ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಗೋಕರ್ಣದಲ್ಲಿ ಅಮಾಯಕರ ಮತಾಂತರದ ಆರೋಪ ಕೇಳಿಬಂದಿದೆ. ಪ್ರಾರ್ಥನಾ ಕೇಂದ್ರದಲ್ಲಿ ಬಡವರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರನ್ನು ಗುರಿಯಾಗಿಸಿಕೊಂಡು ಮತಾಂತರ ಮಾಡುವ ಪ್ರಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ. ಸ್ಥಳೀಯರು ಪ್ರಾರ್ಥನಾ ಕೇಂದ್ರಕ್ಕೆ ನುಗ್ಗಿ ಆರೋಪಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಾರವಾರ, ಜೂನ್ 23: ಪುರಾಣ ಪ್ರಸಿದ್ದ ಗೋಕರ್ಣದಲ್ಲಿ (gokarna) ಅಮಾಯಕರನ್ನು ಮತಾಂತರ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ಪ್ರಾರ್ಥನಾ ಕೇಂದ್ರಕ್ಕೆ ನುಗ್ಗಿ ಸ್ಥಳಿಯರಿಂದ ತರಾಟೆ ತೆಗೆದುಕೊಂಡಿರುವಂತಹ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮನೆಯೊಂದರಲ್ಲಿ ಜನರನ್ನ ಸೇರಿಸಿ ಮತಾಂತರ ಆಗುವಂತೆ ಮೈಂಡ್ ವಾಶ್ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jun 23, 2025 02:48 PM