ್ರೀಂ ಕೋರ್ಟ್‌ನಿಂದ ತಾತ್ಕಾಲಿಕ ರಕ್ಷಣೆ; ಹೈಕೋರ್ಟ್‌ಗೆ ಮೇಲ್ಮನವಿಗೆ ಅವಕಾಶ
40 ವರ್ಷಗಳ ಹಿಂದೆ ಭೂಮಿ ಖರೀದಿ ಮಾಡಿದ್ದೆ. ೪೦% ವರ್ಷಗಳಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ ಅಧಿಕಾರಿಗಳನ್ನ ದುರುಪಯೋಗ ಮೂಲಕ ರಾಜಕಾರಣ ನಡೆಯುತ್ತಿದೆ, ಸಿದ್ದರಾಮಯ್ಯ, ಡಿಕೆಶಿ ಅವರು ಇರಬಹುದು. ಇವತ್ತಿಂದ ನನ್ನ ಸರ್ಕಾರ ವಿರುದ್ಧ ವಾರ್ ಆರಂಭ ಮಾಡುತ್ತಿದ್ದೇನೆ. ಇದನ್ನು ನಾಡಿನ ಜನತೆಗೆ ಹೇಳುತ್ತಿದ್ದೇನೆ. ನಾಲ್ಕೈದು ಜೆಸಿಬಿ , 25ರಿಂದ 30 ಅಧಿಕಾರಿಗಳು, ಪೊಲೀಸರು ಬೇರೆ. ಕುಮಾರಸ್ವಾಮಿ ಬೆಂಬಲಿಗರು ದಾಳಿ ಮಾಡುತ್ತಾರೆ ಎಂದು ಪೊಲೀಸರು ಕರೆದುಕೊಂಡು ಬಂದಿದ್ದರು. ಮಾಜಿ ಪ್ರಧಾನಿ ಮಗ ನಾಲ್ಕು ಎಕರೆ ಒತ್ತುವರಿ ಮಾಡೋಕೆ ಆಗುತ್ತೆ. ಸಮಾಜ ಪರಿವರ್ತನೆ ಅಂತೆ. 70 ಎಕರೆ ಒತ್ತುವರಿ ಅಂತೆ ನನ್ನಲ್ಲಿ40 ಎಕರೆ ಮಾತ್ರ ಇದೆ. ಅತಿಕ್ರಮಣ, ಅಕ್ರಮ ಇದ್ರೆ ದಾಖಲೆ ಬಿಡುಗಡೆ ಮಾಡಲಿ. ಈ ಸರ್ಕಾರದಲ್ಲಿರುವವರು ನಾನು ಅಪರಾಧಿ ಎಂದು ಅಪಪ್ರಚಾರ ಮಾಡುವುದಕ್ಕೆ ಹೊರಟ್ಟಿದ್ದಾರೆ. ಇದಕ್ಕೆಲ್ಲ ಕುಮಾರಸ್ವಾಮಿ ಹೆದರಲ್ಲ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದು ತಿಳಿಸಿದರು.
ಅಧಿಕಾರ ಸಿಕ್ಕಾಗ ಯಾವ ರೀತಿ ನಡೆದುಕೊಳ್ಳಬೇಕು ಸರ್ಕಾರ ತೀರ್ಮಾನ ಗೊತ್ತಾಗುತ್ತೆ/ ಹಿರಿಯ ಅಧಿಕಾರಿಗಳನ್ನ ಇಟ್ಟುಕೊಂಡು ಎಸ್ಐಟಿ ಮಾಡಿ ತನಿಖೆ ಮಾಡುತ್ತಿರುವುದು ಪ್ರಥಮ. ಪೊಲೀಸ್ ಇಲಾಖೆಗೂ ಕಂದಾಯ ಇಲಾಖೆಗೆ ಏನು ಸಂಬಂಧ. ನನಗೆ ನೊಟೀಸ್ ಕೊಡುವುದು ಇರಲಿ. ಕೆಳಹಂತದ ಅಧಿಕಾರಿಗಳನ್ನ ನಾನು ಪ್ರಶ್ನೆ ಮಾಡಲ್ಲ. ಎಸ್ ಐಟಿ ತಂಡ ರಚಿಸಿ ತನಿಖೆ ಮಾಡಿಸಿದ್ದಾರೆ. ಇದು ಇತಿಹಾಸದಲ್ಲೇ ಪ್ರಥಮ. ಮೂಲ ಭೂ ಹಿಡುವಳಿದಾರರು ಯಾರಿದ್ದಾರೆ. ಅವರನ್ನ ಹುಡುಕಲು ಕೇತಗಾನಹಳ್ಳಿಯಲ್ಲಿ ಪೊಲೀಸರನ್ನ ಬಿಟ್ಟಿದ್ದು, ಅಲ್ಲಿನ ರೈತರಿಗೆ ನೊಟೀಸ್ ಕೊಟ್ಟಿದ್ದಾರೆ. ಈ ರೀ ತಿ ಎಲ್ಲಿಯಾದ್ರೂ ನೊಟೀಸ್ ಕೊಡುತ್ತಾರಾ ಎಂದು ಪ್ರಶ್ನಿಸಿದರು.
ಚಂದ್ರಶೇಖರ್ ಎಂಬುವರಿಗೆ ಈ ನೊಟೀಸ್ ಕೊಟ್ಟಿದ್ದಾರೆ. ಇವರು ನಮ್ಮನೆಂಟರೂ ಅಲ್ಲ. ಇವರು ಆಚಾರ್ ಅವರಿಗೆ ನೊಟೀಸ್ ಕೊಟ್ಟಿದ್ದಾರೆ. ಕುಮಾರಸ್ವಾಮಿ ಮನೆ ಬೇಕಾದರೆ ಹಾಳುಮಾಡಿ. ಯಾವನ್ ರೀ ಎಸ್ ಐಟಿಯವನು. ಏನಿದೆ ಅವನಿಗೆ ಪವರ್ ಇಷ್ಟಬಂದಂತೆ ಮಾಡುತ್ತಾರಾ? ಸಿಡಿಮಿಡಿಗೊಂಡರು.
ಮೂಡಾದಲ್ಲಿ ಡಿನೊಟಿಪಿಕೇಶನ್ ಮಾಡಿದ್ರಲ್ಲ. ಲೋಕಾಯುಕ್ತರು ದೊಡ್ಡ ರಿಪೋರ್ಟ್ ಕೊಟ್ಟಿದ್ದಾರೆ ಡಿನೊಟಿಪಿಕೇಶನ್ ಗೆ ಅರ್ಜಿ ಕೊಟ್ಟಿದ್ದು ಬಾಮೈದನಂತೆ. ಬಚ್ಚೇಗೌಡರಿದ್ದಾಗ ಅರ್ಜಿ ಕೊಟ್ಟಿದ್ದರಂತೆ. ಅರ್ಜಿ ಮೇಲೆ ಡಿಸಿಎಂ ಅಂತ ಯಾಕೆ ಬರೆದಿದ್ರು. ಯಾವ ಕಾರಣಕ್ಕೆ ಡಿಸಿಎಂ ಅಂತ ಬರೆದಿದ್ರು. ಸತ್ಯವನ್ನಲ್ಲದೆ ಏನೂ ಹೇಳಲ್ಲ ಅಂತಾರೆ. ಏನು ಪಾರದರ್ಶಕವಾದ ತನಿಖೆ ಮಾಡುತ್ತಿದ್ದಾರೆ. ನಾನು ಯಾವ ಜಮೀನು ಒತ್ತುವರಿ ಮಾಡಿಲ್ಲ. ಕಾನೂನುಬದ್ಧವಾಗಿಯೇ ಮಾಡಿಕೊಂಡಿದ್ದೇನೆ. ಕೋರ್ಟ್ ಗಳಿಗೂ ಮಿಸ್ ಗೈಡ್ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟನ್ ಗಟ್ಟಲೆ ದಾಖಲೆಗಳಿವೆ ಎಂದ ಎಚ್ಡಿಕೆ
ಸಾಯಿವೆಂಕಟೇಶ್ವರ ವಿಚಾರದಲ್ಲಿಕೇಸ್ ಹಾಕಿ ನಮ್ಮ ಕುಟುಂಬದ್ದು ಏನಿದೆ ಅಂತ ಹುಡುಕಿದ್ರು. ಹಿಂದೆ ಯಡಿಯೂರಪ್ಪ ಏನಿದೆ ಅಂತ ಹುಡುಕಿಸಿದ್ರು. ಆದರೆ ಏನೂ ಸಿಕ್ಕಿರಲಿಲ್ಲ. ಆಗ ನಾಲ್ಕು ಕೇಸ್ ನನ್ನ ಮೇಲೆ ಹಾಕಿಸಿದ್ರು. ಸಾಯಿವೆಂಕಟೇಶ್ವರ, ಜಂತಕಲ್ ಮೈನಿಂಗ್ ಹಾಕಿದ್ರು. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಹಾಕಿದ್ರು. ಇವತ್ತಿಗೆ 17 ವರ್ಷ ಆಗಿದೆ. ಒಂದು ತನಿಖೆ ನಡೆಸುವುದಕ್ಕೆ ಆಗಿಲ್ಲ. ಈಗ ಸ್ಪೈಸ್ ಜೆಟ್ ಸ್ಪೀಡ್ ನಲ್ಲಿ ತನಿಖೆ ಮಾಡಿದ್ರು. ವೈಯುಕ್ತಿಕ ದ್ವೇಷಕ್ಕಾಗಿ ನಾನು ಹೋರಾಟ ಮಾಡಿಲ್ಲ. ನನ್ನ ಹೆಂಡತಿ ತಮ್ಮನ ಮೇಲೆ ಕೇಸ್ ಹಾಕಿಸಿದ್ರು ಎಂದು ಡೆಪ್ಯೂಟಿ ಸಿಎಂ ಅವರು ಹೇಳಿದ್ರು. ನನ್ನ ಹತ್ತಿರ ಟನ್ ಗಟ್ಟಲೆ ದಾಖಲೆಗಳಿವೆ. ನನ್ನನ್ನ ನೀವು ಕೆಣಕಬೇಡಿ. ಬಳ್ಳಾರಿಗೆ ಹೋಗಿಲ್ಲ ಎಂದು ಡಿಸಿಎಂ ಹೇಳುತ್ತಾರೆ. ಎಷ್ಟು ಕಂಪನಿಗಳನ್ಮನೀವು ಇಟ್ಕೊಂಡಿದ್ರಿ. ಐರನ್ ಮಡಬೇಕೆಂದು ಎಷ್ಟು ಅರ್ಜಿ ಬರೆದಿದ್ರಿ. ಎಷ್ಟು ಐರನ್ ಲೂಟಿ ಹೊಡೆದ್ರಿ. ಆ ದಾಖಲೆಗಳು ನನ್ನ ಬಳಿ ಇವೆ ಎಂದು ಎಚ್ಚರಿಕೆ ನೀಡಿದರು.
Published On - 1:20 pm, Sat, 5 April 25