AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Banking Frauds: ಬ್ಯಾಂಕಿಂಗ್ ಅಕ್ರಮ; ನಿಮ್ಮ ಖಾತೆಗೆ ಹೀಗೂ ಬೀಳಬಹುದು ಕನ್ನ, ಇರಲಿ ಎಚ್ಚರ

ಲಿಂಕ್​ಗಳನ್ನು ಕಳುಹಿಸುವ ಮೂಲಕ ವಂಚಕರು ಹೇಗೆ ಬ್ಯಾಂಕ್ ಗ್ರಾಹಕರನ್ನು ಮೋಸಗೊಳಿಸಬಹುದು, ಅದನ್ನು ತಡೆಯಲು ಏನು ಮಾಡಬೇಕು ಎಂಬ ವಿವರ ಇಲ್ಲಿದೆ.

Banking Frauds: ಬ್ಯಾಂಕಿಂಗ್ ಅಕ್ರಮ; ನಿಮ್ಮ ಖಾತೆಗೆ ಹೀಗೂ ಬೀಳಬಹುದು ಕನ್ನ, ಇರಲಿ ಎಚ್ಚರ
ಸಾಂದರ್ಭಿಕ ಚಿತ್ರImage Credit source: PTI
TV9 Web
| Edited By: |

Updated on:Oct 24, 2022 | 1:38 PM

Share

ಬ್ಯಾಂಕಿಂಗ್​ ಮತ್ತು ಹಣಕಾಸು ಅಕ್ರಮಗಳಿಗೆ (Banking Frauds) ಸಂಬಂಧಿಸಿ ಜಾಗೃತಿ ಮೂಡಿಸುವ ಸಲುವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಂಡಿದೆ. ಚಿತ್ರಕಥೆ ಮೂಲಕ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಪುಸ್ತಕವೊಂದನ್ನು ಕೆಲ ಸಮಯ ಹಿಂದೆ ಆರ್​ಬಿಐ ಹೊರತಂದಿತ್ತು. ವಂಚನೆಯ ನಲವತ್ತು ಮುಖಗಳನ್ನು ಅದರಲ್ಲಿ ಪರಿಚಯಿಸಿ ‘ರಾಜು ಮತ್ತು ನಲ್ವತ್ತು ಕಳ್ಳರು (Raju and the forty thieves)’ ಎಂಬ ಶೀರ್ಷಿಕೆಯಡಿ ಜಾಗೃತಿ ಮೂಡಿಸುವ ಯತ್ನ ಅದರಲ್ಲಿ ಮಾಡಲಾಗಿದೆ.

ಲಿಂಕ್​ಗಳನ್ನು ಕಳುಹಿಸುವ ಮೂಲಕ ವಂಚಕರು ಹೇಗೆ ಗ್ರಾಹಕರನ್ನು ಮೋಸಗೊಳಿಸಬಹುದು ಎಂಬುದನ್ನು ಆರ್​ಬಿಐ ಮೊದಲ ಚಿತ್ರಕಥೆಯಲ್ಲಿ ವಿವರಿಸಿದೆ.

ರಾಜು ಮತ್ತು ನಲ್ವತ್ತು ಕಳ್ಳರು ಭಾಗ – 1

ಇದನ್ನೂ ಓದಿ
Image
Dhanteras 2022: ಭಾರತ-ಪಾಕ್ ಪಂದ್ಯದ ವೇಳೆ ಬಿಕೋ ಎಂದ ಆಭರಣ ಮಾರುಕಟ್ಟೆ; ನಂತರ ಚೇತರಿಸಿದ ಮಾರಾಟ
Image
Share Market Predictions: ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ ರಜೆ, ತ್ರೈಮಾಸಿಕ ಫಲಿತಾಂಶ, ಮಾಸಾಂತ್ಯ…
Image
ICICI Bank Q2 Result: ತ್ರೈಮಾಸಿಕ ಫಲಿತಾಂಶ; ಐಸಿಐಸಿಐ ಬ್ಯಾಂಕ್ ನಿವ್ವಳ ಲಾಭದಲ್ಲಿ ಭಾರೀ ಜಿಗಿತ
Image
Dhanteras 2022: ದೀಪಾವಳಿಯ ಎರಡು ದಿನ 40 ಸಾವಿರ ಕೋಟಿ ರೂ. ವಹಿವಾಟು ನಿರೀಕ್ಷೆ; ಸಿಎಐಟಿ

ಒಂದು ದಿನ ರಾಜು ಎಂಬ ವ್ಯಕ್ತಿಯ ಮೊಬೈಲ್​ಗೆ ಸಂದೇಶವೊಂದು ಬರುತ್ತದೆ. ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿಯನ್ನು ಎರಡು ದಿನಗಳ ಒಳಗಾಗಿ ಅಪ್​ಡೇಟ್ ಮಾಡದಿದ್ದರೆ ಅಕೌಂಟ್ ಬ್ಲಾಕ್ ಆಗಲಿದೆ. ಈ ಲಿಂಕ್ ಕ್ಲಿಕ್ ಮಾಡಿ ಕೆವೈಸಿ ಅಪ್​ಡೇಟ್ ಮಾಡಿ ಎಂಬ ಸಂದೇಶವಾಗಿತ್ತದು. ರಾಜು ಆ ಲಿಂಕ್ ಅನ್ನು ಕ್ಲಿಕ್ ಮಾಡುತ್ತಾರೆ. ಆದರೆ, ಕೆವೈಸಿ ಅಪ್​ಡೇಟ್ ಮಾಡಲು ಸಾಧ್ಯವಾಗುವುದಿಲ್ಲ. ತಕ್ಷಣ ಅವರ ಮೊಬೈಲ್​ಗೆ ಒಂದು ಕರೆ ಬರುತ್ತದೆ. ಬಳಿಕ ಸಂಭಾಷಣೆ ಹೀಗೆ ನಡೆಯುತ್ತದೆ;

ರಾಜು: ಬ್ಯಾಂಕ್ ಖಾತೆಯಲ್ಲಿರುವ ಎಲ್ಲ ಹಣ ಬ್ಲಾಕ್ ಆಗುತ್ತದೆಯೇ? ನಾನು ಕೆವೈಸಿ ಅಪ್​ಡೇಟ್ ಮಾಡಬೇಕಿದೆ.

ವಂಚಕ: ನಾನು XYZ ಇಂಥ ಬ್ಯಾಂಕ್​ನಿಂದ ಕರೆ ಮಾಡುತ್ತಿದ್ದೇನೆ. ಕೆವೈಸಿ ಅಪ್​ಡೇಟ್ ಮಾಡುವಲ್ಲಿ ಸಮಸ್ಯೆ ಎದುರಿಸುತ್ತಿದ್ದೀರಾ?

ರಾಜು: ಹೌದು ಲಿಂಕ್ ಕೆಲಸ ಮಾಡುತ್ತಿಲ್ಲ.

ವಂಚಕ: ವೆಬ್​ಸೈಟ್ ಹೆಚ್ಚಿನ ಲೋಡ್ ಎದುರಿಸುತ್ತಿರಬಹುದು. ನಾನು ಮ್ಯಾನುವಲ್ ಆಗಿ ನಿಮ್ಮ ವಿವರ ಅಪ್​ಡೇಟ್ ಮಾಡುತ್ತೇನೆ. ನಿಮ್ಮ ಯೂಸರ್​ನೇಮ್, ಪಾಸ್​​ವರ್ಡ್ ಹಾಗೂ ಒಟಿಪಿ (ವನ್ ಟೈಮ್ ಪಾಸ್ವರ್ಡ್) ಕಳುಹಿಸಿ.

ರಾಜು: ಎಲ್ಲ ವಿವರ ನಿಮಗೆ ಮೆಸೇಜ್ ಮಾಡಿದ್ದೇನೆ.

ವಂಚಕ: ನಿಮ್ಮ ಕೆವೈಸಿ ವಿವರ ಯಶಸ್ವಿಯಾಗಿ ಅಪ್​ಡೇಟ್ ಮಾಡಲಾಗಿದೆ.

ರಾಜು: ಥ್ಯಾಂಕ್​ ಯೂ

ಇದಾದ ಕೆಲವೇ ಕ್ಷಣಗಳಲ್ಲಿ ರಾಜು ಮೊಬೈಲ್​ಗೆ 50,000 ರೂ. ಖಾತೆಯಿಂದ ಡ್ರಾ ಆಗಿರುವ ಬಗ್ಗೆ ಸಂದೇಶ ಬರುತ್ತದೆ. ರಾಜು ತಕ್ಷಣ ಅಪರಿಚಿತ ಸಂಖ್ಯೆಗೆ (ಈ ಹಿಂದೆ ಕೆವೈಸಿ ವಿವರಕ್ಕಾಗಿ ಯೂಸರ್​ನೇಮ್, ಪಾಸ್ವರ್ಡ್ ಕಳುಹಿಸಿದ ಸಂಖ್ಯೆ) ಕರೆ ಮಾಡುತ್ತಾರೆ. ಆದರೆ ಆ ವ್ಯಕ್ತಿ ಕರೆ ಸ್ವೀಕಾರ ಮಾಡುವುದೇ ಇಲ್ಲ. ಆಗ ರಾಜುಗೆ ತಪ್ಪಿನ ಅರಿವಾಗುತ್ತದೆ.

ಇರಲಿ ಎಚ್ಚರ

ಹೀಗೆ ಅಪರಿಚಿತ ಸಂಖ್ಯೆಗಳಿಂದ ಬರುವ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಅಥವಾ ಆ ಲಿಂಕ್​ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಿ. ಕೆವೈಸಿ ಅಪ್​ಡೇಟ್ ಮಾಡಬೇಕಿದ್ದರೆ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಧಿಕೃತ ಸಿಬ್ಬಂದಿ ಜತೆ ಮಾತ್ರವೇ ವ್ಯವಹರಿಸಿ. ಯೂಸರ್​ ನೇಮ್, ಪಾಸ್ವರ್ಡ್, ಒಟಿಪಿಗಳನ್ನು ಯಾವುದೇ ಕಾರಣಕ್ಕೂ ಇತರರ ಜತೆ ಹಂಚಿಕೊಳ್ಳಬೇಡಿ. ವಂಚನೆಗೆ ಒಳಗಾದಲ್ಲಿ ತಕ್ಷಣವೇ ಹತ್ತಿರದ ಸೈಬರ್ ಕ್ರೈಂ ಠಾಣೆಗೆ ಭೇಟಿ ನೀಡಿ ದೂರು ನೀಡಿ ಎಂದು ಗ್ರಾಹಕರಿಗೆ ಆರ್​ಬಿಐ ಎಚ್ಚರಿಕೆ ನೀಡಿದೆ.

(ಮಾಹಿತಿ ಮತ್ತು ಕೃಪೆ – ಆರ್​ಬಿಐ)

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:36 pm, Mon, 24 October 22

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ