LIC Saral Pension Plan: 1 ಲಕ್ಷ ರೂ. ವಾರ್ಷಿಕ ಪಿಂಚಣಿ ಪಡೆಯಲು ನೀವೆಷ್ಟು ಹೂಡಿಕೆ ಮಾಡಬೇಕು?

ಎಲ್​ಐಸಿ ಸರಳ ಪಿಂಚಣಿ ಯೋಜನೆ ವಿವರದ ಪ್ರಕಾರ, 40ರಿಂದ 80 ವರ್ಷ ವಯಸ್ಸಿನವರು ವಾರ್ಷಿಕ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.

LIC Saral Pension Plan: 1 ಲಕ್ಷ ರೂ. ವಾರ್ಷಿಕ ಪಿಂಚಣಿ ಪಡೆಯಲು ನೀವೆಷ್ಟು ಹೂಡಿಕೆ ಮಾಡಬೇಕು?
ಎಲ್​ಐಸಿImage Credit source: PTI
Follow us
| Updated By: ಗಣಪತಿ ಶರ್ಮ

Updated on: Oct 29, 2022 | 1:28 PM

ಭಾರತೀಯ ಜೀವ ವಿಮಾ ನಿಗಮವು (LIC) ವೈಯಕ್ತಿಕ ವಾರ್ಷಿಕ ಯೋಜನೆ ‘ಸರಳ ಪಿಂಚಣಿ’ಯನ್ನು (Saral Pension Plan) ಇತ್ತೀಚೆಗೆ ಪರಿಚಯಿಸಿದೆ. ಇದೊಂದು ಸಿಂಗಲ್ ಪ್ರೀಮಿಯಂ ಯೋಜನೆಯಾಗಿದೆ. ಇದು ವಾರ್ಷಿಕ ಶೇಕಡಾ 5ರಷ್ಟು ಖಾತರಿಪಡಿಸಿದ ಬಡ್ಡಿ ಪ್ರಯೋಜನವನ್ನು ಆರಂಭದಿಂದಲೇ ನೀಡಲಿದೆ. ಈ ಯೋಜನೆಯಡಿ ಪಾಲಿಸಿದಾರರು ಪ್ರತಿ ತಿಂಗಳು, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಪಿಂಚಣಿ ಪಡೆಯಬಹುದಾಗಿದೆ.

ಅರ್ಹತೆಗೆ ಮಾನದಂಡಗಳು

ಎಲ್​ಐಸಿ ಸರಳ ಪಿಂಚಣಿ ಯೋಜನೆ ವಿವರದ ಪ್ರಕಾರ, 40ರಿಂದ 80 ವರ್ಷ ವಯಸ್ಸಿನವರು ವಾರ್ಷಿಕ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ
Image
ಟ್ವಿಟರ್​ನಿಂದ ವಜಾಗೊಂಡ ಪರಾಗ್ ಅಗರ್​ವಾಲ್​ಗೆ ಸಿಗಲಿದೆ 346 ಕೋಟಿ ರೂ. ಪರಿಹಾರ
Image
Maruti Suzuki: ಮಾರುತಿ ಸುಜುಕಿ ನಿವ್ವಳ ಲಾಭ ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚಳ
Image
ಟಿಡಿಎಸ್​ ಸಲ್ಲಿಕೆ ಗಡುವು ನವೆಂಬರ್ 30ಕ್ಕೆ ವಿಸ್ತರಿಸಿದ ಸಿಬಿಡಿಟಿ
Image
RBI MPC meet: ಬೆಲೆ ಏರಿಕೆ, ಹಣದುಬ್ಬರ ತಡೆಯಲಾಗದ್ದಕ್ಕೆ ಏನು ಕಾರಣ ನೀಡಬಹುದು ಆರ್​ಬಿಐ?

ಪಿಂಚಣಿ ಲೆಕ್ಕಾಚಾರ ಹೀಗಿದೆ;

ಎಲ್​ಐಸಿ ವೆಬ್​ಸೈಟ್​​ನಲ್ಲಿ ವಿವರಿಸಿರುವ ಪ್ರಕಾರ, ಪಾಲಿಸಿದಾರರು ಕನಿಷ್ಠ 1,000 ರೂ. ತಿಂಗಳ ಪಿಂಚಣಿ ಅಥವಾ ವಾರ್ಷಿಕ 12,000 ಪಿಂಚಣಿ ಯೋಜನೆಯನ್ನು ಆಯ್ದುಕೊಳ್ಳಬಹುದಾಗಿದೆ. ಈ ಯೋಜನೆಗಾಗಿ ಪಾಲಿಸಿದಾರರು ಒಂದು ಬಾರಿಗೆ 2.50 ಲಕ್ಷ ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ. 10 ಲಕ್ಷ ರೂ. ಮೊತ್ತದ ಪ್ರೀಮಿಯಂ ಪಾವತಿಸಿದರೆ ವಾರ್ಷಿಕ 50,250 ರೂ. ಪಿಂಚಣಿ ಪಡೆಯಬಹುದಾಗಿದೆ. ಇದೇ ರೀತಿ ವಾರ್ಷಿಕ 1 ಲಕ್ಷ ರೂ. ಪಿಂಚಣಿ ಪಡೆಯಲು ಪಾಲಿಸಿದಾರರು ಒಂದು ಬಾರಿಗೆ 20 ಲಕ್ಷ ರೂ. ಪ್ರೀಮಿಯಂ ಪಾವತಿಸಬೇಕು.

ಸರಳ ಪಿಂಚಣಿ ಯೋಜನೆಯ ಕುರಿತು ಇನ್ನಷ್ಟು…

ಸಾಲದ ಪ್ರಯೋಜನ: ಸರಳ ಪಿಂಚಣಿ ಯೋಜನೆಯಡಿ ಪ್ರೀಮಿಯಂ ಪಾವತಿಸಿದ 6 ತಿಂಗಳ ಬಳಿಕ ಸಾಲದ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಎಕ್ಸಿಟ್ ಪ್ಲಾನ್: ಪ್ರೀಮಿಯಂ ಪಾವತಿಸಿದ 6 ತಿಂಗಳ ಬಳಿಕ ಯೀಜನೆಯಿಂದ ಹಿಂದೆ ಸರಿಯಲು ಅವಕಾಶವಿದೆ.

ಬಡ್ಡಿ ದರ: ಸರಳ ಪಿಂಚಣಿ ಯೋಜನೆಯಲ್ಲಿ ವಾರ್ಷಿಕ ಶೇಕಡಾ 5ರ ಬಡ್ಡಿ ದರ ನಿಗದಿಪಡಿಸಲಾಗಿದೆ.

ಜೀವನಪೂರ್ತಿ ಪಿಂಚಣಿ ಪ್ರಯೋಜನ: ಜೀವನ ಪೂರ್ತಿ ಅನ್ವಯವಾಗುವ ಯೋಜನೆ ಇದಾಗಿದೆ. ಪಾಲಿಸಿದಾರರು ತಮ್ಮ ಜೀವಿತಾವಧಿಯ ಕೊನೆಯವರೆಗೂ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.

ನಾಮನಿರ್ದೇಶಿತರಿಗೆ ಡೆತ್ ಬೆನಿಫಿಟ್: ಎಲ್​ಐಸಿ ಸರಳ ಪಿಂಚಣಿ ಯೋಜನೆಯ ಪಾಲಿಸಿದಾರರ ಮರಣದ ಬಳಿಕ, ನಾಮನಿರ್ದೇಶಿತರಿಗೆ ಮೂಲ ಪ್ರೀಮಿಯಂ ಅಥವಾ ಬೇಸ್ ಪ್ರೀಮಿಯಂ ಅನ್ನು ನೀಡಲಾಗುತ್ತದೆ.

ಮೆಚ್ಯೂರಿಟಿ ಪ್ರಯೋಜವಿಲ್ಲ: ಎಲ್​ಐಸಿ ಸರಳ ಪಿಂಚಣಿ ಯೋಜನೆಯಲ್ಲಿ ಮೆಚ್ಯೂರಿಟಿ ಪ್ರಯೋಜನ ಇರುವುದಿಲ್ಲ ಎಂಬುದನ್ನು ಮುಖ್ಯವಾಗಿ ಗಮನಿಸಬೇಕು. ಪಾಲಿಸಿದಾರರಿಗೆ ಜೀವನಪೂರ್ತಿ ಪಿಂಚಣಿ ನೀಡುವ ಕಾರಣ ಈ ಯೋಜನೆಯಲ್ಲಿ ಮೆಚ್ಯೂರಿಟಿ ಪ್ರಯೋಜನಗಳು ಇರುವುದಿಲ್ಲ.

ಇದನ್ನೂ ಓದಿ: ಎಲ್​ಐಸಿ ‘ಧನ್ ವರ್ಷ 866’ರಲ್ಲಿ ಒಂದು ಬಾರಿ ಹೂಡಿಕೆಗೆ ದುಪ್ಪಟ್ಟು ಗಳಿಕೆ: ಇಲ್ಲಿದೆ ಮಾಹಿತಿ

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್