Digital Rupee: ಶೀಘ್ರದಲ್ಲೇ ಬರಲಿದೆ ಡಿಜಿಟಲ್ ರೂಪಾಯಿ, ಆರ್ಬಿಐಯಿಂದ ಮಹತ್ವದ ನಿರ್ಧಾರ
ಭಾರತೀಯ ರಿಸರ್ವ್ ಬ್ಯಾಂಕ್ ಕೆಲವು ಸಮಯದಿಂದ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯ ಸಾಧಕ-ಬಾಧಕಗಳನ್ನು ಅನ್ವೇಷಿಸುತ್ತಿದೆ ಮತ್ತು ಪ್ರಸ್ತುತ ಹಂತ ಹಂತದ ಅನುಷ್ಠಾನದ ಕಾರ್ಯತಂತ್ರದ ಕಡೆಗೆ ಕೆಲಸ ಮಾಡುತ್ತಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI)ಅಕ್ರಮ ಹಣಗಳನ್ನು ಮತ್ತು ಹಣದ ದುರ್ಬಳಕೆಯನ್ನು ತಡೆಗಟ್ಟಲು ಕೇಂದ್ರೀಯ ಬ್ಯಾಂಕ್ ಬೆಂಬಲಿತ ಡಿಜಿಟಲ್ ರೂಪಾಯಿಯನ್ನು ಪ್ರಾಯೋಗಿಕವಾಗಿ ಶೀಘ್ರದಲ್ಲೇ ಪ್ರಾರಂಭಿಸಲಿದೆ ಎಂದು ಶುಕ್ರವಾರ ತಿಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಕೆಲವು ಸಮಯದಿಂದ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯ ಸಾಧಕ-ಬಾಧಕಗಳನ್ನು ಅನ್ವೇಷಿಸುತ್ತಿದೆ ಮತ್ತು ಪ್ರಸ್ತುತ ಹಂತ ಹಂತದ ಅನುಷ್ಠಾನದ ಕಾರ್ಯತಂತ್ರದ ಕಡೆಗೆ ಕೆಲಸ ಮಾಡುತ್ತಿದೆ ಎಂದು ಅದು ಹೇಳಿದೆ.
ಹಣಕಾಸಿನ ವ್ಯವಸ್ಥೆಗೆ ಯಾವುದೇ ಅಡ್ಡಿಯಾಗದ ರೀತಿಯಲ್ಲಿ ಇ-ರೂಪಾಯಿ ಬಳಕೆ ಮಾಡಲಾಗುವುದು ಮತ್ತು ಇದಕ್ಕೆ ಸಂಬಂಧಿದ ಕಾರ್ಯವ್ಯಾಪ್ತಿಯನ್ನು ನಿರ್ಧಾರಿಸಲಾಗುವುದು, ಇದೀಗ ಇದನ್ನು ತರುವ ಕಾರ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಆರ್‌ಬಿಐ ಹೇಳಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಡಿಜಿಟಲ್ ರೂಪಾಯಿಯನ್ನು ಪ್ರಾರಂಭಿಸಲಾಗುವುದು ಎಂದು ಫೆಬ್ರವರಿಯಲ್ಲಿ ಭಾರತ ಸರ್ಕಾರ ಹೇಳಿತ್ತು.
Published On - 5:56 pm, Fri, 7 October 22