ಹತ್ತೇ ದಿನದಲ್ಲಿ 9 ಕೋಟಿ ರೂ: ಶಕ್ತಿ ಯೋಜನೆ ಮಧ್ಯೆಯೂ KKRTCಗೆ ಭಾರಿ ಆದಾಯ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಶಕ್ತಿ ಯೋಜನೆಯ ಹೊರತಾಗಿಯೂ ಶ್ರೀಶೈಲ ಜಾತ್ರೆಯಿಂದ 10 ದಿನಗಳಲ್ಲಿ 9 ಕೋಟಿ ರೂಪಾಯಿ ಆದಾಯ ಗಳಿಸಿದೆ. ಇದು ಸಾರಿಗೆ ನಿಗಮಗಳಿಗೆ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಹೊಸ ಮಾರ್ಗ ಹುಟ್ಟುಹಾಕಿದೆ. ಜಾತ್ರೆಯಿಂದ ಬಂದ ಭರ್ಜರಿ ಆದಾಯವು ಕೆಕೆಆರ್‌ಟಿಸಿಗೆ ಆರ್ಥಿಕವಾಗಿ ಬಲ ನೀಡಿದೆ.

ಕಲಬುರಗಿ, ಏಪ್ರಿಲ್ 05: ಕರ್ನಾಟಕ ಸರ್ಕಾರ ಶಕ್ತಿ ಯೋಜನೆ (shakti scheme) ಮೂಲಕ ಮಹಿಳೆಯರಿಗೆ ಉಚಿತ ಸಂಚಾರ ನೀಡಿದ್ದು, ಎಲ್ಲರಿಗೂ ಗೊತ್ತೆ ಇದೆ. ಇದರಿಂದ ಸಾರಿಗೆ ನಿಗಮಗಳು ನಷ್ಟದ ಹಾದಿ ಹಿಡಿದಿವೆ ಎನ್ನೋ ಮಾತು ಕೇಳಿ ಬಂದಿತ್ತು. ಈ ಮಧ್ಯೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಕೇವಲ 10 ದಿನಗಳಲ್ಲಿ ಬರೋಬ್ಬರಿ 9 ಕೋಟಿ ರೂ ಹೆಚ್ಚು ಆದಾಯ ಗಳಿಸಿದೆ. ಶ್ರೀಶೈಲ ಜಾತ್ರೆಯಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ (KKRTC) ಭರ್ಜರಿ ಆದಾಯ ಹರಿದುಬಂದಿದೆ.
ಕೇವಲ ಹತ್ತು ದಿನಗಳಲ್ಲಿ ಬರೋಬ್ಬರಿ 9.10 ಕೋಟಿ ರೂ. ಆದಾಯ
ಹೌದು! ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿ ಆದಾಗಿನಿಂದ ಅಭಿವೃದ್ಧಿ ಯೋಜನೆಗೆ ಸರ್ಕಾರದ ಬಳಿ ದುಡ್ಡಿಲ್ಲ ಎನ್ನೋ ಮಾತು ಕೇಳಿ ಬರುತ್ತಿದ್ದವು. ಅದರಲ್ಲೂ ಮೊದಲೇ ನಷ್ಟದಲ್ಲಿ ಸಾಗುತ್ತಿದ್ದ ರಾಜ್ಯದ ನಾಲ್ಕು ಸಾರಿಗೆ ನಿಗಮ ಸಂರ್ಪೂಣ ದಿವಾಳಿಯಾಗುತ್ತೆ ಎನ್ನೋ ಆರೋಪ ಕೇಳಿ ಬಂದಿದ್ದವು. ಯಾಕೆಂದರೆ ಮೊದಲೇ ಸಾಲದ ಸುಳಿಗೆ ಸುಲಿಗೆ ಸಿಲುಕಿದ್ದ ಕೆಲ ನಿಗಮಗಳು ಶಕ್ತಿ ಯೋಜನೆಯಿಂದ ಪೂರ್ಣವಾಗಿ ನಷ್ಟದಲ್ಲಿ ನಡೆಯುತ್ತೆವೆ ಎನ್ನಲಾಗಿತ್ತು. ಯಾಕೆಂದರೆ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಯೋಜನೆ ಜಾರಿಗೊಳಿಸಿದ್ದರಿಂದ ಸಹಜವಾಗೇ ಬಿಎಂಟಿಸಿಯಿಂದ ಹಿಡಿದು ಕೆಕೆಆರ್ಟಿಸಿಯವರೆಗೂ ಸಾರಿಗೆ ನಿಗಮಗಳ ಆದಯಕ್ಕೆ ಕತ್ತರಿ ಬಿದ್ದಿತ್ತು. ಆದರೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೇವಲ ಹತ್ತು ದಿನಗಳಲ್ಲಿ ಬರೋಬ್ಬರಿ 9.10 ಕೋಟಿ ರೂ. ಆದಾಯ ಗಳಿಸಿದೆ.
ಇದನ್ನೂ ಓದಿ: ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ..!
ಯುಗಾದಿ ಹಬ್ಬದ ಪ್ರಯುಕ್ತ ಆಂದ್ರ ಶ್ರೀಶೈಲಂನಲ್ಲಿ ಮಲ್ಲಿಕಾರ್ಜುನ ಜಾತ್ರೆಯಿತ್ತು. ಆ ಹಿನ್ನಲೆ ಕಳೆದ ತಿಂಗಳು ಹತ್ತು ದಿನಗಳ ಕಾಲ ಕೆಕೆಆರ್ಟಿಸಿಯ ಆರು ವಿಭಾಗಗಳಿಂದ ಬಸ್ಗಳನ್ನ ಬಿಡಲಾಗಿತ್ತು. ವಿಜಯಪುರ, ಬಳ್ಳಾರಿ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್ ಸೇರಿದಂತೆ ಆರು ವಿಭಾಗಗಳಿಂದ ನಿತ್ಯವೂ ಹತ್ತಾರು ಬಸ್ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹತ್ತು ದಿನಗಳಲ್ಲಿ 1857 ಬಸ್ಗಳು ಕಲ್ಯಾಣ ಕರ್ನಾಟಕ ಭಾಗದಿಂದ ಶ್ರೀಶೈಲಕ್ಕೆ ತೆರಳಿದ್ದವು. ನಿತ್ಯವೂ ನೂರಾರು ಜನ ಪ್ರಯಾಣಿಕರು ರಾಜ್ಯದ ಸಾರಿಗೆ ಬಸ್ಗಳ ಮೂಲಕ ಪ್ರಯಾಣ ಮಾಡಿದ್ದರಿಂದ ಬರೋಬ್ಬರಿ 9.10 ಕೋಟಿ ರೂಪಾಯಿ ಆದಾಯ ಗಳಿಸಿದೆ.
ಶಕ್ತಿ ಯೋಜನೆಯ ನಡುವೆಯೂ ಭಾರಿ ಆದಾಯ ಗಳಿಸಿದ ಕೆಕೆಆರ್‌ಟಿಸಿ
ಇನ್ನು ಆಂದ್ರದ ಶ್ರೀಶೈಲಂನಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಪ್ರಸಿದ್ಧ ಜೋರ್ತಿಲಿಂಗಗಳಲ್ಲಿ ಒಂದು. ಅಲ್ಲದೇ ಕಲ್ಯಾಣ ಕರ್ನಾಟಕ ಭಾಗದ ಅನೇಕ ಜನರ ಆರಾಧ್ಯ ದೈವವೂ ಹೌದು. ಹೀಗಾಗಿ ಪ್ರತಿ ವರ್ಷ ಲಕ್ಷಾಂತರ ಜನ ಭಕ್ತರು ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ತೆರಳುತ್ತಾರೆ. ಕಳೆದ ವರ್ಷವೂ ಲಕ್ಷಾಂತರ ಜನ ಸಾರಿಗೆ ಬಸ್ ಮೂಲಕ ತೆರಳಿ ದರ್ಶನ ಪಡೆದಿದ್ದರು. ಕಳೆದ ವರ್ಷವೂ ಕೆಕೆಆರ್‌ಟಿಸಿ ಏಳು ಕೋಟಿಗೂ ಹೆಚ್ಚು ಆದಾಯ ಗಳಿಸಿತ್ತು. ಈ ಭಾರಿ ಶಕ್ತಿ ಯೋಜನೆಯ ನಡುವೆಯೂ ಭಾರಿ ಆದಾಯ ಗಳಿಸಿರೋದು ಸಂಸ್ಥೆಯ ಆರ್ಥಿಕ ಚಟುವಟಿಕೆ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ.
ಶಕ್ತಿ ಯೋಜನೆಗೆ ಸರ್ಕಾರ ಸಾರಿಗೆ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡ್ತಿದ್ದರು, ಕೆಲ ಭಾರಿ ವಿಳಂಬವಾಗುತ್ತಿರೋದ್ರಿಂದ ಸಹಜವಾಗೇ ಇಲಾಖೆಗೆ ಭಾರಿ ಆರ್ಥಿಕ ಸಂಕಷ್ಟ ಎದುರಾಗುತ್ತಿತ್ತು. ಆದರೆ ಈ ಭಾರಿ ಆರ್ಥಿಕ ವರ್ಷದ ಮೊದಲ ತಿಂಗಳಲ್ಲೇ ಭರ್ಜರಿ ಆದಾಯ ಬಂದಿರುವುದು ಖುಷಿಯಾಗಿದೆ ಎಂದು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಹೇಳಿದ್ದಾರೆ.
ಇದನ್ನೂ ಓದಿ: ಬೇಸಿಗೆ ರಜೆ: ಬೆಂಗಳೂರು, ಮೈಸೂರಿನಿಂದ ಕಲಬುರಗಿ, ಹುಬ್ಬಳ್ಳಿ, ಬೆಳಗಾವಿಗೆ ವಿಶೇಷ ರೈಲು
ಶಕ್ತಿ ಯೋಜನೆಯ ಮಧ್ಯೆಯೂ ಸಾರಿಗೆ ಇಲಾಖೆ ಲಾಭ ಗಳಿಸಬಹುದು ಎನ್ನೋದನ್ನ ಕೆಕೆಆರ್‌ಟಿಸಿ ತೋರಿಸಿಕೊಟ್ಟಿದೆ. ಇದರಿಂದ ಸರ್ಕಾರದ ಅನುದಾನಕ್ಕೆ ಕಾಯದೇ, ಆದಾಯದ ಮೂಲಗಳನ್ನ ಹುಡುಕೊಳ್ಳೋಬೇಕಿದೆ. ಅದೇನೆ ಇರಲಿ, ಹತ್ತು ದಿನದ ಈ ಆದಾಯ ಇಲಾಖೆಗೆ ಶಕ್ತಿ ನೀಡಿದ್ದಂತು ಸುಳ್ಳಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:58 pm, Sat, 5 April 25