Banking Frauds: ಎಚ್ಚರ, ಎಟಿಎಂ ಯಂತ್ರದಲ್ಲಿ ಸ್ಕಿಮ್ಮರ್ ಇದೆಯೇ ನೋಡಿಕೊಂಡು ವ್ಯವಹರಿಸಿ

ಸ್ಕಿಮ್ಮಿಂಗ್ ಡಿವೈಸ್ ಎಂದರೇನು? ಅದರ ಮೂಲಕ ವಂಚಕರು ನಮ್ಮ ಖಾತೆಗೆ ಹೇಗೆ ಕನ್ನ ಹಾಕುತ್ತಾರೆ? ಇದನ್ನು ತಡೆಯಲು ಏನು ಮಾಡಬೇಕು? ಇಲ್ಲಿದೆ ವಿವರವಾದ ಮಾಹಿತಿ

Banking Frauds: ಎಚ್ಚರ, ಎಟಿಎಂ ಯಂತ್ರದಲ್ಲಿ ಸ್ಕಿಮ್ಮರ್ ಇದೆಯೇ ನೋಡಿಕೊಂಡು ವ್ಯವಹರಿಸಿ
ಎಟಿಎಂ ಯಂತ್ರದಲ್ಲಿ ಸ್ಕಿಮ್ಮರ್
Follow us
TV9 Web
| Updated By: Ganapathi Sharma

Updated on: Oct 31, 2022 | 5:44 PM

ಬ್ಯಾಂಕಿಂಗ್ ವ್ಯವಸ್ಥೆ (Banking System) ಹೆಚ್ಚು ಸುಲಭ ಮತ್ತು ಸರಳವಾದಂತೆಲ್ಲ ವಂಚಕರೂ (Banking Frauds) ಗ್ರಾಹಕರ ದುಡ್ಡಿಗೆ ಕನ್ನ ಹಾಕಲು ಹೊಸ-ಹೊಸ ದಾರಿಗಳನ್ನು ಹುಡುಕುತ್ತಿರುತ್ತಾರೆ. ಈಗಂತೂ ಡಿಜಿಟಲ್ ಕಾಲಘಟ್ಟ. ಹಣಕಾಸಿಗೆ ಸಂಬಂಧಿಸಿದ ಹೆಚ್ಚಿನೆಲ್ಲ ಚಟುವಟಿಕೆಗಳೂ ಆನ್​ಲೈನ್​​ನಲ್ಲೇ ನಡೆಯುತ್ತವೆ. ಆದರೂ, ನಗದಿನ ಅವಶ್ಯಕತೆ ಇದ್ದೇ ಇರುತ್ತದಲ್ಲ… ನಗದು ವಿತ್​ಡ್ರಾ ಮಾಡಲೆಂದು ಬ್ಯಾಂಕ್​ಗಳೇ ಒದಗಿಸಿರುವ ಎಟಿಎಂ (ATM) ಯಂತ್ರಗಳ ಮೂಲಕವೇ ನಮ್ಮ ದುಡ್ಡಿಗೆ ಕನ್ನ ಹಾಕಿದರೋ? ಇಂಥ ಚಟುವಟಿಕೆಗಳೂ ಕೆಲವೊಮ್ಮೆ ನಡೆದ ಉದಾಹರಣೆಗಳಿವೆ.  ಬ್ಯಾಂಕಿಂಗ್​ ಮತ್ತು ಹಣಕಾಸು ಅಕ್ರಮಗಳಿಗೆ ಸಂಬಂಧಿಸಿ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕೆಲ ಸಮಯ ಹಿಂದೆ ಹೊರತಂದಿರುವ, ‘ರಾಜು ಮತ್ತು ನಲ್ವತ್ತು ಕಳ್ಳರು (Raju and the forty thieves)’ ಎಂಬ ಚಿತ್ರಕಥೆ ಸರಣಿಯ ಐದನೇ ಭಾಗದಲ್ಲಿ, ಸ್ಕಿಮ್ಮರ್ ಎಂಬ ಡಿವೈಸ್ ಸಾಧನದಿಂದ ವಂಚಕರು ನಮ್ಮ ಬ್ಯಾಂಕ್ ಖಾತೆಗೆ ಹೇಗೆ ಕನ್ನ ಹಾಕಬಲ್ಲರು? ಅದನ್ನು ತಡೆಯಲು ಏನು ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ವಿವರಿಸಲಾಗಿದೆ.

ರಾಜು ಮತ್ತು ನಲ್ವತ್ತು ಕಳ್ಳರು ಭಾಗ – 5

ತಿಂಗಳ ವೇತನ ಬ್ಯಾಂಕ್ ಖಾತೆಗೆ ಜಮೆಯಾದ ಬಳಿಕ ಖರ್ಚಿಗೆ ಹಣ ವಿತ್​ಡ್ರಾ ಮಾಡಲೆಂದು ರಾಜು ಎಟಿಎಂಗೆ ತೆರಳುತ್ತಾರೆ. ಹಣ ಡ್ರಾ ಮಾಡಿ ತುಸು ಹೊತ್ತಿನಲ್ಲಿ ಅವರಿಗೆ ಎಸ್​ಎಂಎಸ್ ಸಂದೇಶವೂ ಬರುತ್ತದೆ. ಇದಾಗಿ ಸ್ವಲ್ಪ ಹೊತ್ತಿನ ಬಳಿಕ 15,000 ರೂ., 12,000 ರೂ. ವಿತ್​ಡ್ರಾ ಆದ ಬಗ್ಗೆ ಮತ್ತೆ ಸಂದೇಶ ಬರುತ್ತದೆ. ಆದರೆ, ಅವರು ಒಂದೇ ಬಾರಿ ನಗದು ವಿತ್​ಡ್ರಾ ಮಾಡಿದ್ದರು. ಈ ಕುರಿತು ರಾಜು ತಮ್ಮ ಮಗಳಲ್ಲಿ ವಿಷಯ ತಿಳಿಸುತ್ತಾರೆ.

ಇದನ್ನೂ ಓದಿ
Image
World Savings Day 2022: ವಿಶ್ವ ಉಳಿತಾಯ ದಿನ; ಮಹತ್ವ, ಇತಿಹಾಸ, ಧ್ಯೇಯದ ಬಗ್ಗೆ ಇಲ್ಲಿದೆ ವಿವರ
Image
ವೈರಸ್ ದಾಳಿ; ಎಸ್​​ಬಿಐ ಸೇರಿ 18 ಬ್ಯಾಂಕ್​ಗಳ ಗ್ರಾಹಕರ ದತ್ತಾಂಶ ಅಪಾಯದಲ್ಲಿ
Image
FD Rates: ಎಫ್​ಡಿ ಬಡ್ಡಿ ದರ ಹೆಚ್ಚಳ; ವಿವಿಧ ಬ್ಯಾಂಕ್​ಗಳ ಎಫ್​ಡಿ ದರ ವಿವರ ಇಲ್ಲಿದೆ
Image
LIC Saral Pension Plan: 1 ಲಕ್ಷ ರೂ. ವಾರ್ಷಿಕ ಪಿಂಚಣಿ ಪಡೆಯಲು ನೀವೆಷ್ಟು ಹೂಡಿಕೆ ಮಾಡಬೇಕು?

ರಾಜು ಪುತ್ರಿ: ನೀವೆಷ್ಟು ನಗದು ವಿತ್​ಡ್ರಾ ಮಾಡಿದ್ದಿರಿ ಅಪ್ಪಾ?

ರಾಜು: 10,000 ರೂ. ಅಷ್ಟೇ ಮಾಡಿದ್ದೆ.

ರಾಜು ಪುತ್ರಿ: ಮೊದಲು ನಿಮ್ಮ ಎಟಿಎಂ ಕಾರ್ಡ್ ಅನ್ನು ಬ್ಲಾಕ್ ಮಾಡೋಣ. ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಮೂಲಕ ಮಾಡಬಹುದು. ನಿಮ್ಮ ಬ್ಯಾಂಕ್​ ಖಾತೆಯನ್ನೂ ಬ್ಲಾಕ್ ಮಾಡುವಂತೆ ಬ್ಯಾಂಕ್ ಶಾಖೆಯವರಲ್ಲಿ ಮನವಿ ಮಾಡೋಣ. ಒಟಿಪಿ ಅಥವಾ ಎಟಿಎಂ ಕಾರ್ಡ್ ವಿವರಗಳನ್ನು ಯಾರ ಜತೆಗಾದರೂ ಹಂಚಿಕೊಂಡಿದ್ದೀರಾ?

ರಾಜು: ಇಲ್ಲ.

ರಾಜು ಪುತ್ರಿ: ನೀವು ಹಣ ವಿತ್​ಡ್ರಾ ಮಾಡಿದ ಎಟಿಎಂಗೆ ತೆರಳಿ ಒಮ್ಮೆ ಪರಿಶೀಲಿಸೋಣ.

ರಾಜು: ಹಾ, ಹಾಗೆಯೇ ಮಾಡೋಣ

ಇಬ್ಬರೂ ಎಟಿಎಂ ಕೇಂದ್ರಕ್ಕೆ ತೆರಳಿ ಪರಿಶೀಲಿಸುತ್ತಾರೆ.

ರಾಜು ಪುತ್ರಿ: ನೋಡಿ ಅಪ್ಪಾ, ಎಟಿಎಂ ಕಾರ್ಡ್ ಇನ್​ಸರ್ಟ್ ಮಾಡುವ ಜಾಗದಲ್ಲಿ ಸ್ಕಿಮ್ಮಿಂಗ್ ಡಿವೈಸ್ ಇಟ್ಟಿದ್ದಾರೆ.

ರಾಜು: ಏನದು, ಹಾಗೆಂದರೆ?

ರಾಮಜು ಪುತ್ರಿ: ಸ್ಕಿಮ್ಮಿಂಗ್ ಡಿವೈಸ್ ಎಂದರೆ ಒಂದು ರೀತಿಯ ಕಾರ್ಡ್ ರೀಡರ್. ನೀವು ಎಟಿಎಂ ಕಾರ್ಡ್ ಅನ್ನು ಯಂತ್ರದೊಳಕ್ಕೆ ಹಾಕುವಾಗ ಕಾರ್ಡಿನ ವಿವರಗಳನ್ನು ರೀಡ್ ಮಾಡಿಟ್ಟುಕೊಳ್ಳುತ್ತದೆ. ಈ ದತ್ತಾಂಶಗಳನ್ನು ಪಡೆದುಕೊಂಡು ವಂಚಕರು ನಮ್ಮ ಖಾತೆಯಿಂದ ಹಣ ಎಗರಿಸುತ್ತಾರೆ.

ನಂತರ ಇಬ್ಬರೂ ಬ್ಯಾಂಕ್​ಗೆ ತೆರಳಿ ದೂರು ದಾಖಲಿಸುತ್ತಾರೆ.

ಇದನ್ನೂ ಓದಿ: Banking Frauds: ಕ್ರೆಡಿಟ್ ಕಾರ್ಡ್ ವಾರ್ಷಿಕ ಶುಲ್ಕ ಮನ್ನಾ ಹೆಸರಲ್ಲಿ ವಂಚನೆ; ಎಚ್ಚರ ವಹಿಸಿ

ಎಟಿಎಂ ಬಳಸುವ ಮುನ್ನ ಗಮನಿಸಿ…

  • ಎಟಿಎಂ ಯಂತ್ರಗಳಿಗೆ ಕಾರ್ಡ್ ಇನ್​ಸರ್ಟ್ ಮಾಡುವ ಮುನ್ನ ಕಾರ್ಡ್ ಹಾಕುವ ಜಾಗದಲ್ಲಿ ಸ್ಕಿಮ್ಮಿಂಗ್ ಡಿವೈಸ್ (ಇದು ಒಂದು ಮಾದರಿಯ ಕಾರ್ಡ್ ರೀಡರ್. ಇದು ಕಾರ್ಡಿನಲ್ಲಿರುವ ದತ್ತಾಂಶಗಳನ್ನು ಕಾಪಿ ಮಾಡಿ ಸಂಗ್ರಹಿಸಿಟ್ಟುಕೊಳ್ಳುತ್ತದೆ. ಇದು ಹೇಗಿರುತ್ತದೆ ಎಂಬ ಚಿತ್ರವನ್ನು ಮೇಲೆ ನೀಡಲಾಗಿದೆ ಗಮನಿಸಿ) ಇದೆಯೇ ಎಂಬುದನ್ನು ಪರಿಶೀಲಿಸಿ. ವಂಚಕರು ಸ್ಕಿಮ್ಮಿಂಗ್ ಡಿವೈಸ್ ಅನ್ನು ಎಟಿಎಂನಲ್ಲಿ ಇಡುವ ಮೂಲಕ ನಿಮ್ಮ ಕಾರ್ಡಿನ ದತ್ತಾಂಶಗಳನ್ನು ಕಳವು ಮಾಡುತ್ತಾರೆ.
  • ನಿಮ್ಮ ಹಣಕಾಸಿನ ಚಟುವಟಿಕೆಯ ಸ್ಟೇಟ್​​ಮೆಂಟ್ ಅನ್ನು ನಿಯಮಿತವಾಗಿ ಪರಿಶೀಲಿಸುತ್ತಿರಿ. ಅಕ್ರಮ ನಡೆದಿರುವುದು ಗೊತ್ತಾದಲ್ಲಿ ತಕ್ಷಣವೇ ಬ್ಯಾಂಕ್​ಗೆ ಮಾಹಿತಿ ನೀಡಿ. ಗರಿಷ್ಠ 3 ದಿನಗಳ ಒಳಗೆ ದೂರು ನೀಡುವುದನ್ನು ಮರೆಯದಿರಿ.
  • ಸಮೀಪದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ.
  • ಎಟಿಎಂ ಆವರಣದಲ್ಲಿ ಯಾರಿಗೂ ನಿಮ್ಮ ಕಾರ್ಡನ್ನು ನೀಡಬೇಡಿ. ಬೇರೆಯವರ ಬಳಿ ನಗದು ವಿತ್​ ಡ್ರಾ ಮಾಡಿಕೊಡುವಂತೆ ವಿನಂತಿಸಬೇಡಿ. ಹಿರಿಯ ನಾಗರಿಕರ ಅಥವಾ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದವರಿಂದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಕನ್ನ ಹಾಕಲೆಂದೇ ವಂಚಕರು ಹೊಂಚುಹಾಕುತ್ತಿರುತ್ತಾರೆ ಎಂಬುದು ನೆನಪಿರಲಿ.

(ಮಾಹಿತಿ ಕೃಪೆ – ಆರ್​ಬಿಐ)

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್