ಎಲ್ಐಸಿ ‘ಧನ್ ವರ್ಷ 866’ರಲ್ಲಿ ಒಂದು ಬಾರಿ ಹೂಡಿಕೆಗೆ ದುಪ್ಪಟ್ಟು ಗಳಿಕೆ: ಇಲ್ಲಿದೆ ಮಾಹಿತಿ
‘ಧನ್ ವರ್ಷ 866’ ವಿಮಾ ಯೋಜನೆ ಮೂಲಕ ಒಂದು ಬಾರಿ ಹೂಡಿಕೆ ಮಾಡಿ ದುಪ್ಪಟ್ಟು ಗಳಿಸಬಹುದಾಗಿದೆ. ಹೇಗೆಂಬ ಲೆಕ್ಕಾಚಾರ ಇಲ್ಲಿದೆ.
ಭಾರತೀಯ ಜೀವ ವಿಮಾ ನಿಗಮವು (LIC) ‘ಧನ್ ವರ್ಷ 866’ (Dhan Varsha 866) ಎಂಬ ಹೊಸ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಇದು ವಿಮಾ ಸುರಕ್ಷತೆಯೊಂದಿಗೆ ಉಳಿಯತಾಯದ (Savings) ಉದ್ದೇಶವನ್ನೂ ಒಳಗೊಂಡಿರುವ ಯೋಜನೆಯಾಗಿದೆ ಎಂದು ಎಲ್ಐಸಿ ತಿಳಿಸಿದೆ. ಯೋಜನೆಯು ಹಣಕಾಸು ಉಳಿತಾಯಕ್ಕೆ ಸಂಬಂಧಿಸಿದ್ದು ಮಾತ್ರವಾಗಿರದೆ, ಅಕಾಲಿಕ ಮರಣ ಹೊಂದಿದರೆ ಕುಟುಂಬದವರಿಗೆ ವಿಮೆ ನೀಡುವುದರ ಜತೆಗೆ ಹೂಡಿಕೆಯ ದುಪ್ಪಟ್ಟು ಗಳಿಸಲು ಅವಕಾಶ ಮಾಡಿಕೊಡಲಿದೆ. ಮೆಚ್ಯೂರಿಟಿ ದಿನಾಂಕದಂದು ಖಾತರಿಪಡಿಸಿದ ಒಟ್ಟು ಮೊತ್ತ ನೀಡುವ ಮೂಲಕ ಪಾಲಿಸಿದಾರರಿಗೆ ಹೂಡಿಕೆಯ ದುಪ್ಪಟ್ಟಿಗಿಂತಲೂ ಹೆಚ್ಚು ಗಳಿಸಲು ಅವಕಾಶವಿದೆ ಎಂದು ಎಲ್ಐಸಿ ಹೇಳಿದೆ. ಇದು ಒನ್ ಟೈಮ್ ಇನ್ವೆಸ್ಟ್ (ಒಂದು ಬಾರಿಯ ಹೂಡಿಕೆ) ಯೋಜನೆಯಾಗಿದೆ.
‘ಧನ್ ವರ್ಷ 866’ರ ಪ್ರಯೋಜನಗಳು:
ಈ ಯೋಜನೆಯಲ್ಲಿ ಪಾಲಿಸಿ ಆರಂಭವಾದ ದಿನದಿಂದಲೇ ಡೆತ್ ಬೆನಿಫಿಟ್ ಪಡೆಯಬಹುದಾಗಿದೆ. ಮೆಚ್ಯೂರಿಟಿಗೂ ಮುನ್ನ ಮರಣ ಸಂಭವಿಸಿದಲ್ಲಿ ಖಾತರಿಪಡಿಸಿದ ಪ್ರತಿಫಲದ ಮೊತ್ತಕ್ಕಿಂತಲೂ (Guaranteed Additions) ಹೆಚ್ಚಿನ ಡೆತ್ ಬೆನಿಫಿಟ್ ನಿಗದಿಪಡಿಸಲಾಗಿದೆ.
ಮೆಚ್ಯೂರಿಟಿ ಪ್ರಯೋಜನಗಳು:
ಈ ಯೋಜನೆಯಲ್ಲಿ ಮೆಚ್ಯೂರಿಟಿ ಪೂರ್ತಿಯಾದಾಗ ಮೂಲ ಮೊತ್ತದ ಜತೆಗೆ ಖಾತರಿಪಡಿಸಿದ ಪ್ರತಿಫಲದ ಮೊತ್ತವನ್ನೂ ಪಡೆಯಬಹುದಾಗಿದೆ.
ಖಾತರಿಪಡಿಸಿದ ಪ್ರತಿಫಲ:
ಪಾಲಿಸಿಯ ಪ್ರತಿ ವರ್ಷದ ಕೊನೆಗೆ ಖಾತರಿಪಡಿಸಿದ ಪ್ರತಿಫಲದ ಮೊತ್ತವು ಸೇರ್ಪಡೆಯಾಗುತ್ತದೆ. ಇದು ನಮ್ಮ ಪಾಲಿಸಿ ಆಯ್ಕೆ, ಮೂಲ ಮೊತ್ತ ಹಾಗೂ ಪಾಲಿಸಿಯ ಅವಧಿಗೆ ಅನುಗುಣವಾಗಿ ಪಾಲಿಸಿಯ ಮೆಚ್ಯೂರಿಟಿ ಅವಧಿಯ ವರೆಗೂ ಮುಂದುವರಿಯುತ್ತದೆ. 15 ವರ್ಷ ಅವಧಿಯ ಪಾಲಿಸಿ ಹೊಂದಲು ಕನಿಷ್ಠ 3 ವರ್ಷ ವಯಸ್ಸಾಗಿರಬೇಕು. 10 ವರ್ಷ ಅವಧಿಯ ಪಾಲಿಸಿಗೆ ಕನಿಷ್ಠ 8 ವರ್ಷ ವಯಸ್ಸಾಗಿರಬೇಕು ಎಂದು ಎಲ್ಐಸಿ ತಿಳಿಸಿದೆ.
ಪಾಲಿಸಿ ಆಧಾರದ ಸಾಲ ಸೌಲಭ್ಯ:
ಪಾಲಿಸಿ ಅವಧಿ ಆರಂಭಗೊಂದ ಮೂರು ತಿಂಗಳು ಅಥವಾ ಫ್ರೀ ಲುಕ್ (Free-Look Period) ಅವಧಿಯ ಮುಕ್ತಾಯ ಈ ಎರಡರಲ್ಲಿ ಮೊದಲು ಯಾವುದು ಬರಲಿದೆಯೋ ಆ ದಿನಾಂಕದ ಬಳಿಕ ಸಾಲ ಸೌಲಭ್ಯವೂ ದೊರೆಯುತ್ತದೆ.
ಎಲ್ಐಸಿ ‘ಧನ್ ವರ್ಷ 866’ರ ಗಳಿಕೆ ಲೆಕ್ಕಾಚಾರ:
ಈ ಪಾಲಿಸಿಯಲ್ಲಿ ಎರಡು ಆಯ್ಕೆಗಳಿವೆ. ಮೊದಲ ಆಯ್ಕೆಯ ಕುರಿತ ಲೆಕ್ಕಾಚಾರ ಹೀಗಿದೆ; 30 ವರ್ಷ ವಯಸ್ಸಿನ ಒಬ್ಬ ವ್ಯಕ್ತಿ ಒಂದು ಬಾರಿ 8,86,750 ರೂ. (ಜಿಎಸ್ಟಿ ಸೇರಿ 9,26,654 ರೂ. ಆಗುತ್ತದೆ) ಪಾವತಿ ಮೂಲಕ ಎಲ್ಐಸಿ ‘ಧನ್ ವರ್ಷ 866’ ಪಾಲಿಸಿ ಮಾಡುತ್ತಾರೆ ಎಂದಿಟ್ಟುಕೊಳ್ಳೋಣ. ಅವರಿಗೆ ಖಾತರಿಸಿಪಡಿಸಿದ ಮೊತ್ತ 11,08,438 ರೂ. ಆಗಿರಲಿದೆ. ಇದರ ಜತೆಗೆ ಪಾಲಿಸಿ ಅವಧಿ ಮುಕ್ತಾಯಗೊಂಡಾಗ 10 ಲಕ್ಷ ಬೇಸಿಕ್ ಮೊತ್ತವೂ ದೊರೆಯಲಿದೆ. ಅಂದರೆ, ಇತರ ಪ್ರಯೋಜನಗಳೂ ಸೇರಿದಂತೆ ಅವರಿಗೆ ಒಟ್ಟು 21,25,000 ರೂ. ದೊರೆಯಲಿದೆ. ಪಾಲಿಸಿಯ ಮೊದಲ ವರ್ಷದಲ್ಲಿ ಸಾವು ಸಂಭವಿಸಿದರೆ ಅವರ ಕುಟುಂಬದವರಿಗೆ 11,83,438 ರೂ. ಹಾಗೂ ಪಾಲಿಸಿಯ ಕೊನೆಯ ವರ್ಷದಲ್ಲಿ ಮರಣ ಹೊಂದಿದರೆ 22,33,438 ರೂ. ದೊರೆಯಲಿದೆ.
ಇದನ್ನೂ ಓದಿ: LIC: ಪ್ರತಿ ತಿಂಗಳು 2 ಸಾವಿರ ರೂಪಾಯಿ ಠೇವಣಿ ಮಾಡಿ 48 ಲಕ್ಷದವರೆಗೆ ಪಡೆಯಿರಿ
ಎರಡನೇ ಆಯ್ಕೆಯ ಪ್ರಕಾರ, ವ್ಯಕ್ತಿಯೊಬ್ಬರು 8,34,642 ರೂ. (ಜಿಎಸ್ಟಿ ಸೇರಿ) ಹೂಡಿಕೆ ಮಾಡಿದರೆ, 10 ಲಕ್ಷ ರೂ. ಬೇಸಿಕ್ ಮೊತ್ತ ದೊರೆಯಲಿದೆ. ಮರಣ ಸಂಭವಿಸಿದಲ್ಲಿ 79,87,000 ರೂ. ನಿಗದಿಪಡಿಸಲಾಗಿದೆ. ಅವಧಿಗೂ ಮುನ್ನ ಪಾಲಿಸಿ ಕೊನೆಗೊಳಿಸುವುದಿದ್ದಲ್ಲಿ ಅದು ಪೂರ್ಣಗೊಳಿಸಿದ ತಿಂಗಳುಗಳ ಆಧಾರದಲ್ಲಿ ಖಾತರಿಪಡಿಸಿದ ಹೆಚ್ಚುವರಿ ಪ್ರಯೋಜನಗಳನ್ನೂ ನೀಡಲಾಗುತ್ತದೆ. ಈ ಆಯ್ಕೆಯಲ್ಲಿ ಗಳಿಕೆಯ ಅವಕಾಶ ಮೊದಲ ಆಯ್ಕೆಗಿಂತ ಕಡಿಮೆ ಇದ್ದು ಡೆತ್ ಬೆನಿಫಿಟ್ (ಮರಣ ಸಂಭವಿಸಿದಲ್ಲಿ ನೀಡುವ ಮೊತ್ತ) ಹೆಚ್ಚಿದೆ ಎಂಬುದನ್ನು ಗಮನಿಸಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:44 pm, Tue, 18 October 22