Banking Frauds: ಸ್ಕ್ರೀನ್​ ಶೇರಿಂಗ್ ಮೂಲಕ ಬ್ಯಾಂಕ್ ಖಾತೆಗೆ ಕನ್ನ; ತಡೆಯಲು ಹೀಗೆ ಮಾಡಿ

ಹಣದ ಆಮಿಷವೊಡ್ಡಿ ನಿಮ್ಮ ಸ್ಮಾರ್ಟ್​ಫೋನ್​ನಲ್ಲೇ ಯಾವುದೋ ಆ್ಯಪ್ ಇನ್​ಸ್ಟಾಲ್ ಮಾಡುವಂತೆ ಸೂಚಿಸಿ, ಸ್ಕ್ರೀನ್​ ಶೇರಿಂಗ್ ಅಥವಾ ರಿಮೋಟ್ ಆ್ಯಕ್ಸೆಸ್ ಮೂಲಕ ಅಪರಿಚಿತರು ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಸಾಧ್ಯತೆಗಳಿವೆ. ಇದನ್ನು ತಡೆಯಲು ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.

Banking Frauds: ಸ್ಕ್ರೀನ್​ ಶೇರಿಂಗ್ ಮೂಲಕ ಬ್ಯಾಂಕ್ ಖಾತೆಗೆ ಕನ್ನ; ತಡೆಯಲು ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Nov 09, 2022 | 1:40 PM

ಇದು ಸ್ಮಾರ್ಟ್​ಫೋನ್ ಯುಗ. ಬ್ಯಾಂಕ್ ಖಾತೆ ತೆರೆಯುವುದರಿಂದ ತೊಡಗಿ ಠೇವಣಿ ಇಡುವುದು, ವಿತ್​​ಡ್ರಾ ಮಾಡುವುದು, ಹಣ ವರ್ಗಾವಣೆ ಇತ್ಯಾದಿ ಎಲ್ಲ ಬ್ಯಾಂಕಿಂಗ್ ವಹಿವಾಟುಗಳು (Banking Activities) ಬೆರಳ ತುದಿಯಲ್ಲೇ, ಅಂದರೆ ಸ್ಮಾರ್ಟ್​ಫೋನ್​ನಲ್ಲೇ ದೊರೆಯುವ ಕಾಲ. ಇದನ್ನೂ ವಂಚಕರು ದಾಳವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಹಣದ ಆಮಿಷವೊಡ್ಡಿ ನಿಮ್ಮ ಸ್ಮಾರ್ಟ್​ಫೋನ್​ನಲ್ಲೇ ಯಾವುದೋ ಆ್ಯಪ್ ಇನ್​ಸ್ಟಾಲ್ ಮಾಡುವಂತೆ ಸೂಚಿಸಿ, ಸ್ಕ್ರೀನ್​ ಶೇರಿಂಗ್ ಅಥವಾ ರಿಮೋಟ್ ಆ್ಯಕ್ಸೆಸ್ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಸಾಧ್ಯತೆಗಳಿವೆ. ಹೀಗಾಗಿ ಅಪರಿಚಿತ ವ್ಯಕ್ತಿಗಳ ಆಮಿಷ, ಬ್ಯಾಂಕಿಂಗ್ ಅಕ್ರಮಗಳ ಬಗ್ಗೆ (Banking Frauds) ಬಹಳ ಜಾಗರೂಕತೆ ವಹಿಸಬೇಕಾದ ಅಗತ್ಯವಿದೆ. ಬ್ಯಾಂಕಿಂಗ್​ ಮತ್ತು ಹಣಕಾಸು ಅಕ್ರಮಗಳಿಗೆ ಸಂಬಂಧಿಸಿ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೆಲ ಸಮಯ ಹಿಂದೆ ಹೊರತಂದಿರುವ, ‘ರಾಜು ಮತ್ತು ನಲ್ವತ್ತು ಕಳ್ಳರು (Raju and the forty thieves)’ ಎಂಬ ಚಿತ್ರಕಥೆ ಸರಣಿಯ ಆರನೇ ಭಾಗದಲ್ಲಿ, ಈ ಕುರಿತು ವಿವರಿಸಲಾಗಿದೆ. ಇಂಥ ವಂಚನೆಗಳನ್ನು ತಡೆಯಲು ಬ್ಯಾಂಕ್ ಗ್ರಾಹಕರು ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆಯೂ ಸಲಹೆ ನೀಡಲಾಗಿದೆ.

ರಾಜು ಮತ್ತು ನಲ್ವತ್ತು ಕಳ್ಳರು ಭಾಗ – 6

ರಾಜು ಎಂಬವರ ಮೊಬೈಲ್​ಗೆ ಅಪರಿಚಿತ ವ್ಯಕ್ತಿಯೊಬ್ಬರಿಂದ ಕರೆ ಬರುತ್ತದೆ.

ಇದನ್ನೂ ಓದಿ
Image
ಆರೋಗ್ಯ ವಿಮೆ ಪೋರ್ಟ್ ಮಾಡುವುದು ಹೇಗೆ, ಪ್ರಯೋಜನವೇನು? ಇಲ್ಲಿದೆ ವಿವರ
Image
ನಿಮ್ಮ ಪಿಎಫ್​ ಖಾತೆಗೂ ಬಂತೇ ಇಪಿಎಫ್​ ಬಡ್ಡಿ ಹಣ, ಪರಿಶೀಲಿಸುವುದು ಹೇಗೆ? ಇಲ್ಲಿದೆ ನೋಡಿ
Image
Stock Market: ಷೇರುಪೇಟೆ ವಹಿವಾಟಿಗೆ ಇಂದು ಬಿಡುವು; ಕಾರಣವೇನು?
Image
Petrol Price on November 8: ಬಳ್ಳಾರಿಯಲ್ಲಿ ಪೆಟ್ರೋಲ್ ಬೆಲೆ 1 ರೂ. ಕುಸಿತ; ಬೆಂಗಳೂರು ಸೇರಿ ಪ್ರಮುಖ ನಗರಗಳ ಇಂದಿನ ಡೀಸೆಲ್ ದರ ಹೀಗಿದೆ

ಅಪರಿಚಿತ: ಸರ್, ಶುಭೋದಯ. ಎಬಿಸಿ ಗೇಮಿಂಗ್ ಕಾರ್ಪೊರೇಷನ್​ನಿಂದ ಕರೆ ಮಾಡುತ್ತಿದ್ದೇನೆ. ಆನ್​ಲೈನ್ ಗೇಮ್ ಆಡಿದ್ದಕ್ಕೆ ನಿಮಗೆ ನಗದು ಬಹುಮಾನ ನೀಡಲು ಉತ್ಸುಕರಾಗಿದ್ದೇವೆ.

ಅಪರಿಚಿತ ವ್ಯಕ್ತಿ ವಂಚಕ ಇರಬಹುದೆಂದು ಶಂಕಿಸಿದ ರಾಜು ಮೌನ ವಹಿಸುತ್ತಾರೆ.

ಅಪರಿಚಿತ: ನಾನು ಆನ್​ಲೈನ್ ಗೇಮ್​ಗಳನ್ನು ಅಭಿವೃದ್ಧಿಪಡಿಸುವ ಕಂಪನಿಯ ಉದ್ಯೋಗಿ. ಹೊಸ ಗೇಮ್​ ಒಂದರ ಬೀಟಾ ವರ್ಷನ್ ಅನ್ನು ಅಭಿವೃದ್ಧಿಪಡಿಸಿದ್ದೇವೆ. ಗೇಮ್ ಅನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವ ಮೊದಲು ಆಯ್ದ ಗ್ರಾಹಕರ ಅಭಿಪ್ರಾಯ ತಿಳಿಯಬೇಕಿದೆ. ಹಿಗಾಗಿ ನೀವು ಆ್ಯಪ್ ಡೌನ್ಲೋಡ್ ಮಾಡಿ ಅಭಿಪ್ರಾಯ ನೀಡಿದರೆ ನಾವು ನಿಮಗೆ 10,000 ರೂ. ಬಹುಮಾನ ನೀಡುತ್ತೇವೆ.

ಇದನ್ನೂ ಓದಿ: Banking Frauds: ಎಚ್ಚರ, ಎಟಿಎಂ ಯಂತ್ರದಲ್ಲಿ ಸ್ಕಿಮ್ಮರ್ ಇದೆಯೇ ನೋಡಿಕೊಂಡು ವ್ಯವಹರಿಸಿ

ರಾಜು: ಆನ್​ಲೈನ್ ಗೇಮ್ ಆಡಿದ್ದಕ್ಕೆ ಹಣ ನೀಡುತ್ತೀರಾ? ಹಾಗಿದ್ದರೆ ಎಲ್ಲಿಂದ ನಾನು ಆ್ಯಪ್ ಡೌನ್ಲೋಡ್ ಮಾಡಬೇಕು?

ಅಪರಿಚಿತ: ನಾನೊಂದು ಲಿಂಕ್ ಕಳುಹಿಸಿದ್ದೇನೆ. ಅದರ ಮೂಲಕ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ. ಈ ಯೂಸರ್​ನೇಮ್ ಮತ್ತು ಪಾಸ್​ವರ್ಡ್ (ನಿರ್ದಿಷ್ಟ ವಿವರಗಳನ್ನು ಕಳುಹಿಸಿ) ಮೂಲಕ ಲಾಗಿನ್ ಆಗಿ.

ರಾಜು: ಆ್ಯಪ್ ಡೌನ್ಲೋಡ್ ಯಶಸ್ವಿಯಾಯಿತು. ಇನ್ನೇನು ಮಾಡಬೇಕು?

ಅಪರಿಚಿತ: ಆ್ಯಪ್​ಗೆ ಲಾಗಿನ್ ಆಗಲು ಒಂದು ಕೋಡ್ ಬರುತ್ತದೆ, ಅದನ್ನು ನನಗೆ ತಿಳಿಸಿ.

ರಾಜು: ಏನು? ಕೋಡ್? ಇದು ಹಣಕಾಸು ವ್ಯವಹಾರಗಳ ಒಟಿಪಿಯಂತೆಯೇ?

ಅಪರಿಚಿತ: ಅದ್ಹೇಗೆ ಸಾಧ್ಯ ಸರ್? ನೀವು ನಮ್ಮ ಜತೆ ಬ್ಯಾಂಕ್ ಖಾತೆ ವಿವರವಾಗಲೀ ಡೆಬಿಟ್ ಕಾರ್ಡ್ ವಿವರಗಳನ್ನಾಗಲೀ ಹಂಚಿಕೊಂಡಿಲ್ಲ ತಾನೇ? ಇದು ಗೇಮ್ ಅನ್ನು ಓಪನ್ ಮಾಡಲಿರುವ ಎಂಟ್ರಿ ಕೋಡ್ ಅಷ್ಟೇ.

ರಾಜು: ಒಹ್, ಹಾಗಿದ್ದರೆ ಸರಿ. xxxx ಇದು ಎಂಟ್ರಿ ಕೋಡ್, ತೆಗೆದುಕೊಳ್ಳಿ.

ಅಪರಿಚಿತ ವಂಚಕ ರಾಜು ಅವರ ಮೊಬೈಲ್​ನಲ್ಲಿ ಯಶಸ್ವಿಯಾಗಿ ಸ್ಕ್ರೀನ್​ ಶೇರಿಂಗ್ ಆ್ಯಪ್ ಇನ್​ಸ್ಟಾಲ್ ಮಾಡುತ್ತಾನೆ. ರಾಜು ಅವರ ಮೊಬೈಲ್​ನ ಎಲ್ಲ ಸಂದೇಶಗಳು, ಕೀಬೋರ್ಡ್ ಆತನಿಗೆ ಕಾಣಿಸತೊಡಗುತ್ತದೆ.

ಅಪರಿಚಿತ: ಸರ್, ಆನ್​ಲೈನ್ ಗೇಮ್​ನಲ್ಲಿ ಭಾಗವಹಿಸುತ್ತಿರುವುದಕ್ಕಾಗಿ ನಿಮಗೆ ನಾವು 10,000 ರೂ. ಕಳುಹಿಸುತ್ತೇವೆ. ಅದಕ್ಕೂ ಮುನ್ನ ನೆಟ್ ಬ್ಯಾಂಕಿಂಗ್ ಆ್ಯಕ್ಟಿವೇಟ್ ಮಾಡುವುದಕ್ಕಾಗಿ 12345 ಈ ಖಾತೆ ಸಂಖ್ಯೆಗೆ 10 ರೂ. ಕಳುಹಿಸಿ. ನಂತರ ನನಗೆ ಕರೆ ಮಾಡಿ.

ಕೇವಲ 10 ರೂ. ಎಂದುಕೊಂಡು ರಾಜು ಹಣ ವರ್ಗಾವಣೆ ಮಾಡುತ್ತಾರೆ. ಇದರ ಬೆನ್ನಲ್ಲೇ 35,000 ರೂ., 20,000 ರೂ. ಹಾಗೂ 40,000 ರೂ. ಖಾತೆಯಿಂದ ವರ್ಗವಾದ ಬಗ್ಗೆ ರಾಜುಗೆ ಸಂದೇಶ ಬರುತ್ತದೆ.

ರಾಜು: ಅಯ್ಯೋ ದೇವರೇ? ಇದ್ಹೇಗಾಯ್ತು? ನಾನು ಒಟಿಪಿ ಹಂಚಿಕೊಂಡಿಲ್ಲವಲ್ಲ.

ಅಪರಿಚಿತ ವಂಚಕ ಸ್ಕ್ರೀನ್​ ಶೇರಿಂಗ್ ಮೂಲಕ ರಾಜು ಅವರ ಮೊಬೈಲ್​ನ ರಿಮೋಟ್ ಆ್ಯಕ್ಸೆಸ್ ಪಡೆದಿದ್ದ. ರಾಜು ಅವರು 10 ರೂ. ವರ್ಗಾವಣೆ ಮಾಡುವಾಗ ಅವರ ನೆಟ್​ ಬ್ಯಾಂಕಿಂಗ್ ಪಾಸ್​ವರ್ಡ್ ಮತ್ತು ಇತರ ವಿವರಗಳನ್ನು ತಿಳಿದುಕೊಂಡು ಖಾತೆಗೆ ಕನ್ನ ಹಾಕಿದ್ದಾನೆ.

ಅಕ್ರಮ ತಡೆಯಲು ಹೀಗೆ ಮಾಡಿ

  • ಅಪರಿಚಿತರಿಂದ ಆಫರ್​ಗಳ ಬಗ್ಗೆ ಕರೆ ಬಂದರೆ ಅವರು ಹೇಳಿದ ಕಂಪನಿ ಅಥವಾ ಸಂಸ್ಥೆಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಪರಿಶೀಲಿಸದೇ ಮುಂದುವರಿಯಬೇಡಿ.
  • ಆ್ಯಂಟಿವೈರಸ್, ಸ್ಪಾಮ್ ಬ್ಲಾಕಿಂಗ್ ಸಾಫ್ಟ್​ವೇರನ್ನು ಮೊಬೈಲ್​ನಲ್ಲಿ ಇನ್​ಸ್ಟಾಲ್ ಮಾಡಿ.
  • ಇಷ್ಟಾಗಿಯೂ ವಂಚನೆಗೆ ಒಳಗಾದಲ್ಲಿ ಸಮೀಪದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ.
  • https://cybercrime.gov.in/ ಪೋರ್ಟಲ್​ನಲ್ಲೂ ದೂರು ದಾಖಲಿಸಬಹುದು.

ಏನು ಮಾಡಬಾರದು?

  • ಅಪರಿಚಿತ ವ್ಯಕ್ತಿ, ಸಂಸ್ಥೆ ಅಥವಾ ಕಂಪನಿಗಳಿಂದ ಎಸ್​ಎಂಎಸ್ ಅಥವಾ ಇ-ಮೇಲ್ ಮೂಲಕ ಬರುವ ಸಂದೇಶಗಳನ್ನು, ಲಿಂಕ್​ಗಳನ್ನು ಕ್ಲಿಕ್ ಮಾಡಬೇಡಿ.
  • ಅಪರಿಚಿತರು ಕಳುಹಿಸುವ ಸ್ಕ್ರೀನ್​ ಶೇರಿಂಗ್ ಆ್ಯಪ್​ಗಳನ್ನು ಡೌನ್ಲೋಡ್ ಮಾಡಿಕೊಳ್ಳಲೇಬಾರದು.
  • ಒಂದು ವೇಳೆ ಡೌನ್ಲೋಡ್ ಮಾಡಿಕೊಂಡರೂ ಅಂಥ ಆ್ಯಪ್​ಗಳಲ್ಲಿ ಬರುವ ಸ್ಕ್ರೀನ್​ ಶೇರಿಂಗ್ ಕೋಡ್​ಗಳನ್ನು ಯಾರ ಜತೆಗೂ ಹಂಚಿಕೊಳ್ಳಬಾರದು.

(ಮಾಹಿತಿ ಕೃಪೆ – ಆರ್​ಬಿಐ)

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ